For Quick Alerts
ALLOW NOTIFICATIONS  
For Daily Alerts

ಚಳಿಗಾಲವಲ್ಲ, ಆದರೂ ಚಳಿಯಾಗುತ್ತಿದೆಯೇ? ಯಾಕಿರಬಹುದು?

By Manu
|

ಚಳಿಗಾಲವಲ್ಲ, ವಾತಾವರಣವೂ ಬಿಸಿಯಾಗಿದೆ. ಆದರೂ ನಿಮಗೆ ಚಳಿಯಾಗುತ್ತಾ ಇದೆಯಾ? ಹಾಗಾದರೆ ನಿಮ್ಮ ಆರೋಗ್ಯದಲ್ಲಿ ಏನಾದರೂ ಸಮಸ್ಯೆಯಿದೆ ಎಂದು ಅರ್ಥ. ಚಳಿ ಬಂದು ಹೋಗುತ್ತದೆ ಎಂದು ನೀವು ಇದನ್ನು ಕಡೆಗಣಿಸುತ್ತಾ ಬಂದರೆ ಖಂಡಿತವಾಗಿಯೂ ಮುಂದೊಂದು ದಿನ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಬಹುದು.

ಕೆಲವೊಂದು ಅನಾರೋಗ್ಯಗಳು ಆಗಾಗ ದೇಹದಲ್ಲಿ ಚಳಿ ಕಾಣಿಸಿಕೊಳ್ಳಲು ಕಾರಣವಾಗಬಹುದು. ರಕ್ತದಲ್ಲಿನ ಕೆಂಪು ಕಣದ ಮಟ್ಟವು ಕಡಿಮೆಯಾಗುವುದು ಕೂಡ ಇಂತಹ ಸಮಸ್ಯೆಗೆ ಕಾರಣವಾಗಬಹುದು. ಚಳಿಯು ಎರಡು ದಿನಕ್ಕಿಂತ ಹೆಚ್ಚಾಗಿ ನಿಮ್ಮನ್ನು ಕಾಡುತ್ತಾ ಇದ್ದರೆ ಆಗ ತಕ್ಷಣ ಹೋಗಿ ವೈದ್ಯರನ್ನು ಭೇಟಿಯಾಗಿ. ಅಲ್ಲಿ ರಕ್ತ ಪರೀಕ್ಷೆ ಮಾಡಿಕೊಳ್ಳಿ. ಚಳಿ ಕಾಣಿಸಿಕೊಳ್ಳುವ ಕೆಲವೊಂದು ಕಾರಣಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ತಿಳಿದುಕೊಳ್ಳಿ....

ರಕ್ತಹೀನತೆ

ರಕ್ತಹೀನತೆ

ರಕ್ತಹೀನತೆಯಿಂದಾಗಿ ರಕ್ತದಲ್ಲಿನ ಕೆಂಪು ರಕ್ತದ ಕಣಗಳು ಕಡಿಮೆಯಾದಾಗ ನಿಮಗೆ ಚಳಿಯಾಗಬಹುದು. ನಿಶ್ಯಕ್ತಿ ಮತ್ತು ಚರ್ಮವು ಜೋತು ಬಿದ್ದಂತೆ ಆಗಬಹುದು. ಇದಕ್ಕಾಗಿ ನೀವು ವೈದ್ಯರನ್ನು ಭೇಟಿಯಾಗಿದೆ. ಈ ಲಕ್ಷಣಗಳು ಕಂಡು ಬಂದರೆ ರಕ್ತಹೀನತೆ ಇರಬಹುದು

ಮಧುಮೇಹದ ಸಮಸ್ಯೆಯಾಗಿರಬಹುದು!

ಮಧುಮೇಹದ ಸಮಸ್ಯೆಯಾಗಿರಬಹುದು!

ಆಗಾಗ ಚಳಿಯಾಗಲು ಮತ್ತೊಂದು ಕಾರಣವೆಂದರೆ ಮಧುಮೇಹದ ಸಮಸ್ಯೆಯಾಗಿರಬಹುದು. ಅತಿಯಾಗಿ ಬಾಯಾರಿಕೆಯಾಗುವುದು, ಗೊಂದಲ, ಹಸಿವು ಕಡಿಮೆ, ಉಸಿರಾಟದ ಸಮಸ್ಯೆ ಮತ್ತು ಆಗಾಗ ಮೂತ್ರ ವಿಸರ್ಜನೆಯಾಗುವುದು ಇದರ ಲಕ್ಷಣವಾಗಿದೆ. ಮೌನ ಕೊಲೆಗಾರ 'ಮಧುಮೇಹದ' ಅಪಾಯಕಾರಿ ಲಕ್ಷಣಗಳು!

ಥೈರಾಡ್ ಗ್ರಂಥಿಗಳ ಸಮಸ್ಯೆ

ಥೈರಾಡ್ ಗ್ರಂಥಿಗಳ ಸಮಸ್ಯೆ

ಥೈರಾಡ್ ಗ್ರಂಥಿಗಳು ಕಳಪೆ ಮಟ್ಟದ ಹಾರ್ಮೋನುಗಳನ್ನು ಸ್ರವಿಸಿದಾಗ ದೇಹವು ಸರಿಯಾಗಿ ಉಷ್ಣತೆಯನ್ನು ಕಾಪಾಡಿಕೊಳ್ಳಲು ವಿಫಲವಾಗುತ್ತದೆ. ತೂಕ ಹೆಚ್ಚಳ, ಆಯಾಸ, ಮಲಬದ್ಧತೆ ಮತ್ತು ತಿಂಗಳ ಮುಟ್ಟು ಸರಿಯಾಗಿ ಆಗದೆ ಇರುವುದು ಥೈರಾಯ್ಡ್‌ನ ಇತರ ಸಮಸ್ಯೆಗಳು.

ರಕ್ತನಾಳಗಳಲ್ಲಿ ಸಮಸ್ಯೆ

ರಕ್ತನಾಳಗಳಲ್ಲಿ ಸಮಸ್ಯೆ

ರಕ್ತನಾಳಗಳಲ್ಲಿ ಯಾವುದೇ ಸಮಸ್ಯೆಯಾಗಿದ್ದರೆ ಆಗ ದೇಹದ ಕೆಲವೊಂದು ಭಾಗಗಳಿಗೆ ರಕ್ತ ಸರಬರಾಜಿಗೆ ತಡೆಯಾಗುತ್ತದೆ. ಕೈ ಹಾಗೂ ಕಾಲುಗಳಿಗೆ ಮಾತ್ರ ಚಳಿಯಾಗುತ್ತಿದ್ದರೆ ಈ ಸಮಸ್ಯೆಯಿದೆ ಎಂದರ್ಥ.

ಮಾತ್ರೆಗಳೂ ಇರಬಹುದು!

ಮಾತ್ರೆಗಳೂ ಇರಬಹುದು!

ದೇಹದಲ್ಲಿ ಚಳಿ ಕಾಣಿಸಿಕೊಳ್ಳಲು ಕೆಲವೊಂದು ಔಷಧಿಗಳು ಕಾರಣವಾಗಿರಬಹುದು. ಕೆಲವು ಔಷಧಿಗಳು ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಮೈಗ್ರೇನ್ ಮತ್ತು ರಕ್ತದೊತ್ತಡಕ್ಕೆ ತೆಗೆದುಕೊಳ್ಳುವಂತಹ ಮಾತ್ರೆಗಳು ಈ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಶ್ವಾಸಕೋಶ, ಹೃದಯದ ಕಾಯಿಲೆ....

ಶ್ವಾಸಕೋಶ, ಹೃದಯದ ಕಾಯಿಲೆ....

ಶ್ವಾಸಕೋಶ, ಹೃದಯ ಮತ್ತು ಪಿಟ್ಯುಟರಿ ಗ್ರಂಥಿಗೆ ಸಂಬಂಧಿಸಿದ ಕೆಲವೊಂದು ಕಾಯಿಲೆಗಳು ಈ ಸಮಸ್ಯೆಯನ್ನು ಉಂಟು ಮಾಡಬಹುದು. ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿದರೆ ಸರಿಯಾದ ಕಾರಣ ಪತ್ತೆಯಾಗುತ್ತದೆ.

English summary

Are You Shivering When It’s Not Cold? Here Are Some Reasons

Sometimes, you tend to feel cold when others around you feel normal. If it happens rarely, you can ignore it but if it becomes a daily thing then you may need to suspect your health condition. Here are some reasons behind cold intolerance...
Story first published: Friday, September 16, 2016, 20:28 [IST]
X
Desktop Bottom Promotion