For Quick Alerts
ALLOW NOTIFICATIONS  
For Daily Alerts

ಮನೆ ಔಷಧ: ಔಷಧಿ ಗುಣಗಳ ಆಗರ 'ಸೀಬೆ ಹಣ್ಣು'

ಸೀಬೆ ಹಣ್ಣನ್ನು ಚಿಕ್ಕದಾಗಿ ತುಂಡರಿಸಿ ಕೊಂಚ ಉಪ್ಪು ಖಾರದ ಪುಡಿ ಸೇರಿಸ, ತಿನ್ನುತ್ತಿದ್ದರೆ, ಆಹಾ ಅದು ಏನು ರುಚಿ ಅಂತೀರಾ? ಅದರಲ್ಲೂ ಒಂದು ವೇಳೆ ಚೆನ್ನಾಗಿ ಹಣ್ಣಾಗಿದ್ದರೆ ಇದರ ಜ್ಯೂಸ್ ಮಾಡಿಕೊಂಡು ಸಹಾ ಕುಡಿದರೆ, ದುಪ್ಪಟ್ಟು ಲಾಭ ಪಡೆಯುವಿರಿ

By Manu
|

ಮಾನವರಲ್ಲೊಂದು ಗುಣವಿದೆ. ಉತ್ತಮವಾದುದು ಸುಲಭವಾಗಿ ಸಿಕ್ಕಿದರೂ ಅದು ಬೇಡ, ಬದಲಿಗೆ ಬೇಡದಿದ್ದುದು ವಿಜೃಂಭಿಸಿದರೆ ಅದು ಬೇಕು. ನಮ್ಮಲ್ಲಿ ಸ್ಥಳೀಯವಾಗಿ ಬೆಳೆದು ರಸ್ತೆಪಕ್ಕ ರಾಶಿ ಹಾಕಿ ಮಾರುವ ಅತ್ಯುತ್ತಮ ಹಣ್ಣುಗಳನ್ನು ನಿಕೃಷ್ಟವಾಗಿ ಕಾಣುವ ನಾವು ಅತ್ಯಂತ ಅನಾರೋಗ್ಯಕರ ಮತ್ತು ಒಳಗೇನು ಸೇರಿಸಿದ್ದೇವೆ ಎಂದು ಖಚಿತವಾಗಿ ಹೇಳದ ಬಹುರಾಷ್ಟ್ರೀಯ ಸಂಸ್ಥೆಗಳ ಸುಂದರವಾಗಿ ಕಾಣುವ ಆಹಾರಳನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿ ಆರೋಗ್ಯ ಹಾಳುಮಾಡಿಕೊಳ್ಳುತ್ತೇವೆ. ನೀಳ ಕೇಶರಾಶಿ ಬಯಸುವ ಚೆಲುವೆಗೆ ಸೀಬೆ ಎಲೆಗಳ ಚಿಕಿತ್ಸೆ!

Guavas

ಮುಂದಿನ ಬಾರಿ ಮಾರುಕಟ್ಟೆಗೆ ಹೋದಾಗ ನಿಮ್ಮ ಸಿದ್ಧ ಆಹಾರಗಳ ಬಗ್ಗೆ ಎಷ್ಟೇ ಒಲವು ಇದ್ದರೂ ಇದನ್ನು ಬದಿಗಿಟ್ಟು ಆಗ್ಗವಾದ ಕೆಲವು ಪೇರಳೆ ಅಥವಾ ಸೀಬೆ ಹಣ್ಣುಗಳನ್ನು ಕೊಂಡು ತನ್ನಿ. ಏಕೆಂದರೆ ಕೆಳಗಿನ ಮಾಹಿತಿ ಮೂಲಕ ನೀಡಲಾಗಿರುವ ಪೇರಳೆಯ (ಸೀಬೆ ಹಣ್ಣಿನ) ಪ್ರಯೋಜನಗಳನ್ನು ಕಂಡುಕೊಂಡ ಬಳಿಕ ಈ ವಿಷಯಗಳನ್ನು ಮೊದಲೇ ನಮಗೆ ಯಾರಾದರೂ ಹೇಳಬಾರದಿತ್ತೇ ಎನ್ನಿಸುವುದು ಮಾತ್ರ ಖಚಿತ. ಸೀಬೆ ಹಣ್ಣಿನ ನ೦ಬಲಸಾಧ್ಯವಾದ ಆರೋಗ್ಯವರ್ಧಕ ಗುಣಗಳು

ಸೀಬೆ ಹಣ್ಣಿನ ಬೀಜಗಳು ದೃಢವಾಗಿರುವ ಕಾರಣದಿಂದಲೇ ಹೆಚ್ಚಿನವರು ಇದನ್ನು ತಿನ್ನುವುದಿಲ್ಲ. ಅಲ್ಲದೇ ಈ ಬೀಜಗಳನ್ನು ನಾವು ಜೀರ್ಣಿಸಿಕೊಳ್ಳಲೂ ಸಾಧ್ಯವಿಲ್ಲ. ಹಾಗಾಗಿ ಬೀಜಗಳನ್ನು ಬಿಟ್ಟು ತಿರುಳನ್ನು ಮಾತ್ರ ತಿನ್ನುವುದು ಲೇಸು. ಸೀಬೆ ಹಣ್ಣು ವರ್ಷಪೂರ್ತಿ ಸಿಗದಿದ್ದರೂ ಹೆಚ್ಚಿನ ಕಾಲ ಸಿಗುತ್ತದೆ. ಯಾವಾಗ ಸಿಗುತ್ತದೆಯೋ ಆಗೆಲ್ಲಾ ಕೊಂಚ ಪ್ರಮಾಣದಲ್ಲಿ ತಿನ್ನುವ ಮೂಲಕ ಇವುಗಳ ಪ್ರಯೋಜನವನ್ನು ಪಡೆಯಬಹುದು.

ಅದರಲ್ಲೂ ಸೀಬೆ ಹಣ್ಣನ್ನು ಚಿಕ್ಕದಾಗಿ ತುಂಡರಿಸಿ ಕೊಂಚ ಉಪ್ಪು ಖಾರದ ಪುಡಿ ಸೇರಿಸಿ ತಿನ್ನಬಹುದು. ಒಂದು ವೇಳೆ ಚೆನ್ನಾಗಿ ಹಣ್ಣಾಗಿದ್ದರೆ ಇದರ ಜ್ಯೂಸ್ ಮಾಡಿಕೊಂಡು ಸಹಾ ಕುಡಿಯಬಹುದು. ಬನ್ನಿ, ಇಂದು ಈ ಪೇರಳೆಯ ಎಂಟು ಸದ್ಗುಣಗಳ ಬಗ್ಗೆ ಅರಿಯೋಣ..

ಅಧಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಅಧಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಸೀಬೆಯಲ್ಲಿ ಅಧಿಕ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ಮತ್ತು ಇತರ ಪೋಷಕಾಂಶಗಳು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತವೆ. ತನ್ಮೂಲಕ ಅಧಿಕ ರಕ್ತದ ಒತ್ತಡದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳೂ, ಕರಗುವ ನಾರು ಈ ಹಣ್ಣಿಗೆ ಅತ್ಯುತ್ತಮ ಆಹಾರದ ಪಟ್ಟಿಯಲ್ಲಿ ಸೇರಿಸಿದೆ. ಇದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ ಹಾಗೂ ಕರುಳುಗಳಲ್ಲಿ ಆಹಾರದ ಚಲನೆ ಸುಲಭವಾಗುತ್ತದೆ.

ಕೊಲೆಸ್ಟ್ರಾಲ್ ಮಟ್ಟವನ್ನು ಸುಸ್ಥಿತಿಯಲ್ಲಿರಿಸುತ್ತದೆ

ಕೊಲೆಸ್ಟ್ರಾಲ್ ಮಟ್ಟವನ್ನು ಸುಸ್ಥಿತಿಯಲ್ಲಿರಿಸುತ್ತದೆ

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಸುಸ್ಥಿತಿಯಲ್ಲಿರಿಸಲು ಸೀಬೆ ಹಣ್ಣಿನಲ್ಲಿರುವ ಪೋಷಕಾಂಶಗಳು ಎರವಾಗುತ್ತವೆ. ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡದಿರುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ.

ಹೃದಯಕ್ಕೂ ಒಳ್ಳೆಯದು

ಹೃದಯಕ್ಕೂ ಒಳ್ಳೆಯದು

ಸೀಬೆಯ ಸೇವನೆಯ ಬಳಿಕ ದೇಹದಲ್ಲಿ ಪೊಟ್ಯಾಶಿಯಂ ಮತ್ತು ಸೋಡಿಯಂ ಲವಣಗಳು ಸೂಕ್ತ ಪ್ರಮಾಣದಲ್ಲಿರಿಸಲು ನೆರವಾಗುತ್ತದೆ. ಇದರಿಂದ ಹೃದಯದ ಕ್ಷಮತೆ ಅತ್ಯುತ್ತಮವಾಗಿರುತ್ತದೆ.

ಸ್ನಾಯುಗಳನ್ನು ಬಲಪಡಿಸುತ್ತದೆ

ಸ್ನಾಯುಗಳನ್ನು ಬಲಪಡಿಸುತ್ತದೆ

ಸೀಬೆಯಲ್ಲಿರುವ ಕ್ಯಾಲ್ಸಿಯಂ, ವಿಟಮಿನ್ನುಗಳು, ಮತ್ತು ವಿವಿಧ ಖನಿಜಗಳು ಸ್ನಾಯುಗಳ ಬೆಳವಣಿಗೆ ಮತ್ತು ದೃಢತೆಗೆ ನೆರವಾಗುತ್ತದೆ. ಆದ್ದರಿಂದ ದೇಹದಾರ್ಢ್ಯವನ್ನು ಉತ್ತಮಗೊಳಿಸುವ ಪ್ರಯತ್ನದಲ್ಲಿರುವವರು ನಿಯಮಿತವಾಗಿ ಪೇರಳೆಯನ್ನು ಸೇವಿಸಬೇಕು.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಿಂದ ಸಾಮಾನ್ಯವಾಗಿ ಕಾಡುವ ಶೀತ, ಜ್ವರ, ಕೆಮ್ಮುಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ.

ಮಧುಮೇಹಿಗಳಿಗೂ ಉತ್ತಮ

ಮಧುಮೇಹಿಗಳಿಗೂ ಉತ್ತಮ

ಸೀಬೆಯಲ್ಲಿ ಅತ್ಯತ್ತಮ ಪ್ರಮಾಣದ ಕರಗುವ ಮತ್ತು ಕರಗದ ನಾರುಗಳಿವೆ. ಅಲ್ಲದೇ ಇದರಲ್ಲಿ ಸಕ್ಕರೆ ಅತಿ ಕಡಿಮೆ ಪ್ರಮಾಣದಲ್ಲಿದ್ದು ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

English summary

Amazing Reasons You Should Eat Guavas!

It's the season of guavas and we can find vendors selling them on the roadside and they are also available across the retail markets. So the next time you go to the market make sure to buy few of those guavas and make it a point to eat them. Guavas are fruits that have several health benefits and this article will deal with the reasons why one should eat guavas, especially when it is the season.
Story first published: Thursday, October 27, 2016, 19:14 [IST]
X
Desktop Bottom Promotion