ಆರೋಗ್ಯವೃದ್ಧಿಗೆ ಬಾದಾಮಿಯೇ ಬೇಕೆಂದಿಲ್ಲ, ಪಿಸ್ತಾವೂ ಸಾಕು

By Super

ಆರೋಗ್ಯವನ್ನು ವೃದ್ಧಿಸುವ ಒಣಫಲಗಳಲ್ಲಿ ಪ್ರಮುಖವಾದ ಜೋಡಿ ಬಾದಾಮ್-ಪಿಸ್ತಾ. ಸಾಮಾನ್ಯವಾಗಿ ಇವು ದುಬಾರಿಯಾಗಿರುವ ಕಾರಣ ಕೇವಲ ಸಿಹಿತಿಂಡಿ ಅಥವಾ ಹಬ್ಬದ ವಿಶೇಷ ತಿನಿಸುಗಳಲ್ಲಿ ಮಾತ್ರವೇ ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಸೇರಿಸುವುದನ್ನು ನಾವೆಲ್ಲಾ ಗಮನಿಸುತ್ತಾ ಬಂದಿದ್ದೇವೆ. ಕೊಂಚ ದುಬಾರಿ ಎಂಬ ಒಂದೇ ಕಾರಣ ಬಿಟ್ಟರೆ ಪೋಷಕಾಂಶಗಳ ಪಟ್ಟಿಯಲ್ಲಿ ಈ ಜೋಡಿಯನ್ನು ಹಿಡಿಯುವವರಿಲ್ಲ. ಪ್ರತ್ಯೇಕವಾಗಿ

ಪರಿಗಣಿಸಿದಾಗ ಬಾದಾಮಿ ಕೊಂಚ ಹೆಚ್ಚು ಬೆಲೆಬಾಳುವುದರಿಂದ ಹೆಚ್ಚಿನವರು ಬಾದಾಮಿಯೇ ಆರೋಗ್ಯಕ್ಕೆ ಅತ್ಯುತ್ತಮ ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಆದರೆ ಪಿಸ್ತಾದಲ್ಲಿಯೂ ವಿಟಮಿನ್ ಇ, ಬಿ, ಸಂಯುಕ್ತ ವಿಟಮಿನ್ನುಗಳು, ಫೋಲೇಟ್ ಮತ್ತು ಮುಖ್ಯವಾಗಿ ವಿಟಮಿನ್ B6 ಇದೆ. ಅದರಲ್ಲೂ ವಿಟಮಿನ್ ಇ ಉತ್ತಮ ಪ್ರಮಾಣದಲ್ಲಿದ್ದು ಪ್ರಬಲ ಆಂಟಿ ಆಕ್ಸಿಡೆಂಟುಗಳಲ್ಲಿ ಒಂದಾಗಿದ್ದು ನಮ್ಮ ಜೀವಕೋಶಗಳ ಹೊರಕವಚವನ್ನೇ ಘಾಸಿಗೊಳಿಸಬಲ್ಲ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳಿಂದ ರಕ್ಷಿಸುತ್ತದೆ. ಅಲ್ಲದೇ ಪಿಸ್ತಾದಲ್ಲಿ ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ತಾಮ್ರ, ಪೊಟ್ಯಾಶಿಯಂ, ಕಬ್ಬಿಣ, ಮೆಗ್ನೀಶಿಯಂ, ಸೆಲಿನಿಯಂ, ವಿಟಮಿನ್ ಕೆ, ಎ, ನಿಯಾಸಿನ್ ಮೊದಲಾದ ಪೋಷಕಾಂಶಗಳು ಮತ್ತು ಖನಿಜಗಳೂ ಇವೆ. ಪಿಸ್ತಾದಲ್ಲಿದೆ 21 ಬಗೆಯ ಆರೋಗ್ಯವರ್ಧಕ ಗುಣಗಳು

ಇವೆಲ್ಲವೂ ಹೃದಯಕ್ಕೆ ಪೂರಕವಾದ ಪೋಷಕಾಂಶಗಳಾಗಿದ್ದು ನಿಯಮಿತ ಸೇವನೆಯಿಂದ ಹೃದಯದ ಆರೋಗ್ಯವನ್ನು ವೃದ್ದಿಸುತ್ತದೆ. ಅಲ್ಲದೇ ಮಧುಮೇಹ, ಅಧಿಕ ರಕ್ತದೊತ್ತಡಗಳನ್ನು ದೂರವಿಡುವುದರ ಜೊತೆಗೇ ಇದರಲ್ಲಿರುವ ಕರಗುವ ನಾರು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಬನ್ನಿ, ಪುಟ್ಟ ಪಿಸ್ತಾದಲ್ಲಿರುವ ದೊಡ್ಡ ಆರೋಗ್ಯಕಾರಿ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಪಿಸ್ತಾವನ್ನು ಹೃದಯಸ್ನೇಹಿ ಒಣಫಲ ಎಂದೂ ಕರೆಯಲಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಹೃದಯಕ್ಕೆ ಉತ್ತಮವಾಗಿರುವುದೇ ಇದಕ್ಕೆ ಕಾರಣ. ಪ್ರತಿದಿನ ಒಂದೆರೆಡು ಕಾಳುಗಳನ್ನು ಸೇವಿಸುವ ಮೂಲಕ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೊಲಗಿಸಿ ಹೃದಯದ ಕೆಲಸವನ್ನು ಈ ಪುಟ್ಟ ಫಲ ಸುಲಭಗೊಳಿಸುತ್ತದೆ.

ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಅಷ್ಟೇ ಅಲ್ಲ, ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಆರೋಗ್ಯಕರ ಪ್ರಮಾಣದಲ್ಲಿರಿಸಲು ನೆರವಾಗುತ್ತದೆ. ಇದು ಹೃದಯದ ಸ್ತಂಭನದ ಸಾಧ್ಯತೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ.

ತೂಕವನ್ನು ನಿಯಂತ್ರಣದಲ್ಲಿರಿಸುತ್ತದೆ

ತೂಕವನ್ನು ನಿಯಂತ್ರಣದಲ್ಲಿರಿಸುತ್ತದೆ

ಪಿಸ್ತಾದಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಹಾಗೂ ಅತಿ ಕದಿಮೆ ಪ್ರಮಾಣದಲ್ಲಿ ಸಂತುಲಿತ ಕೊಬ್ಬು ಇರುವ ಕಾರಣ ತೂಕ ಹೆಚ್ಚದಿರಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ಪ್ರೋಟೀನುಗಳು ಕೊಂಚ ಕಷ್ಟದಲ್ಲಿ ಜೀರ್ಣವಾಗುವ ಕಾರಣ ಇದಕ್ಕಾಗಿ ಹೆಚ್ಚಿನ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ಇದು ತೂಕ ಇಳಿಸಲು ನೆರವಾಗುತ್ತದೆ.

ವಯಸ್ಸಿನ ಕಾರಣ ಮಂದಗೊಳ್ಳುವ ದೃಷ್ಟಿಯನ್ನು ಕಡಿಮೆಗೊಳಿಸುತ್ತದೆ

ವಯಸ್ಸಿನ ಕಾರಣ ಮಂದಗೊಳ್ಳುವ ದೃಷ್ಟಿಯನ್ನು ಕಡಿಮೆಗೊಳಿಸುತ್ತದೆ

ವಯಸ್ಸಾದಂತೆ ದೇಹದ ಎಲ್ಲಾ ಅಂಗಗಳ ಜೊತೆಗೇ ಕಣ್ಣುಗಳೂ ಶಿಥಿಲವಾಗುತ್ತವೆ. ಆದರೆ ಪಿಸ್ತಾದಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಆಗಮಿಸಿ ಆರೋಗ್ಯ ಕೆಡಿಸುವ ಫ್ರೀ ರ್‍ಯಾಡಿಕಲ್ ಕಣ ಮತ್ತು ಕೆಲವು ರೀತಿಯ ಒತ್ತಡಗಳ ಪರಿಣಾಮವಾಗಿ ತೀವ್ರವಾಗಿ ಶಿಥಿಲವಾಗುವ ಕಣ್ಣುಗಳ ಸ್ನಾಯುಗಳು (Age-Related Macular degeneration) ದೃಷ್ಟಿಯನ್ನು ಮಂದಗೊಳಿಸುತ್ತವೆ. ನಿಯಮಿತ ಸೇವನೆಯಿಂದ ಈ ತೊಂದರೆ ಕಡಿಮೆಯಾಗಿ ಹೆಚ್ಚು ವಯಸ್ಸಿನವರೆಗೂ ಕಣ್ಣುಗಳು ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ

ಪಿಸ್ತಾದಲ್ಲಿರುವ ವಿಟಮಿನ್ B6 ರೋಗ ನಿರೋಧಕ ಶಕ್ತಿಯನ್ನು ಅಪಾರವಾಗಿ ಬಲಪಡಿಸುತ್ತದೆ. ಈ ಪೋಷಕಾಂಶದ ಕೊರತೆಯಿಂದ ರೋಗ ನಿರೋಧಕ ವ್ಯವಸ್ಥೆ ಶಿಥಿಲವಾಗುವ ಪರಿಣಾಮವಾಗಿ ದೇಹದ ಸೈನಿಕರಾದ ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಇಳಿತ ಕಂಡುಬರುತ್ತದೆ. ಪರಿಣಾಮವಾಗಿ ದೇಹ ಹಲವು ರೋಗಗಳಿಗೆ ಸುಲಭವಾಗಿ ತುತ್ತಾಗುತ್ತದೆ.

ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ

ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ

ರಕ್ತದಲ್ಲಿರುವ ಕೆಂಪುರಕ್ತಕಣಗಳು ಅಥವಾ ಹೀಮೋಗ್ಲೋಬಿನ್ ಆಮ್ಲಜನಕವನ್ನು ಕೊಂಡೊಯ್ಯುವ ಅತ್ಯಂತ ಅವಶ್ಯವಾದ ಕಣಗಳಾಗಿದ್ದು ಇವುಗಳು ಉತ್ತಮ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತಲೇ ಇರಬೇಕು. ಪಿಸ್ತಾದಲ್ಲಿರುವ ಬಿ. ಕಾಂಪ್ಲೆಕ್ಸ್ ಮತ್ತು ವಿಟಮಿನ್ B6 ಹೀಮೋಗ್ಲೋಬಿನ್ ಉತ್ಪಾದನೆಗೆ ಪ್ರಚೋದನೆ ನೀಡಿ ರಕ್ತಹೀನತೆಯ ಸಾಧ್ಯತೆಯನ್ನು ಅಪಾರವಾಗಿ ತಗ್ಗಿಸುತ್ತದೆ.

ಮಧುಮೇಹವನ್ನು ನಿಯಂತ್ರಣದಲ್ಲಿರಿಸುತ್ತದೆ

ಮಧುಮೇಹವನ್ನು ನಿಯಂತ್ರಣದಲ್ಲಿರಿಸುತ್ತದೆ

ಪಿಸ್ತಾದಲ್ಲಿರುವ ಅಮೈನೋ ಆಮ್ಲಗಳು ವಿಶೇಷವಾಗಿ ಟೈಪ್ 2 ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಇದರಲ್ಲಿರುವ ಗಂಧಕ ಪ್ರೋಟೀನುಗಳನ್ನು ಒಡೆದು ಅಮೈನೋ ಆಮ್ಲಗಳನ್ನಾಗಿಸಿ ರಕ್ತದಲ್ಲಿರುವ ಗ್ಲುಕೋಸ್ ಪ್ರಮಾಣವನ್ನು ಸಹಿಸಿಕೊಳ್ಳಲು ಬಲನೀಡುತ್ತದೆ. ಇದರಿಂದಾಗಿ ಮಧುಮೇಹದ ಕಾರಣವಾಗಿ ಉಂಟಾಗುವ ಪರಿಣಾಮಗಳನ್ನು ಬಹಳಷ್ಟು ಮಟ್ಟಿಗೆ ತಗ್ಗಿಸುತ್ತದೆ.

ನರವ್ಯವಸ್ಥೆಯನ್ನು ಬಲಪಡಿಸುತ್ತದೆ

ನರವ್ಯವಸ್ಥೆಯನ್ನು ಬಲಪಡಿಸುತ್ತದೆ

ಪಿಸ್ತಾದಲ್ಲಿರುವ ವಿಟಮಿನ್ B6 ದೇಹವನ್ನು ಹಲವು ರೀತಿಯಲ್ಲಿ ಪೋಷಿಸುತ್ತದೆ. ನರವ್ಯವಸ್ಥೆಯ ಬಲಪಡಿಸುವಿಕೆಯೂ ಇದರಲ್ಲಿ ಒಂದು. ಈ ಪೋಷಕಾಂಶವು ನರಗಳ ಹೊರಕವಚಲಲ್ಲಿರುವ ಮೈಲಿನ್ ಪದರ (myelin sheath)ವನ್ನು ಬಲಪಡಿಸುತ್ತದೆ.

ನರವ್ಯವಸ್ಥೆಯನ್ನು ಬಲಪಡಿಸುತ್ತದೆ

ನರವ್ಯವಸ್ಥೆಯನ್ನು ಬಲಪಡಿಸುತ್ತದೆ

ಈ ಪದರದ ಮೂಲಕವೇ ಮೆದುಳಿನ ಸೂಚನೆಗಳು ದೇಹದ ಎಲ್ಲಾ ಭಾಗಗಳಿಗೆ ತಲುಪುತ್ತದೆ. ಈ ಪದರ ಉತ್ತಮಗೊಳ್ಳುವ ಮೂಲಕ ಮೆದುಳಿನ ಸೂಚನೆಗಳು ಕ್ರಮಬದ್ದವಾಗಿ ಮಾನಸಿಕ ಆರೋಗ್ಯವನ್ನು ಬಹಳಷ್ಟು ಕಾಲದವರೆಗೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಕೆಲವು ಸಲಹೆಗಳು

ಕೆಲವು ಸಲಹೆಗಳು

ಪಿಸ್ತಾ ಫಲವನ್ನು ಸಿಪ್ಪೆಗಳ ಸಹಿತ ಕೊಳ್ಳುವುದು ಉತ್ತಮ. ಏಕೆಂದರೆ ಸಿಪ್ಪೆ ಸುಲಿದ ಪಿಸ್ತಾ ಕೆಲವೇ ದಿನಗಳಲ್ಲಿ ಕಹಿಯಾಗುತ್ತದೆ ಹಾಗೂ ಇದರ ಆರೋಗ್ಯಕರ ಗುಣಗಳು ಕಡಿಮೆಯಾಗುತ್ತವೆ.

ಕೆಲವು ಸಲಹೆಗಳು

ಕೆಲವು ಸಲಹೆಗಳು

ಪಿಸ್ತಾವನ್ನು ಉಪ್ಪಿನ ಪುಡಿ ಸಿಂಪಡಿಸಿ ಹೆಚ್ಚು ಕಾಲ ಕೆಡದಿರುವಂತೆ ಇಡಲಾಗುತ್ತದೆ. ಇದನ್ನೂ ಹಾಗೇ ಸೇವಿಸಬಹುದು, ಆದರೆ ದಿನಕ್ಕೆ ನಾಲ್ಕಾರು ಕಾಳುಗಳು ಮಾತ್ರ ಸಾಕು. ಹೆಚ್ಚಾದರೆ ಹೆಚ್ಚಿನ ಉಪ್ಪು ಅನಗತ್ಯವಾಗಿ ದೇಹವನ್ನು ಸೇರುತ್ತದೆ. ಬದಲಿಗೆ ಸೇವಿಸುವ ಮೊದಲು ಸಿಪ್ಪೆ ಸುಲಿದು ನೀರಿಗೆ ಹಾಕಿ ಉಪ್ಪಿನಂಶವನ್ನು ನಿವಾರಿಸಿ ಸೇವಿಸುವುದು ಉತ್ತಮ.

X
Desktop Bottom Promotion