ಕೊಲೆಸ್ಟ್ರಾಲ್‌ನ್ನು ಹದ್ದು ಬಸ್ತಿನಲ್ಲಿಡುವ ಪವರ್ ಫುಲ್ ಜ್ಯೂಸ್

By manu

ಕೊಲೆಸ್ಟ್ರಾಲ್ ಎಂದಾಕ್ಷಣ ಇದನ್ನೊಂದು ರೋಗವೆಂದು ಹೆಚ್ಚಿನವರು ಪರಿಗಣಿಸುತ್ತಾರೆ. ಆದರೆ ನಮಗೆ ರಕ್ತದಲ್ಲಿ ಕೊಲೆಸ್ಟ್ರಾಲ್ ಅಗತ್ಯವಿದೆ. ಕಾರಿನ ಇಂಜಿನ್ನಿನ ಆಯಿಲ್ಲಿನಂತೆ ರಕ್ತ ಹರಿಯಲು ಜಾರುಕದಂತೆ ಈ ಕೊಲೆಸ್ಟ್ರಾಲ್ ಬಳಕೆಯಾಗುತ್ತದೆ. ಆದರೆ ನಮಗೆ ಅಗತ್ಯವಿರುವುದು HDL (High density lipoproteins) ಹೆಚ್ಚಿನ ಪ್ರಮಾಣದಲ್ಲಿ. ಆದ್ದರಿಂದಲೇ ಇದನ್ನು ಒಳ್ಳೆಯ ಕೊಲೆಸ್ಟ್ರಾಲ್ ಎಂದು ಕರೆಯಬಹುದು. ಆದರೆ LDL (Low density lipoproteins) ಇನ್ನೂ ಚಿಕ್ಕ ಕಣಗಳಾಗಿದ್ದು ಜಾರುವ ಬದಲು ನರಗಳ ತಿರುವುರುವಲ್ಲೆಲ್ಲಾ ಅಂಟಿಬಿಡುತ್ತದೆ. ಇದೇ ಕಾರಣಕ್ಕೆ ಇದನ್ನು ಕೆಟ್ಟ ಕೊಲೆಸ್ಟ್ರಾಲ್ ಎನ್ನುತ್ತೇವೆ. ಹೃದಯಾಘಾತಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್ ಬಗ್ಗೆ ಎಚ್ಚರವಿರಲಿ!

ಕೆಟ್ಟ ಕೊಲೆಸ್ಟ್ರಾಲ್ ನರಗಳ ತಿರುವಿನಲ್ಲೆಲ್ಲಾ ಅಂಟಿಕೊಂಡು ಬಳಿಕ ರಕ್ತದಲ್ಲಿ ಹರಿದು ಬಂದ ಇನ್ನಷ್ಟು ಕಣಗಳನ್ನು ತನ್ನೊಂದಿಗೆ ಅಂಟಿಸಿಕೊಳ್ಳುತ್ತಾ ನಡೆಯುತ್ತದೆ. ಎಲ್ಲಿಯವರೆಗೆ ಅಂದರೆ ಒಂದು ಕಡೆ ರಕ್ತ ಹರಿಯಲು ಚಿಕ್ಕ ತೂತಿನಷ್ಟು ಜಾಗ ಬಿಡುವವರೆಗೆ. ಈ ತೂತಿನ ಮೂಲಕ ರಕ್ತವನ್ನು ಹರಿಸಲು ಹೃದಯಕ್ಕೆ ಹೆಚ್ಚಿನ ಒತ್ತಡದಲ್ಲಿ ನೂಕಬೇಕಾಗುತ್ತದೆ. ಇದೇ ಅಧಿಕ ಹೃದಯದೊತ್ತಡ. ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಏಕೆ ಕೆಟ್ಟದು ಎಂದು ಗೊತ್ತಾಯಿತಲ್ಲ. ಮೌನ ಕೊಲೆಗಾರ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಸೂತ್ರ

ಈ ಕೆಟ್ಟ ಕೊಲೆಸ್ಟ್ರಾಲ್ ಒಂದೆರಡು ದಿನದಲ್ಲೇನೂ ಸಂಗ್ರಹವಾಗಿದ್ದಲ್ಲ, ಕೆಲವಾರು ವರ್ಷಗಳಿಂದಲೇ ನಿಧಾನವಾಗಿ ಬೆಳೆದು ಬಂದಿರುವುದಾಗಿದೆ. ಆದರೆ ನಿಸರ್ಗದಲ್ಲಿ ಅಂಟಿಕೊಂಡಿರುವ ಈ ಜಿಡ್ಡನ್ನು ಸಡಿಲಗೊಳಿಸಲು ಕೆಲವು ಉತ್ತಮ ಪೋಷಕಾಂಶಗಳಿವೆ. ಇಂತಹ ಉತ್ತಮ ಪೋಷಕಾಂಶಗಳನ್ನೆಲ್ಲಾ ಒಂದುಗೂಡಿಸಿ ಔಷಧಿಯ ರೂಪದಲ್ಲಿ ಲಭ್ಯವಾಗುವಂತಿದ್ದರೆ? ಈಗ ಇದು ಸಾಧ್ಯವಾಗಿದೆ. ಕೆಟ್ಟ ಕೊಲೆಸ್ಟ್ರಾಲ್ ಸಡಿಲಗೊಳಿಸಿ ಹೃದಯದೊತ್ತಡ ಮತ್ತು ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಣೆ ಪಡೆಯಲು ಒಂದು ಪೇಯವನ್ನು ಸಿದ್ಧಪಡಿಸಬಹುದಾಗಿದ್ದು ಇಂದು ಈ ಪೇಯದ ಬಗ್ಗೆ ವಿವರಗಳನ್ನು ನೀಡಲು ಬೋಲ್ಡ್ ಸ್ಕೈ ತಂಡ ಹೆಮ್ಮೆಪಡುತ್ತಿದೆ, ಮುಂದೆ ಓದಿ...

ಈ ಜೀವರಕ್ಷಕ ಪೇಯವನ್ನು ತಯಾರಿಸುವ ಬಗೆ

ಈ ಜೀವರಕ್ಷಕ ಪೇಯವನ್ನು ತಯಾರಿಸುವ ಬಗೆ

ಅಗತ್ಯವಿರುವ ಸಾಮಾಗ್ರಿಗಳು: ನೀರು, ಲಿಂಬೆ, ಪಾರ್ಸ್ಲೆ ಕಾಳುಗಳು ಮತ್ತು ಅಡುಗೆಸೋಡಾ.

ವಿಧಾನ: ಮೊದಲು ನೀರಿನಲ್ಲಿ ಕೊಂಚ ಅಡುಗೆ ಸೋಡಾ ಹಾಕಿ ಈ ನೀರಿನಲ್ಲಿ ಲಿಂಬೆಹಣ್ಣುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಇದರಿಂದ ಲಿಂಬೆಯ ಸಿಪ್ಪೆಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.

ಒಂದು ಪಾತ್ರೆಯಲ್ಲಿ ಒಂದು ದೊಡ್ಡ ಲೋಟದಷ್ಟು ನೀರನ್ನು ಕುದಿಸಿ ತಣಿಯಲು ಬಿಡಿ. ಇದಕ್ಕೆ ಚಿಕ್ಕದಾಗಿ ತುಂಡುಮಾಡಿದ ಲಿಂಬೆಹಣ್ಣನ್ನು ಸೇರಿಸಿ. ಬಳಿಕ ಸುಮಾರು ಎರಡು ಚಮಚ ಪಾರ್ಸ್ಲೆ ಕಾಳುಗಳನ್ನು ಸೇರಿಸಿ ಕಲಕಿ ಈ ನೀರನ್ನು ಬಳಿಕ ಫ್ರಿಜ್ಜಿನಲ್ಲಿಟ್ಟು ತಣಿಸಿ. ಈ ನೀರನ್ನು ಪ್ರತಿದಿನ ಕುಡಿಯುತ್ತಿರಿ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ. ಆದರೆ ಈ ವಿಧಾನವನ್ನು ಅನುಸರಿಸುವ ಮೊದಲು ನಿಮ್ಮ ವೈದ್ಯರ ಅನುಮತಿಯನ್ನು ಪಡೆದೇ ಮುಂದುವರೆಯಿರಿ. ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸಲು ಮೇಲಿನ ಪೇಯ ಸಹಕರಿಸುತ್ತದಾದರೂ ಇತರ ಕ್ರಮಗಳೂ ಅಗತ್ಯ. ಇವುಗಳಲ್ಲಿ ಪ್ರಮುಖವಾದುದನ್ನು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ನಾರು ಹೆಚ್ಚಿರುವ ಆಹಾರ ಸೇವಿಸಿ

ನಾರು ಹೆಚ್ಚಿರುವ ಆಹಾರ ಸೇವಿಸಿ

ನಿಮ್ಮ ಆಹಾರದಲ್ಲಿ ಸಾಕಷ್ಟು ನಾರು ಇರಬೇಕು. ಆದ್ದರಿಂದ ಮೈದಾ ಆಧಾರಿತ ಆಹಾರಗಳ ಬದಲಿಗೆ ಇಡಿಯ ಗೋಧಿಯ ಹಿಟ್ಟು, ದ್ವಿದಳ ಧಾನ್ಯಗಳು, ನಾರು ಹೆಚ್ಚಿರುವ ತರಕಾಗಿಗಳು, ಹಣ್ಣುಗಳನ್ನು ಸಿಪ್ಪೆ ಸಹಿತ ತಿನ್ನುವುದು, ಸಾಧ್ಯವಾದರೆ ದಿನಕ್ಕೊಂದು ಲೋಟ ಇಸಬ್ ಗೋಲ್ ಸೇರಿಸಿದ ನೀರು ಕುಡಿಯುವುದು ಮೊದಲಾದವು ನಾರಿನ ಪ್ರಮಾಣ ಹೆಚ್ಚಿಸಲು ನೆರವಾಗುತ್ತವೆ. ಇದು ಪರೋಕ್ಷವಾಗಿ ಕೆಟ್ಟ ಕೊಲೆಸ್ಟಾಲ್ ನಿವಾರಣೆಗೆ ನೆರವಾಗುತ್ತದೆ.

ಓಟ್ಸ್ ಸೇವಿಸಿ

ಓಟ್ಸ್ ಸೇವಿಸಿ

ಓಟ್ಸ್ ಅಥವಾ ಓಟ್ ಮೀಲ್ ನಲ್ಲಿಯೂ ಉತ್ತಮ ಪ್ರಮಾಣದ ಕರಗದ ನಾರು ಇದೆ. ಒಂದು ಅಧ್ಯಯನದ ಪ್ರಕಾರ ನಿಯಮಿತವಾಗಿ ಓಟ್ಸ್ ಸೇವಿಸುವ ಮೂಲಕ ಒಟ್ಟು ಪ್ರಮಾಣದ 25% ದಷ್ಟು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸಬಹುದು.

ಕಿತ್ತಳೆ ಹಣ್ಣು ಸೇವಿಸಿ

ಕಿತ್ತಳೆ ಹಣ್ಣು ಸೇವಿಸಿ

ಇನ್ನೊಂದು ಅಧ್ಯಯನದ ಪ್ರಕಾರ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಮತ್ತು ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು ನಿತ್ಯವೂ ಒಂದು ಅಥವಾ ಎರಡು ಕಿತ್ತಳೆ ಹಣ್ಣುಗಳನ್ನು ಸೇವಿಸುವುದರಿಂದ ಸಾಧ್ಯವಾಗುತ್ತದೆ.

ಮೀನು

ಮೀನು

ಮೀನಿನಲ್ಲಿ ಉತ್ತಮ ಪ್ರಮಾಣದ ಒಮೆಗಾ ೩ ಕೊಬ್ಬಿನ ತೈಲವಿದ್ದು ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಲು ಸಮರ್ಥವಾಗಿದೆ. ವಾರಕ್ಕೆರಡು ಬಾರಿ ಮೀನಿನ ಪದಾರ್ಥ ಸೇವಿಸುವುದು ಉತ್ತಮವಾಗಿದೆ.

ಒಣಫಲಗಳು

ಒಣಫಲಗಳು

ಅಕ್ರೋಟು, ಬಾದಾಮಿ, ಶೇಂಗಾಬೀಜ ಮೊದಲಾದವುಗಳಲ್ಲಿ ಉತ್ತಮ ಪೋಷಕಾಂಶಗಳಿದ್ದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲೂ ಸಮರ್ಥವಾಗಿವೆ. ಇದರಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯವನ್ನು ಉತ್ತಮಗೊಳಿಸಲೂ ನೆರವಾಗುತ್ತವೆ.

ವೈನ್

ವೈನ್

ಮನೆಯಲ್ಲಿಯೇ ತಯಾರಿಸಿದ ಕೆಂಪು ವೈನ್ ನಲ್ಲಿ ಹಲವು ಆಂಟಿ ಆಕ್ಸಿಡೆಂಟುಗಳು ಮತ್ತು ಪೋಶಕಾಂಶಗಳಿದ್ದು ಆರೋಗ್ಯವನ್ನು ವೃದ್ಧಿಸುತ್ತವೆ. ಆದರೆ ಇದರ ಪ್ರಮಾಣ ಅಲ್ಪವಿದ್ದರೆ ಮಾತ್ರ ಇದು ಪ್ರಯೋಜನಕಾರಿ. ಆದರೆ ಹುಳಿಬಂದ ವೈನ್ ನಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಿರುವ ಕಾರಣ ಒಳ್ಳೆಯದು ಮಾಡುವುದಕ್ಕಿಂತ ಕೆಟ್ಟದು ಮಾಡುವುದೇ ಹೆಚ್ಚು. ಆದ್ದರಿಂದ ಕೆಂಪು ದ್ರಾಕ್ಷಿರಸವನ್ನು ಹುಳಿ ಬರುವ ಮುನ್ನವೇ ಸೇವಿಸಬೇಕು.

ಚಟುವಟಿಕೆಯಿಂದಿರುವುದು

ಚಟುವಟಿಕೆಯಿಂದಿರುವುದು

ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸಲು ದೈಹಿಕ ಚಟುವಟಿಕೆ ಬಹಳಷ್ಟು ಉಪಯುಕ್ತವಾಗಿದೆ. ದೈಹಿಕ ಚಟುವಟಿಕೆಯಿಂದ ಹೃದಯ ಬಡಿಯುವ ವೇಗ ಹೆಚ್ಚಾಗಿ ರಕ್ತಪರಿಚಲನೆಯೂ ಹೆಚ್ಚುತ್ತದೆ. ಈ ಹೆಚ್ಚಿದ ವೇಗ ಕೆಲವಾದರೂ ಕೆಟ್ಟ ಕೊಲೆಸ್ಟ್ರಾಲ್ ಕಣಗಳನ್ನು ಅಂಟಿಕೊಂಡಿದ್ದಲ್ಲಿಂದ ಸಡಿಲಿಸಿ ನಿವಾರಿಸುತ್ತದೆ. ದೈಹಿಕ ಚಟುವಟಿಕೆ ಮಾಡದಿರಲು ಪ್ರಮುಖ ಕಾರಣವೆಂದರೆ ಸೋಮಾರಿತನ ಮತ್ತು ಯಾರಾದರೂ ನೋಡಿದರೆ ಎಂಬ ಅಂಜಿಕೆ. ಮೊದಲು ಮಾನಸಿಕವಾಗಿ ದೃಢರಾಗಿ ನಿತ್ಯವೂ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ದೈಹಿಕ ಶ್ರಮ ವಹಿಸಿ. ಉದಾಹರಣೆಗೆ ನಡಿಗೆ, ಸೈಕಲ್ ಸವಾರಿ, ಲಿಫ್ಟ್ ಗೆ ಕಾಯದೇ ಮೆಟ್ಟಿಲು ಹತ್ತುವುದು, ಹತ್ತಿರದ ಸ್ಥಳಗಳಿಗೆ ನಡೆದೇ ಹೋಗುವುದು ಇತ್ಯಾದಿ.

X
Desktop Bottom Promotion