ದಿನನಿತ್ಯ ಆಹಾರ ಕ್ರಮದಲ್ಲಿ ಹಸಿರು ಎಲೆ-ತರಕಾರಿಗಳ ವೈಶಿಷ್ಟ್ಯವೇನು?

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ನಾವು ತೆಗೆದುಕೊಳ್ಳಬೇಕಾದ ಆಹಾರ ಕ್ರಮದಲ್ಲಿ ನಮಗೆ ಹೆಚ್ಚಿನ ಕಾಳಜಿ ಇರಬೇಕು. ಹೊಟ್ಟೆ ತುಂಬಿಸಲು ಏನಾದರೊಂದನ್ನು ಸೇವಿಸಿದರಾಯಿತು ಎಂಬ ನಿರ್ಲಕ್ಷ್ಯವೇ ರೋಗಕ್ಕೆ ಆಹ್ವಾನವನ್ನು ನೀಡುತ್ತದೆ. ಒಬ್ಬ ವ್ಯಕ್ತಿಯ ಆರೋಗ್ಯಕ್ಕೆ ಆಹಾರ ಒಂದು ಪ್ರಮುಖ ಅಂಶ. ಆರೋಗ್ಯಕರವಾಗಿರಲು ಆರೋಗ್ಯಕರ ಆಹಾರವನ್ನೇ ಸೇವಿಸಿ. ವಿಧವಿಧವಾದ ಪ್ರತಿಯೊಂದು ಆಹಾರವೂ ತನ್ನದೇ ಆದ ಪ್ರಯೋಜನಗಳನ್ನು ಹೊಂದಿರುತ್ತವೆ. ಆಹಾರಗಳಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು ನಮ್ಮ ದೇಹದಲ್ಲಿ ಸೇರಿ ಪ್ರತಿಯೊಂದು ಅಂಗವೂ ಸರಿಯಾಗಿ ಕಾರ್ಯನಿರ್ವಹಿಸಲು ಸಕ್ರಿಯಗೊಳಿಸುತ್ತವೆ.

ದೇಹಕ್ಕೆ ಪೌಷ್ಠಿಕಾಂಶ ಮತ್ತು ಶಕ್ತಿ ಪಡೆಯಲು ಹಸಿರು ಆಹಾರ ಯಾವಾಗಲೂ ಆರೋಗ್ಯಕಾರಿ ಆಯ್ಕೆಯೆಂದು ಪರಿಗಣಿಸಲಾಗಿದೆ. ಪಾಲಕ್, ಕೋಸುಗಡ್ಡೆ ಸೊಪ್ಪು, ಕೊತ್ತಂಬರಿ ಮತ್ತು ಪುದೀನಾ ಒಳ್ಳೆಯ ಪ್ರೋಟೀನ್, ಕಾಬ್ರೋಹೈಡ್ರೇಟ್ಸ್, ಮಿನರಲ್ಸ್ ಮತ್ತು ಪೌಷ್ಠಿಕಾಂಶಗಳನ್ನು ಹೊಂದಿರುವ ಹಸಿರು ತರಕಾರಿಗಳು. ಹಸಿರು ತರಕಾರಿಗಳಲ್ಲಿ ಅತ್ಯುತ್ತಮ ಆರೋಗ್ಯ ಲಾಭಗಳಿವೆ. ಪ್ರತೀ ದಿನದ ಆಹಾರ ಕ್ರಮದಲ್ಲಿ ಯಾವುದಾದರೂ ಒಂದು ಹಸಿರು ತರಕಾರಿ ಸೇರಿಸುವಂತೆ ವೈದ್ಯರು ಕೂಡ ಸಲಹೆ ಮಾಡುತ್ತಾರೆ. ಎಚ್ಚರ: ಇಂತಹ ಕೆಟ್ಟ ಹವ್ಯಾಸಗಳು ಕಿಡ್ನಿಗಳಿಗೆ ಹಾನಿ ಮಾಡಬಲ್ಲವು!

ನಮ್ಮ ಸುತ್ತಮುತ್ತ ಯಥೇಚ್ಛವಾಗಿ ಸಿಗುವ ಹಸಿರು ತರಕಾರಿ, ಸೊಪ್ಪುಗಳು ಅತ್ಯಧಿಕ ಪ್ರಮಾಣದ ಪ್ರೋಟೀನ್ ಅಂಶಗಳನ್ನು ಹೊಂದಿದ್ದು ದೇಹದ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಹಾಗೂ ಕೊಲೆಸ್ಟ್ರಾಲ್‌ಗಳನ್ನು ನಿಯಂತ್ರಿಸುವಲ್ಲಿ ಇದು ಸಹಕಾರಿಯಾಗಿದೆ. ನಿಮ್ಮ ದಿನ ನ್ಯೂಟ್ರೀನ್ ಬೆರೆತ ಆಹಾರಗಳಿಂದ ಕೂಡಿದ್ದರೆ ಯಾವ ರೀತಿಯ ಕಾಯಿಲೆ ಕೂಡ ನಿಮ್ಮನ್ನು ಸೋಕುವುದಿಲ್ಲ. ಹಾಗಾಗಿ ಕೆಲವೊಂದು ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ನಿಮ್ಮನ್ನು ಆರೋಗ್ಯಕರವಾಗಿಸಲು ಅಗತ್ಯವಾಗಿರುವ ಪೋಷಕಾಂಶಗಳು ಇವುಗಳು ಒಳಗೊಂಡಿವೆ. ದಿನವೂ ಈ ಆಹಾರಗಳನ್ನು ನಿಮಗೆ ಸೇವಿಸಬಹುದು.

ಕುಂಬಳಕಾಯಿ

ಕುಂಬಳಕಾಯಿ

ಇದರ ಬೀಜ ಮತ್ತು ಸಿಪ್ಪೆ ಹಲವಾರು ಗುಣಗಳನ್ನು ಹೊಂದಿರುವಂತಹ ಸೂಪರ್ ಫುಡ್. ಇದರಲ್ಲಿ ಉನ್ನತ ಮಟ್ಟದ ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಎ, ಸಿ, ಕೆ ಮತ್ತು ಈ ಇದೆ. ಸಂಧಿವಾತ ಸಮಸ್ಯೆ ಇರುವವರು ಪ್ರತೀದಿನ ಕುಂಬಳಕಾಯಿ ಬೀಜವನ್ನು ತಿನ್ನುವುದು ಒಳ್ಳೆಯದು. ಇದರಲ್ಲಿರುವ ಸತುವಿನಂಶ ಸಂಧಿವಾತ ಕಾಯಿಲೆಯ ವಿರುದ್ಧ ಹೋರಾಡುತ್ತದೆ.

ಮುಳ್ಳುಸೌತೆ

ಮುಳ್ಳುಸೌತೆ

ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಅಂಶ ವಿಟಮಿನ್ ಆಗಿದೆ. ಮುಳ್ಳುಸೌತೆ ಎ, ಬಿ ಹಾಗೂ ಸಿ ಮತ್ತು ಕೆ ಸತ್ವಗಳಿಂದ ಕೂಡಿದ್ದು ದೇಹಕ್ಕೆ ವಿಟಮಿನ್‌ನ ಉತ್ತಮ ಪೂರೈಕೆಯನ್ನು ಮಾಡುತ್ತದೆ. ವಿಟಮಿನ್‌ಗಳು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ದೂರೀಕರಿಸಿ ನಿಮ್ಮ ತ್ವಚೆಯನ್ನು ಹೊಳೆಯುವಂತೆಮಾಡುತ್ತದೆ.

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯಲ್ಲಿರುವ ಕ್ಯಾರೊಟಿನಾಯ್ಡ್ ಕ್ಯಾನ್ಸರ್‌ನ ಹಲವಾರು ವಿಧಗಳಿಂದ ದೇಹವನ್ನು ಕಾಪಾಡುತ್ತದೆ. ಇದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ಆಲೂಗಡ್ಡೆಯನ್ನು ತಮ್ಮ ದೈನಂದಿನ ಜೀವನದಲ್ಲಿ ಆಹಾರವನ್ನಾಗಿ ಬಳಸಿದವರು ಹಲವಾರು ರೋಗಗಳಿಂದ ಚೇತರಿಕೆಯನ್ನು ಪಡೆದುಕೊಂಡಿದ್ದಾರೆ. ಇದು ತನ್ನಲ್ಲಿ ಐರನ್, ಕೋಪರ್, ಫೊಲೇಟ್, ಮ್ಯಾಂಗನೀಸ್ ಸತ್ವವನ್ನು ಹುದುಗಿಸಿಕೊಂಡಿದೆ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

ಬೀನ್ಸ್

ಬೀನ್ಸ್

ದೇಹದಲ್ಲಿ ಜೀವಕೋಶಗಳು ಉತ್ಪತ್ತಿಯಾಗಲು ಪೊಟ್ಯಾಷಿಯಂ ಬೇಕೇಬೇಕು. ಬೀನ್ಸ್‌ಗಳಲ್ಲಿ ಪೊಟಾಷ್ಯಿಯಂ ಹೆಚ್ಚಾಗಿದ್ದು. ಮಹಿಳೆಯರ ಮೂಳೆ ಗಟ್ಟಿಯಾಗುವಲ್ಲಿ, ಸ್ನಾಯುಗಳು ಮತ್ತು ನರಮಂಡಲ ಸರಿಯಾಗಿ ಕೆಲಸ ಮಾಡುವಲ್ಲಿ ಬೀನ್ಸ್ ಸಹಕರಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದನ್ನು ಬೀನ್ಸ್ ಶೇ.65ರಷ್ಟು ತಡೆಯುತ್ತದೆ.

ಸೋಯಾ

ಸೋಯಾ

ಮಾಂಸ, ಮೊಟ್ಟೆ, ಹಾಲು ಮತ್ತು ಗೋಧಿಯಲ್ಲಿ ಇರುವ ಪ್ರೊಟೀನ್‌ಗಿಂತ ಸೋಯಾದಲ್ಲಿ ಹೆಚ್ಚು ಪ್ರೊಟೀನ್ ಇರುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುವ ಇದು ಹೃದ್ರೋಗಿಗಳಿಗೆ ಹೇಳಿ ಮಾಡಿಸಿದ ಖಾದ್ಯ. ಅಧಿಕ ವಿಟಮಿನ್, ಫೈಬರ್, ಕ್ಯಾಲ್ಶಿಯಂ, ಕಬ್ಬಿಣದ ಅಂಶವಿರುವುದರಿಂದ ಮಕ್ಕಳ ಬೆಳವಣಿಗೆಗೆ ಸಹಕಾರಿ.

ಪಾಲಕ್

ಪಾಲಕ್

ಶಕ್ತಿವರ್ಧಿಸುವ ಗುಣದೊಂದಿಗೆ ಪಾಲಕ್ ನಮ್ಮ ಚರ್ಮಕ್ಕೂ ಒಳ್ಳೆಯದು. ಪಾಲಕ್ ನಲ್ಲಿರುವ ವಿಟಮಿನ್ ಮತ್ತು ಪೋಷಕಾಂಶಗಳು ಆರೋಗ್ಯ ಮತ್ತು ಚರ್ಮ ಹೊಳೆಯಲು ಪ್ರಮುಖ ಪಾತ್ರ ವಹಿಸುತ್ತದೆ. ಪಾಲಕ್ ನಿಂದ ಮೊಡವೆ, ಹಾನಿಗೊಳಗಾದ ಚರ್ಮದ ಸರಿಪಡಿಸುವಿಕೆ ಮತ್ತು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಪಾಲಕ್ ತ್ವಚೆಯ ಆರೈಕೆಗೆ ಅತ್ಯಂತ ಉಪಯುಕ್ತ ತರಕಾರಿ.

ಬ್ರೊಕೋಲಿ

ಬ್ರೊಕೋಲಿ

ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣುವ ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶದ ಕ್ಯಾನ್ಸರ್ ಗಳಿಗೆ ಇದು ರಾಮಬಾಣ. ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಅಪಾಯಕಾರಿ ಟಾಕ್ಸಿನ್ ಗಳನ್ನು ಬೇರಿನಲ್ಲಿಯೇ ಚಿವುಟಿ ಹಾಕುವ ಎನ್ ಜೈಮ್ ಗಳನ್ನು ಈ ತರಕಾರಿ ಬಿಡುಗಡೆ ಮಾಡುತ್ತದೆ. ಕ್ಯಾನ್ಸರ್ ಇದ್ದರೂ ಕೂಡ ಹರಡದಂತೆ ತಡೆಗೋಡೆಯನ್ನು ಇದು ಒಡ್ಡುತ್ತದೆ. ಬೇಯಿಸಿ ಅಥವಾ ಹಸಿಯಾಗಿಯೇ ತಿನ್ನಬಹುದು. ಇದರಲ್ಲಿ ಫೊಲೇಟ್ ಎಂಬ ವಿಟಮಿನ್ ಬಿ ಅತ್ಯಧಿಕವಿದ್ದು, ಡಿಎನ್ಎಯನ್ನು ರಕ್ಷಿಸುತ್ತದೆ, ಹೊಸ ರಕ್ತ ಉತ್ಪತ್ತಿಯಾಗುವಲ್ಲಿ ಸಹಕಾರ ನೀಡುತ್ತದೆ. ಗರ್ಭಿಣಿಯರಿಗೆ ಇದು ಅತ್ಯಧಿಕ ಪೋಷಕಾಂಶ ಒದಗಿಸುವುದರ ಜೊತೆಗೆ ನರಮಂಡಲದಲ್ಲಿ ತೊಂದರೆಯಾಗದಂತೆ ಮತ್ತು ಮಕ್ಕಳಲ್ಲಿ ಯಾವುದೇ ಅಂಗ ದೋಷವಿರದಂತೆ ನೋಡಿಕೊಳ್ಳುತ್ತದೆ.

Story first published: Wednesday, January 14, 2015, 22:48 [IST]
X
Desktop Bottom Promotion