Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೈದ್ಯರಿಂದ ದೂರವಿರಲು, ದಿನಕ್ಕೊಂದು ಸೇಬು ಸಾಕು
"ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುವುದು" ಈ ವಾಕ್ಯವನ್ನು ಚಿಕ್ಕಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ. ಬೇರೆಲ್ಲಾ ಹಣ್ಣುಗಳಿಗಿಂತ ಸೇಬಿನಲ್ಲಿರುವ ಪೋಷಕಾಂಶಗಳ ಆಗರವೇ ಇದಕ್ಕೆ ಕಾರಣ. ಪ್ರತಿದಿನ ಸೇಬು ಹಣ್ಣೊಂದನ್ನು ತಿನ್ನುವ ಮೂಲಕ ದೇಹಕ್ಕೆ ಅಗತ್ಯವಾದ ಪ್ರಮಾಣದ ಪ್ರೋಟೀನುಗಳು, ವಿಟಮಿನ್‌ಗಳು, ಆಂಟಿ ಆಕ್ಸಿಡೆಂಟುಗಳು ಹಾಗೂ ಮುಖ್ಯವಾಗಿ ವಿಟಮಿನ್ ಸಿ ಲಭ್ಯವಿರುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಂಡು ಬರುವ ಕಾರಣ ಸೇಬಿಗೆ ವೈದ್ಯರನ್ನು ದೂರ ಅಟ್ಟಿದ ಅತಿಶಯೋಕ್ತಿ ಲಭ್ಯವಾಗಿದೆ.
ಪ್ರತಿದಿನದ ಸೇಬು ಸೇವನೆಯಿಂದ ಹೃದಯ ಬಲಗೊಳ್ಳುವುದು, ಮೆದುಳಿನ ಕ್ಷಮತೆಯನ್ನು ಕ್ಷೀಣಿಸುವ ಕಾಯಿಲೆ , ಕ್ಯಾನ್ಸರ್, ಮಧುಮೇಹ ಮೊದಲಾದ ಕಾಯಿಲೆಗಳನ್ನು ದೂರವಿಡುವುದು. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.ಸೇಬು ಹಣ್ಣನ್ನು ಸಿಪ್ಪೆ ಸಮೇತ ತಿನ್ನುವುದು ಅಗತ್ಯ. ಏಕೆಂದರೆ ಸೇಬಿನ ಹೆಚ್ಚಿನ ಪೋಷಕಾಂಶಗಳು ತಿರುಳಿಗಿಂತ ಸಿಪ್ಪೆಯಲ್ಲಿಯೇ ಹೆಚ್ಚಾಗಿರುತ್ತವೆ. ಬನ್ನಿ ಸೇಬು ಹಣ್ಣಿನ ಇನ್ನಷ್ಟು ಪ್ರಯೋಜನಗಳನ್ನು ನೋಡೋಣ.. ಸೇಬಿನ ಸಿಪ್ಪೆಯೂ ಕೂಡ ಆರೋಗ್ಯಕ್ಕೆ ಉಪಕಾರಿ ಕಣ್ರೀ

ರಕ್ತದೊತ್ತಡವನ್ನು ಹತೋಟಿಯಲ್ಲಿಡುತ್ತದೆ
ರಕ್ತದಲ್ಲಿ ಪೊಟ್ಯಾಶಿಯಂ ಪ್ರಮಾಣ ಕಡಿಮೆಯಾದಾಗ ಹೃದಯದ ಒತ್ತಡವೂ ಹೆಚ್ಚುತ್ತದೆ. ಸೇಬುಹಣ್ಣಿನಲ್ಲಿ ಶೇ 3 ರಷ್ಟು ಪೊಟ್ಯಾಶಿಯಂ ಇರುವುದರಿಂದ ಹೆಚ್ಚಿನ ರಕ್ತದೊತ್ತಡದ ಸಂಭವ ಕಡಿಮೆಯಾಗುತ್ತದೆ.
ತೂಕ ಇಳಿಕೆಗೆ ಸಹಕರಿಸುತ್ತದೆ
ಸೇಬಿನಲ್ಲಿರುವ ಪೆಕ್ಟಿನ್ ಮತ್ತು ಇತರ ಆಂಟಿ ಆಕ್ಸಿಡೆಂಟುಗಳು ಜೀವರಸಾಯನಿಕ ಕ್ರಿಯೆಯನ್ನು ತೀವ್ರಗೊಳಿಸಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಪ್ರಚೋದಿಸುತ್ತದೆ. ಪರಿಣಾಮವಾಗಿ ಸ್ಥೂಲಕಾಯ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ.
ಶ್ವಾಸಕೋಶ ಮತ್ತು ಸ್ತನಕ್ಯಾನ್ಸರ್‌ನ್ನು ತಡೆಗಟ್ಟುತ್ತದೆ
ಸೇಬಿನಲ್ಲಿ quercetin ಮತ್ತು triterpenoids ಎಂಬ ಪೋಷಕಾಂಶಗಳಿದ್ದು ದೊಡ್ಡಕರುಳು, ಶ್ವಾಸಕೋಶ ಮತ್ತು ಸ್ತನಕ್ಯಾನ್ಸರ್ ಬರುವ ಸಂಭವವನ್ನು ದೂರ ಮಾಡುತ್ತವೆ.
ಮೂಳೆಗಳನ್ನು ರಕ್ಷಿಸುತ್ತದೆ
ಮಹಿಳೆಯರ ರಜೋ ನಿವೃತ್ತಿ ಕಾಲದ ಬಳಿಕ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಅದರಲ್ಲಿ ಅಸ್ಥಿರಂಧ್ರತೆ (osteoporosis)ಯೂ ಒಂದು. ಈ ಸಮಯದಲ್ಲಿ ಮೂಳೆಗಳಲ್ಲಿ ಹಲವು ಸೂಕ್ಷ್ಮರಂಧ್ರಗಳು ಕಾಣಿಸಿಕೊಂಡು ದುರ್ಬಲವಾಗುತ್ತವೆ. ಸೇಬಿನಲ್ಲಿರುವ phloridzin ಎಂಬ ಪೋಷಕಾಂಶ ಅಸ್ಥಿರಂಧ್ರತೆಯ ವಿರುದ್ಧ ಹೋರಾಡಿ ಮೂಳೆಗಳು ಮತ್ತೆ ಸಬಲವಾಗಲು ನೆರವಾಗುತ್ತದೆ. ಸೇಬಿನಲ್ಲಿರುವ ಬೋರಾನ್ ಎಂಬ ಖನಿಜ ಮೂಳೆಗಳು ಹೆಚ್ಚು ಧೃಢಗೊಳ್ಳಲು ಸಹಕರಿಸುತ್ತದೆ.
ಮಧುಮೇಹವನ್ನು ನಿಯಂತ್ರಿಸುತ್ತದೆ
ಸೇಬು ಮಧುಮೇಹ ರೋಗವನ್ನು ನಿಯಂತ್ರಿಸುತ್ತದೆ. ಮಧುಮೇಹಿಗಳು ತಪ್ಪದೆ ಇದನ್ನು ಸೇವಿಸಬೇಕು. ಸೇಬುಹಣ್ಣಿನಲ್ಲಿರುವ phytonutrient ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತವೆ. ತಿಂದ ಆಹಾರದಿಂದ ಎಷ್ಟು ಬೇಗನೇ ಪೋಷಕಾಂಶಗಳು ರಕ್ತವನ್ನು ಸೇರುತ್ತವೆ ಎಂದು ಗಮನಿಸುವ ಜಿ.ಐ. ಸೂಚಿಕೆ glycemic index or glycaemic index (GI) ಪ್ರಕಾರ ಸೇಬು ಕಡಿಮೆ ಜಿ.ಐ. ಹೊಂದಿದೆ. ಅಂದರೆ ತಿಂದ ಆಹಾರದಿಂದ ಪೋಷಕಾಂಶಗಳು ನಿಧಾನವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ರಕ್ತಕ್ಕೆ ಸೇರುವುದರಿಂದ ಉತ್ತಮ ಆರೋಗ್ಯ ಲಭ್ಯವಾಗುತ್ತದೆ. ಅಲ್ಲದೇ polyphenols ಎಂಬ ಪೋಷಕಾಂಶವೂ ಗ್ಲುಕೋಸ್ ಸಕ್ಕರೆ ಶೀಘ್ರವಾಗಿ ರಕ್ತದೊಡನೆ ಬೆರೆಯುವುದನ್ನು ತಡೆಯುವ ಮೂಲಕ ಮಧುಮೇಹ ಕಾಯಿಲೆಯಿಂದ ದೂರವಿಡುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಸೇಬಿನಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ (7%). ಈ ಪ್ರಮಾಣದ ವಿಟಮಿನ್ ಸೇವನೆಯ ಕಾರಣ ಪ್ರತಿದಿನ ಅಗತ್ಯಕ್ಕೆ ಸೂಚಿಸಲಾದ 14% ರಷ್ಟು ವಿಟಮಿನ್ ಲಭ್ಯವಾಗುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟುಗಳು ಲಭ್ಯವಾಗುತ್ತದೆ. ಪರಿಣಾಮವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

