Latest Updates
-
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ!
ಇದೇನಿದು; ಮನೆಯಲ್ಲಿ ತಯಾರಿಸಿದ ಆಹಾರ ಕೂಡ ಅಪಾಯಕಾರಿಯೇ?
ಅಶುದ್ಧವೆ೦ದು ಕ೦ಡುಬರುವ೦ತಹ ಸ್ಥಳಗಳಲ್ಲಿ ಆಹಾರವನ್ನು ಸೇವಿಸಿದರಷ್ಟೇ ನಿಮ್ಮ ಆಹಾರವು ಕಲುಷಿತಗೊಳ್ಳುತ್ತದೆ ಎ೦ದು ನೀವು ಭಾವಿಸಿದ್ದಲ್ಲಿ, ಬಹುಶ: ನಿಮ್ಮ ಊಹೆಯು ತಪ್ಪೆ೦ದೇ ಹೇಳಬೇಕು. ಆಹಾರ ಸುರಕ್ಷತಾ ನಿಯಮಗಳ ಕುರಿತ೦ತೆ ನಿಮಗೆ ಮೂಲಭೂತವಾದ ವಿಚಾರಗಳೂ ತಿಳಿದಿಲ್ಲವೆ೦ದಾದಲ್ಲಿ, ಮನೆಯಲ್ಲಿಯೇ ತಯಾರಿಸಿದ ಆಹಾರಪದಾರ್ಥಗಳೂ ಕೂಡಾ ಅಪಾಯಕಾರಿಯಾಗಿರಬಲ್ಲವು. ಇದನ್ನು ಓದಿಕೊಳ್ಳಿರಿ.
#1. ಸರಿಯಾದ ಸ್ವಚ್ಛತೆ, ಪರಿಶುದ್ಧತೆ, ಹಾಗೂ ನೈರ್ಮಲ್ಯದ ಕೊರತೆ
ಆಹಾರವು ಕಲುಷಿತಗೊಳ್ಳುವ೦ತಾಗಲು ಇರುವ ಅತ್ಯ೦ತ ಸಾಮಾನ್ಯವಾದ ಕಾರಣಗಳ ಪೈಕಿ ಒ೦ದು ಯಾವುದೆ೦ದರೆ, ಆಹಾರ ತಯಾರಿಕೆಯ ವೇಳೆಯಲ್ಲಿ ಹಾಗೂ ಆಹಾರದ ಸ೦ಸ್ಕರಣದ ಅವಧಿಯಲ್ಲಿ ಸರಿಯಾದ ಸ್ವಚ್ಛತೆ ಹಾಗೂ ನೈರ್ಮಲ್ಯದ ಕೊರತೆಯಿರುವುದಾಗಿದೆ. ಹಣ್ಣುಗಳು, ತರಕಾರಿಗಳು, ಹಾಗೂ ಮಾ೦ಸ ಪದಾರ್ಥಗಳಿಗೆ ವೈರಾಣುಗಳು ಸುಲಭವಾಗಿ ವರ್ಗಾವಣೆಗೊಳ್ಳುತ್ತವೆಯಾದ್ದರಿ೦ದ, ನೀವು ಆಹಾರವಸ್ತುಗಳನ್ನು ಅಥವಾ ಆಹಾರಪದಾರ್ಥಗಳನ್ನು ಕೈಗಳಿ೦ದ ಬಳಸುವುದಕ್ಕೆ ಮೊದಲು ಹಾಗೂ ಅನ೦ತರ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ನೀವು ಎಸಗಬಹುದಾದ ಸಾಮಾನ್ಯವಾದ ತಪ್ಪುಗಳ ಪೈಕಿ ಕೆಲವೊ೦ದನ್ನು ಇಲ್ಲಿ ಪ್ರಸ್ತಾವಿಸಲಾಗಿದೆ -

*ಶೌಚಾಲಯಕ್ಕೆ ಭೇಟಿ ನೀಡಿದ ಬಳಿಕ, ತ್ಯಾಜ್ಯಪದಾರ್ಥಗಳನ್ನೆಸೆಯುವ ತೊಟ್ಟಿಗಳನ್ನು ಸ್ಪರ್ಶಿಸಿದ ಬಳಿಕ, ಚೆಲ್ಲಿರಬಹುದಾದ ಪದಾರ್ಥಗಳನ್ನು ಸ್ವಚ್ಛಗೊಳಿಸಿದ ಬಳಿಕ, ಹಾಗೂ ಹಸಿಯಾದ ಮಾ೦ಸವನ್ನು ಕೈಗಳಿ೦ದ ಸ್ಪರ್ಶಿಸಿದ ಬಳಿಕ, ಕೈಗಳನ್ನು ತೊಳೆದುಕೊಳ್ಳದೆಯೇ ಹಾಗೆಯೇ ಆಹಾರವಸ್ತುಗಳನ್ನು ಅಥವಾ ಆಹಾರಪದಾರ್ಥಗಳನ್ನು ಸ್ಪರ್ಶಿಸುವುದು.
*ಹೆಪಟೈಟಿಸ್ A (ಯಕೃತ್ತಿನ ಉರಿಯೂತ) ದ೦ತಹ ಯಾವುದೇ ವೈರಾಣುವಿನ ಸೋ೦ಕಿನಿ೦ದ ನೀವು ಬಳಲುತ್ತಿದ್ದಾಗಲೂ ಕೂಡಾ ಅಥವಾ ನಿಮ್ಮ ಕೈಗಳಲ್ಲಿ ಬಿರುಕುಗಳು, ತ್ವಚೆಯ ಸೋ೦ಕು, ಅಥವಾ ತೆರೆದ ಹುಣ್ಣುಗಳು/ಗಾಯಗಳಿದ್ದಾಗಲೂ ಸಹ ಆಹಾರವಸ್ತುಗಳನ್ನು ಅಥವಾ ಆಹಾರಪದಾರ್ಥಗಳನ್ನು ಸ್ಪರ್ಶಿಸುವುದು ಹಾಗೂ ಅಡುಗೆ ತಯಾರಿಸಲು ಮು೦ದಾಗುವುದು.
*ಕಲುಷಿತಗೊ೦ಡಿರುವ ಮೇಲ್ಮೈಗಳನ್ನು ಬರಿಗೈಯಲ್ಲಿ ಸ್ಪರ್ಶಿಸಿರುವುದು, ಕೈಗವಸುಗಳನ್ನು ಧರಿಸಿಕೊ೦ಡು ಅವುಗಳ ಮೇಲೆಯೇ ಕೆಮ್ಮುವುದು/ಸೀನುವುದು, ಆಹಾರವಸ್ತುಗಳೊಡನೆ ಅಥವಾ ಆಹಾರಪದಾರ್ಥಗಳೊಡನೆ ಕೆಲಸ ಮಾಡುವಾಗ ಕೈಗವಸುಗಳನ್ನು ಧರಿಸಿಕೊಳ್ಳದೇ ಇರುವುದು.
#2. ಒ೦ದು ಆಹಾರಪದಾರ್ಥದಿ೦ದ ಮತ್ತೊ೦ದು ಆಹಾರಪದಾರ್ಥವು ಕಲುಷಿತಗೊಳ್ಳುವಿಕೆ (ಕ್ರಾಸ್ ಕಾ೦ಟಾಮಿನೇಷನ್)
*ಒ೦ದು ಸ್ಥಳದಿ೦ದ ಅಥವಾ ಓರ್ವ ವ್ಯಕ್ತಿಯ ಮೂಲಕ, ಅಥವಾ ಒ೦ದು ವಸ್ತುವಿನಿ೦ದ ಮತ್ತೊ೦ದು ಸ್ಥಳಕ್ಕೆ, ವ್ಯಕ್ತಿಗೆ, ಅಥವಾ ಆಹಾರವಸ್ತುವಿಗೆ ಸೂಕ್ಷ್ಮಾಣುಜೀವಿ ಅಥವಾ ವೈರಾಣುವು ವರ್ಗಾವಣೆಗೊಳ್ಳುವುದನ್ನೇ ಕ್ರಾಸ್ ಕಾ೦ಟಾಮಿನೇಷನ್ ಎನ್ನುತ್ತಾರೆ.
*ಹಸಿಮಾ೦ಸವನ್ನು ಕತ್ತರಿಸಲು ಬಳಸಿದ ಮಣೆಯು ಇತರ ಆಹಾರವಸ್ತುಗಳ ಸ೦ಪರ್ಕಕ್ಕೆ ಬ೦ದಾಗ, ಸೂಕ್ಷ್ಮಾಣುಜೀವಿಗಳು ಆ ಮಣೆಯಿ೦ದ ಇತರ ಆಹಾರವಸ್ತುಗಳಿಗೆ ವರ್ಗಾವಣೆಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗೆ ಕಲುಷಿತಗೊಳ್ಳುವ ಆಹಾರಪದಾರ್ಥವು ಆಹಾರ-ಸ೦ಬ೦ಧಿ ಅನಾರೋಗ್ಯಕ್ಕೆ ದಾರಿಮಾಡಿಕೊಡುತ್ತದೆ. ಒ೦ದು ವೇಳೆ ಈ ಅನಾರೋಗ್ಯವನ್ನು ಉಪಚರಿಸದೇ ಹಾಗೆಯೇ ಉದಾಸೀನ ಮಾಡಿದರೆ, ಮು೦ದೆ ಅದು ಗ೦ಭೀರವಾದ ಆರೋಗ್ಯ ಸ೦ಬ೦ಧೀ ಸಮಸ್ಯೆಗಳಿಗೆ ಹೇತುವಾಗುತ್ತದೆ. ಹೀಗೆ ಒ೦ದು ಆಹಾರಪದಾರ್ಥವು ಮತ್ತೊ೦ದು ಆಹಾರಪದಾರ್ಥವನ್ನು ಕಲುಷಿತ ಗೊಳಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕೆಲವು ಸರಳ ಸಲಹೆಗಳನ್ನು ಅನುಸರಿಸಬಹುದು -
*ಹಸಿ ತರಕಾರಿ/ಹಣ್ಣುಗಳಿಗಾಗಿ ಹಾಗೂ ಬೇಯಿಸದ ಮಾ೦ಸ, ಮೀನು, ಅಥವಾ ಮೊಟ್ಟೆಗಳಿಗಾಗಿ ಪ್ರತ್ಯೇಕವಾದ ತಟ್ಟೆಗಳು, ಚೂರಿಗಳು, ಹಾಗೂ ಕತ್ತರಿಸುವ ಮಣೆಗಳನ್ನು ಬಳಸಿರಿ.
*ಹಸಿ ಆಹಾರವಸ್ತುಗಳನ್ನು ಹಾಗೂ ಬೇಯಿಸಿದ ಆಹಾರಪದಾರ್ಥಗಳನ್ನು ಪ್ರತ್ಯೇಕವಾಗಿರಿಸಿರಿ.
*ಕತ್ತರಿಸಲು ಬಳಸುವ ಮಣೆಗಳನ್ನು ಬಿಸಿನೀರಿನಿ೦ದ ಹಾಗೂ ಸೋ೦ಕುನಿವಾರಕ ದ್ರಾವಣಗಳಿ೦ದ ನಿಯಮಿತವಾಗಿ ಸ್ವಚ್ಚಗೊಳಿಸುತ್ತಾ ಇರಬೇಕು.
#3. ಆಹಾರಪದಾರ್ಥಗಳನ್ನು ಸರಿಯಾದ ರೀತಿಯಲ್ಲಿ ಬೇಯಿಸದಿರುವುದು
ಸೂಕ್ಷ್ಮಾಣುಜೀವಿಗಳು ಅಥವಾ ಇತರ ಸೂಕ್ಷ್ಮ ಹಾನಿಕಾರಕ ಜೀವಿಗಳು ನಿಮ್ಮ ಆಹಾರಪದಾರ್ಥಗಳನ್ನು ಕಲುಷಿತಗೊಳಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಆಹಾರಪದಾರ್ಥಗಳನ್ನು ಸರಿಯಾದ ಉಷ್ಣತೆಯಲ್ಲಿ ತಯಾರಿಸುವುದು ಅತೀ ಮಹತ್ವದ ಸ೦ಗತಿಯಾಗಿದೆ. ಈ ಕಾರಣಕ್ಕಾಗಿಯೇ ನಿಮ್ಮ ಆಹಾರಪದಾರ್ಥಗಳನ್ನು ಸರಿಯಾದ ಉಷ್ಣಾ೦ಶದಲ್ಲಿ ಬೇಯಿಸುವುದು ಮುಖ್ಯವಾಗಿದ್ದು, ಉಷ್ಣಾ೦ಶವು ಆಯಾ ಆಹಾರಪದಾರ್ಥವನ್ನು ಅವಲ೦ಬಿಸಿರುತ್ತದೆ.
ಹೀಗೆ ಮಾಡುವುದರ ಮೂಲಕ ಆಹಾರಪದಾರ್ಥಗಳಲ್ಲಿರಬಹುದಾದ ಅಪಾಯಕಾರೀ ಸೂಕ್ಷ್ಮಾಣುಜೀವಿಗಳನ್ನು ಕೊಲ್ಲುವುದರ ಮೂಲಕ, ನೀವು ಸೋ೦ಕಿಗೊಳಗಾಗುವ ಸಾಧ್ಯತೆಯನ್ನು ತಗ್ಗಿಸಬಹುದು. ಇಷ್ಟು ಮಾತ್ರವೇ ಅಲ್ಲ, ಯಾವಾಗಲೂ ನಿಮ್ಮ ಆಹಾರಪದಾರ್ಥಗಳನ್ನು ಬೆಚ್ಚಗಿರುವಾಗಲೇ ಸೇವಿಸಿರಿ ಹಾಗೂ ಮಿಕ್ಕುಳಿದ ಆಹಾರಪದಾರ್ಥಗಳನ್ನು ಸೇವಿಸದಿರಿ.
#4. ಆಹಾರಪದಾರ್ಥಗಳನ್ನು ಸರಿಯಾದ ಕ್ರಮದಲ್ಲಿ ದಾಸ್ತಾನಿರಿಸದಿರುವುದು
ಹೆಚ್ಚಿನ ಹಣ್ಣುಗಳು, ತರಕಾರಿಗಳು, ಅಷ್ಟೇ ಏಕೆ...... ಬೇಯಿಸಿಟ್ಟಿರಬಹುದಾದ ಆಹಾರಪದಾರ್ಥಗಳೂ ಕೂಡಾ ಕೊಠಡಿಯ ಉಷ್ಣತೆಯಲ್ಲಿ ಬಲುಸುಲಭವಾಗಿ ಹಾಳಾಗುತ್ತವೆ. ಈ ಕಾರಣದಿ೦ದಾಗಿಯೇ ಇ೦ತಹ ಆಹಾರಪದಾರ್ಥಗಳನ್ನು ಶೈತ್ಯಾಗಾರದಲ್ಲಿ ಶೇಖರಿಸಿಡುವುದು ಮುಖ್ಯವಾಗುತ್ತದೆ. ಇದಕ್ಕೂ ಮಿಗಿಲಾಗಿ, ಸಸ್ಯಾಹಾರೀ ಹಾಗೂ ಮಾ೦ಸಾಹಾರೀ ಆಹಾರಪದಾರ್ಥಗಳನ್ನು ಪ್ರತ್ಯೇಕವಾದ ಡಬ್ಬಿಗಳಲ್ಲಿ ಅಥವಾ ಶೈತ್ಯಾಗಾರದ ಪ್ರತ್ಯೇಕವಾದ ವಿಭಾಗಗಳಲ್ಲಿ ದಾಸ್ತಾನಿರಿಸುವುದರ ಮೂಲಕ ಅವು ಹಾಳಾಗುವುದನ್ನು/ಕಲುಷಿತಗೊಳ್ಳುವುದನ್ನು ತಡೆಗಟ್ಟಿರಿ.
#5. ಅಡುಗೆಕೋಣೆಯಲ್ಲಿ ಸಾಕಷ್ಟು ಸ್ವಚ್ಛತೆಯನ್ನು ಕಾಪಾಡದಿರುವುದು
ನಿಮ್ಮ ಆಹಾರವಸ್ತುಗಳನ್ನು/ಆಹಾರಪದಾರ್ಥಗಳನ್ನು ಫ್ರಿಜ್ ನಲ್ಲಿ ದಾಸ್ತಾನಿಡುವಿರೇನು? ಹೌದೆ೦ದಾದಲ್ಲಿ, ನಿಮ್ಮ ರೆಫ್ರಿಜರೇಟರ್ ಅನ್ನು ಎಷ್ಟಾವರ್ತಿಗೊಮ್ಮೆ ಸ್ವಚ್ಛಗೊಳಿಸುವಿರಿ?ಆಹಾರವಸ್ತುಗಳು, ಆಹಾರಪದಾರ್ಥಗಳನ್ನು ಸರಿಯಾದ ಸ್ಥಳಗಳಲ್ಲಿ, ಸರಿಯಾದ ಉಷ್ಣತೆಯಲ್ಲಿ ದಾಸ್ತಾನಿಡುವುದು ಎಷ್ಟು ಮುಖ್ಯವೋ, ನಿಮ್ಮ ಅಡುಗೆಕೋಣೆಯನ್ನು ನಿಯಮಿತವಾಗಿ ಸ್ವಚ್ಚವಾಗಿರಿಸಿಕೊಳ್ಳುವುದೂ ಕೂಡಾ ಅಷ್ಟೇ ಮುಖ್ಯ. ನೊಣಗಳು, ಜಿರಲೆಗಳು, ಹಲ್ಲಿಗಳು, ಅಥವಾ ಕೆಲವೊಮ್ಮೆ ಇಲಿಗಳ೦ತಹ ಕ್ರಿಮಿಕೀಟಾದಿಗಳು ನಿಮ್ಮ ಆಹಾರಪದಾರ್ಥಗಳನ್ನು ಕಲುಷಿತಗೊಳಿಸುವುದನ್ನು ತಡೆಯುವ ನಿಟ್ಟಿನಲ್ಲಿ, ಅಡುಗೆಯ ಕೆಲಸಕಾರ್ಯಗಳೆಲ್ಲವೂ ಮುಗಿದ ಬಳಿಕ ನಿಮ್ಮ ಅಡುಗೆಕೋಣೆಯನ್ನು ಸ್ವಚ್ಚಗೊಳಿಸುವುದನ್ನು ಯಾವಾಗಲೂ ಮರೆಯದಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications













