Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಿಂಡಿ ಹಿಪ್ಪೆಮಾಡುವ ನೋವುಗಳಿಗೆ ಮನೆಮದ್ದೇ ದಿವ್ಯೌಷಧ
ನಿತ್ಯವೂ ನಮಗೆಲ್ಲಾ ಒಂದಲ್ಲಾ ಒಂದು ರೀತಿಯ ನೋವುಗಳು ಕಾಡುತ್ತಲೇ ಇರುತ್ತವೆ. ತಲೆನೋವು, ಮೈ ಕೈ ನೋವು, ಹಲ್ಲುನೋವು ಮೊದಲಾದವು ತಾತ್ಕಾಲಿಕ ನೋವುಗಳಾದರೆ ರೋಗದಿಂದಾಗಿ ಕೆಲವರು ಸತತ ನೋವು ಅನುಭವಿಸುತ್ತಲೇ ಇರುತ್ತಾರೆ.
ಇವೆಲ್ಲಾ ದೈಹಿಕ ನೋವುಗಳಾದರೆ ಮಾನಸಿಕವಾದ ನೋವು ಇನ್ನೊಂದು ತರಹದ್ದು. ದುಃಖ, ವಿರಹ, ಸೋಲು, ಹತಾಶೆ, ನಷ್ಟ, ನಂಬಿಕೆದ್ರೋಹ, ವಿಶ್ವಾಸದ್ರೋಹ ಮೊದಲಾದವು ಮಾನಸಿಕ ನೋವುಗಳನ್ನು ನೀಡುತ್ತವೆ. ಈ ನೋವುಗಳನ್ನು ಶಮನಗೊಳಿಸಲು ಯಾವುದೇ ಸಿದ್ಧೌಷಧವಿಲ್ಲ. ಆದರೆ ದೈಹಿಕ ನೋವುಗಳಿಗೆ ಔಷಧಿಗಳು ಲಭ್ಯವಿವೆ. ಸಾಮಾನ್ಯ ಜ್ವರಕ್ಕೆಲ್ಲಾ ಮನೆಮದ್ದಿರುವಾಗ ವೈದ್ಯರ ಹಂಗೇಕೆ?
ಪ್ರಥಮವಾಗಿ ನೋವು ಎಂದರೇನೆಂಬುದನ್ನು ನೋಡೋಣ. ನಮ್ಮ ಇಡಿಯ ದೇಹವನ್ನು ಮೆದುಳು ನರಮಂಡಲದ ಮೂಲಕ ನಿಯಂತ್ರಿಸುತ್ತಲೇ ಇರುತ್ತದೆ. ಎಲ್ಲವೂ ಸರಿ ಇದ್ದಾಗ ನಮಗೆ ಯಾವ ನೋವೂ ಕಾಣಿಸಿಕೊಳ್ಳುವುದಿಲ್ಲ.
ಆದರೆ ಎಲ್ಲಾದರೂ ಏನಾದರೂ ತೊಂದರೆಯಾದರೆ ಆ ಸ್ಥಳದಿಂದ ಮೆದುಳಿಗೆ ಸೂಚನೆಗಳು ಹೊರಡುತ್ತವೆ. ಇಲ್ಲಿ ತೊಂದರೆ ಇದೆ, ಇದಕ್ಕೆ ಹೆಚ್ಚು ತ್ರಾಸು ನೀಡಬೇಡಿ, ಇದಕ್ಕೆ ಪರಿಹಾರ ದೊರಕಿಸಿ ಎಂದು ಹೊರಡುವ ಸಂಜ್ಞೆಗಳೇ ನೋವು. ಬನ್ನಿ ಇಂದು ಇಂತಹ ದೈಹಿಕ ನೋವುಗಳು ಮತ್ತು ಅವುಗಳಿಗೆ ನೀಡಬಹುದಾದ ಸುಲಭ ಮನೆಮದ್ದುಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಸ್ನಾಯುಗಳ ನೋವು ಮತ್ತು ಉರಿಯೂತ (Inflammation)
ಅತಿ ಹೆಚ್ಚಿನ ಶ್ರಮದಿಂದ ಸ್ನಾಯುಗಳಿಗೆ ಉಂಟಾದ ನೋವು, ಜಜ್ಜಿದ ಬಳಿಕ ಒಳಗಣ ನೋವು ಮೊದಲಾದ ಸ್ನಾಯುಗಳ ನೋವಿಗೆ ಅರಿಶಿನದ ಲೇಪನ ಉತ್ತಮ ಪರಿಹಾರ ನೀಡುತ್ತದೆ. ಅರಿಶಿನ ಪುಡಿಯನ್ನು ಉಗುರುಬೆಚ್ಚನೆಯ ನೀರಿನಲ್ಲಿ ಮಿಶ್ರಣ ಮಾಡಿ ನೋವಿರುವ ಸ್ಥಳಕ್ಕೆ ಲೇಪನ ಹಚ್ಚುವುದರಿಂದ ಸ್ನಾಯುಗಳ ನೋವು ಕಡಿಮೆಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸ್ನಾಯುಗಳ ನೋವು ಮತ್ತು ಉರಿಯೂತ (Inflammation)
ರಾತ್ರಿ ಮಲಗುವ ಮುನ್ನ ಅರಿಶಿನಪುಡಿ ಸೇರಿಸಿದ ಹಾಲನ್ನು ಬಿಸಿಯಾಗಿ ಕುಡಿದು ಮಲಗುವುದರಿಂದ ಇಡಿಯ ದೇಹದ ಸ್ನಾಯುಗಳ ನೋವು ಅಥವಾ ಮೈ ಕೈ ನೋವು ಕಡಿಮೆಯಾಗುತ್ತದೆ. ಅರಿಶಿನದ ಉರಿಯೂತ ನಿವಾರಕ ಗುಣ ಜಖಂಗೊಂಡಿದ್ದ ಅಂಗಾಂಶಗಳನ್ನು ಪುನಾರಚಿಸಲು ಮತ್ತು ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ.

ಸಾಮಾನ್ಯವಾದ ಇತರ ನೋವುಗಳು
ಹೆಚ್ಚಿನ ದೈಹಿಕ ಕೆಲಸಗಳನ್ನು ಮಾಡದೇ ಇದ್ದರೂ ಮೈ ಕೈ ನೋವು ಕಾಡುತ್ತಿದ್ದರೆ ಇದಕ್ಕೆ ಮಗ್ನೀಶಿಯಂ ಕೊರತೆ ಕಾರಣವಾಗಿರಬಹುದು. ಈ ಸ್ಥಿತಿಯಲ್ಲಿ ಮೆಗ್ನೀಶಿಯಂ ಹೆಚ್ಚಿರುವ ಆಹಾರಗಳನ್ನು ಸೇವಿಸುವುದೇ ಉತ್ತಮ ಪರಿಹಾರವಾಗಿದೆ. ಬೆಣ್ಣೆಹಣ್ಣು, ಹಸಿರು ಸೊಪ್ಪು, ಮೀನು, ಒಣಫಲಗಳು ಮತ್ತು ಕಪ್ಪು ಚಾಕಲೇಟಿನಲ್ಲಿ ಮೆಗ್ನೀಶಿಯಂ ಹೇರಳವಾಗಿದ್ದು ಇವುಗಳ ಸೇವನೆಯಿಂದ ಮೈ ಕೈ ನೋವು ಕಡಿಮೆಯಾಗುತ್ತದೆ.

ಮೂತ್ರನಾಳ ಮತ್ತು ಮೂತ್ರಕೋಶದಲ್ಲಿ ಸೋಂಕು
ಒಂದು ವೇಳೆ ಮೂತ್ರನಾಳದಲ್ಲಿ ಉರಿ ಕಾಣಿಸಿಕೊಂಡರೆ ಬ್ಲೂಬೆರಿಗಳನ್ನು ಸೇವಿಸುವುದು ಉತ್ತಮ ಪರಿಹಾರವಾಗಿದೆ. ಬ್ಲೂಬೆರಿಗಳಲ್ಲಿರುವ ಟ್ಯಾನಿನ್ ಎಂಬ ಪೋಷಕಾಂಶ ಉರಿಮೂತ್ರಕ್ಕೆ ಕಾರಣವಾದ
ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಹೊಂದಿದೆ.

ಗಂಟಲ ನೋವಿಗೆ
ಗಂಟಲಲ್ಲಿ ಕೊಂಚ ನೋವು ಕಾಣಿಸಿಕೊಂಡಿದ್ದು ಆಹಾರ ನುಂಗುವಾಗ ಹೆಚ್ಚು ನೋವು ಕಾಣಿಸಿಕೊಂಡಿದ್ದರೆ ಪುದಿನಾ ಸೊಪ್ಪು ಸೇರಿಸಿದ ಹಸಿರು ಟೀ ಕುಡಿಯಿರಿ. ಅಥವಾ ಸಿದ್ಧರೂಪದಲ್ಲಿ ಸಿಗುವ peppermint tea ಎಂಬ ಚೀಲಗಳನ್ನೂ ಬಳಸಬಹುದು. ಬಿಸಿಬಿಸಿಯಾಗಿ ಈ ಟೀ ಹೀರುವ ಮೂಲಕ ಗಂಟಲ ಒಳಭಾಗದಲ್ಲಿ ಸೋಂಕಿಗೆ ಕಾರಣವಾಗಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ಗಂಟಲ ನೋವನ್ನು
ಕಡಿಮೆಯಾಗಿಸಿಕೊಳ್ಳಬಹುದು.

ಸಂಧಿವಾತ (Arthritis)
ಮೂಳೆಗಳ ಸಂಧಿಯಲ್ಲಿ, ವಿಶೇಷವಾಗಿ ಬೆರಳುಗಳ ಸಂಧಿಗಳಲ್ಲಿ ಸೋಂಕು ಉಂಟಾಗಿದ್ದು ನೋವು ಕಾಣಿಸಿಕೊಂಡಿದ್ದರೆ ಹಸಿಶುಂಠಿ ಸೇರಿಸಿ ಮಾಡಿದ ಹಸಿರು ಟೀ ಉತ್ತಮ ಪರಿಹಾರ ನೀಡುತ್ತದೆ. ಜೊತೆಗೇ ಇದು ಪೆಡಸಾಗಿದ್ದ ಸ್ನಾಯುಗಳನ್ನು ಸಡಿಲಿಸಿ ನೋವು ನಿವಾರಣೆಯಾಗಲು ಮತ್ತು ನಿತ್ಯದ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಲು ನೆರವಾಗುತ್ತದೆ.

ಹಲ್ಲುನೋವು
ಒಸಡುಗಳಲ್ಲಿ ಸಂಗ್ರಹವಾದ ಆಹಾರ ಕೊಳೆತು ಬ್ಯಾಕ್ಟೀರಿಯಾಗಳು ಮನೆಮಾಡಿಕೊಂಡಿದ್ದರೆ ಆ ಭಾಗದಲ್ಲಿ ಆಗಾಧವಾದ ನೋವು ಉಂಟುಮಾಡುತ್ತದೆ. ಲವಂಗದ ಎಣ್ಣೆಯನ್ನು ಅದ್ದಿದ ಹತ್ತಿಯನ್ನು ನೋವಿರುವ ಜಾಗಕ್ಕೆ ಒರೆಸಿ ಆ ಹತ್ತಿಯನ್ನು ಅಲ್ಲಿಯೇ ಇರುವಂತೆ ಕಚ್ಚಿ ಹಿಡಿಯುವುದರಿಂದ ನೋವು ಶಮನವಾಗುತ್ತದೆ. ಲವಂಗದಲ್ಲಿರುವ eugenol ಎಂಬ ಪೋಷಕಾಂಶವು ಸಂವೇದನ ಹಾರಿ ಗುಣ ಹೊಂದಿದ್ದು ಬ್ಯಾಕ್ಟೀರಿಯಾಗಳಿಂದಾದ ಸೋಂಕು ಮತ್ತು ನೋವನ್ನು ಶಮನಗೊಳಿಸುವ ಶಕ್ತಿ ಹೊಂದಿದೆ. ಇದು ಒಸಡಿನಲ್ಲಿರುವ ನರಾಗ್ರಗಳನ್ನು ತಾತ್ಕಾಲಿಕವಾಗಿ ಸ್ತಬ್ಧಗೊಳಿಸಿ ನೋವಿನ ಸೂಚನೆಯನ್ನು ಮೆದುಳಿಗೆ ತಲುಪಿಸದಂತೆ ತಡೆಯುತ್ತದೆ.

ಹುಳಿತೇಗು ಅಥವಾ ಎದೆಯುರಿ
ಜಠರದಲ್ಲಿ ಕೆಲವು ಆಹಾರಗಳು ಪಚನಗೊಂಡಾಗ ಉತ್ಪತ್ತಿಯಾದ ಆಮ್ಲೀಯ ಅನಿಲ ವಿರುದ್ದ ದಿಕ್ಕಿನಲ್ಲಿ ಅನ್ನನಾಳದ ಮೂಲಕ ಹೊರಬರಲು ಯತ್ನಿಸುತ್ತದೆ. ಇದು ಅಸಾದ್ಯ ಉರಿಯನ್ನೂ ಹೊಟ್ಟೆಯಲ್ಲಿ ನೋವನ್ನೂ ಉಂಟುಮಾಡುತ್ತದೆ. ಇದಕ್ಕಾಗಿ ಒಂದು ಚಿಕ್ಕ ಚಮಚ ಸೇಬಿನ ಶಿರ್ಕಾ (apple cider vinegar) ವನ್ನು ಒಂದು ಲೋಟ ತಣ್ಣೀರಿಗೆ ಹಾಕಿ ಕುಡಿಯುವುದರಿಂದ ತಕ್ಷಣ ಪರಿಹಾರ ದೊರಕುತ್ತದೆ.

ತಲೆನೋವು
ದಿನದ ಯಾವುದೇ ಹೊತ್ತಿನಲ್ಲಿ ಕಾಡುವ ತಲೆನೋವಿಗೆ ನೀರು ಹಿಪ್ಪೆಗಿಡದ (white willow bark) ತೊಗಟೆಯ ಪುಡಿಯನ್ನು ಕೊಂಚ ಅಗಿದು ನಿಧಾನವಾಗಿ ರಸವನ್ನು ನುಂಗುವುದರಿಂದ ಉತ್ತಮ ಪರಿಹಾರ ದೊರಕುತ್ತದೆ. ಇದರಲ್ಲಿರುವ ಸ್ಯಾಲಿಸಿನ್ (salicin) ಎಂಬ ಪೋಷಕಾಂಶಕ್ಕೆ ತಲೆನೋವು, ಮೈಕೈನೋವು ಮತ್ತು ಸ್ನಾಯುಗಳ ಸೆಳೆತವನ್ನೂ ಕಡಿಮೆಗೊಳಿಸುವ ಗುಣವಿದೆ.



Click it and Unblock the Notifications