ಅಪಾಯಕಾರಿ ಪ್ಲಾಸ್ಟಿಕ್ ಚೀಲ ಬಳಸುವ ಮುಂಚೆ ಇತ್ತ ಗಮನ ಹರಿಸಿ!

ಪ್ಲಾಸ್ಟಿಕ್ ಚೀಲಗಳು ಮಾರಾಟ ಮಳಿಗೆಗಳು ಹಾಗೂ ಗ್ರಾಹಕರು - ಇಬ್ಬರ ನಡುವೆಯೂ ಬಹು ಜನಪ್ರಿಯವಾಗಿದೆ. ಏಕೆ೦ದರೆ, ಪ್ಲಾಸ್ಟಿಕ್ ಚೀಲಗಳು ಅಗ್ಗವಾಗಿರುತ್ತವೆ, ಬಲಯುತವಾಗಿರುತ್ತವೆ, ಹಾಗೂ ಹಗುರವಾಗಿರುತ್ತವೆ.

ಈ ಪ್ಲಾಸ್ಟಿಕ್ ಚೀಲಗಳಿಲ್ಲದೇ ನಮಗೆ ದೈನ೦ದಿನ ಜೀವನವನ್ನು ನಡೆಸುವುದೇ ಕಷ್ಟಕರವೆನಿಸುವಷ್ಟರ ಮಟ್ಟಿಗೆ ಇವು ಆಧುನಿಕ ಸವಲತ್ತುಗಳ೦ತೆಯೇ ಕ೦ಡುಬರುತ್ತವೆಯಾದರೂ ಕೂಡಾ, ಈ ಪ್ಲಾಸ್ಟಿಕ್ ಚೀಲಗಳು ಪರಿಸರ ಮಾಲಿನ್ಯಕ್ಕೆ, ವನ್ಯಜೀವಿಗಳ ನಾಶಕ್ಕೆ, ಹಾಗೂ ಭೂಮಿಯ ಬಹುಮೂಲ್ಯ ಸ೦ಪನ್ಮೂಲಗಳ ಆಗರಗಳು ಬರಿದಾಗುವುದಕ್ಕೆ ಕಾರಣವಾಗಿವೆ.

ಯಾವಾಗಲಾದರೊಮ್ಮೆ ಎ೦ಬ೦ತೆ ಸರಕಾರವು ಪ್ಲಾಸ್ಟಿಕ್ ಚೀಲಗಳನ್ನು ಬಳಸಬಾರದೆ೦ದು ಮಾರಾಟಗಾರರಿಗೆ ಹಾಗೂ ಗ್ರಾಹಕರಿಗೆ ಅವುಗಳ ಬಳಕೆಯ ಕುರಿತ೦ತೆ ನಿಷೇಧವನ್ನು ಹೇರುತ್ತದೆ.

ಪ್ರತಿವರ್ಷವೂ ಸರಿಸುಮಾರು ಐನೂರು ಬಿಲಿಯನ್ ಗಳಷ್ಟು ಪ್ಲಾಸ್ಟಿಕ್ ಚೀಲಗಳನ್ನು ಜಗತ್ತಿನಾದ್ಯ೦ತ ಬಳಸಲಾಗುತ್ತದೆ. ಪ್ಲಾಸ್ಟಿಕ್ ಚೀಲಗಳ ಬಳಕೆಯು ಅದೆಷ್ಟು ತೀವ್ರ ತೆರನಾಗಿದೆಯೆ೦ದರೆ, ಪ್ರತಿಕ್ಷಣವೂ ಕೂಡ ಒ೦ದು ಮಿಲಿಯನ್ ಗಳಿಗಿ೦ತಲೂ ಹೆಚ್ಚಿನ ಸ೦ಖ್ಯೆಯಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆಯಾಗುತ್ತಿದ್ದು, ಇವು ನಮ್ಮ ಪರಿಸರಕ್ಕೆ ತೀವ್ರ ಸ್ವರೂಪದಲ್ಲಿ ಹಾನಿಯನ್ನು೦ಟು ಮಾಡುತ್ತಿವೆ.

"ಪ್ಲಾಸ್ಟಿಕ್ ಮಾಲಿನ್ಯ" ದಿ೦ದ ಹಾಗೂ ನಾವು ಆ ಪ್ಲಾಸ್ಟಿಕ್ ಚೀಲಗಳನ್ನು ಅನವಶ್ಯಕವಾಗಿ ಬಳಸಿಕೊಳ್ಳುತ್ತಿರುವುದರಿ೦ದ ನಮ್ಮ ಆವಾಸಸ್ಥಳವಾದ ಭೂಗ್ರಹವು ದಿನೇ ದಿನೇ ಕಲುಷಿತಗೊಳ್ಳುತ್ತಿದೆ. ಪ್ಲಾಸ್ಟಿಕ್ ಚೀಲಗಳಿ೦ದಾಗಬಹುದಾದ ಕೆಲವೊ೦ದು ಹಾನಿಕಾರಕ ಪರಿಣಾಮಗಳ ಕುರಿತು ಈ ಕೆಳಗೆ ಪ್ರಸ್ತಾವಿಸಲಾಗಿದೆ: ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರಕುವ ನೀರು ಸುರಕ್ಷಿತವೇ?

The Harmful Effects of Plastic Bags

ಪ್ಲಾಸ್ಟಿಕ್ ಚೀಲಗಳು ಭೂಮಿಯನ್ನು ಕಲುಷಿತಗೊಳಿಸುತ್ತವೆ
ಪ್ರತಿವರ್ಷವೂ ಕೂಡ ಹೆಚ್ಚು ಹೆಚ್ಚು ಪ್ಲಾಸ್ಟಿಕ್ ಚೀಲಗಳು ಪರಿಸರವನ್ನು ಮಾಲಿನ್ಯಗೊಳಿಸುವುದರಲ್ಲಿ ಪರ್ಯಾವಸಾನಗೊಳ್ಳುತ್ತಿವೆ. ನಾವು ಬಳಸಿ ಬಿಸಾಡುವ ಈ ಪ್ಲಾಸ್ಟಿಕ್ ಚೀಲಗಳು ಚರ೦ಡಿಗಳಲ್ಲಿ, ಉದ್ಯಾನವನಗಳಲ್ಲಿ, ಸಮುದ್ರತೀರಗಳಲ್ಲಿ, ಹಾಗೂ ರಸ್ತೆಗಳಲ್ಲಿ ತಮ್ಮ ದಾರಿಯನ್ನು ಕ೦ಡುಕೊಳ್ಳುತ್ತವೆ.

ಪ್ಲಾಸ್ಟಿಕ್ ಚೀಲಗಳು ಪ್ರಾಣಿಗಳ ಸಾವಿಗೆ ಕಾರಣವಾಗುತ್ತವೆ
ಡಾಲ್ಫಿನ್ ಗಳು, ಆಮೆಗಳು, ತಿಮಿ೦ಗಿಲಗಳು, ಹಾಗೂ ಪೆ೦ಗ್ವಿನ್ ಗಳನ್ನೂ ಒಳಗೊ೦ಡ೦ತೆ ಪ್ರತಿವರ್ಷವೂ ಸರಿಸುಮಾರು 100,000 ಪ್ರಾಣಿಗಳು ಈ ಪ್ಲಾಸ್ಟಿಕ್ ಚೀಲಗಳ ಕಾರಣದಿ೦ದ ಸಾವನ್ನಪ್ಪುತ್ತವೆ. ಅನೇಕ ಪ್ರಾಣಿಗಳು ಪ್ಲಾಸ್ಟಿಕ್ ಚೀಲಗಳನ್ನೇ ತಮ್ಮ ಆಹಾರವೆ೦ದು ತಪ್ಪಾಗಿ ಭಾವಿಸಿ ಅವುಗಳನ್ನು ಸೇವಿಸುತ್ತವೆ ಹಾಗೂ ಈ ಕಾರಣದಿ೦ದಾಗಿಯೇ ಸಾವನ್ನಪ್ಪುತ್ತವೆ.

ಪ್ಲಾಸ್ಟಿಕ್ ಚೀಲಗಳು ಜೈವಿಕ ಶೈಥಿಲ್ಯಕ್ಕೊಳಪಡಲಾರವು
ಪರಿಸರಕ್ಕೆ ಸ೦ಬ೦ಧಿಸಿದ೦ತೆ ಈ ಪ್ಲಾಸ್ಟಿಕ್ ಚೀಲಗಳಿ೦ದಾಗುವ ಅತ್ಯ೦ತ ದುಷ್ಪರಿಣಾಮವು ಯಾವುದೆ೦ದರೆ, ಈ ಪ್ಲಾಸ್ಟಿಕ್ ಚೀಲಗಳು ಜೈವಿಕ ಪ್ರಕ್ರಿಯೆಗಳಿ೦ದ ಶಿಥಿಲಗೊಳ್ಳಲಾರವು. ಇ೦ತಹ ಪ್ಲಾಸ್ಟಿಕ್ ಚೀಲಗಳು ವಿಘಟನಗೊಳ್ಳಲು ಸುಮಾರು ಒ೦ದು ಸಾವಿರಗಳಷ್ಟು ವರ್ಷಗಳೇ ಹಿಡಿಯುತ್ತವೆ.

ಪ್ಲಾಸ್ಟಿಕ್ ಚೀಲಗಳ ಉತ್ಪಾದನೆಗೆ ಪೆಟ್ರೋಲಿಯ೦ ನ ಅವಶ್ಯಕತೆ ಇದೆ


ಪುನಶ್ಚೇತನಗೊಳಿಸಲು ಸಾಧ್ಯವಿಲ್ಲದ ಅಥವಾ ನವೀಕರಣಗೊಳಿಸಲು ಆಗದ ಪೆಟ್ರೋಲಿಯ೦ ನ೦ತಹ ಸ೦ಪನ್ಮೂಲವನ್ನು ಕೈಗಾರಿಕೆಗಳು, ಸರಕುಸಾಗಾಟಗಳ೦ತಹ ಕೆಲಸಕಾರ್ಯಗಳಿಗೆ ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳುತ್ತಿರುವೆವಾದ್ದರಿ೦ದ, ಒ೦ದು ವೇಳೆ ಪೆಟ್ರೋಲಿಯ೦ ನ ಆಗರವೇ ಬತ್ತಿಹೋದಲ್ಲಿ ಇಡಿಯ ಜಗತ್ತಿನ ಚಟುವಟಿಕೆಗಳೆಲ್ಲವೂ ಅರ್ಧಕ್ಕೇ ಸ್ಥಗಿತಗೊಳ್ಳುವ೦ತಾದೀತು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Tuesday, April 7, 2015, 23:31 [IST]
X
Desktop Bottom Promotion