Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇಹ ಮತ್ತು ತ್ವಚೆಯ ಆರೋಗ್ಯ ವೃದ್ಧಿಸುವ ಟಾಪ್ ಫುಡ್!
ನಮ್ಮಲ್ಲಿ ಬಹುತೇಕೆ ಮಂದಿ, ಕೇವಲ ರುಚಿಗಾಗಿ ಆಸೆಪಟ್ಟು ಹಣ್ಣುಗಳನ್ನು ಸೇವಿಸುತ್ತೇವೆ. ಆದರೆ ನಾವು ಪೋಷಕಾಂಶಕ್ಕಾಗಿ ಹಣ್ಣುಗಳನ್ನು ಸೇವಿಸಲು ಆರಂಭಿಸಿದರೆ, ಆಗ ನೋಡಿ ಬದಲಾವಣೆ ನಮ್ಮಲ್ಲಿ ಹೇಗೆ ಕಂಡು ಬರುತ್ತದೆ ಎಂದು. ಯಾವಾಗ ನಾವು ನಮ್ಮ ಆರೋಗ್ಯದ ಮೇಲಿನ ಕಳಕಳಿಯಿಂದ ಆಹಾರವನ್ನು ಸೇವಿಸಲು ಆರಂಭಿಸುತ್ತೇವೆಯೋ, ಆಗ ಜಂಕ್ ಫುಡ್ ಸೇವಿಸುವ ಅವಕಾಶವನ್ನು ನಾವು ಬಿಟ್ಟು ಕೊಡುತ್ತೇವೆ.
ಕೆಲವರು ನಾವು ಸೇವಿಸುವ ಆಹಾರದಲ್ಲಿ ಇರುವ ಕ್ಯಾಲೋರಿಗಳನ್ನು ಲೆಕ್ಕ ಹಾಕುವ ಕೆಲಸ ಮಾಡುತ್ತಿರುತ್ತಾರೆ. ಆದರೆ ಆ ಆಹಾರಗಳಲ್ಲಿರುವ ಕ್ಯಾಲೋರಿಗಳಿಗಿಂತ, ಅದರಲ್ಲಿರುವ ಪೋಷಕಾಂಶಗಳು ತುಂಬಾ ಮುಖ್ಯವಾಗುತ್ತವೆ. ಎಲೆಮರೆ ಕಾಯಿ ಲಿಂಬೆ: ಅದೇನು ಮಾಯೆ, ಅದೇನು ಜಾದೂ!
ನಿಮ್ಮ ತೂಕವನ್ನು ಮತ್ತು ಆರೋಗ್ಯವನ್ನು ಎರಡನ್ನು ಸುಸ್ಥಿತಿಯಲ್ಲಿಡುವಂತಹ ಯಾವುದಾದರು ಆಹಾರ ಪದಾರ್ಥಗಳು ಇವೆಯೇ? ದೇಹ ಮತ್ತು ತ್ವಚೆ ಎರಡನ್ನೂ ಆರೋಗ್ಯವಾಗಿಡುವಂತಹ ಯಾವುದಾದರು ಡಯಟ್ ಇದೆಯೇ? ಅಧಿಕ ನಾರಿನಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಈ ಪ್ರಯೋಜನಗಳನ್ನು ನಾವು ನಮ್ಮದಾಗಿಸಿಕೊಳ್ಳಬಹುದು. ಬನ್ನಿ ನಾವು ಇಂದು ನಾರಿನಂಶ ಅಥವಾ ಫೈಬರ್‌ನ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ.

ಮಧುಮೇಹ
ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಫೈಬರ್ ಹೆಚ್ಚಿರುವ ಆಹಾರ ಪದಾರ್ಥಗಳು ತುಂಬಾ ಪ್ರಯೋಜನಕಾರಿಯಾಗಿರುತ್ತವೆ. ಆದ್ದರಿಂದ ಮಧುಮೇಹಿಗಳು ಸಹ ನಾರಿನಂಶ ಅಧಿಕವಾಗಿರುವ ಆಹಾರ ಪದಾರ್ಥವನ್ನು ಸೇವಿಸುತ್ತಾರೆ.

ಆರೋಗ್ಯಕರವಾದ ತೂಕ
ನಾರಿನಂಶ ಅಧಿಕವಾಗಿರುವ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕರವಾದ ತೂಕವನ್ನು ಕಾಪಾಡಿಕೊಳ್ಳಬಹುದು. ಇದರ ಜೊತೆಗೆ ಇಂತಹ ಆಹಾರಗಳನ್ನು ಸೇವಿಸಿದ ಮೇಲೆ ನಿಮ್ಮ ಹೊಟ್ಟೆಯು ತುಂಬಿದಂತೆ ಇರುತ್ತದೆ. ಆಗ ನೀವು ಕಡಿಮೆ ಆಹಾರವನ್ನು ಸೇವಿಸಲು ಇದು ಸಹಾಯ ಮಾಡುತ್ತದೆ. ಹೀಗೆ ನಿಮ್ಮ ತೂಕ ಹತೋಟಿಯಲ್ಲಿರುತ್ತದೆ.

ಹೃದಯ
ನಾರಿನಂಶ ಅಧಿಕವಾಗಿರುವ ಆಹಾರಗಳು ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಇದು ಸಹ ನಾರಿನಂಶ ಸೇವಿಸುವುದರಿಂದ ದೊರೆಯುವ ಪ್ರಯೋಜನಗಳಲ್ಲಿ ಒಂದಾಗಿದೆ.

ತ್ವಚೆ
ನಾರಿನಂಶ ಅಧಿಕವಾಗಿರುವ ಆಹಾರಗಳು ತ್ವಚೆಯ ಆರೋಗ್ಯವನ್ನು ಸುಧಾರಿಸುತ್ತವೆ ಎಂದು ಇತ್ತೀಚಿಗೆ ನಡೆದ ಅಧ್ಯಯನಗಳಲ್ಲಿ ದೃಢಪಟ್ಟಿದೆ.ಇಂತಹ ಆಹಾರಗಳು ತ್ವಚೆಯ ಇನ್‍ಫೆಕ್ಷನ್ ಅನ್ನು ಸಹ ದೂರ ಮಾಡುತ್ತವೆಯಂತೆ.

ಮಲಬದ್ಧತೆ
ನಾರಿನಂಶ ಅಧಿಕವಾಗಿರುವ ಆಹಾರವನ್ನು ಸೇವಿಸಿದರೆ ಮಲಬದ್ಧತೆಯ ಸಮಸ್ಯೆ ಕಾಡುವುದಿಲ್ಲ. ಆದ್ದರಿಂದ ಪ್ರತಿದಿನದ ಆಹಾರದಲ್ಲಿ ನಾರಿನಂಶದ ಪದಾರ್ಥಗಳು ಇರುವಂತೆ ನೋಡಿಕೊಳ್ಳಿ.

ಮೂತ್ರಪಿಂಡದ ಆರೋಗ್ಯ
ಇತ್ತೀಚಿನ ಅಧ್ಯಯನಗಳ ಪ್ರಕಾರ, ಅಧಿಕ ನಾರಿನಂಶವನ್ನು ಸೇವಿಸುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಬೆಳೆಯುವುದನ್ನು ತಡೆಯಬಹುದು.

ಲಿವರ್ ಸಮಸ್ಯೆಗೆ
ನಾರಿನಂಶವಿರುವ ಆಹಾರವು ಕೋಲನ್‍ಗೆ (ಲಿವರ್) ಸಹ ಪ್ರಯೋಜನಕಾರಿ. ಇದು ಕೋಲನ್ ಕ್ಯಾನ್ಸರನ್ನು ಸಹ ತಡೆಯಲು ನೆರವಾಗುತ್ತದೆ. ನಾರಿನಂಶ ಅಧಿಕವಾಗಿರುವ ಆಹಾರ ಪದಾರ್ಥಗಳು, ಜೀರ್ಣಾಂಗ ವ್ಯೂಹಕ್ಕೆ ತುಂಬಾ ಒಳ್ಳೆಯದು.

ಕೊಲೆಸ್ಟ್ರಾಲ್
ನಾರಿನಂಶ ಅಧಿಕವಾಗಿರುವ ಆಹಾರಗಳು ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತವನ್ನು ತಡೆಯುತ್ತವೆ. ಇವುಗಳು ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲನ್ನು ಹೊರಹಾಕಲು ಸಹಾಯ ಮಾಡುತ್ತವೆ.



Click it and Unblock the Notifications
