Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಳಿಗಾಲದಲ್ಲಿ ಬಳಲಿಸುವ ಶೀತ, ಕೆಮ್ಮಿಗೆ ಒಂದಿಷ್ಟು ಟಿಪ್ಸ್
ಮಾನವ ಮೂಳೆ ಮಾಂಸದ ತಡಿಕೆ ಎಂಬ ಹಾಡಿನಂತೆಯೇ ನಮ್ಮ ದೇಹದಲ್ಲಿ ರೋಗರುಜಿನಗಳು ಹೇಳ ಹೆಸರಿಲ್ಲದಂತೆ ಬಂದು ಮನೆಮಾಡಿಬಿಡುತ್ತವೆ. ಸಣ್ಣ ನೆಗಡಿಗೂ ನಮ್ಮ ದೇಹ ಬಳಲಿ ಬಾಡಿ ಸೊರಗಿ ಬೆಂಡಾಗಿ ಹೋಗುತ್ತದೆ. ಚಳಿಗಾಲ ಹಾಗೂ ಮಳೆಗಾಲದಲ್ಲಿ ಹೆಚ್ಚು ಸಾಮಾನ್ಯವಾಗಿರುವ ಶೀತ, ಕೆಮ್ಮು, ಜ್ವರ ಗಂಟಲು ಕೆರೆತಕ್ಕೆ ದೇಹವೆಂಬ ದೇವಾಲಯ ಸೊರಗುತ್ತದೆ. ಸೋರುತ್ತಿರುವ ಮೂಗು, ಕಂಗಾಲು ಮಾಡುವ ಗಂಟಲಿನ ಕೆರೆತ, ಸಣ್ಣಗೆ ನಡುಕ ಇಷ್ಟು ಸಾಕು ನಮ್ಮ ದೇಹವನ್ನು ಜರ್ಝರಿತಗೊಳಿಸಲು. ನೀವು ವೈದ್ಯರನ್ನು ಸಂಪರ್ಕಿಸಿದರೂ ಎಷ್ಟೇ ಮಾತ್ರೆಗಳನ್ನು ತೆಗೆದುಕೊಂಡರೂ ಈ ಕಾಯಿಲೆಗಳು ತಮಗೆ ಇಷ್ಟ ಬಂದಾಗ ಮಾತ್ರವೇ ನಮ್ಮಿಂದ ದೂರವಾಗುತ್ತದೆ.
ಹಾಗಿದ್ದರೆ ನಮ್ಮನ್ನು ಕಾಡಿಸುವ ಈ ರೋಗಗಳನ್ನು ಓಡಿಸಲು ಪರಿಹಾರ ಇಲ್ಲವೇ ಎಂದು ಹೆಚ್ಚು ಚಿಂತಿಸದಿರಿ. ಕೆಲವೊಂದು ನಿಯಮಗಳನ್ನು ಅನುಸರಿಸಿದರೆ ಮತ್ತು ನೀವು ಪಾಲಿಸುವ ನಿಮ್ಮ ಜೀವನ ಕ್ರಮದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ತಂದುಕೊಂಡರೆ ಇವುಗಳನ್ನು ನಿಮ್ಮಿಂದ ದೂರವಾಗಿಸಬಹುದು. ಶೀತ ನೆಗಡಿಗಳು ಕಾಯಿಲೆಗಳಾಗಿರದೇ ನಮ್ಮನ್ನು ವೈರಸ್‌ಗಳಿಂದ ಕಾಪಾಡುವ ರೋಗನಿರೋಧಕ ಶಕ್ತಿಗಳಾಗಿವೆ ಎಂಬುದು ನಿಮಗೆ ಗೊತ್ತೇ?
ದ್ರವ ರೀತಿಯಲ್ಲಿ ದೇಹದಲ್ಲಿ ಕೂಡಿರುವ ವೈರಸ್‌ಗಳನ್ನು ಹೊರಹಾಕುವ ಕ್ರಿಯೆಯನ್ನು ಸಾಮಾನ್ಯವಾಗಿ ಶೀತ ಮಾಡುತ್ತದೆ. ಹಾಗಿದ್ದರೂ ಇವುಗಳನ್ನು ಸಹಿಸುವುದು ಕಷ್ಟದ ಮಾತೇ ಅಲ್ಲವೇ? ಅದಕ್ಕೆಂದೇ ಇಂದಿನ ಲೇಖನದಲ್ಲಿ ಇವುಗಳಿಗಾಗಿ ಪರಿಹಾರ ಕ್ರಮಗಳನ್ನು ನಾವು ತಂದಿದ್ದು ಇದನ್ನು ಅನುಸರಿಸಿದರೆ ನಿಮಗೆ ಶೀತದ ಕಿರಿಕಿರಿಯಿಂದ ಪರಿಹಾರ ಖಂಡಿತ...

ಜೇನುತುಪ್ಪ ಮತ್ತು ದಾಲ್ಚಿನ್ನಿಯ ಕಷಾಯ
ಸ್ವಲ್ಪ ಜೇನುತುಪ್ಪ ಮತ್ತು ದಾಲ್ಚಿನ್ನಿಯನ್ನು ಕೆಲವು ನಿಮಿಷಗಳ ಕಾಲ ಬೇಯಿಸಿದ ಬಳಿಕ ಒಲೆಯಿಂದ ಇಳಿಸಿ ಒಂದು ಲೋಟಕ್ಕೆ ಅರ್ಧ ಲಿಂಬೆಹಣ್ಣಿನ ರಸ ಸೇರಿಸಿ ಸಾಧ್ಯವಾದಷ್ಟು ಬಿಸಿಯಾಗಿರುವಾಗಲೇ ಕುಡಿಯುವ ಮೂಲಕ ಕೆಮ್ಮಿಗೆ ಮತ್ತು ಶೀತಕ್ಕೆ ಶೀಘ್ರ ಉಪಶಮನ ದೊರಕುತ್ತದೆ.

ಆಹಾರದಲ್ಲಿ ಸತುವಿನ ಪ್ರಮಾಣ ಹೆಚ್ಚಿರಲಿ
ಚಳಿಗಾಲದಲ್ಲಿ ನಿಮ್ಮ ಆಹಾರದಲ್ಲಿ ಸತು ಹೆಚ್ಚಿರಬೇಕು. ಏಕೆಂದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸತು, ಕಬ್ಬಿಣ ಮತ್ತು ಇತರ ಖನಿಜಗಳ ಅಗತ್ಯವಿದೆ. ಅದರಲ್ಲೂ ಸತುವಿನ ಅಗತ್ಯತೆ ಹೆಚ್ಚಿರುವ ಕಾರಣ ಸತು ಹೆಚ್ಚಿರುವ ಪಾಲಕ್ ಸೊಪ್ಪು, ಮೀನು, ಬಿಳಿಯ ಮಾಂಸ, ಒಣಫಲಗಳಾದ ಗೋಡಂಬಿ, ಕುಂಬಳ ಬೀಜ ಮೊದಲಾದವು, ಕೋಕೋ, ಬೀನ್ಸ್, ಬಿಳಿಯ ಅಣಬೆ ಮೊದಲಾದವುಗಳನ್ನು ಸೇವಿಸಿರಿ.

ಶುಂಠಿ ಚಹಾ
ಚಳಿಗಾಲದಲ್ಲಿ ಕಾಡುವ ಶೀತ ಮತ್ತು ಕೆಮ್ಮಿನ ಮುನ್ನೆಚ್ಚರಿಕೆಯ ಕ್ರಮವಾಗಿ, ಪುಡಿಮಾಡಿದ ಅಥವಾ ಪೇಸ್ಟ್ ರೂಪದಲ್ಲಿರುವ ಶುಂಠಿಯನ್ನು ಪ್ರತಿಯೊಂದು ತರಕಾರಿ ಪದಾರ್ಥದೊoದಿಗೂ ಸೇರಿಸಿಕೊಳ್ಳಿರಿ. ಶುಂಠಿಯು ಕೇವಲ ಕಟುವಾದ ರುಚಿಯನ್ನು ಹೊಂದಿರುವುದು ಮಾತ್ರವೇ ಅಲ್ಲ, ಜೊತೆಗೆ, ಅದು ನೆಗಡಿಯ ವಿರುದ್ಧ ಹೋರಾಡಲೂ ಸಹ ನೆರವಾಗುತ್ತದೆ. ನಿಮ್ಮ ಚಹಾದ ನೀರಿನೊಂದಿಗೆ ಶುಂಠಿಯನ್ನು ಹಾಕಿ ಕುದಿಸಿ ಶುoಠಿ ಸ್ವಾದದ ಚಹಾದ ಆನಂದವನ್ನು ಅನುಭವಿಸಿರಿ. ಇದು ಗಂಟಲ ಕೆರೆತವನ್ನು ಉಪಶಮನಗೊಳಿಸುತ್ತದೆ ಹಾಗೂ ನೆಗಡಿಗೆ ಕಾರಣವಾದ ವೈರಾಣುಗಳನ್ನು ಬೆನ್ನಟ್ಟಿ ಓಡಿಸುತ್ತದೆ.

ಸಾಕಷ್ಟು ನೀರು ಕುಡಿಯಿರಿ
ಶೀತ ಮತ್ತು ಕೆಮ್ಮಿನ ಮೂಲಕ ನಮ್ಮ ದೇಹದಿಂದ ಸಾಕಷ್ಟು ನೀರು ಹೊರಹರಿಯುತ್ತದೆ. ಇದಕ್ಕೂ ಮುಖ್ಯವಾಗಿ ವೈರಸ್ಸುಗಳ ವಿರುದ್ಧ ಸೆಣೆಸಲು ನಮ್ಮ ಬಿಳಿರಕ್ತಕಣಗಳಿಗೆ ಹೆಚ್ಚಿನ ನೀರು ಬೇಕು. ಆ ಕಾರಣ ಸಾಧ್ಯವಾದರೆ ಬಿಸಿನೀರು, ಇಲ್ಲದಿದ್ದರೆ ಉಗುರುಬೆಚ್ಚನೆಯ ನೀರನ್ನು ಸ್ವಲ್ಪಸ್ವಲ್ಪವಾಗಿ ಕುಡಿಯುತ್ತಲೇ ಇರುವುದು ಒಳ್ಳೆಯದು. ತಣ್ಣನೆಯ ಅಥವಾ ಐಸ್ ನೀರು ಸರ್ವಥಾ ಸಲ್ಲದು.

ಮೊಸರಿನ ಪ್ರಮಾಣ ಕಡಿಮೆ ಮಾಡಿ
ಮೊಸರಿನಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳು ಹಾಗೂ ಕೊಬ್ಬು ಇದ್ದರೂ ದೇಹಕ್ಕೆ ಹೆಚ್ಚಿನ ತಂಪು ನೀಡುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಹಿತಕರವಲ್ಲ.

ನೆಲ್ಲಿಕಾಯಿಯನ್ನು ಸೇವಿಸಿ
ಹಸಿನೆಲ್ಲಿಕಾಯಿಯನ್ನು ತಿನ್ನುವುದರಿಂದ ಶೀತವಾಗದಂತೆ ತಡೆಗಟ್ಟಬಹುದು. ಚಳಿ ಪ್ರಾರಂಭವಾಗುತ್ತಿದ್ದತೆಯೇ ಕೆಲವು ನೆಲ್ಲಿಕಾಯಿಗಳನ್ನು ಮನೆಯಲ್ಲಿರಿಸಿ ಆಗಾಗ ತಿನ್ನುತ್ತಿರುವುದರಿಂದ ಶೀತ, ಕೆಮ್ಮು ನೆಗಡಿಗಳಿಂದ ದೂರವಿರಬಹುದು. ದೇಹದ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ ನೆಲ್ಲಿಕಾಯಿ ಆರೋಗ್ಯವನ್ನು ಕಾಪಾಡುತ್ತದೆ.



Click it and Unblock the Notifications
