Latest Updates
-
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್
ಹಾಸಿಗೆಯಲ್ಲಿ ಮಲಗಿದ ಕೂಡಲೇ ನಿದ್ರಿಸಲು ಇಲ್ಲಿವೆ ತ್ರಿಸೂತ್ರಗಳು
ನಿತ್ಯದ ಜಂಜಾಟದ ಬದುಕಿನಿಂದ, ಆಫೀಸ್ ಒತ್ತಡದಿಂದ ಮನೆಗೆ ಬಂದು ಮಲಗಿದ್ರೆ ಕಣ್ಣಿಗೆ ನಿದ್ದೆಯೇ ಹತ್ತತಾ ಇಲ್ಲ. ಮಾರನೆಯ ದಿನದ ಕೆಲಸ, ಹಣ, ಸಂಸಾರ, ಒತ್ತಡ, ಇನ್ನು ಹೀಗೆ ಹತ್ತು ಹಲವು ತಲೆಬಿಸಿಗಳ ನಡುವೆ ನಿದ್ದೆಗೆ ಜಾಗವೇ ಇಲ್ಲದಂತಾಗಿರುತ್ತೆ ನಿಮ್ಮ ಬದುಕು.... ಇನ್ನು ಯುವಕ ಯುವತಿಯರಿಗೆ ನಿದಿರೆ ಬರದಿರೆ ಏನಂತಿ ಅಂತ ಕೇಳಿದ್ರೆ, ಹಾಡಿನಲ್ಲಿರುವಂತೆ ಖಂಡಿತ ಲವ್ ಅಂತೂ ಆಗಿರದೆ ಅದಕ್ಕೆ ಬೇರೆಯದ್ದೇ ಹಲವು ಕಾರಣಗಳಾಗಿರುತ್ತೆ. ಇದು ಈ ಜಮಾನದ ಪ್ರತಿಯೊಬ್ಬರ ಸಮಸ್ಯೆ.
ನಿದ್ದೆ ಅಂದ್ರೆ ಅದೊಂದು ಅಸಾಧ್ಯವಾದ ಯಜ್ಞವೇನೋ ಎಂಬಂತೆ ಪರಿಗಣಿಸುವಂತಾಗಿರುವವರು ಹಲವರು. ಅವರೆಲ್ಲರ ಆಸೆ ಒಂದೇ.. ನಾನು ಮಲಗಿದ ಕೂಡಲೇ ನನಗೆ ನಿದ್ದೆ ಆವರಿಸುವಂತೆ ಆಗಿಬಿಡಬೇಕು ಅಂತ. ಆದ್ರೆ ಅದು ಸಾಧ್ಯವಾಗ್ತಾ ಇರೋದಿಲ್ಲ. ನಿದ್ದೆಯೆಂಬ ಅಮೂಲ್ಯ ವರಕ್ಕಿರುವ ಕರಾಮತ್ತೇನು?
ಹಾಗಾದ್ರೆ ಹಾಸಿಗೆಯಲ್ಲಿ ಮಲಗಿದ ಕೂಡಲೇ ನಿದ್ದೆ ಬರಬೇಕು ಅಂದ್ರೆ ಅದಕ್ಕಾಗಿ ನೀವು ಏನು ಮಾಡಬೇಕು ಗೊತ್ತಾ? ತುಂಬಾ ಸಿಂಪಲ್.. ಕೇವಲ ತ್ರಿಸೂತ್ರಗಳನ್ನು ಅನುಸರಿಸಿಕೊಳ್ಳಬೇಕು ಅಷ್ಟೇ. ಈ ಮೂರು ಸೂತ್ರಗಳು ನೀವು ಹಾಸಿಗೆಯಲ್ಲಿ ಮಲಗಿದ ಕೂಡಲೇ ಕಣ್ಣಿಗೆ ನಿದ್ದೆ ಆವರಿಸುವಂತೆ ಮಾಡುತ್ತೆ. ಯಾರು ಈ ತ್ರಿಸೂತ್ರಗಳನ್ನು ಪಾಲಿಸ್ತಾರೋ ಅಂತವರಿಗೆ ಖಂಡಿತ ನಿದ್ದೆಯ ಸಮಸ್ಯೆ ಕಾಡಲು ಸಾಧ್ಯವಿಲ್ಲ. ಹಾಗಾದ್ರೆ ಆ ಮೂರು ಸೂತ್ರಗಳು ಯಾವುದು ಅನ್ನೋ ವಿವರಣೆಗಾಗಿ ಮುಂದೆ ಓದಿ.. ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ

ನಿದ್ದೆ ಹಾಳು ಮಾಡುವ ಹುಳಗಳು
ಸೊಳ್ಳೆ, ತಿಗಣೆ ಇತ್ಯಾದಿಗಳು ನಿದ್ದೆ ಹಾಳು ಮಾಡುವ ಹುಳಗಳು ಅಂದುಕೊಳ್ಳಬೇಡಿ. ಇವುಗಳಿಗಾದ್ರೂ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಬಹುದು. ಆದ್ರೆ ನಿಮ್ಗೆ ಗೊತ್ತಿಲ್ಲದೆ ನಿಮ್ಮ ನಿದ್ದೆಗೆ ಶತ್ರುಗಳಾಗಿರುವ ಹುಳಗಳು ಬೇರೆಯದ್ದೇ ಆಗಿವೆ. ಅವೇ ನಿಮ್ಮ ಮನೆಯ ಬೆಡ್ ರೂಂನಲ್ಲಿ ಕಾಣಿಸಿಕೊಳ್ಳುವ ದೀಪಗಳು. ಮೊಬೈಲ್ , ಟಿವಿ, ಕಂಪ್ಯೂಟರ್ ಬೆಳಕು, ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳು ನಿಮ್ಮ ನಿದ್ದೆಯ ನಿಜವಾದ ಶತ್ರುಗಳು. ಈ ಹುಳಗಳನ್ನು ಎಷ್ಟು ದೂರ ಇಡಲು ಸಾಧ್ಯವೋ ಅಷ್ಟು ದೂರವಿಡಿ. ಹಾಗಿದ್ದಾಗ ಮಾತ್ರ ನಿಮ್ಮದು ಆರಾಮದಾಯಕವಾದ ಮತ್ತು ಸಮಯಕ್ಕೆ ಸರಿಯಾದ ನಿದ್ದೆಯಾಗಲು ಸಾಧ್ಯ.

ನಿದ್ದೆ ಹಾಳು ಮಾಡುವ ಹುಳಗಳು
ಯಾವುದೇ ಕಾರಣಕ್ಕೂ ಹಾಸಿಗೆಯಲ್ಲಿ ಮಲಗಿದ ನಂತ್ರ ಮೊಬೈಲ್ ನೋಡಬೇಡಿ. ಟಿವಿ ಆಫ್ ಮಾಡಿ. ಕಂಪ್ಯೂಟರ್, ಲ್ಯಾಪ್ ಟಾಪ್ ನಿಂದ ದೂರವಿರಿ. ಇವಿಷ್ಟೇ ಅಲ್ಲ ಬೆಡ್ ರೂಂ ನಲ್ಲಿ ಆದಷ್ಟು ಕತ್ತಲು ಆವರಿಸುವಂತೆ ನೋಡಿಕೊಳ್ಳಿ. ಕತ್ತಲೆಯಲ್ಲಿ ನಿದ್ರಿಸಿದಾಗ ನಿಮ್ಮ ದೇಹದಲ್ಲಿ ಕೆಲವು ಹಾರ್ಮೋನುಗಳು ಉತ್ಪತ್ತಿಯಾಗುತ್ತೆ. ಅವು ನಿಮ್ಮನ್ನ ಆರೋಗ್ಯವಂತರನ್ನಾಗಿರಲು ನೆರವಾಗುತ್ತೆ ಅನ್ನೋದು ನೆನಪಿರಲಿ.

ನಿಮ್ಮ ಆಹಾರ ಪದ್ಧತಿ
ಯಾವ ವ್ಯಕ್ತಿಯ ಆಹಾರ ಕ್ರಮ ಸರಿ ಇರೋದಿಲ್ಲವೋ ಅಂತಹ ವ್ಯಕ್ತಿ ನಿದ್ದೆಯ ಕೊರತೆಯನ್ನು ಖಂಡಿತವಾಗ್ಲೂ ಅನುಭವಿಸ್ತಾನೆ. ಯಾರು ತಮ್ಮ ಆಹಾರವನ್ನು ಸಮಯಕ್ಕೆ ಸರಿಯಾಗಿ ಸ್ವೀಕರಿಸ್ತಾರೋ ಅಂತವರಿಗೆ ನಿದ್ರಾದೇವತೆ ಚೆನ್ನಾಗಿ ಒಲಿದಿರುತ್ತಾಳೆ. ಸಮಯಕ್ಕೆ ಸರಿಯಾಗಿ ತಿನ್ನುವ ಹವ್ಯಾಸ ಈಗಿನ ಯುವಜನತೆಯಲ್ಲಿ ಕಡಿಮೆಯಾಗಿದೆ. ಹೊತ್ತಲ್ಲದ ಹೊತ್ತಲ್ಲಿ ಆಹಾರ ಸೇವಿಸುವುದು ನಿಮ್ಮ ನಿದ್ದೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತೆ. ಅಷ್ಟೇ ಅಲ್ಲ ಪೌಷ್ಟಿಕ ಆಹಾರದ ಅಗತ್ಯವೂ ನಿದ್ದೆಗಿದೆ.

ನಿಮ್ಮ ಆಹಾರ ಪದ್ಧತಿ
ಯಾರು ತಮ್ಮ ಆಹಾರದಲ್ಲಿ ವಿಟಮಿನ್, ಮಿನರಲ್ ಗಳನ್ನು ಸರಿಯಾಗಿ ಸ್ವೀಕರಿಸ್ತಾರೋ ಅಂತವರಿಗೆ ನಿದ್ದೆ ಬೇಗನೆ ಬರುತ್ತೆ. ರಾತ್ರಿ ಮಲಗುವಾಗ ಬಿಸಿ ಹಾಲು ಕುಡಿದು ಮಲಗುವ ಅಭ್ಯಾಸ ಒಳ್ಳೆಯದು. ರಾತ್ರಿಯ ಆಹಾರ ಸೇವನೆಯ ಪ್ರಮಾಣ ಕಡಿಮೆಯಾಗಿರಲಿ. ಆದ್ರೆ ಹೆಲ್ತಿಯಾಗಿರಲಿ. ಯಾರು ರಾತ್ರಿ ಏನನ್ನೋ ತಿನ್ನದೇ ಮಲಗ್ತಾರೋ ಅಂತವರಿಗೂ ಕೂಡ ನಿದ್ದೆ ಬರೋದಿಲ್ಲ.

ನೀವೇನು ಕೇಳ್ತೀರಿ ಮತ್ತು ನೋಡ್ತೀರಿ
ರಾತ್ರಿ ಮಲಗುವ ಮುನ್ನ ನೀವು ಏನನ್ನು ನೋಡ್ತೀರಿ ಮತ್ತು ಕೇಳ್ತೀರಿ ಅನ್ನೋದು ತುಂಬಾ ಇಂಪಾರ್ಟೆಂಟ್.. ಈಗಿನ ಯುವಜನತೆಯಲ್ಲಿ ಹಾರರ್ ಮೂವಿ ನೋಡುವ ಹವ್ಯಾಸ, ಆಕ್ಷನ್ ಮೂವಿ ನೋಡುವ ಚಟ, ತಮಗೆ ಮಾತ್ರ ಕೇಳಿಸೋದಲ್ಲ ಅಕ್ಕಪಕ್ಕದ ಮನೆಯವ್ರಿಗೂ ತೊಂದರೆ ನೀಡುವಷ್ಟರ ಮಟ್ಟಿಗಿನ ಮ್ಯೂಸಿಕ್ ಕೇಳೋದು ಇವೆಲ್ಲವೂ ನಿದ್ದೆಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತೆ. ಕ್ಷಣಮಾತ್ರಕ್ಕೆ ನಿಮ್ಗೆ ಹಿತವೆನಿಸುವ ಈ ಹವ್ಯಾಸಗಳು. ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮವಾದುದಲ್ಲ. ಮಲಗುವ ಮುನ್ನ ಮಾಡುವ ಇಂತಹ ಹವ್ಯಾಸಗಳು ನಿಮ್ಮ ನಿದ್ದೆಯನ್ನು ಸಾಯಿಸುತ್ತೆ. ಆಗ ಹಾಸಿಗೆಯಲ್ಲಿ ಎಷ್ಟು ಹೊತ್ತು ಮಲಗಿದ್ರೂ ನಿದ್ದೆ ಆವರಿಸದೇ ಅತ್ತಿಂದಿತ್ತ ಇತ್ತಿಂದತ್ತ ಹೊರಳಾಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ.

ನೀವೇನು ಕೇಳ್ತೀರಿ ಮತ್ತು ನೋಡ್ತೀರಿ
ಹಾಗಾಗಿ ಮೂರನೇ ಸೂತ್ರದ ಪ್ರಕಾರ ನೀವು ಲೈಟ್ ಮ್ಯೂಸಿಕ್ ಕೇಳುವ ಅಭ್ಯಾಸ ಬೆಳೆಸಿಕೊಂಡ್ರೆ ಓಕೆ..ರಾತ್ರಿಯ ಹೊತ್ತು ಹಾಸಿಗೆಗೆ ಬರುವ ಮುನ್ನ ಕಾಮಿಡಿ ಕಾರ್ಯಕ್ರಮವನ್ನು ನೋಡಿ. ಮನೆಮಂದಿಯ ಜೊತೆ ಚೆನ್ನಾಗಿ ನಕ್ಕುನಲಿದು ಸಮಯ ಕಳೆದು ಹಾಸಿಗೆಗೆ ಹೋಗಿ ಕೂಡಲೆ ಕಣ್ಣಿಗೆ ಮಂಪರು ಆವರಿಸಿ ನಿದ್ದೆಗೆ ಜಾರುತ್ತೀರಿ. ಇಲ್ಲದೇ ಇದ್ರೆ ಸುಮ್ಮನೆ ಕಿರಿಕಿರಿ ಅನುಭವಿಸ್ಬೇಕಾಗುತ್ತೆ. ಈ ಪ್ರಮುಖ ಮೂರು ಸೂತ್ರಗಳು ನೀವು ಹಾಸಿಗೆಯಲ್ಲಿ ಮಲಗಿದ ಕೂಡಲೇ ನಿದ್ದೆ ಬರುವಂತೆ ಮಾಡುತ್ತೆ. ಪಾಲಿಸಿ ನೋಡಿ. ಚೆನ್ನಾಗಿ ನಿದ್ದೆ ಮಾಡಿ ಆರೋಗ್ಯವಂತರಾಗಿರಿ.



Click it and Unblock the Notifications
