Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಿಹಿ ತಿನ್ನುವ ಅದಮ್ಯ ಬಯಕೆ-ಕೊಂಚ ಮಿತವಾಗಿರಲಿ!
ಪಂಚೇಂದ್ರಿಯಗಳಲ್ಲಿ ಯಾವುದು ಅತ್ಯುತ್ತಮ ಎಂದು ಕೇಳಿದರೆ ಯಾವ ಅಂಗವನ್ನೂ ಶ್ರೇಷ್ಠ ಎಂದು ಹೇಳಲಾಗುವುದಿಲ್ಲ. ಕಣ್ಣು, ಮೂಗು, ನಾಲಿಗೆ, ಕಿವಿ ಮತ್ತು ಚರ್ಮಗಳು ಒಂದೊಂದು ರೀತಿಯಲ್ಲಿ ಅಗತ್ಯವಿದೆ. ವಾಸ್ತವವಾಗಿ ಇವೆಲ್ಲವನ್ನೂ ಮೆದುಳು ನಿಯಂತ್ರಿಸುತ್ತದೆ. ಈ ಅಂಗಗಳು ಬಾಹ್ಯಪ್ರಪಂಚದ ಮಾಹಿತಿಯನ್ನು ಮೆದುಳಿಗೆ ಮುಟ್ಟಿಸುವ ಕೆಲಸವನ್ನು ಮಾತ್ರ ಮಾಡುತ್ತವೆ.
ಅದೇ ರೀತಿ ಇತರ ಅಂಗಗಳ ಮಾಹಿತಿಯನ್ನು ನೋಡಿ ಸೂಕ್ತ ಸೂಚನೆಗಳನ್ನು ನೀಡುತ್ತದೆ. ನಿತ್ಯದ ಆಹಾರವನ್ನು ಸೇವಿಸಲು ರುಚಿಯನ್ನು ಪಡೆಯುವ ನಾಲಿಗೆ ಸಹಾ ಆಹಾರ ಸ್ವೀಕಾರಾರ್ಹವೋ ಇಲ್ಲವೋ ಎಂದು ನಿರ್ಧರಿಸುತ್ತದೆ. ಆದರೆ ವಿಚಿತ್ರವೆಂದರೆ ಆಹಾರವನ್ನು ನೋಡಿದಾಕ್ಷಣ ಇದನ್ನು ತಿನ್ನಲು ಮನಸ್ಸಾಗುವುವಾಗ ಮಾತ್ರ ನಾಲಿಗೆಯ ಯಾವ ಪಾತ್ರವೂ ಇಲ್ಲ! ಸಾಮಾನ್ಯವಾಗಿ ಸಿಹಿ ಎಂದರೆ ಎಲ್ಲರಿಗೂ ಇಷ್ಟ. ಸಿಹಿತಿಂಡಿಗಳನ್ನು ನೋಡಿದಾಕ್ಷಣ ಬಾಯಲ್ಲಿ ನೀರೂರಿ ತಿನ್ನುವ ಅದಮ್ಯ ಬಯಕೆಯುಂಟಾಗುತ್ತದೆ. ಪರಿಣಾಮವಾಗಿ ಸಕ್ಕರೆಯ ಪ್ರಮಾಣ ಹೆಚ್ಚಿರುವ ಸಿಹಿತಿಂಡಿಗಳನ್ನು ಸೇವಿಸುತ್ತೇವೆ. ಸಕ್ಕರೆ ಹಿಂದಿರುವ ಕರಾಳ ಸತ್ಯ: ಇಲ್ಲಿವೆ 10 ಪುರಾವೆಗಳು
ಒಂದು ತಿಂದರೆ ಮನಸ್ಸು ತೃಪ್ತಿಯಾಗದೇ ಎರಡು, ಮೂರು, ನಾಲ್ಕು ಹೀಗೇ ಮುಂದುವರೆಯುತ್ತಾ ಹೋಗುತ್ತದೆ. ಆದರೆ ಹೆಚ್ಚಿನ ಸಿಹಿ ತಿನ್ನುವುದು ಸಹಾ ಆರೋಗ್ಯಕ್ಕೆ ಮಾರಕ. ಹೇಗೆಂದರೆ ಬಿಳಿಸಕ್ಕರೆ ವಾಸ್ತವವಾಗಿ ಅತಿಹೆಚ್ಚು ಪ್ರಮಾಣದ ಗ್ಲುಕೋಸ್ ಕಣಗಳನ್ನು ಸಾಂದ್ರಗೊಳಿಸಿದ ಕಣವಾಗಿದೆ. ಒಂದು ಚಮಚ ಸಕ್ಕರೆ ದೇಹಕ್ಕೆ ಸೇರುತ್ತಿದ್ದಂತೆಯೇ ಆಗಾಧವಾದ ಪ್ರಮಾಣದ ಗ್ಲುಕೋಸ್ ರಕ್ತಕ್ಕೆ ಲಭಿಸುತ್ತದೆ.
ಸಿಹಿತಿಂಡಿಗಳಲ್ಲಿ ಸಕ್ಕರೆ ಅತಿ ಹೆಚ್ಚಾಗಿರುವುದರಿಂದ ಒಂದೆರಡು ತುಂಡುಗಳನ್ನು ತಿನ್ನುತ್ತಿದ್ದಂತೆಯೇ ರಕ್ತಕ್ಕೆ ಲಭ್ಯವಾದ ಪ್ರಮಾಣ ವಿಪರೀತವಾಗಿ ಏರುತ್ತದೆ. ಅಂದರೆ ಸುಮಾರು ಅಗತ್ಯಕ್ಕೂ ಸಾವಿರಪಟ್ಟು ಹೆಚ್ಚು! ಈ ಆಗಾಧ ಪ್ರಮಾಣದ ಗ್ಲುಕೋಸ್ ಅನ್ನು ಹೇಗೆ ನಿರ್ವಹಿಸುವುದು? ಇವುಗಳಲ್ಲಿ ಫಲಪ್ರದವಾದ ಕೆಲವು ವಿಧಾನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ನಿಮಗೆ ಅತಿಸೂಕ್ತವಾದುದನ್ನು ಅನುಸರಿಸುವ ಮೂಲಕ ಸಕ್ಕರೆಯ ಆಕರ್ಷಣೆಯಿಂದ ಹೊರಬಂದು ಆರೋಗ್ಯವಂತರಾಗಿ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿರಿಸುವುದು ಹೇಗೆ?

ನಿಮ್ಮ ಬಗ್ಗೆ ಗಂಭೀರ ನಿಲುವು ತಾಳಿ
ನಿಮ್ಮ ಆರೋಗ್ಯದ ದೃಷ್ಟಿಯಿಂದ ಈಗ ಈ ಸಿಹಿತಿನ್ನುವುದು ಅಗತ್ಯವೇ? ಇಲ್ಲದಿದ್ದರೆ ಏನಾಗುತ್ತದೆ? ತಿಂದರೆ ಕೆಡುವ ಆರೋಗ್ಯವನ್ನು ಯಾರು ನೋಡಿಕೊಳ್ಳುತ್ತಾರೆ? ಅಷ್ಟಕ್ಕೂ ಈಗ ಈ ಸಿಹಿಯನ್ನು ತಿನ್ನಲೇಬೇಕಾದ ಅಗತ್ಯವೇನಿದೆ? ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮ್ಮ ಬಗ್ಗೆ ಗಂಭೀರ ನಿಲುವು ತಾಳಿ
ಇಂತಹ ಹತ್ತು ಹಲವು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಂಡು ನಿಮ್ಮ ಮನವನ್ನು ಗದರಿಸಿ. ನನಗೆ ಈಗ ಈ ಸಿಹಿ ತಿನ್ನುವುದಕ್ಕಿಂತ ಈಗಿರುವ ಆರೋಗ್ಯವನ್ನು ಉಳಿಸಿಕೊಳ್ಳುವುದು ಮುಖ್ಯ ಎಂಬ ಗಂಭೀರ ನಿಲುವು ತಾಳಿ. ಇದು ಪವಾಡದಂತೆ ಕೆಲಸ ಮಾಡುತ್ತದೆ.

ಸಿದ್ಧ ಆಹಾರಗಳನ್ನು ತ್ಯಜಿಸಿ
ಸಿದ್ಧಆಹಾರಗಳಲ್ಲಿ ಕೊಂಚಪ್ರಮಾಣದಲ್ಲಿಯಾದರೂ ಸಕ್ಕರೆ ಇರುತ್ತದೆ ಎಂದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಅದರಲ್ಲೂ ಬುರುಗು ಬರುವ ತಂಪುಪಾನೀಯಗಳಲ್ಲಿ ಅಗತ್ಯಕ್ಕಿಂತಲೂ ಏಳು ಪಟ್ಟು ಹೆಚ್ಚು ಸಕ್ಕರೆ ಇರುತ್ತದೆ. ವಾಸ್ತವವಾಗಿ ಈ ಸಿದ್ಧರೂಪದ ತಿಂಡಿಗಳನ್ನು ಒಂದು ಚಟವನ್ನಾಗಿಸಲೆಂದೇ ಕೊಂಚ ಸಕ್ಕರೆಯನ್ನು ಹಾಕಿರಲಾಗುತ್ತದೆ.

ಸಿದ್ಧ ಆಹಾರಗಳನ್ನು ತ್ಯಜಿಸಿ
ಅದರಲ್ಲೂ ಮೈದಾ ಆಧಾರಿತ ಆಹಾರಗಳನ್ನು ತಯಾರಿಸಲು ಹಿಟ್ಟನ್ನು ನಾದುವಾಗಲೇ ಸಕ್ಕರೆ ಸೇರಿಸಿರಲಾಗುತ್ತದೆ. ಈ ಆಹಾರಗಳಿಂದ ದೂರವಿದ್ದಷ್ಟೂ ಉತ್ತಮ.

ಸೆರೋಟೋನಿನ್ ಹಾರ್ಮೋನು ಹೆಚ್ಚಿಸಿ
ದಿನವೂ ಚಟುವಟಿಕೆಯಿಂದಿದ್ದು ತಮ್ಮ ಕಾರ್ಯಗಳಲ್ಲಿ ಸಂತೋಷವಾಗಿರುವವರಲ್ಲಿ ಸೆರೋಟೋನಿನ್ ಹಾರ್ಮೋನು ಸೂಕ್ತಪ್ರಮಾಣದಲ್ಲಿರುತ್ತದೆ. ನಮ್ಮ ನೆಮ್ಮದಿಗೆ, ಸಂತೋಷಕ್ಕೆ ಈ ಹಾರ್ಮೋನು ತುಂಬಾ ಅಗತ್ಯ.

ಸೆರೋಟೋನಿನ್ ಹಾರ್ಮೋನು ಹೆಚ್ಚಿಸಿ
ಸಮರ್ಪಕ ನಿದ್ದೆ, ಸೂಕ್ತ ಆಹಾರ, ವಿಶ್ರಾಂತಿ, ಧನಾತ್ಮಕ ಮನೋಭಾವನೆ, ಸಹಾಯಗುಣ ಮೊದಲಾದವು ಈ ಹಾರ್ಮೋನನ್ನು ಹೆಚ್ಚಿಸುತ್ತವೆ. ಒಣಫಲ, ಅನಾನಸು, ಸಾಲ್ಮನ್ ಮೀನುಗಳಲ್ಲಿ ಸೆರೋಟೋನಿನ್ ಹೆಚ್ಚಿಸುವ ಪೋಷಕಾಂಶಗಳಿವೆ. ಇವನ್ನು ಆಗಾಗ ಸೇವಿಸುವುದರಿಂದಲೂ ನಿಮ್ಮ ಮನಃಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಸಾಕಷ್ಟು ನೀರು ಕುಡಿಯಿರಿ
ಸಕ್ಕರೆ ತಿನ್ನುವ ಅದಮ್ಯ ಬಯಕೆಯಿಂದ ದೂರವಿರಲು ನೀರು ಕುಡಿಯುವುದು ಇನ್ನೊಂದು ವಿಧಾನ. ಯಾವಾಗ ಸಕ್ಕರೆ ತಿನ್ನುವ ಬಯಕೆಯಾಯಿತೋ, ಆಗೆಲ್ಲಾ ತಕ್ಷಣ ಒಂದು ಲೋಟ ನೀರು ಕುಡಿದು ಬಿಡಿ.

ಸಾಕಷ್ಟು ನೀರು ಕುಡಿಯಿರಿ
ಈ ನೀರಿಗೆ ಕೊಂಚ ಲಿಂಬೆರಸ ಮತ್ತು ಸಸ್ಯಜನ್ಯ ಸಕ್ಕರೆ (stevia) ಅಥವಾ ಪುದಿನಾ ಎಲೆಗಳನ್ನು ಸೇರಿಸಿ ಕುಡಿದರೆ ಇನ್ನೂ ಉತ್ತಮ.

ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಆಗಾಗ ಅಳೆಯುತ್ತಿರಿ
ಆಗಾಗ ನಿಮ್ಮ ರಕ್ತದಲ್ಲಿರುವ ಸಕ್ಕರೆಯೆ ಪ್ರಮಾಣವನ್ನು ಅಳೆಯುತ್ತಿರಿ. ಇದರಿಂದ ಸಕ್ಕರೆ ತಿನ್ನದೇ ಇರಲು ಮನಸ್ಸನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ಅದರಲ್ಲೂ ನೀವು ಮಧುಮೇಹಿಗಳಾಗಿದ್ದರೆ ಸಕ್ಕರೆಯ ಪ್ರಮಾಣವನ್ನು ತಿಳಿದ ಬಳಿಕ ಸಕ್ಕರೆಯ ಹತ್ತಿರ ಹೋಗಲೂ ನಿಮ್ಮ ಮನ ಸಿದ್ದವಾಗುವುದಿಲ್ಲ.

ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಆಗಾಗ ಅಳೆಯುತ್ತಿರಿ
ಸಿಹಿತಿಂಡಿಯನ್ನು ತಿನ್ನುವುದಕ್ಕಿಂತಲೂ ಹೆಚ್ಚಿನ ಸಂತೋಷವನ್ನು ಈಗ ಒಂದು ಸುತ್ತು ನಡೆಯುವುದರಿಂದ ಪಡೆಯುತ್ತೇನೆ ಎಂದು ನಿಮ್ಮ ಮನಸ್ಸಿಗೆ ಹೇಳಿಕೊಳ್ಳಿ. ಮನಃಶಕ್ತಿಗಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ.

ಹಸಿರು ತರಕಾರಿಗಳನ್ನು ತಿನ್ನಿ
ಯಾವಾಗ ಸಕ್ಕರೆ ತಿನ್ನುವ ಮನಸ್ಸಾಯಿತೋ ಆಗೆಲ್ಲಾ ಹಸಿಯಾಗಿಯೇ ತಿನ್ನಬಹುದಾದ ಹಸಿರು ತರಕಾರಿಯನ್ನು ತಿನ್ನಿ. ಇವುಗಳಲ್ಲಿ ಪೋಷಕಾಂಶಗಳು ಹೇರಳವಾಗಿದ್ದು ಸಕ್ಕರೆಯ ಅಂಶ ಕಡಿಮೆ ಇರುತ್ತದೆ. ಇವು ನಿಮ್ಮ ಸಕ್ಕರೆ ತಿನ್ನುವ ಅದಮ್ಯ ಬಯಕೆಯನ್ನು ಸ್ವಾಭಾವಿಕ ರೂಪದಲ್ಲಿ ಕಡಿಮೆಗೊಳಿಸುತ್ತವೆ.



Click it and Unblock the Notifications