Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಾಜಾ ಹಣ್ಣು: ಇದುವೇ ನಮ್ಮ ಆರೋಗ್ಯದ ಕಣ್ಣು
ಮಾನವನ ಶರೀರವು ಸ್ವಸ್ಥವಾಗಿರಲು ಮತ್ತು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವ೦ತಾಗಲು ಅಗತ್ಯವಾಗಿರುವ ಅತೀ ಪ್ರಮುಖವಾದ ವಿಟಮಿನ್ ಮತ್ತು ಖನಿಜಗಳ ಪೈಕಿ ಹೆಚ್ಚಿನವುಗಳ ಚಮತ್ಕಾರಿಕ ಆಗರವು ಈ ಹಣ್ಣುಗಳಾಗಿವೆ. ಕೆಲವು ಹಣ್ಣುಗಳ೦ತೂ ಈ ವಿಚಾರದಲ್ಲಿ ಪ್ರತ್ಯೇಕವಾದ೦ತಹ ಸ್ಥಾನಮಾನವನ್ನು ಪಡೆಯುತ್ತವೆ.
ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ಹಣ್ಣುಗಳು ಎಂದರೆ ಆಯಾ ಋತುಮಾನದಲ್ಲಿ ಸ್ಥಳೀಯವಾಗಿ ಲಭ್ಯವಾಗುತ್ತಿದ್ದ ಹಣ್ಣುಗಳು ಮಾತ್ರ. ಹೆಚ್ಚೆಂದರೆ ಮೂಸಂಬಿ ಮತ್ತು ಸೇಬು, ಅದೂ ಎಷ್ಟೋ ದಿನಗಳ ಹಿಂದಿನ ಒಣಗಿದ ಫಲಗಳು. ಇಂದು ಕಾಲ ಬದಲಾಗಿದೆ, ಮಾರುಕಟ್ಟೆಯಲ್ಲಿ ನಮ್ಮದೇ ದೇಶದ ವಿವಿಧ ರಾಜ್ಯಗಳ ವಿವಿಧ ಹಣ್ಣುಗಳು ತಾಜಾ ರೂಪದಲ್ಲಿಯೇ ದೊರಕುತ್ತಿವೆ. ಆದರೆ ಇವುಗಳ ಬೆಲೆ ಸ್ವಲ್ಪ ಹೆಚ್ಚಾದರೂ ಕೂಡ ಆರೋಗ್ಯಕ್ಕೆ ಮಾತ್ರ ಅತ್ಯ೦ತ ಆರೋಗ್ಯದಾಯಕ.

ಅದರಲ್ಲೂ ಕೆಲವೊಂದು ಹಣ್ಣಗಳ ಬೆಲೆ ಗಗನಕ್ಕೆ ಏರಿರುವುದರಿಂದ, ಜನ ಸಾಮಾನ್ಯರು ಇಂತಹ ಹಣ್ಣುಗಳ ಕಡೆ ಮುಖ ಕೂಡ ತಿರುಗಿಸುವುದಿಲ್ಲ...! ಆದರೆ ಒಂದು ಮಾತು ಅಂತೂ ಸತ್ಯ, ನಾವು ಊಟಮಾಡುವ ಅನ್ನವೂ ಬೇಯುವ ಮುನ್ನ ಪೋಷಕಾಂಶಗಳ ಆಗರವಾಗಿತ್ತು. ಆದರೆ ಬೇಯಿಸಿ ನೀರು ಬಸಿದ ಬಳಿಕ ಉಳಿದಿರುವುದು ಕೊಂಚ ಮಾತ್ರ.
ಅಂತೆಯೇ ಹಣ್ಣುಗಳನ್ನು ಹಾಗೆಯೇ ಸೇವಿಸುವುದರಿಂದ ಹೊಟ್ಟೆಗೆ ಪೋಷಕಾಂಶಗಳು ನೈಸರ್ಗಿಕ ರೂಪದಲ್ಲಿ ದೊರಕಿದಂತಾಗುತ್ತದೆ ಹಾಗೂ ಕನಿಷ್ಠ ಪ್ರಮಾಣದ ಆಹಾರದ ಮೂಲಕ ಗರಿಷ್ಟ ಪೋಷಕಾಂಶಗಳೂ ಲಭಿಸಿದಂತಾಗುತ್ತದೆ. ಪರಿಣಾಮವಾಗಿ ದೇಹದಲ್ಲಿದ್ದ ವಿಷಕಾರಿ ವಸ್ತುಗಳು ವಿಸರ್ಜಿಸಲ್ಪಡಲು ಹೆಚ್ಚಿನ ಚೈತನ್ಯ ದೊರಕಿದಂತಾಗಿ ಆರೋಗ್ಯ ವೃದ್ಧಿಸುತ್ತದೆ. ಸಮೃದ್ಧ ಪೋಷಕಾಂಶಭರಿತ ಹಣ್ಣುಗಳ ಆರೋಗ್ಯಕಾರಿ ಲಾಭಗಳೇನು?
ಸಾಮಾನ್ಯವಾಗಿ ಕೆಲವೊಂದು ಹಣ್ಣುಗಳು ವರ್ಷದ ಆಯಾ ಕಾಲಾವಧಿಗಳಲ್ಲಿ ಮಾತ್ರವೇ ಲಭ್ಯವಿದ್ದು, ಇವು ವರ್ಷವಿಡೀ ದೊರೆಯುವ ಹಣ್ಣುಗಳಲ್ಲ. ಅ೦ದ ಹಾಗೆ, ಅವುಗಳು ಲಭ್ಯವಿರುವ ಅವಧಿಯಲ್ಲಿ, ಅವುಗಳ ಪೈಕಿ ಉತ್ತಮವಾದವುಗಳನ್ನು ಆರಿಸಿಕೊಳ್ಳುವತ್ತ ನಿಮ್ಮ ಕೈಗಳು ಕ್ರಿಯಾಶೀಲವಾಗಲಿ. ಯಾಕೆ೦ದರೆ ಅವು ಬಹಳ ಗುರುತರವಾದ ಪ್ರಯೋಜನಗಳನ್ನು೦ಟು ಮಾಡುತ್ತವೆ. ಸರಿ, ಹಾಗಿದ್ದರೆ, ನಾವೀಗ ಮು೦ದೆ ಸಾಗಿ ಆರೋಗ್ಯವನ್ನೊದಗಿಸುವ ಅತ್ಯುತ್ತಮ ಹಣ್ಣುಗಳತ್ತ ದೃಷ್ಟಿ ಹಾಯಿಸೋಣ.....
ದಾಳಿ೦ಬೆ ಹಣ್ಣು
ದಾಳಿಂಬೆ ಹಣ್ಣಿನ ಬೆಲೆ ಮಾರುಕಟ್ಟೆಯಲ್ಲಿ ಸ್ವಲ್ಪ ಹೆಚ್ಚೇ ಆಗಿರುತ್ತದೆ, ಆದರೆ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ. ಅಷ್ಟೇ ಏಕೆ ದಾಳಿಂಬೆಯನ್ನು ಸ್ವರ್ಗಲೋಕದ ಹಣ್ಣು ಎಂದು ಕುರಾನ್ ನಲ್ಲಿಯೂ ಪ್ರಸ್ತಾಪಿಸಲಾಗಿದೆ. ದೇಹದಲ್ಲಿ ಹೆಚ್ಚಿನ ಶಕ್ತಿ ತುಂಬಲು ರಕ್ತದಲ್ಲಿ ಕಬ್ಬಿಣದ ಅಂಶ ಇರುವುದು ಅಗತ್ಯ. ಹಾಗಾಗಿ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದರೆ ಬಸಲೆ ಅಥವಾ ಪಾಲಕ್ ಸೊಪ್ಪಿನ ಅಡುಗೆಗಳನ್ನು ತಿನ್ನಲು ವೈದ್ಯರು ಸಲಹೆ ಮಾಡುತ್ತಾರೆ.
ಆದರೆ ಇದರಲ್ಲಿರುವ ಕಬ್ಬಿಣದ ಅಂಶ ತುಂಬಾ ಹೆಚ್ಚಿರುವುದರಿಂದ (2.7 ಮಿ.ಗ್ರಾಂ/100ಗ್ರಾಂ) ವೈದ್ಯರು ಸೂಕ್ತ ಪ್ರಮಾಣದಲ್ಲಿರುವ (0.3 ಮಿ.ಗ್ರಾಂ/ಗ್ರಾಂ) ದಾಳಿಂಬೆ ಹಣ್ಣನ್ನು ಸೇವಿಸಲು ಶಿಫಾರಸ್ಸು ಮಾಡುತ್ತಾರೆ. ಸೊಪ್ಪನ್ನು ನೇರವಾಗಿ ಸೇವಿಸಲು ಸಾಧ್ಯವಿಲ್ಲ. ಬೇಯಿಸಿದ ಬಳಿಕ ಹಲವು ಪೌಷ್ಟಿಕಾಂಶಗಳು ನಷ್ಟವಾಗುವ ಕಾರಣ ನೇರವಾಗಿ ತಿನ್ನಬಹುದಾದ ದಾಳಿಂಬೆ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಆಯ್ಕೆಯಾಗಿದೆ.
ಮಾವಿನ ಹಣ್ಣು
ಸಪೋಟ ಹಣ್ಣು
ಬಾಳೆಹಣ್ಣು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



