Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಆಹಾ! ಬಿಸಿ ಬಿಸಿ ಶುಂಠಿ ಚಹಾದ ಅತ್ಯುನ್ನತ ಪ್ರಯೋಜನಗಳೇನು?
ಶುಂಠಿ ಚಹಾ ಎಂಬುದು ಮಸಾಲೆಗಳಿಂದ ಕೂಡಿದ ಒಂದು ಸಾಂಪ್ರದಾಯಿಕ ಪಾನೀಯವಾಗಿದೆ. ಇದು ಏಶಿಯಾ ಮತ್ತು ಯೂರೋಪ್ ಖಂಡಗಳ ಜೊತೆಗೆ ಇಡೀ ಜಗತ್ತಿನಲ್ಲೆ ಜನಪ್ರಿಯವಾಗಿದೆ. ಶುಂಠಿಯನ್ನು ಪ್ರಾಚೀನ ಆಯುರ್ವೇದದಲ್ಲಿ ಮತ್ತು 3000 ವರ್ಷಗಳ ಹಿಂದೆಯೇ ಚೀನಿಯರ ಔಷಧಗಳಲ್ಲಿ ಬಳಸಲಾಗುತ್ತಿತ್ತು. ಅಜೀರ್ಣ, ಮೂತ್ರದಲ್ಲಿ ಸೊಂಕು, ಮೈಗ್ರೇನ್, ನಾಸಿಯಾ (ವಾಂತಿ), ಡಯೆರ್ರಿಯಾ ಮತ್ತು ಇನ್ನಿತರ ಕಾಯಿಲೆಗಳಿಗೆ ಶುಂಠಿಯನ್ನು ಮನೆಮದ್ದಾಗಿ ಬಳಸಲಾಗುತ್ತದೆ. ಶುಂಠಿ ಚಹಾವನ್ನು ಚಹಾ ಎಲೆಗಳ ಜೊತೆಗೆ ಅಥವಾ ಇಲ್ಲದೆ ತಯಾರಿಸಬಹುದು.
ಚೀನಿಯರ ಇದಕ್ಕೆ ಬ್ರೌನ್ ಶುಗರ್ ಹಾಕಿಕೊಂಡು ಕುಡಿದರೆ, ಕೊರಿಯನ್ನರು ಇದಕ್ಕೆ ಜೇನು ತುಪ್ಪವನ್ನು ಹಾಕಿಕೊಂಡು ಕುಡಿಯುತ್ತಾರೆ. ಜೇನು ತುಪ್ಪದ ಜೊತೆಗೆ ಲಿಂಬೆ ಅಥವಾ ಪುದಿನಾವನ್ನು ಬೆರೆಸಿ ಈ ಟೀಯನ್ನು ಮಾಡಿದರೆ, ಇದರ ರುಚಿ ತುಂಬಾ ಮಧುರವಾಗಿರುತ್ತದೆ. ಶುಂಠಿಯಲ್ಲಿ ಪೊಟಾಶಿಯಂ, ಮ್ಯೆಗ್ನೀಶಿಯಂ, ವಿಟಮಿನ್ ಬಿ6 ಮತ್ತು ಸಿ ಉರಿಯೂತ ನಿವಾರಕ (anti inflammatory), ಹಾಗೂ ವಿವಿಧ ಬಗೆಯ ಆರೋಗ್ಯಕಾರಿ ಗುಣಗಳು ಅಧಿಕವಾಗಿರುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೆರವಾಗುತ್ತವೆ, ಬನ್ನಿ ಹಾಗಾದರೆ ಶುಂಠಿಯ ಆರೋಗ್ಯಕಾರಿ ಪ್ರಯೋಜನಗಳೇನು ಎಂಬುದನ್ನು ನೋಡೋಣ...

ಮೂತ್ರಪಿಂಡಗಳ ಸೋಂಕು ನಿವಾರಿಸಲು ನೆರವಾಗುತ್ತದೆ
ಶುಂಠಿಯ ರಸದಲ್ಲಿ ಅಲ್ಪ ಪ್ರಮಾಣದಲ್ಲಿ ಜಿಂಜರಾಲ್ (gingerol) ಎಂಬ ತೈಲವಿದೆ. ಇದು ಅತ್ಯಂತ ಪ್ರಬಲವಾದ ಪ್ರತಿಜೀವಕ (antibiotic) ವಾಗಿರುವುದರಿಂದ ಹಾಗೂ ಶುಂಠಿಯ ಇತರ ಗುಣಗಳಾದ ಜೀವಿರೋಧಿ (antibacterial), ಉರಿಯೂತ ನಿವಾರಕ (anti inflammatory)ಗಳು ಜೊತೆಗೂಡಿ ಮೂತ್ರಪಿಂಡದ ಸೋಂಕಿಗೆ ಕಾರಣವಾಗುವ ಕ್ರಿಮಿಗಳನ್ನು ಹೊಡೆದೋಡಿಸುತ್ತದೆ. ಒಂದು ವೇಳೆ ಮೂತ್ರಪಿಂಡಗಳ ಸೋಂಕು ಈಗಾಗಲೇ ಇದ್ದು ವೈದ್ಯರು ಔಷಧಿಯನ್ನು ಶಿಫಾರಸ್ಸು ಮಾಡಿದ್ದರೆ ಆ ಔಷಧಿಗಳ ಜೊತೆಗೇ ದಿನಕ್ಕೆರಡು ಲೋಟ ಶುಂಠಿ ಕುಡಿಯುವುದರಿಂದ ಸೋಂಕು ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ.

ಮೂಗಿನಲ್ಲಿ ಸದಾ ಸಿಂಬಳ ತುಂಬಿಕೊಂಡಿರುವುದನ್ನು ತಡೆಯುತ್ತದೆ
ಕೆಲವು ಕಾರಣಗಳಿಂದಾಗಿ ಗಂಟಲಿನ ಮೇಲ್ಭಾಗ ಮತ್ತು ಮೂಗಿನ ಹಿಂಭಾಗಗಳಲ್ಲಿ ಸದಾ ಸಿಂಬಳ ತುಂಬಿಕೊಂಡು ಗಾಢವಾದ ದ್ರವದಂತೆ ಅಂಟಿಕೊಂಡಿರುತ್ತದೆ. ಇದರಿಂದ ಜಿನುಗುವ ದ್ರವ ಗಂಟಲು ಮತ್ತು ಮೂಗಿನಲ್ಲಿ ಸೋಂಕು ಉಂಟು ಮಾಡುತ್ತದೆ. ಇದು ಗಂಟಲಿನ ಟೊಳ್ಳಿನ ಮೇಲ್ಭಾಗದಲ್ಲಿ ಅಂಟಿಕೊಂಡಿರುವುದರಿಂದ ಇದನ್ನು ನಿವಾರಿಸುವುದು ಕೊಂಚ ಕಷ್ಟಕರ. ಆದರೆ ಶುಂಠಿಯಲ್ಲಿನ ನೀರು ಮತ್ತು ಇತರ ಪೋಷಕಾಂಶಗಳು ಈ ಸಿಂಬಳವನ್ನು ನೀರಾಗಿಸಿ ಸಹಜವಾಗಿ ಹೊರಹಾಕಲು ನೆರವಾಗುತ್ತವೆ.

ಜೀರ್ಣಕ್ರಿಯೆಗೆ ಉತ್ತೇಜನ ನೀಡುತ್ತದೆ
ಶುಂಠಿಯ ರಸ ಜಠರರಸದೊಡನೆ ಸೇರಿದ ಬಳಿಕ ಜಠರರಸ ಇನ್ನಷ್ಟು ಪ್ರಬಲವಾಗುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಜೊತೆಗೇ ಆಹಾರದ ರೂಪದಲ್ಲಿ ಬಂದಿರುವ ಪ್ರೋಟೀನ್ ಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ನೆರವಾಗುತ್ತದೆ. ಜೊತೆಗೇ ಶುಂಠಿರಸ ಇರುವ ಕಾರಣ ಜಠರ ಮತ್ತು ಕರುಳುಗಳ ಒಳಭಾಗದಲ್ಲಿ ಹೆಚ್ಚಿನ ಜೀರ್ಣರಸಗಳು ಸ್ರವಿಸಿ ಆಹಾರದಲ್ಲಿ ಹುಣ್ಣು ಉಂಟುಮಾಡುವ ವಿಷಕಾರಿ ವಸ್ತುಗಳಿದ್ದರೆ ಅವುಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಒಂದು ವೇಳೆ ನಿಮಗೆ ಅಜೀರ್ಣ ಅಥವಾ ಹುಳಿತೇಗು, ಕರುಳಿನಲ್ಲಿ ಹುಣ್ಣು (ಅಲ್ಸರ್) ಮೊದಲಾದ ತೊಂದರೆಗಳಿದ್ದರೆ ಶುಂಠಿ ನಿಮಗೆ ಅತ್ಯುತ್ತಮವಾದ ಔಷಧಿಯಾಗಿದೆ.

ವಿವಿಧ ಕ್ಯಾನ್ಸರ್ ಗಳಿಂದ ರಕ್ಷಣೆ ನೀಡುತ್ತದೆ
ನಮ್ಮ ದೇಹದ ಪ್ರತಿ ಜೀವಕೋಶಕ್ಕೂ ಒಂದು ನಿರ್ಧಿಷ್ಟ ಆಯಸ್ಸು ಇದೆ. ಈ ಜೀವಕೋಶಗಳು ಸತ್ತು ಹೊಸಜೀವಕೋಶಗಳು ಹುಟ್ಟುತ್ತಲೇ ಇರುತ್ತವೆ. ಒಂದು ವೇಳೆ ಈ ಆಯಸ್ಸು ಹೆಚ್ಚು ಕಡಿಮೆಯಾದರೆ ಅಥವಾ ಸತ್ತ ಜೀವಕೋಶಗಳ ಸಂಖ್ಯೆಗೆ ಅನುಗುಣವಾಗಿ ಹೊಸ ಜೀವಕೋಶಗಳ ಸಂಖ್ಯೆ ಇಲ್ಲದಿದ್ದರೆ ಆರೋಗ್ಯ ಭಾರೀ ಏರುಪೇರಾಗುತ್ತದೆ. ಕೆಲವು ಪ್ರೋಟೀನುಗಳು ಈ ಏರುಪೇರಿನ ಲಾಭ ಪಡೆದು ಒಂದು ಪ್ರಕಾರದ ಜೀವಕೋಶಗಳು ಅಗತ್ಯಕ್ಕಿಂತಲೂ ಹೆಚ್ಚು ಅಥವಾ ಕಡಿಮೆ ಸಂಖ್ಯೆಯಲ್ಲಿ ಹುಟ್ಟಲು ಕಾರಣವಾಗುತ್ತವೆ. ಯಾವ ಅಂಗದ ಜೀವಕೋಶಗಳಿಗೆ ಈ ತೊಂದರೆ ಒದಗಿದೆಯೋ ಆ ಅಂಗ ಕ್ಯಾನ್ಸರ್ ಪೀಡಿತವಾಗಿದೆ ಎಂದು ವೈದ್ಯರು ತಿಳಿಸುತ್ತಾರೆ. ಒಂದು ಸಂಶೋಧನೆಯ ಪ್ರಕಾರ ಜೀವಕೋಶಗಳು ತಮ್ಮ ನಿರ್ದಿಷ್ಟ ಸಮಯದಲ್ಲಿಯೇ ಸಾಯುವಂತೆ (apoptosis) ಶುಂಠಿಯಲ್ಲಿನ ಪೋಷಕಾಂಶಗಳು ರಾಸಾಯನಿಕ ಸಂದೇಶ ನೀಡುತ್ತವೆ. ತನ್ಮೂಲಕ ಜೀವಕೋಶಗಳು ಸರಿಯಾದ ಸಂಖ್ಯೆಯಲ್ಲಿ ಬೆಳೆಯುವುದರಿಂದ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಶುಂಠಿ ಹಲವು ಅಂಗಗಳ ಕ್ಯಾನ್ಸರ್ ಗಳನ್ನು ಕಡಿಮೆ ಮಾಡಿದರೂ ಇದರ ಪ್ರಭಾವ ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟುವಲ್ಲಿ ಅತ್ಯಧಿಕವಾಗಿದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.

ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ
ಶುಂಠಿಯಲ್ಲಿರುವ ಪೋಷಕಾಂಶಗಳು ನರಗಳ ಸೆಳೆತವನ್ನು ಕಡಿಮೆಗೊಳಿಸಿ ರಕ್ತ ಸರಾಗವಾಗಿ ದೇಹವಿಡೀ ಸಂಚರಿಸಲು ನೆರವಾಗುತ್ತದೆ. ಪರಿಣಾಮವಾಗಿ ಹೃದಯಕ್ಕೆ ಸಾಮಾನ್ಯ ಒತ್ತಡದಿಂದ ರಕ್ತವನ್ನು ನೂಕಿದರೆ ಸಾಕಾಗುತ್ತದೆ. ತನ್ಮೂಲಕ ಆರೋಗ್ಯ ವೃದ್ಧಿಯಾಗುತ್ತದೆ.

ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ನೀಡುತ್ತದೆ
ಶುಂಠಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಉರಿಯೂತ ನಿವಾರಕ ಗುಣಗಳಿಂದಾಗಿ ದೇಹದ ವಿಷಕಾರಿ ವಸ್ತುಗಳು ಹೊರಹಾಕಲ್ಪಡುವುದರಿಂದ ಚರ್ಮಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು ಲಭ್ಯವಾಗುತ್ತವೆ. ಇದು ಗಾಳಿಯಲ್ಲಿನ ಆರ್ದ್ರತೆಯನ್ನು ಹೀರಿಕೊಳ್ಳಲು ಸಹಕಾರಿಯಾಗಿದೆ. ಚರ್ಮ ಸಹಜವಾದ ಸೆಳೆತ ಪಡೆದು ಕಾಂತಿ ಹೆಚ್ಚುತ್ತದೆ.

ಹಸಿವಿಲ್ಲದಿದ್ದರೆ ಹಸಿಶುಂಠಿಯ ಚೂರೊಂದನ್ನು ಊಟಕ್ಕೆ ಮೊದಲು ತಿನ್ನಿ
ಕೆಲವರಿಗೆ ಹಸಿವೆ ಕಡಿಮೆಯಾಗಿರುತ್ತದೆ. ಆ ಕಾರಣದಿಂದ ಸರಿಯಾಗಿ ಊಟವನ್ನೇ ಮಾಡದೇ ಬಿಳಿಚಿಕೊಂಡಿರುತ್ತಾರೆ. ಹಸಿವನ್ನು ಹೆಚ್ಚಿಸಲು ಸುಮಾರು ಅರ್ಧ ಇಂಚಿನಷ್ಟು ಚಿಕ್ಕ ಹಸಿಶುಂಠಿಯ ತುಂಡೊಂದನ್ನು ಊಟಕ್ಕೆ ಸುಮಾರು ಅರ್ಧ ಘಂಟೆ ಮುನ್ನ ಕಚ್ಚಿ ತಿನ್ನುವ ಮೂಲಕ ಹಸಿವು ಹೆಚ್ಚುತ್ತದೆ.

ವಾಕರಿಕೆ ನಿವಾರಿಸಲು
ಪ್ರಯಾಣಕ್ಕೆ ಮೊದಲು ಒಂದು ಲೋಟ ಶುಂಠಿ ಕುಡಿದರೆ ಚಲನೆಯ ಕಾಯಿಲೆ ( ಮೋಶನ್ ಸಿಕ್ನೆಸ್) ಅನಾರೋಗ್ಯಕ್ಕೆ ಸಂಬಂಧಿಸಿದ ವಾಕರಿಕೆ ಮತ್ತು ವಾಂತಿ ತಡೆಗಟ್ಟಲು ಸಹಾಯ ಮಾಡಬಹುದು. ನೀವು ವಾಕರಿಕೆಯ ಮೊದಲ ಲಕ್ಷಣ ನಿವಾರಿಸಲು ಇದನ್ನು ಕುಡಿಯಬಹುದು.

ಉರಿಯೂತ ಕಡಿಮೆ ಮಾಡುತ್ತದೆ
ಶುಂಠಿ ಸ್ನಾಯು ಮತ್ತು ಜಂಟಿ ನೋವನ್ನು ನಿವಾರಿಸಬಲ್ಲ ಉತ್ತಮ ಮನೆಮದ್ದಾಗಿದ್ದು ಉರಿಯೂತದ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಶುಂಠಿ ಚಹಾ ಕುಡಿಯುವುದರ ಜೊತೆಗೆ, ನೀವು ಕೀಲುಗಳ ನೋವು ನಿವಾರಿಸಲು ಬಳಸಬಹುದು .

ರೋಗ ನಿರೋಧಕ ಶಕ್ತಿ ಬಲಪಡಿಸಲು
ಶುಂಠಿ ಚಹಾ, ತನ್ನಲ್ಲಿರುವ ಆಂಟಿ ಆಕ್ಸಿಡೆಂಟ್ ( ಉತ್ಕರ್ಷಣ ನಿರೋಧಕ) ನ್ನು ಹೆಚ್ಚಿನ ಮಟ್ಟದಲ್ಲಿ ಹೊಂದಿದ್ದು ನಿಮ್ಮ ಪ್ರತಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಶುಂಠಿಯ ಪೇಯ - ತಯಾರಿಸುವ ವಿಧಾನ
ಸುಮಾರು ಮಧ್ಯಮಗಾತ್ರದ ಶುಂಠಿಯನ್ನು ತೊಳೆದು ಸಿಪ್ಪೆ ಸುಲಿಯಿರಿ.
ಇದನ್ನು ತೆಂಗಿನಕಾಯಿ ತುರಿದಂತೆ ಚಿಕ್ಕ ಚಿಕ್ಕ ಎಳೆಗಳಾಗಿ ತುರಿಯಿರಿ ಅಥವಾ ಸಾಧ್ಯವಾದಷ್ಟು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ.
ಇದನ್ನು ಒಂದು ಲೋಟದಷ್ಟು ಕುದಿಸಿದ ನೀರಿಗೆ ಹಾಕಿ ಮುಚ್ಚಳ ಮುಚ್ಚಿ ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ (ಮತ್ತೆ ಕುದಿಸಬಾರದು)
ಈ ನೀರು ನಿಧಾನವಾಗಿ ತಣ್ಣಗಾಗಲು ಬಿಡಿ.
ಬಳಿಕ ಈ ನೀರನ್ನು ನೋಸಿ ಕುಡಿಯಿರಿ.
ರುಚಿಗೆ ಸ್ವಲ್ಪ ಜೇನು, ತುಳಸಿ ಎಲೆಗಳು ಅಥವಾ ಲಿಂಬೆರಸವನ್ನೂ ಸೇರಿಸಿ ಸವಿಯಬಹುದು. ಸ್ವಲ್ಪ ಒಗರು ಅನಿಸಿದರೆ ಸ್ವಲ್ಪ ಬೆಲ್ಲವನ್ನೂ ಸೇರಿಸಬಹುದು.



Click it and Unblock the Notifications











