Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಕಲ ರೋಗಗಳ ಹುಟ್ಟಡಗಿಸುವ-ಗೋಧಿಹುಲ್ಲಿನ ಜ್ಯೂಸ್
ಉತ್ತರ ಭಾರತದ ನಿತ್ಯದ ಆಹಾರಧಾನ್ಯವಾಗಿರುವ ಗೋಧಿಯಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಅತ್ಯುತ್ತಮವಾಗಿವೆ. ಅಂತೆಯೇ ಗೋಧಿಯ ಗಿಡ ಇನ್ನೂ ಎಳೆಯದಿರುವಾಗಲೇ, ಅಂದರೆ ನೆಲಮಟ್ಟದಿಂದ ಸುಮಾರು ಎಂಟು ಅಥವಾ ಹತ್ತು ಇಂಚು ಇರುವಂತೆಯೇ ಕತ್ತರಿಸಿ ಈ ಎಳೆಯ ಹಸಿರು ಹುಲ್ಲನ್ನು ಕಡೆದು ಸೋಸಿ ತೆಗೆದ ಜ್ಯೂಸ್ ಸಹಾ ಪೋಷಕಾಂಶಗಳ ಆಗರವಾಗಿದೆ.
ಗೋಧಿಹುಲ್ಲು (wheatgrass) ಎಂದು ಕರೆಯಲ್ಪಡುವ ಈ ಸೊಪ್ಪಿನಲ್ಲಿ ಪೋಷಕಾಂಶಗಳ ಭಂಡಾರವೇ ಇದೆ. ವಿಟಮಿನ್ ಕೆ, ಸಿ, ಬಿ ಮತ್ತು ಇ, ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ, ಗಂಧಕ, ಸೋಡಿಯಂ, ಸಲ್ಫರ್, ಸತು, ಪೊಟಾಶಿಯಂ ಹಾಗೂ ಹದಿನೇಳು ಅಮೈನೋ ಆಮ್ಲಗಳಿವೆ.
ಪ್ರತಿದಿನ ಒಂದು ಲೋಟ ತಾಜಾ ಗೋಧಿಹುಲ್ಲಿನ ಜ್ಯೂಸ್ ಕುಡಿಯುವುದು ಆರೋಗ್ಯವನ್ನು ವೃದ್ಧಿಸುತ್ತದೆ. ಇದರಲ್ಲಿ ಹಲವು ಕಾಯಿಲೆಗಳನ್ನು ಗುಣಪಡಿಸುವ ಗುಣವಿದ್ದು ದೇಹದಿಂದ ವಿಷಕಾರಿ ವಸ್ತುಗಳನ್ನು ಶೀಘ್ರವೇ ಹೊರಹಾಕಲೂ ನೆರವಾಗುತ್ತದೆ. ನಾವು ನಿತ್ಯ ಸೇವಿಸುವ ಯಾವುದೇ ತರಕಾರಿಗೆ ಹೋಲಿಸಿದರೂ ಅದಕ್ಕಿಂತಲೂ ಹೆಚ್ಚಿನ ಪೋಷಕಾಂಶಗಳು ಇದರಲ್ಲಿರುವುದು ಈ ಹುಲ್ಲಿನ ಮಹತ್ವವಾಗಿದೆ. ಅಬ್ಬಾ! ಗೋಧಿ ಹುಲ್ಲು ಇಷ್ಟೊಂದು ಪ್ರಯೋಜನಕಾರಿಯೇ?
ದಿನಕ್ಕೊಂದು ಲೋಟದಷ್ಟು ತಾಜಾ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿ ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ, ನಮ್ಮ ಶರೀರದ ನೀರಿನ ಪಿಎಚ್ (ಆಮ್ಲ-ಪ್ರತ್ಯಾಮ್ಲದ ಮಟ್ಟ ಅಳೆಯುವ ಮಾಪಕ) ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ, ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ, ಸಂಧಿವಾತವನ್ನು ಗುಣಪಡಿಸುತ್ತದೆ, ಮೂಗಿನ ಹಿಂಭಾಗದ ಸೈನಸ್ ಕಟ್ಟಿಕೊಂಡಿದ್ದರೆ ತೆರೆಯುತ್ತದೆ, ದೇಹದಲ್ಲಿ ಹೊಗೆಯ ಸೇವನೆಯ ಮೂಲಕ ಅಗಮಿಸಿರುವ ಭಾರವಾದ ಲೋಹಗಳಾದ ಸೀಸ, ಪಾದರಸ ಮತ್ತು ಅಲ್ಯೂಮಿನಿಯಂಗಳನ್ನು ನಿವಾರಿಸುತ್ತದೆ. ಇದರ ಹೊರತಾಗಿ ಇನ್ನೂ ಯಾವ ಯಾವ ರೀತಿಯಲ್ಲಿ ಈ ಜ್ಯೂಸ್ ಉತ್ತಮವಾಗಿದೆ ಎಂದು ನಿಮ್ಮನ್ನು ಚಕಿತಗೊಳಿಸಲು ಕೆಳಗಿನ ಸ್ಲೈಡ್ ಶೋ ನೆರವಾಗುತ್ತದೆ..

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಗೋಧಿಹುಲ್ಲಿನಲ್ಲಿರುವ ಮೆಗ್ನೀಶಿಯಂ ಮತ್ತು ಉತ್ತಮ ಪ್ರಮಾಣದ ಕರಗದ ನಾರು ಮಲಬದ್ಧತೆಯನ್ನು ನಿವಾರಿಸಿ ಜೀರ್ಣಕ್ರಿಯೆ ಉತ್ತಮಗೊಳಿಸಲು ನೆರವಾಗುತ್ತದೆ. ಪ್ರತಿದಿನದ ಸೇವನೆ ಬೇಧಿ ಮತ್ತು ಹೊಟ್ಟೆಯ ಹುಣ್ಣನ್ನೂ ಗುಣಪಡಿಸುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ
ತೂಕ ಕಳೆದುಕೊಳ್ಳುವವರಿಗೆ ಗೋಧಿಹುಲ್ಲಿನ ಜ್ಯೂಸ್ ಹೇಳಿ ಮಾಡಿಸಿದ ಆಹಾರವಾಗಿದೆ. ಇದು ಥೈರಾಯ್ಡ್ ಗ್ರಂಥವನ್ನು ಪ್ರಚೋದಿಸಿ ಹಸಿವೆಯಾಗುವ ಬಯಕೆಯನ್ನು ಕಡಿಮೆ ಮಾಡುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ
ಪರಿಣಾಮವಾಗಿ ತೂಕ ಇಳಿಸಿಕೊಳ್ಳಲು ನಡೆಸುವ ಯತ್ನಗಳಿಗೆ ಹೆಚ್ಚಿನ ಪ್ರಮಾಣದ ಸಂಗ್ರಹಗೊಂಡಿದ್ದ ಕೊಬ್ಬು ಬಳಕೆಯಾಗಿ ತೂಕ ಆರೋಗ್ಯಕರವಾಗಿ ಇಳಿಯುತ್ತದೆ.

ಕ್ಯಾನ್ಸರ್ ರೋಗದಿಂದ ಮುಕ್ತಿ ನೀಡುತ್ತದೆ
ದಿನಕ್ಕೊಂದು ಲೋಟದ ಗೋಧಿಹುಲ್ಲಿನ ಜ್ಯೂಸ್ ಹಲವು ರೀತಿಯ ಕ್ಯಾನ್ಸರ್ ಕಣಗಳನ್ನು ನಿವಾರಿಸುವ ಮೂಲಕ ಕ್ಯಾನ್ಸರ್ ಒಂದು ವೇಳೆ ಈಗಾಗಲೇ ಪ್ರಾರಂಭವಾಗಿದ್ದರೆ ಅದನ್ನು ನಿವಾರಿಸುತ್ತದೆ. ಜೊತೆಗೇ ಇವು ಮತ್ತೊಮ್ಮೆ ಬಾಧಿಸದಂತೆ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ
ನಿತ್ಯದ ಸೇವನೆಯಿಂದ ಕಣ್ಣಿನ ದೃಷ್ಟಿ ಉತ್ತಮಗೊಂಡಿರುವುದನ್ನು ಕಂಡುಕೊಳ್ಳಲಾಗಿದೆ. ರಾತ್ರಿಯ ಕುರುಡು ಮತ್ತು ಕಣ್ಣಿನ ಅಡಿಯ ಕಪ್ಪು ವರ್ತುಲಗಳನ್ನೂ ಸಮರ್ಥವಾಗಿ ನಿವಾರಿಸುತ್ತದೆ.

ಮಧುಮೇಹವನ್ನೂ ಕಡಿಮೆಗೊಳಿಸುತ್ತದೆ
ನಿತ್ಯದ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿರಲು ಸಾಧ್ಯವಾಗುತ್ತದೆ. ಜೊತೆಗೇ ರಕ್ತದಲ್ಲಿರುವ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಂಡು ಬರುವ ಮೂಲಕ ರಕ್ತಸಂಚಾರ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ.

ಹಲ್ಲುಗಳು ಕೊಳೆಯುವುದನ್ನು ನಿಲ್ಲಿಸುತ್ತದೆ
ನಿತ್ಯದ ಸೇವನೆಯಿಂದ ಹಲ್ಲು ಮತ್ತು ವಸಡುಗಳಲ್ಲಿ ಸೋಂಕು ಉಂಟಾಗುವುದರಿಂದ ರಕ್ಷಿಸುತ್ತದೆ. ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಹಲ್ಲುಗಳಲ್ಲಿ ಗುಳಿ ಮತ್ತು ಕೊಳೆಯುವಂತೆ ಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ಹಲ್ಲುಗಳನ್ನು ರಕ್ಷಿಸುತ್ತದೆ.

ತಲೆಹೊಟ್ಟನ್ನು ನಿವಾರಿಸುತ್ತದೆ
ದೇಹದೊಳಗೆ ಹೇಗೆ ಗೋಧಿಹುಲ್ಲಿನ ಜ್ಯೂಸ್ ಉತ್ತಮವೋ ಅಂತೆಯೇ ತಲೆಯ ಮೇಲೆ ಹಚ್ಚಿಕೊಳ್ಳುವ ಮೂಲಕ ತಲೆಹೊಟ್ಟು ನಿವಾರಣೆಗೂ ಉತ್ತಮವಾಗಿದೆ. ಇದಕ್ಕಾಗಿ ತಾಜಾ ರಸವನ್ನು ನೇರವಾಗಿ ತಲೆಯ ಮೇಲೆ ಸುರಿದು ಇಡಿಯ ಕೂದಲು ಒದ್ದೆಯಾಗುವಂತೆ ನಯವಾಗಿ ಮಸಾಜ್ ಮಾಡಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತಲೆ ತೊಳೆದುಕೊಳ್ಳುವ ಮೂಲಕ ತಲೆಹೊಟ್ಟು ಇಲ್ಲದಂತಾಗುತ್ತದೆ.

ನೋವು ಮತ್ತು ಉರಿಯೂತಕ್ಕೆ ಪರಿಹಾರ
ಗೋಧಿ ಹುಲ್ಲಿನ ಪುಡಿ ಕಲ್ಮಶ ಹೋಗಲಾಡಿಸುವ ಗುಣವನ್ನು ಹೊಂದಿದೆ,ಇದು ರಕ್ತವನ್ನು ಶುದ್ಧಿಗೊಳಿಸಿ,ಉಸಿರಿನ ಮತ್ತು ಬೆವರಿನ ವಾಸನೆಯನ್ನು ಹೋಗಲಾಡಿಸುತ್ತದೆ.

ಸಂತಾನೋತ್ಪತ್ತಿ ಸಮಸ್ಯೆ ನಿವಾರಿಸುತ್ತದೆ
ಇದು ಮಹಿಳೆ ಮತ್ತು ಪುರುಷ ಇಬ್ಬರಲ್ಲೂ ಸಂತಾನೋತ್ಪತ್ತಿ ಸಮಸ್ಯೆ ನಿವಾರಿಸುತ್ತದೆ.ಚೇತನ ಶಕ್ತಿಯನ್ನು ತುಂಬಿ,ಗರ್ಭ ಧರಿಸಲು ಸಹಕರಿಸುತ್ತದೆ

ತ್ವಚೆಯನ್ನು ಸ್ವಚ್ಚವಾಗಿಡುತ್ತದೆ
ಗೋಧಿ ಹುಲ್ಲು ಸತ್ತ ಚರ್ಮದ ಜೀವಕೋಶಗಳನ್ನು ಹೋಗಲಾಡಿಸುತ್ತದೆ.ಆಂತರಿಕ ಕಾಂತಿಯನ್ನು ವರ್ಧಿಸಿ,ಚರ್ಮ ತಾರುಣ್ಯಯುತ ಕಾಂತಿ ಹೊಂದುವಂತೆ ಮಾಡುತ್ತದೆ.

ಮೊಡವೆಗೆ ಚಿಕಿತ್ಸಕ
ಗೋಧಿ ಹುಲ್ಲಿನ ಜ್ಯೂಸ್ ಸೇವಿಸುವುದರಿಂದ ತ್ವಚೆಯ ಮೊಡವೆಯನ್ನು ಹೋಗಲಾಡಿಸಿ ಕಾಂತಿಯುತವಾಗುವಂತೆ ಮಾಡುತ್ತದೆ. ಅಲ್ಲದೆ ಗೋಧಿ ಹುಲ್ಲಿನ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆ,ಸೂರ್ಯನ ಕಿರಣಗಳಿಂದ ಆಗುವ ಟ್ಯಾನ್ ಇವುಗಳನ್ನು ಹೋಗಲಾಡಿಸಬಹುದು.

ಸೋಂಕುನಿವಾರಕ ಗುಣಲಕ್ಷಣ
ಗೋಧಿ ಹುಲ್ಲಿನಲ್ಲಿ ನಂಜು ನಿರೋಧಕ ಗುಣ ಇರುವುದರಿಂದ ಕೀಟ ಕಡಿತಗಳು,ತುರಿಕೆ,ಕೀವು,ಯಾತನೆಗಳಿಗೆ ಪರಿಹಾರ ಒದಗಿಸುತ್ತದೆ.ದೇಹದಿಂದ ವಿಷಯುಕ್ತ ಅಂಶಗಳನ್ನು ಹೊರಹಾಕುವುದಕ್ಕೂ ಇದು ಸಹಾಯಕ. ಜೊತೆಗೆ ಸನ್ ಬರ್ನ್ ಅನ್ನು ಕೂಡ ಹೋಗಲಾಡಿಸುತ್ತದೆ.



Click it and Unblock the Notifications
