Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಕಿಡ್ನಿಯನ್ನು ಅನಾರೋಗ್ಯದಿಂದ ದೂರವಿಡಲು ಏನು ಮಾಡಬೇಕು?
ನಿಮಗೇ ತಿಳಿದರುವಂತೆ ನಾವು ತಿನ್ನುವ ಆಹಾರ ಮತ್ತು ನಮ್ಮ ಅಭ್ಯಾಸಕ್ಕೂ, ನಮ್ಮ ದೇಹದ ಅಂಗಗಳ ಆರೋಗ್ಯಕ್ಕೂ ಒಂದಕ್ಕೊಂದು ನೇರ ಸಂಬಂಧವಿದೆ. ಕಿಡ್ನಿ ಆರೋಗ್ಯದ ಬಗ್ಗೆ ನೋಡುವುದಾದರೆ ಅದನ್ನು ಶುದ್ಧ ಮಾಡುವ ಆಹಾರವನ್ನು ತಿನ್ನಬೇಕು. ಕಿಡ್ನಿಯಲ್ಲಿ ಕಲ್ಮಶ ಸಂಗ್ರಹವಾಗುತ್ತಾ ಹೋದಂತೆ ಕಿಡ್ನಿಯಲ್ಲಿ ಕಲ್ಲು ಮುಂತಾದ ಸಮಸ್ಯೆ ಕಂಡು ಬರುವುದು. ನಿಮ್ಮ ಕಿಡ್ನಿಯ ಆರೋಗ್ಯ ನೀವು ಬಯಸುವುದಾದರೆ ಈ ಕೆಳಗಿನ ಟಿಪ್ಸ್ ಪಾಲಿಸುವುದು ಒಳ್ಳೆಯದು:
*ಸಾಕಷ್ಟು ನೀರು ಕುಡಿಯಿರಿ

ಎರಡು ಲೀಟರ್ ಬಾಟಲಿ ನೀರನ್ನು ಜತೆಯಲ್ಲಿ ಇಟ್ಟುಕೊಂಡು ಅದು ದಿನದಲ್ಲಿ ಮುಗಿಯುವಂತೆ ನೋಡಿಕೊಳ್ಳಿ. ಸರಾಸರಿ ತೂಕವನ್ನು ಹೊಂದಿರುವ ವ್ಯಕ್ತಿ ಎರಡು ಲೀಟರ್ ನೀರನ್ನು ಸೇವಿಸಲೇ ಬೇಕು.
*ಹಣ್ಣುಗಳು ಮತ್ತು ತರಕಾರಿ
ಇವುಗಳಲ್ಲಿ ಹೇರಳವಾಗಿ ನೀರಿನಾಂಶವಿರುತ್ತದೆ. ಈ ಆಹಾರಗಳನ್ನು ನೀವು ಹೆಚ್ಚಾಗಿ ಸೇವಿಸಬೇಕು. ಆರೋಗ್ಯ ತಜ್ಞರು ಕೇವಲ ತರಕಾರಿ ಮತ್ತು ಹಣ್ಣಿನ ಜ್ಯೂಸ್‌ನ್ನು ನೀಡಿ ಬೇರೆ ಆಹಾರ ಸೇವಿಸದೆ ಕಿಡ್ನಿ ಕ್ಲೆನ್ಸೆ ಎನ್ನುವುದನ್ನು ನಿರ್ವಿಷಕಾರಿ ನಡೆಸುತ್ತಾರೆ. ಇದು ಸುಮಾರು 3ರಿಂದ 5 ದಿನಗಳ ಕಾಲ ನಡೆಯುತ್ತದೆ. ಇದು ವ್ಯಕ್ತಿಯ ತಾಳ್ಮೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ವಿಧಾನದಲ್ಲಿ ದ್ರಾಕ್ಷಿ, ಕಿವಿ, ನಿಂಬೆಹಣ್ಣು ಮತ್ತು ಕ್ರಾನ್‌ಬೆರ್ರಿ ಹಣ್ಣುಗಳ ಜ್ಯೂಸ್‌ನ್ನು ಸೇರಿಸಲಾಗುತ್ತದೆ. ಕಿಡ್ನಿ ಆರೋಗ್ಯವಾಗಿರಬೇಕೆಂದು ಬಯಸುತ್ತೀರಾ?
*ದೇಹದ ತೂಕ ಮತ್ತು ರಕ್ತದ ಒತ್ತಡದ ಬಗ್ಗೆ ಎಚ್ಚರವಿರಲಿ
ನಿಮ್ಮ ದೇಹದ ತೂಕ ಮತ್ತು ರಕ್ತದ ಒತ್ತಡವನ್ನು ಸರಿಯಾಗಿಟ್ಟುಕೊಂಡರೆ ಆಗ ನಿಮ್ಮ ಕಿಡ್ನಿಗೆ ತುಂಬಾ ನೆರವಾಗುತ್ತದೆ. ಬೊಜ್ಜು ಮತ್ತು ಅತಿಯಾದ ರಕ್ತದ ಒತ್ತಡದಿಂದ ಕಿಡ್ನಿಯ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಇದರಿಂದ ಕಿಡ್ನಿಯು ಸರಿಪಡಿಸಲಾರದಷ್ಟು ತೊಂದರೆಗೀಡಾಗಬಹುದು.
*ಧೂಮಪಾನ ಮಾಡುವುದನ್ನು ಬಿಟ್ಟುಬಿಡಿ
ನೀವು ಆರೋಗ್ಯಕರವಾಗಿರಬೇಕೆಂದರೆ ಧೂಮಪಾನ ಮಾಡುವುದನ್ನು ಬಿಟ್ಟುಬಿಡಿ. ಇದು ಹೃದಯರಕ್ತನಾಳ ಮತ್ತು ಕಿಡ್ನಿ ಆರೋಗ್ಯಕ್ಕೆ ಉತ್ತಮ.
*ದೈನಂದಿನ ಚಟುವಟಿಕೆಗಳಲ್ಲಿ ವ್ಯಾಯಾಮವನ್ನು ಸೇರಿಸಿಕೊಳ್ಳಿ
ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ವ್ಯಾಯಾಮವನ್ನು ಸೇರಿಸಿಕೊಳ್ಳಿ. ವ್ಯಾಯಾಮವು ಕೇವಲ ನಿಮ್ಮ ಕಿಡ್ನಿಯ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ನಿಮ್ಮ ರಕ್ತದ ಸಕ್ಕರೆ ಮಟ್ಟ ಮತ್ತು ರಕ್ತದ ಒತ್ತಡವನ್ನು ನಿರ್ವಹಿಸುತ್ತದೆ.
*ಪಾರ್ಸ್ಲಿ ನೀರನ್ನು ಸೇವಿಸಿ
ಕಿಡ್ನಿ ಕಲ್ಲು ಇರುವವರು ದಿನದಲ್ಲಿ ಎರಡು ಬಾರಿ ಪಾರ್ಸ್ಲಿ ನೀರನ್ನು ಸೇವಿಸಬೇಕು. ಮೊದಲನೇಯದಾಗಿ ಸ್ವಲ್ಪ ಪಾರ್ಸ್ಲಿಯನ್ನು ತೆಗೆದುಕೊಳ್ಳಿ(8ರಿಂದ10). ಇದನ್ನು ಚೆನ್ನಾಗಿ ತೊಳೆಯಿರಿ. ಇದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ 2-3 ಕಪ್ ನೀರು ಹಾಕಿ ಸುಮಾರು ಹತ್ತು ನಿಮಿಷ ಕುದಿಸಿ. ಆಗ ನೀರು ತಿಳಿ ಹಸಿರು ಬಣ್ಣಕ್ಕೆ ತಿರುಗುತ್ತದೆ. ಇದನ್ನು ಮುಚ್ಚಿಡಿ ಮತ್ತು ಬೆಳಿಗ್ಗೆ ಮತ್ತು ಸಂಜೆ ವೇಳೆ ಒಂದೊಂದು ಕಪ್ ನೀರನ್ನು ಸೇವಿಸಿ.
*ಉತ್ತಮವಾಗಿರುವ ಮತ್ತೊಂದು ಆಹಾರವೆಂದರೆ ಶತಾವರಿ
ಕಿಡ್ನಿಯನ್ನು ಆರೋಗ್ಯವಾಗಿಡಲು ಮತ್ತೊಂದು ವಿಧಾನವೆಂದರೆ ಉಪ್ಪು ಸೇವನೆ ಬಗ್ಗೆ ಗಮನಹರಿಸುವುದು. ಇದರಿಂದ ಕಿಡ್ನಿಯಲ್ಲಿ ಕಲ್ಲು ಆಗುವುದು ತಪ್ಪುತ್ತದೆ. ಕಡಿಮೆ ಉಪ್ಪು ತಿಂದರೆ ಅದು ಹೃದಯದ ಆರೋಗ್ಯಕ್ಕೂ ಉತ್ತಮ ಮತ್ತು ಕೈಕಾಲುಗಳಲ್ಲಿ ನೀರು ಶೇಖರಣೆಯಾಗುವುದು ತಪ್ಪುತ್ತದೆ.
*ಸೂರ್ಯನ ಬೆಳಕು
10 ನಿಮಿಷಗಳ ಸೂರ್ಯನ ಬೆಳಕು ನಿಮ್ಮ ಕಿಡ್ನಿಗೆ ನೇರವಾಗುತ್ತದೆ ಎಂದು ನಿಮಗೆ ತಿಳಿದಿದೆಯಾ? ಹೌದು, ಸೂರ್ಯನ ಕಿರಣಗಳಲ್ಲಿರುವ ವಿಟಮಿನ್ ಡಿಯಿಂದ ಕ್ಯಾಲ್ಸಿಯಂ ಮತ್ತು ರಂಜಕದ ಮಟ್ಟವನ್ನು ನಿರ್ವಹಿಸಿ ಕಿಡ್ನಿಯ ಆರೋಗ್ಯಕ್ಕೆ ನೆರವಾಗುತ್ತದೆ. ಒತ್ತಡವು ನಮ್ಮ ಕಿಡ್ನಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಕಿಡ್ನಿಯನ್ನು ಆರೋಗ್ಯವಾಗಿಡಲು ನೀವು ಒತ್ತಡದಿಂದ ಮುಕ್ತವಾಗಿ ಉಲ್ಲಾಸದಿಂದ ಇರಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications





