ಮೂಗಿನ ಶುಷ್ಕತೆ ಸಮಸ್ಯೆಗೆ ತಿಲಾಂಜಲಿ ಇಡುವ ಟಾಪ್ ಮನೆಮದ್ದುಗಳು

ಶುಷ್ಕ ನಾಸಿಕವು (ಮೂಗಿನ ಶುಷ್ಕತೆ) ನಾನಾ ತೆರನಾದ ಕಿರಿಕಿರಿಗೆ ಕಾರಣವಾಗುತ್ತದೆ. ಏಕೆ೦ದರೆ ಶುಷ್ಕ ನಾಸಿಕವು ತುರಿಕೆ, ಉರಿ, ಸೈನಸ್ ಗಳ ಉರಿಯೂತ, ಹಾಗೂ ತಲೆಶೂಲೆಗಳಿ೦ದೊಡಗೂಡಿರುತ್ತದೆ. ಅಲರ್ಜಿ, ವಾತಾಯನ ವ್ಯವಸ್ಥೆಗಳ ಬಳಕೆ (air conditioners), ಕೆಲವೊ೦ದು ಔಷಧಗಳ ಸೇವನೆಯ ಅಡ್ಡಪರಿಣಾಮಗಳಿ೦ದು೦ಟಾಗಿರಬಹುದಾದ ಶಾರೀರಿಕ ನಿರ್ಜಲೀಕರಣ, ಇವೇ ಮೊದಲಾದವು ಶುಷ್ಕ ನಾಸಿಕಕ್ಕೆ ಕಾರಣವಾಗಿರಬಲ್ಲವು.

ಅದೃಷ್ಟವಶಾತ್, ಶುಷ್ಕ ನಾಸಿಕವನ್ನು ಉಪಚರಿಸಲು ಕೆಲವೊ೦ದು ಪರಿಣಾಮಕಾರಿಯಾದ ಮನೆಮದ್ದುಗಳು ಲಭ್ಯವಿವೆ. ಬಾವು (ಊದಿಕೊಳ್ಳುವುದು), ಮೂಗಿನಿ೦ದ ರಕ್ತ ಸೋರುವಿಕೆ, ಹಾಗೂ ಉಸಿರಾಟದ ವೇಳೆ ಗೊರಗುಟ್ಟುವ ಧ್ವನಿ ಹೊರಬೀಳುವುದು ಇವೇ ಮೊದಲಾದವು ಶುಷ್ಕ ನಾಸಿಕದೊ೦ದಿಗೆ ಒಡಗೂಡುವ ಮತ್ತಿತರ ಕೆಲವು ರೋಗಲಕ್ಷಣಗಳಾಗಿರುತ್ತವೆ.

ಮೂಗು ಒ೦ದು ಪ್ರಮುಖವಾದ ರಕ್ಷಣಾತ್ಮಕ ಅ೦ಗವಾಗಿದೆ. ನಾವು ಉಸಿರಾಡುವಾಗ ಬಾಹ್ಯ ವಸ್ತುಗಳು (ಧೂಳಿನ ಕಣಗಳ೦ತಹ ವಸ್ತುಗಳು) ಶ್ವಾಸಮಾರ್ಗದೊಳಗೆ ಪ್ರವೇಶಿಸದ೦ತೆ, ಮೂಗಿನೊಳಗೆ ಇರುವ ಸಣ್ಣ ಸಣ್ಣ ರೋಮಗಳು ತಡೆಹಿಡಿಯುತ್ತವೆ. ಮೂಗಿನ ಮೇಲೆ ಗೋಚರಿಸುವ ಕಪ್ಪು ಚುಕ್ಕೆ ನಿವಾರಣೆಗೆ ಸೂಕ್ತ ಸಲಹೆ

ಮೂಗಿನ ಶುಷ್ಕ ತ್ವಚೆಯ ಸಮಸ್ಯೆಯ ನಿವಾರಣೆಗೆ ನೆರವಾಗಬಲ್ಲ ಕೆಲವೊ೦ದು ಪರಿಣಾಮಕಾರೀ ಮನೆಮದ್ದುಗಳ ಕುರಿತು ಬೋಲ್ಡ್ ಸ್ಕೈಯು ಇ೦ದು ನಿಮ್ಮೊಡನೆ ಹ೦ಚಿಕೊಳ್ಳಲಿದೆ. ಶುಷ್ಕ ನಾಸಿಕದ ಸಮಸ್ಯೆಯಿ೦ದ ಪಾರಾಗುವ ನಿಟ್ಟಿನಲ್ಲಿ ನೆರವಾಗುವ ಕೆಲವೊ೦ದು ನೈಸರ್ಗಿಕ ಪರಿಹಾರೋಪಾಯಗಳ ಕುರಿತು ಇಲ್ಲಿ ಅವಲೋಕಿಸಿರಿ. ಜೀವಹಿಂಡುವ ಉರಿಮೂತ್ರದ ಸಮಸ್ಯೆಗೆ ಅಂತ್ಯಹಾಡುವ ಮದ್ದುಗಳು

ಬಾದಾಮಿ ತೈಲ

Home Remedies For Dry Nose

ಬಾದಾಮಿ ತೈಲವು ವಿಟಮಿನ್ E, ಅವಶ್ಯಕ ಕೊಬ್ಬಿನಾಮ್ಲಗಳು, ಜೀವಸತ್ವಗಳು, ಹಾಗೂ ಖನಿಜಾ೦ಶಗಳನ್ನು ಸಮೃದ್ಧವಾಗಿ ಒಳಗೊ೦ಡಿದೆ. ಶುಷ್ಕ ನಾಸಿಕವನ್ನು ಆರೈಕೆ ಮಾಡಲು ಬಾದಾಮಿ ತೈಲವು ಅತ್ಯ೦ತ ಪರಿಣಾಮಕಾರಿಯಾದುದಾಗಿದೆ. ಬಾದಾಮಿ ತೈಲವು ಮೂಗಿನಿ೦ದ ತೇವಾ೦ಶವು ನಷ್ಟವಾಗುವುದನ್ನು ತಡೆಯುತ್ತದೆ. ಶುಷ್ಕ ನಾಸಿಕದ ಕಿರಿಕಿರಿಯನ್ನು ಉಪಶಮನಗೊಳಿಸುವ ನಿಟ್ಟಿನಲ್ಲಿ ಸ್ವಲ್ಪ ಬಾದಾಮಿ ತೈಲವನ್ನು ನಿಮ್ಮ ಮೂಗಿನ ಒಳಭಾಗದ ಶ್ಲೇಷ್ಮ ಪದರದ ಮೇಲೆ ಲೇಪಿಸಿಕೊಳ್ಳಿರಿ. ಕಡ್ಡಿಯೊ೦ದರ ತುದಿಭಾಗಗಳಿಗೆ ಅಳವಡಿಸಲಾಗಿರುವ ಹತ್ತಿಯನ್ನು ಬಳಸಿಕೊ೦ಡು ನೀವು ಈ ಕ್ರಮವನ್ನು ಕೈಗೊಳ್ಳಬಹುದು.

ಲೋಳೆಸರ


ಇದೂ ಕೂಡಾ ಮೂಗಿನ ಒಳಭಾಗದ ಶ್ಲೇಷ್ಮ ಪದರವನ್ನು ತೇವವಾಗಿಸುತ್ತದೆ. ಲೋಳೆಸರವು ನಿಮ್ಮ ಮೂಗಿನ ಒಳಭಾಗವನ್ನು ದಿನವಿಡೀ ತೇವವಾಗಿರಿಸಬಲ್ಲದು. ಹತ್ತಿಯ ಉ೦ಡೆಯನ್ನು ಬಳಸಿಕೊ೦ಡು ಇಲ್ಲವೇ ಹತ್ತಿಯನ್ನು ತುದಿಭಾಗಗಳಲ್ಲಿ ಹೊ೦ದಿರುವ ಕಡ್ಡಿಯ ನೆರವಿನಿ೦ದ ಸ್ವಲ್ಪ ಲೋಳೆಸರವನ್ನು ಮೂಗಿನೊಳಗೆ ಲೇಪಿಸಿ ಹಾಗೆಯೇ ಇರಗೊಡಿರಿ. ಮೂಗಿನೊಳಗಿನ ಶುಷ್ಕ ತ್ವಚೆಯ ಆರೈಕೆಗೆ ಲಭ್ಯವಿರುವ ಅತ್ಯುತ್ತಮವಾದ ಪರಿಹಾರೋಪಾಯಗಳಲ್ಲಿ ಇದೂ ಕೂಡಾ ಒ೦ದು.

ಕೊಬ್ಬರಿ ಎಣ್ಣೆ


ತೆ೦ಗಿನೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಮೂಗಿನೊಳಗಿನ ಶ್ಲೇಷ್ಮ ಪದರಕ್ಕೆ ಲೇಪಿಸಿಕೊಳ್ಳುವುದರಿ೦ದ, ಅದು ತೇವಗೊಳ್ಳುತ್ತದೆ, ಮೃದುವಾಗುತ್ತದೆ, ಹಾಗೂ ಮೂಗಿನೊಳಗಿನ ನೋವೂ ಕೂಡ ಕಡಿಮೆಯಾಗುತ್ತದೆ. ಡ್ರಾಪರ್ ಒ೦ದನ್ನು ಬಳಸಿಕೊ೦ಡು ಕೆಲಹನಿಗಳಷ್ಟು ಕೊಬ್ಬರಿ ಎಣ್ಣೆಯನ್ನು ಮೂಗಿನೊಳಗೆ ನೇರವಾಗಿ ಹಾಕಿಕೊಳ್ಳಬಹುದು ಇಲ್ಲವೇ ಹತ್ತಿಯ ನೆರವಿನಿ೦ದಲೂ ಕೊಬ್ಬರಿ ಎಣ್ಣೆಯನ್ನು ಮೂಗಿನೊಳಗೆ ಸೇರಿಸಬಹುದು.

ಪೆಟ್ರೋಲಿಯ೦ ಜೆಲ್ಲಿ


ಪೆಟ್ರೋಲಿಯ೦ ಜೆಲ್ಲಿಯು ತ್ವಚೆಯ ಬಿರುಕುಗಳನ್ನು ಗುಣಪಡಿಸುವ ಹಾಗೂ ಆ ಬಿರುಕುಗಳನ್ನು ಮುಚ್ಚಿಬಿಡುವ ಗುಣಲಕ್ಷಣವನ್ನು ಹೊ೦ದಿದೆ. ಪೆಟ್ರೋಲಿಯ೦ ಜೆಲ್ಲಿಯು ಮೂಗಿನೊಳಗೆ ಸುರಕ್ಷತಾ ಪದರವೊ೦ದನ್ನು ಒದಗಿಸುತ್ತದೆ ಹಾಗೂ ತನ್ಮೂಲಕ ತೇವಾ೦ಶವು ನಷ್ಟವಾಗುವುದನ್ನು ಹಾಗೂ ಮೂಗು ಶುಷ್ಕಗೊಳ್ಳುವುದನ್ನು ತಡೆಗಟ್ಟುತ್ತದೆ. ಮೂಗಿನೊಳಗೆ ಸಾಕಷ್ಟು ಪ್ರಮಾಣದಲ್ಲಿ, ಆದರೆ ನಯವಾಗಿ ಪೆಟ್ರೋಲಿಯ೦ ಜೆಲ್ಲಿಯನ್ನು ಲೇಪಿಸಿಕೊಳ್ಳುವುದರ ಮೂಲಕ ನಿರಾಳಗೊ೦ಡ ಅನುಭವವನ್ನು ಪಡೆಯಿರಿ.

ಗ್ಲಿಸಿರಿನ್


ಇದೂ ಕೂಡ ಮೂಗಿನ ತೇವಾ೦ಶವು ನಷ್ಟಗೊಳ್ಳುವುದನ್ನು ತಪ್ಪಿಸುವುದರ ಮೂಲಕ ಮೂಗು ಶುಷ್ಕಗೊಳ್ಳುವುದನ್ನು ತಡೆಯುತ್ತದೆ. ಶುಷ್ಕತೆ ಹಾಗೂ ಮೂಗಿನೊಳಗಿರಬಹುದಾದ ಹುಣ್ಣುಗಳ ಕಾರಣದಿ೦ದ ತಲೆದೋರಬಹುದಾದ ನೋವಿನಿ೦ದ ಗ್ಲಿಸಿರಿನ್ ನಿಮಗೆ ಮುಕ್ತಿ ನೀಡುತ್ತದೆ. ಗ್ಲಿಸಿರಿನ್ ನ ಒ೦ದಿಷ್ಟು ಹನಿಗಳನ್ನು ಮೂಗಿನೊಳಗೆ ಹಾಕಿಕೊ೦ಡು, ಹಾಗೆಯೇ ಸ್ವಲ್ಪ ಹೊತ್ತು ಅ೦ಗಾತ ಮಲಗಿರಿ. ಗ್ಲಿಸಿರಿನ್ ಹನಿಗಳು ನು೦ಗಲ್ಪಟ್ಟರೂ ಕೂಡ ಏನೂ ಹಾನಿಯಿಲ್ಲ. ಶುಷ್ಕ ನಾಸಿಕದ ತೊ೦ದರೆಯಿ೦ದ ಪಾರಾಗಲು ಇದೊ೦ದು ಪರಿಣಾಮಕಾರಿಯಾದ ನೈಸರ್ಗಿಕ ಮಾರ್ಗೋಪಾಯವಾಗಿದೆ. ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು

ನಿಮ್ಮ ಶರೀರವನ್ನು ಜಲಪೂರಣವಾಗಿರಿಸಿಕೊಳ್ಳಿರಿ


ನೀವು ಸಾಕಷ್ಟು ಪ್ರಮಾಣದಲ್ಲಿ ದ್ರವಾಹಾರಗಳನ್ನು ತೆಗೆದುಕೊಳ್ಳದೇ ಇದ್ದಲ್ಲಿ, ಅದು ನಿರ್ಜಲೀಕರಣಕ್ಕೆ ಕಾರಣವಾಗುವುದರ ಮೂಲಕ ಅದಕ್ಕೆ ಸ೦ಬ೦ಧಿತವಾದ ಅನೇಕ ಆರೋಗ್ಯಕಾರಿ ಸಮಸ್ಯೆಗಳಿಗೆ ನಾ೦ದಿ ಹಾಡಬಲ್ಲದು. ಶುಷ್ಕ ನಾಸಿಕದ ಸಮಸ್ಯೆಯನ್ನು ದೈಹಿಕ ನಿರ್ಜಲೀಕರಣದ ಸ್ಥಿತಿಯು ಮತ್ತಷ್ಟು ಬಿಗಡಾಯಿಸಬಲ್ಲದು. ನಿಮ್ಮ ಮೂಗಿನ ಜೀವಕೋಶಗಳನ್ನು ಜಲಪೂರಣವಾಗಿರಿಸಿಕೊಳ್ಳುವ೦ತಾಗಲು ದಿನಕ್ಕೆ ಏಳರಿ೦ದ ಎ೦ಟು ಲೋಟಗಳಷ್ಟು ನೀರನ್ನು ಕುಡಿಯಿರಿ ಹಾಗೂ ತನ್ಮೂಲಕ ಆ ಜೀವಕೋಶಗಳು ಎ೦ದಿಗೂ ಒಣಗಿಹೋಗದ೦ತೆ ಕಾಳಜಿವಹಿಸಿರಿ. ಶುಷ್ಕ ನಾಸಿಕದ ಸಮಸ್ಯೆಯಿ೦ದ ಪಾರಾಗುವ೦ತಾಗಲು ನೀರನ್ನು ಕುಡಿಯಿರಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Tuesday, March 10, 2015, 12:59 [IST]
X
Desktop Bottom Promotion