Latest Updates
-
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ!
ಪೋಷಕಾಂಶಗಳ ಆಗರ ಕೆಂಪು ಕೆಂಪಾದ ಬೀಟ್‍ರೂಟ್
ಬಹುಶಃ ನೀವು ಬೀಟ್‍ರೂಟ್‌ನಲ್ಲಿ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳ ಕುರಿತು ತಿಳಿದುಕೊಂಡಿರುತ್ತೀರಿ. ಇದೊಂದು ಅತ್ಯಂತ ಪೋಷಕಾಂಶಗಳಿಂದ ಕೂಡಿದ, ರುಚಿಯಾದ ತರಕಾರಿಯಾಗಿರುತ್ತದೆ. ಬೀಟ್‍ರೂಟ್ ರಕ್ತಹೀನತೆಯಿಂದ ಬಳಲುವವರಿಗೆ ಹೇಳಿ ಮಾಡಿಸಿದ ಮನೆ ಮದ್ದಾಗಿರುತ್ತದೆ. ಇದರಲ್ಲಿ ಫೋಲಿಕ್ ಆಮ್ಲವು ಅಧಿಕ ಪ್ರಮಾಣದಲ್ಲಿದ್ದು. ನಿಮ್ಮ ದೇಹದಲ್ಲಿರುವ ಹಿಮೊಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ ಮತ್ತು ರಕ್ತವನ್ನು ಶುದ್ಧಿಗೊಳಿಸುತ್ತದೆ.
ಬೀಟ್‌ರೂಟ್‌ನಲ್ಲಿ ಖನಿಜಗಳು ಅಂದರೆ ಪೊಟಾಶಿಯಂ ಮತ್ತು ಮೆಗ್ನಿಷಿಯಂಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಹೃದಯಕ್ಕೆ ಮತ್ತು ಸ್ನಾಯುಗಳಿಗೆ ತುಂಬಾ ಒಳ್ಳೆಯದು. ಜೊತೆಗೆ ಇದರಲ್ಲಿ ನಾರಿನಂಶವು ಸಹ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ತೂಕವನ್ನು ಕಳೆದುಕೊಳ್ಳುವವರಿಗೆ ಮತ್ತು ಮಲಬದ್ಧತೆ ಇರುವವರಿಗೆ ಒಳ್ಳೆಯದು. ಚಮತ್ಕಾರಿಕ ಬೀಟ್‌ರೂಟ್‌ನಲ್ಲಿ ಅಡಗಿದೆ ಸೌಂದರ್ಯದ ಗುಟ್ಟು
ಇವುಗಳಲ್ಲಿರುವ ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಗಳು ನಿಮ್ಮ ಆರೋಗ್ಯಕರವಾದ ಮೂಳೆಗಳಿಗೆ ಮತ್ತು ದೇಹದ ಇತರೆ ಪ್ರಕ್ರಿಯೆಗಳಿಗೆ ನೆರವನ್ನು ನೀಡುತ್ತದೆ. ಬೀಟ್‍ರೂಟ್‌ನಲ್ಲಿರುವ ವಿಟಮಿನ್‌ಗಳು, ಅದರಲ್ಲಿಯೂ ಪ್ರಮುಖವಾಗಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಬಿ ಕಾಂಪ್ಲೆಕ್ಸ್ ವಿಟಮಿನ್‌ಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ನಿಮಗೆ ಅಗತ್ಯವಾದ ದೈಹಿಕ ಶಕ್ತಿಯನ್ನು ನೀಡುತ್ತವೆ. ಇದನ್ನೆಲ್ಲಾ ಕೇಳಿದ
ಮೇಲೆ ನೀವು ಬೀಟ್‍ರೂಟ್ ಸೇವಿಸಲು ಇಲ್ಲಾ ಎಂದು ನೀವು ಹೇಳುವುದಿಲ್ಲ ಅಲ್ಲವೇ?. ಆದರೂ ಕೆಲವರಿಗೆ ಬೀಟ್‍ರೂಟ್ ರುಚಿಯು ಹಿಡಿಸುವುದಿಲ್ಲ. ಬನ್ನಿ ಬೀಟ್‍ರೂಟ್ ಸೇವಿಸಲು ಅದರ ರುಚಿಯನ್ನು ಹೇಗೆ ಆರೋಗ್ಯಕರವಾಗಿ ಹೆಚ್ಚಿಸಿಕೊಳ್ಳಬಹುದು ಎಂದು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ.

ಬೀಟ್‍ರೂಟ್ ಜ್ಯೂಸ್
ಬೀಟ್‍ರೂಟ್ ಮತ್ತು ಕಿತ್ತಳೆಯನ್ನು ಸೇರಿಸಿ ಜ್ಯೂಸ್ ಮಾಡಿಕೊಳ್ಳಿ. ಅದಕ್ಕೆ ಸ್ವಲ್ಪ ಲಿಂಬೆರಸವನ್ನು ಸಹ ಬೆರೆಸಿ ಮತ್ತು ಪುದಿನಾ ಎಲೆಗಳಿಂದ ಅಲಂಕರಿಸಿಕೊಳ್ಳಿ. ಈ ರೀತಿ ನೀವು ಬೀಟ್‍ರೂಟ್ ಜ್ಯೂಸನ್ನು ಸೇವಿಸಬಹುದು. ಇದು ಆರೋಗ್ಯಕರವು ಹೌದು ಮತ್ತು ರುಚಿಕರವು ಹೌದು.

ಬೀಟ್‍ರೂಟ್ ಹಲ್ವಾ
ಸ್ವಲ್ಪ ಬೀಟ್‍ರೂಟ್ ಅನ್ನು ರುಬ್ಬಿಕೊಂಡು, ಅದನ್ನು ಆಲೀವ್ ಎಣ್ಣೆಯಲ್ಲಿ ಉರಿದುಕೊಳ್ಳಿ. ಇದಕ್ಕೆ ಗೋಡಂಬಿ, ತುರಿದ ತೆಂಗಿನ ಕಾಯಿ ಮತ್ತು ಕಾಯಿಸಿ ಗಟ್ಟಿಗೊಳಿಸಿದ ಹಾಲನ್ನು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ. ಇದನ್ನು ಮತ್ತಷ್ಟು ಬೇಯಿಸಿ, ಹಲ್ವಾ ಮಾಡಿಕೊಳ್ಳಿ. ಬಿಸಿಯಿರುವಾಗಲೇ ಸೇವಿಸಿ. ಇದು ಸಹ ಬೀಟ್‍ರೂಟ್ ಸೇವಿಸಲು ಆರೋಗ್ಯಕರವಾದ ಮಾರ್ಗವಾಗಿರುತ್ತದೆ.

ಬೀಟ್‍ರೂಟ್ ರಾಯಿತ
ಬೀಟ್‍ರೂಟ್ ಸೇವಿಸಲು ಮತ್ತಷ್ಟು ರುಚಿಕರವಾದ ಮಾರ್ಗಗಳು ಇರುತ್ತವೆ. ಅದರಲ್ಲಿ ಬೀಟ್‍ರೂಟ್ ರಯಿತಾ ಸಹ ಒಂದು. ಮೊದಲು ಸ್ವಲ್ಪ ಚಾಟ್ ಪೌಡರ್ ಮತ್ತು ಮೆಣಸಿನ ಪುಡಿಯನ್ನು ಮೊಸರಿನ ಜೊತೆಗೆ ಬೆರೆಸಿಕೊಳ್ಳಿ. ತದನಂತರ ಬೀಟ್‍ರೂಟ್ ಅನ್ನು ರುಬ್ಬಿಕೊಳ್ಳಿ, ಇನ್ನು ಮೊಸರು ಮತ್ತು ಬಾಳೆಹಣ್ಣಿನ ತುಂಡುಗಳ ಜೊತೆಗೆ ಬೆರೆಸಿ. ತಾಜಾ ಕೊತ್ತಂಬರಿ ಎಲೆಗಳಿಂದ ಇದನ್ನು ಅಲಂಕರಿಸಿ.

ಬೀಟ್‍ರೂಟ್ ಫ್ರೈ
ಬೀಟ್‍ರೂಟ್ ಅನ್ನು ಸ್ವಲ್ಪ ನೀರಿನಲ್ಲಿ ಬೇಯಿಸಿ, ಆ ನೀರು ಸಂಪೂರ್ಣವಾಗಿ ಆವಿಯಾಗುವವರೆಗೆ ಕಾಯಿಸಿ. ಆಲೂಗಡ್ಡೆ, ಬೆಳ್ಳುಳ್ಳಿ, ಜೀರಿಗೆ ಮತ್ತು ಸ್ವಲ್ಪ ಸೋಯಾ ಸಾಸ್ ತೆಗೆದುಕೊಳ್ಳಿ. ಅದನ್ನು ಬೀಟ್‍ರೂಟ್ ಮತ್ತು ಆಲೀವ್ ಎಣ್ಣೆಯ ಜೊತೆಗೆ ಉರಿದುಕೊಳ್ಳಿ ಮತ್ತು ಮೇಲೆ ಹೇಳಿದ ಉರಿದುಕೊಂಡ ಮಿಶ್ರಣವನ್ನು ಇದಕ್ಕೆ ಬೆರೆಸಿ. ಎಳ್ಳನ್ನು ಇದರ ಮೇಲೆ ಅಲಂಕಾರಕ್ಕೆ ಚಿಮುಕಿಸಿಕೊಂಡು, ಬಡಿಸಿ.

ಬೀಟ್‍ರೂಟ್-ಫ್ರೂಟ್ ಕ್ರೀಮ್
ಸ್ವಲ್ಪ ಅನಾನಸ್, ಸೇಬು, ಪಿಯರ್ ಮತ್ತು ಸೀಬೆಯಂತಹ ಹಣ್ಣುಗಳನ್ನು ತೆಗೆದುಕೊಳ್ಳಿ. ಬೀಟ್‍ರೂಟ್ ತುಂಡುಗಳನ್ನು 10 ನಿಮಿಷ ನಿಂಬೆರಸದಲ್ಲಿ ಅದ್ದಿಕೊಳ್ಳಿ. ಅದನ್ನು ಈ ಹಣ್ಣಿನ ತುಂಡುಗಳ ಜೊತೆಗೆ ಬೆರೆಸಿಕೊಳ್ಳಿ. ಇದರ ಮೇಲೆ ಸ್ವಲ್ಪ ಹಣ್ಣಿನ ಕ್ರೀಮನ್ನು ಹಾಕಿಕೊಳ್ಳಿ. ಈ ಬಗೆಯಲ್ಲಿ ಸಹ ಬೀಟ್‍ರೂಟ್ ಅನ್ನು ಸೇವಿಸಿ

ಬೀಟ್‍ರೂಟ್ ಕುಕೀಸ್
ಹಾಲು, ಬೇಕಿಂಗ್ ಪುಡಿ, ಸಂಸ್ಕರಿಸಿದ ಹಿಟ್ಟು, ವೆನಿಲ್ಲಾ ಎಸ್ಸೆನ್ಸ್, ಕೊಕೊ ಪುಡಿ, ಸಕ್ಕರೆಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಅದನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಈಗ ಈ ಪೇಸ್ಟ್ ಅನ್ನು ಮೇಲೆ ಹೇಳಿದ ಮಿಶ್ರಣದ ಬೆರೆಸಿಕೊಳ್ಳಿ. ನಂತರ ಅದನ್ನು 20 ನಿಮಿಷ ಬೇಕ್ ಮಾಡಿ.

ಬೀಟ್‍ರೂಟ್ ಉಪ್ಪಿನಕಾಯಿ
ಇದೊಂದು ದೀರ್ಘಕಾಲ ಇಡಬಹುದಾದ ಆಹಾರ ಪದಾರ್ಥವಾಗಿದೆ. ಬೀಟ್‍ರೂಟ್ ಅನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಇದನ್ನು ಆಪಲ್ ಸಿಡೆರ್ ವಿನಿಗರ್‌ನಲ್ಲಿ ಹಾಕಿಡಿ, ಜೊತೆಗೆ ಸಾಸಿವೆ, ಆಲೀವ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕೆಂಪು ಮೆಣಸಿನಕಾಯಿಯನ್ನು ಸೇರಿಸಿ. ಇದನ್ನು ಒಂದು ಬಾಟಲಿಯಲ್ಲಿ ಹಾಕಿ, 10-15 ದಿನಗಳ ಕಾಲ ನೆನೆಯಲು ಬಿಡಿ.

ಬೀಟ್‍ರೂಟ್ ಮಿಲ್ಕ್ ಶೇಖ್
ಬೀಟ್‍ರೂಟ್ ಅನ್ನು ಬಾಳೆಹಣ್ಣು, ಸೇಬು ಜೊತೆಗೆ ಸೇರಿಸಿ ಸಣ್ಣ ಸಣ್ಣ ತುಣುಕುಗಳಾಗಿ ಮಾಡಿಕೊಳ್ಳಿ. ಇವುಗಳನ್ನು ಹಾಲು ಮತ್ತು ಅರ್ಧ ಕಪ್ ಯೋಗರ್ಟ್ ಜೊತೆಗೆ ಬೆರೆಸಿ. ನಂತರ ಇದನ್ನು ಮೃದುವಾದ ಮಿಲ್ಕ್ ಶೇಖ್ ಆಗಿ ತಯಾರಿಸಿಕೊಳ್ಳಿ. ಇದು ಸಹ ಬೀಟ್‍ರೂಟ್ ಸೇವಿಸಲು ಹೇಳಿ ಮಾಡಿಸಿದ ಮಾರ್ಗವಾಗಿರುತ್ತದೆ.



Click it and Unblock the Notifications