Latest Updates
-
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ! -
IMD ಮಳೆ ಅಲರ್ಟ್: ಸಿಡಿಲು-ಮಳೆಯಿಂದ ಪಾರಾಗಲು ಈ ನಿಯಮ ಪಾಲಿಸಿ, ಮನೆಯಲ್ಲೇ ಫಿಟ್ ಆಗಿರಿ
ಮಿಶ್ರ ಆಹಾರ ಪದ್ಧತಿ ಅನುಸರಿಸಿ, ಆರೋಗ್ಯ ವೃದ್ಧಿಸಿ
ಆಹಾರವು ನಮ್ಮ ದೇಹಕ್ಕೆ ಅತ್ಯಗತ್ಯವಾಗಿರುವ ಇಂಧನದಂತೆ ಕಾರ್ಯನಿರ್ವಹಿಸುತ್ತಿದ್ದು ಈ ಇಂಧನವು ನಿಖರವಾದ ಪ್ರೋಟೀನ್ ಮತ್ತು ವಿಟಮಿನ್ಗಳನ್ನು ಒಳಗೊಂಡಿದ್ದರೆ ಮಾತ್ರವೇ ಅದೊಂದು ಸಂಪೂರ್ಣ ಶಕ್ತಿ ಎಂದೆನಿಸುತ್ತದೆ. ಕೆಲವೊಮ್ಮೆ ಎರಡು ಆಹಾರಗಳನ್ನು ಸೇರಿಸಿದಾಗ ಇನ್ನಷ್ಟು ಸಂಪೂರ್ಣ ಶಕ್ತಿ ನಮಗೆ ದೊರಕುತ್ತದೆ. ಕೆಲವೊಂದು ಆಹಾರ ಪದಾರ್ಥಗಳು ಇಂತಹ ಮಿಶ್ರ ಅಂಶಗಳನ್ನು ಹೊಂದಿ ನಮಗೆ ಸಾಕಷ್ಟು ರೋಗನಿರೋಧಕ ಶಕ್ತಿಯನ್ನು ನೀಡುವಲ್ಲಿ ಕಾರಣವಾಗಿರುತ್ತವೆ.
ಆಹಾರಗಳಲ್ಲಿ ಮಿಳಿತಗೊಂಡಿರುವ ನ್ಯೂಟ್ರೀನ್ಗಳನ್ನು ನಮ್ಮ ದೇಹವು ಹೀರಿಕೊಂಡಾಗ ದೇಹಕ್ಕೆ ಬೇಕಾದ ಶಕ್ತಿ ಪೂರೈಕೆಯಾಗುವುದರ ಜೊತೆಗೆ ಆಹಾರಗಳಲ್ಲಿರುವ ವಿಟಮಿನ್ ಸಿ ಇತರ ಆಹಾರಗಳಲ್ಲಿರುವ ಪ್ರೊಟೀನ್ಗಳನ್ನು ಹೀರಿಕೊಳ್ಳುವಲ್ಲಿ ಸಹಕಾರವನ್ನು ನೀಡುತ್ತವೆ, ಅಲ್ಲದೆ ಆಹಾರಗಳನ್ನು ಮಿಶ್ರ ಮಾಡಿ ಸೇವಿಸುವುದೂ ಕೂಡ ಆರೋಗ್ಯವನ್ನು ವೃದ್ಧಿಸುವ ನ್ಯೂಟ್ರೀನ್ಗಳ ಪೂರೈಕೆಗೆ ಕಾರಣವಾಗುತ್ತದೆ. ಇಂದಿನ ಲೇಖನದಲ್ಲಿ ಆಹಾರದಲ್ಲಿರುವ ಪೋಷಕಾಂಶಗಳನ್ನು ವೃದ್ಧಿಸುವ ಕೆಲವೊಂದು ಮಿಶ್ರ ಆಹಾರ ಪದ್ಧತಿಗಳ ವಿವರಗಳನ್ನು ನೀಡುತ್ತಿದ್ದು ದೇಹದ ಆರೋಗ್ಯವನ್ನು ಇವುಗಳು ಹೇಗೆ ಸುಧಾರಿಸುತ್ತದೆ ಎಂಬುದನ್ನು ನಿಮಗೆ ನೋಡಬಹುದಾಗಿದೆ. ಒಂದೇ ಮಾದರಿಯ ಆಹಾರ ಸೇವನೆ ಮಾಡುವುದಕ್ಕಿಂತಲೂ ಅದನ್ನು ಇನ್ನೊಂದು ಆಹಾರದೊಂದಿಗೆ ಸೇರಿಸಿ ಸೇವಿಸುವುದರಿಂದ ನಿಮಗೆ ಅದ್ಭುತ ಪ್ರಯೋಜನಗಳನ್ನು ಕಂಡು ಕೊಳ್ಳಬಹುದಾಗಿದೆ.

ಕಾಳು ಮೆಣಸು ಮತ್ತು ಗ್ರೀನ್ ಟೀ
ದೇಹದ ತೂಕವನ್ನು ಇಳಿಸುವ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವನ್ನು ಹೊಂದಿರುವ ಗ್ರೀನ್ ಟೀಯನ್ನು ಕಾಳುಮೆಣಸಿನೊಂದಿಗೆ ಸೇರಿಸಿಕೊಂಡಾಗ ಅದ್ಭುತ ಪ್ರಯೋಜನಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಕಾಳುಮೆಣಸು ಒಂದು ಅನನ್ಯ ರುಚಿ ಮತ್ತು ಪರಿಮಳವನ್ನು ನೀಡುವುದರಿಂದ ಗ್ರೀನ್ ಟೀಯೊಂದಿಗೆ ಇದನ್ನು ಬೆರೆಸಿ ಸೇವಿಸಬಹುದಾಗಿದೆ. ಎಪಿಗ್ಯಾಲೊಕ್ಟೇಶನ್ -3 ಗ್ಯಾಲೇಟ್ (ಇಜಿಸಿಜಿ) ನಂತಹ ಉತ್ಕರ್ಷಣ ನಿರೋಧಕ ಹೀರುವಿಕೆಯನ್ನು ಈ ಮಿಶ್ರಣವು ಹೊಂದಿರುವುದರಿಂದ ದೇಹಕ್ಕೆ ಇದು ಅತ್ಯುತ್ತಮ ಎಂದೆನಿಸಿದೆ.

ಟೊಮೇಟೊ ಮತ್ತು ಆಲೀವ್ ಎಣ್ಣೆ
ಟೊಮೇಟೊ ಲಿಕೊಪಿನ್ ಎಂಬ ಉತ್ಕರ್ಷಣ ನಿರೋಧಿ ಅಂಶವನ್ನು ಹೊಂದಿದೆ. ಈ ಖನಿಜವು ಕೊಬ್ಬನ್ನು ಕರಗಿಸುವಂತಿದ್ದು ಕೊಬ್ಬಿನ ಸರಿಯಾದ ಹೀರುವಿಕೆಗೆ ಸಹಾಯ ಮಾಡುತ್ತದೆ. ಟೊಮೇಟೊಗಳನ್ನು ನೀವು ಆಲೀವ್ ಎಣ್ಣೆಯೊಂದಿಗೆ ಸೇವಿಸಿದಾಗ ಆಲೀವ್ ಎಣ್ಣೆಯಲ್ಲಿರುವ ಅಗತ್ಯ ಕೊಬ್ಬಿನ ಏಸಿಡ್ಗಳಾ ಒಮೇಗಾ - 3 ಮತ್ತು ಒಮೇಗಾ - 6 ಕೊಬ್ಬಿನ ಆಸಿಡ್ಗಳನ್ನು ದೇಹವು ಉತ್ತಮವಾಗಿ ಹೀರಿಕೊಳ್ಳುತ್ತದೆ.

ಕೋಸುಗಡ್ಡೆಯೊಂದಿಗೆ ಟೊಮೇಟೊ
ಲೈಕೊಪೇನ್ಗಳನ್ನು ಯಥೇಚ್ಛವಾಗಿ ಹೊಂದಿರುವುದಲ್ಲದೆ, ಟೊಮೇಟೊಗಳು ವಿಟಮಿನ್ ಸಿ, ಎ, ಇ ಮತ್ತು ಬಿ ಹಾಗೆಯೇ ಲ್ಯೂಟೀನ್ ಮತ್ತು ಜಿಯಾಕ್ಸಾಂಥಿನ್ಗಳನ್ನು ಒಳಗೊಂಡಿದೆ. ಕೋಸುಗಡ್ಡೆ ವಿಟಮಿನ್ ಕೆ ಯನ್ನು ಹೊಂದಿದೆ ಅಂತೆಯೇ ಫೊಲೇಟ್ ಮತ್ತು ಕ್ಯಾನ್ಸರ್ ವಿರೋಧಿ ಅಂಶಗಳನ್ನು ಒಳಗೊಂಡಿದೆ. ಈ ಎರಡೂ ತರಕಾರಿಗಳನ್ನು ನೀವು ಒಟ್ಟಿಗೆ ಸೇವಿಸಿದಾಗ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವು ಈ ಎರಡೂ ತರಕಾರಿಗಳಿಂದ ಹೆಚ್ಚು ಕಡಿಮೆ 50 ಶೇಕಡಾದಷ್ಟು ಅಧಿಕವಾಗುತ್ತದೆ.

ಬಾದಾಮಿಯೊಂದಿಗೆ ಕೇಲ್
ಕೇಲ್ ಮ್ಯಾಂಗನೀಸ್, ತಾಮ್ರ, ಫೈಬರ್, ಕ್ಯಾಲ್ಶಿಯಮ್ ಮತ್ತು ಪೊಟಾಶಿಯಮ್, ಬಿ ವಿಟಮಿನ್ಗಳು ಮತ್ತು ವಿಟಮಿನ್ ಸಿ, ಇ, ಎ ಮತ್ತು ಕೆ ಯಿಂದ ಯಥೇಚ್ಛವಾಗಿದೆ. ಬಾದಾಮಿಯನ್ನು ಕೇಲ್ನೊಂದಿಗೆ ನೀವು ಸೇವಿಸಿದಾಗ, ಬಾದಾಮಿಗಳಲ್ಲಿರುವ ಉತ್ಕರ್ಷಣ ನಿರೋಧಕ ಅಂಶಗಳು ಕೇಲ್ನಲ್ಲಿರುವ ನ್ಯೂಟ್ರೀನ್ಗಳ ಹೀರುವಿಕೆಗೆ ಸಹಾಯ ಮಾಡುತ್ತದೆ. ಮಿಶ್ರ ಮಾಡಿ ಸೇವಿಸುವ ಉತ್ತಮ ಆಹಾರ ಎಂಬುದಾಗಿ ಇವುಗಳನ್ನು ಕರೆಯಬಹುದಾಗಿದೆ.

ಡಾರ್ಕ್ ಚಾಕಲೇಟ್ನೊಂದಿಗೆ ಸೇಬು
ಸೇಬಿನಲ್ಲಿರುವ ಹೃದಯದ ಆರೋಗ್ಯ ಅಂಶಗಳನ್ನು ಡಾರ್ಕ್ ಚಾಕಲೇಟ್ಸ್ ಹೆಚ್ಚಿಸುತ್ತವೆ. ಡಾರ್ಕ್ ಚಾಕಲೇಟ್ನೊಂದಿಗೆ ಸೇಬನ್ನು ನೀವು ಸೇವಿಸಿದಾಗ ಹೃದಯಾಘಾತದಂತಹ ಮರಣ ಅಪಾಯಗಳು ಕಡಿಮೆಯಾಗುತ್ತದೆ. ಡಾರ್ಕ್ ಚಾಕಲೇಟ್ನಲ್ಲಿ ಕ್ಯಾಟಶೀನ್ಸ್ ಎಂಬ ಉತ್ಕರ್ಷಣ ನಿರೋಧಿ ಅಂಶವು ಯಥೇಚ್ಛವಾಗಿರುವುದರಿಂದ ಆರೋಗ್ಯಪೂರ್ಣ ಹೃದಯವನ್ನು ಇದು ದಯಪಾಲಿಸುತ್ತದೆ.

ಕಪ್ಪು ಬೀನ್ಸ್ನೊಂದಿಗೆ ಕೆಂಪು ಬೆಲ್ ಪೆಪ್ಪರ್
ಕಪ್ಪು ಬೀನ್ಸ್ನಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು ದೇಹಕ್ಕೆ ಇದನ್ನು ಹೀರಿಕೊಳ್ಳುವಲ್ಲಿ ಕಷ್ಟಸಾಧ್ಯವಾಗುತ್ತದೆ. ಅದಾಗ್ಯೂ, ಕೆಂಪು ಬೆಲ್ ಪೆಪ್ಪರ್ ಅನ್ನು ಕಪ್ಪು ಬೀನ್ಸ್ನೊಂದಿಗೆ ನೀವು ಸೇವಿಸಿದಾಗ ವಿಟಮಿನ್ ಸಿ ಅಂಶವು ಹೆಚ್ಚು ಕಡಿಮೆ 6 ಬಾರಿ ಕಬ್ಬಿಣವನ್ನು ದೇಹಕ್ಕೆ ಪೂರೈಸುವಲ್ಲಿ ನೆರವಾಗುತ್ತದೆ.



Click it and Unblock the Notifications
