Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅತಿಯಾಗಿ ಹಣ್ಣು ತಿನ್ನೋದು ಕೂಡ ಆರೋಗ್ಯಕ್ಕೆ ಡೇಂಜರ್..!
ಉತ್ತಮವಾದ ಮತ್ತು ಆರೋಗ್ಯಕರವಾದ ಆಹಾರ ಸೇವಿಸೋದು ಅಂದ್ರೆ ಹಣ್ಣು ತರಕಾರಿಗಳನ್ನು ತಮ್ಮ ಆಹಾರದಲ್ಲಿ ಹೆಚ್ಚಾಗಿ ಬಳಸೋದು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ,. ಆದ್ರೆ ಎಷ್ಟು? ಅನ್ನೋ ಪ್ರಶ್ನೆಗೆ ಉತ್ತರ ಬಹುಶ್ಯ ಹೆಚ್ಚಿನವ್ರಿಗೆ ತಿಳಿದಿರಲಿಕ್ಕಿಲ್ಲ. ಹಣ್ಣು ತರಕಾರಿ ಸೇವನೆಯೇ ಆರೋಗ್ಯಕರವಾದ ಡಯಟ್ ಅಂತ ಭಾವಿಸಿ ಅತಿಯಾಗಿ ಹಣ್ಣುಗಳನ್ನು ಮತ್ತು ಹಸಿ ತರಕಾರಿಗಳನ್ನು ಸೇವಿಸಿದ್ರೆ ಅದೂ ಕೂಡ ಆರೋಗ್ಯಕ್ಕೆ ಅಹಿತವೇ ಅನ್ನೋದು ಸಂಶೋಧನೆಗಳಿಂದ ತಿಳಿದು ಬಂದಿರುವ ಸತ್ಯ....
ಈಗಿನ ಹಣ್ಣುಗಳಲ್ಲಿ ಅತಿಯಾದ ಶುಗರ್ ಅಂಶವಿರುತ್ತೆ. ಹಿಂದೆಲ್ಲ ಆಗಿದ್ರೆ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಹಣ್ಣು ಆಯಾ ಕಾಲಕ್ಕೆ ಮಾತ್ರ ಲಭ್ಯವಿರುತ್ತಾ ಇತ್ತು. ಆದ್ರೆ ಈಗ ಹಾಗಲ್ಲ. ಎಲ್ಲಾ ಕಾಲದಲ್ಲೂ ಎಲ್ಲಾ ಹಣ್ಣುಗಳು ಹೆಚ್ಚಾಗಿ ಮಾರ್ಕೆಟ್ ನಲ್ಲಿ ಸಿಗುತ್ತೆ. ಸೀಸನಲ್ ಅಂದ್ರೆ ಕಡಿಮೆ ಬೆಲೆಗೆ ಕೈಗೆಟುಕುತ್ತೆ ಅನ್ನೋದು ಬಿಟ್ರೆ ಇಂತಹ ಹಣ್ಣು ಸಿಗೋದಿಲ್ಲ ಅಂತ ಹೇಳೋಕೆ ಆಗಲ್ಲ.
ಅಷ್ಟೇ ಅಲ್ಲ ಪೆಸ್ಟಿಸೈಡ್ಸ್ ಗಳನ್ನು ಬಳಸಿ ಕೂಡ ಆಹಾರ ಪದಾರ್ಥಗಳನ್ನು ಬೆಳೆಯಲಾಗ್ತಾ ಇದೆ. ಹಾಗಾಗಿ ಹೆಚ್ಚಿನ ಹಣ್ಣುಗಳಲ್ಲಿ ಕೆಮಿಕಲ್ ಮಿಶ್ರಣವ ಇದ್ದೇ ಇರುತ್ತೆ. ಇನ್ನು ಈಗಿನ ಹಣ್ಣುಗಳು ಅಗತ್ಯಕ್ಕಿಂತ ಅಥ್ವಾ ಹಿಂದಿನ ಕಾಲಘಟ್ಟದಲ್ಲಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವನ್ನು ಒಳಗೊಂಡಿರುತ್ತೆ ಅನ್ನೋದು ಅಧ್ಯಯನಕಾರರ ಅಭಿಪ್ರಾಯ. ಇದು ಕೂಡ ಅತಿಯಾಗಿ ಹಣ್ಣು ಸೇವಿಸುವವರಿಗೆ ಅಲ್ಪ ಪ್ರಮಾಣದ ದುಷ್ಪರಿಣಾಮವನ್ನು ಉಂಟು ಮಾಡುತ್ತೆ ಅಂತ ಹೇಳಲಾಗುತ್ತೆ.

ಒಂದು ದಿನಕ್ಕೆ ಎಷ್ಟು ಹಣ್ಣು ತಿನ್ನಬೇಕು?
ಒಬ್ಬ ಸಾಮಾನ್ಯ ತೂಕದ ಮನುಷ್ಯ ದಿನವೊಂದಕ್ಕೆ ಎರಡು ಬೌಲ್ ನಷ್ಟು ಹಣ್ಣು ಸೇವಿಸಿದ್ರೆ ಸಾಕಾಗುತ್ತಂತೆ. ಅದಕ್ಕಿಂತ ಹೆಚ್ಚು ಸೇವಿಸುವುದಾದ್ರೆ ಇತರೆ ಆಹಾರ ಪದಾರ್ಥಗಳ ಸೇವನೆಯಲ್ಲಿ ಹಿಡಿತವಿರಬೇಕು. ಸರಿಯಾದ ಡಯಟ್ ಫಾಲೋ ಮಾಡ್ಬೇಕು. ಇನ್ನು ಒಂದೇ ರೀತಿಯ ಹಣ್ಣು ತಿನ್ನುವುದಕ್ಕಿಂತ ಬೇರೆಬೇರೆ ರೀತಿಯ ಮಿಕ್ಸ್ಡ್ ಫ್ರೂಟ್ ಬಾಲ್ ಸೇವಿಸೋದು ಒಳಿತು. ಒಂದು ವೇಳೆ ನೀವು ಆಹಾರದ ಜೊತೆಗೆ ಎರಡು ಬೌಲ್ ಗಿಂತಲೂ ಹೆಚ್ಚು ಹಣ್ಣು ಸ್ವೀಕರಿಸಿದ್ದಲ್ಲಿ ಗಳಿಸಿದ ಕ್ಯಾಲೋರಿಯನ್ನು ಕರಗಿಸುವ ಕೆಲಸವನ್ನು ಮಾಡಲೇಬೇಕು. ಇಲ್ಲ ಅಂದ್ರೆ ದೇಹಕ್ಕೆ ಸಕ್ಕರೆಯ ಅಂಶ ಅಧಿಕವಾಗುವ ಸಾಧ್ಯತೆ ಇರುತ್ತಂತೆ. .

ಅತಿಯಾಗಿ ಹಣ್ಣು ತಿನ್ನುವವರ ಸಮಸ್ಯೆಗಳು
ಮೊದಲನೆಯದಾಗಿ ಪ್ರತಿ ದಿನ ತಿಂಡಿ ತಿನ್ನುವ ಬದಲು ಕೇವಲ ಹಣ್ಣು ತಿಂದೇ ಇರುವವರಾದ್ರೆ, ತಿಂದ ಕ್ಷಣಕ್ಕೆ ನೀವು ತೃಪ್ತರಾಗಿರ್ತೀರಿ ಅಷ್ಟೇ. ಆದ್ರೆ ಕೆಲವು ಘಂಟೆಗಳ ನಂತ್ರ ನಿಮ್ಗೆ ಹಸಿವು ಹೆಚ್ಚಾಗುತ್ತೆ. ಹಣ್ಣು ಬೇಗನೆ ಜೀರ್ಣವಾಗಿ ಮತ್ತೆ ಮತ್ತೆ ಏನನ್ನಾದ್ರೂ ತಿನ್ನಬೇಕು ಅನ್ನುವ ಬಯಕೆ ಅಧಿಕವಾಗುತ್ತೆ. ಈ ಕ್ರೇವಿಂಗ್ ನಿಮ್ಮನ್ನ ಇನ್ನಷ್ಟು ಆಹಾರ ಸೇವಿಸಲು ಪ್ರೇರಣೆ ನೀಡುತ್ತೆ.

ಅತಿಯಾಗಿ ಹಣ್ಣು ತಿನ್ನುವವರ ಸಮಸ್ಯೆಗಳು
ಅದ್ರಲ್ಲೂ ಪ್ರಮುಖವಾಗಿ ಸಕ್ಕರೆ ತಿನ್ನುವ ಬಯಕೆ ಹೆಚ್ಚಿಸುತ್ತೆ. ಯಾಕಂದ್ರೆ ಹಣ್ಣುಗಳಲ್ಲಿ ಅಧಿಕವಾಗ ಪ್ರೋಟೀನ್ ಮತ್ತು ಫ್ಯಾಟ್ ಅಂಶವಿರುವುದಿಲ್ಲ. ಆದ್ರೆ ಇದ್ರಲ್ಲಿ ಫೈಬರ್ ಅಂಶವಿರುತ್ತೆ. ಇದು ಅಲ್ಪ ಪ್ರಮಾಣದಲ್ಲಿ ನಿಮಗೆ ಸಹಕಾರಿ. ಆದ್ರೆ ಇದು ರಕ್ತದ ಸಕ್ಕರೆ ಪ್ರಮಾಣವನ್ನು ನಿಯಮಿತವಾಗಿಡುವಲ್ಲಿ ಕೆಲವು ಘಂಟೆಗಳವರೆಗೆ ಮಾತ್ರ ಸಹಕಾರಿಯಾಗಿರುತ್ತೆ.

ತೂಕ ಕಳೆದುಕೊಳ್ಳಲು ಸಾಧ್ಯವಿಲ್ಲ
ಹೌದು..ನಿಮ್ಮ ಮನಸ್ಸಿನಲ್ಲಿ ನಾನು ಕೇವಲ ಹಣ್ಣು ತಿಂದು ಬದುಕ್ತಾ ಇದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಂಡು ಸ್ಲಿಮ್ ಆಗಿ ಕಂಗೊಳಿಸಿಬಿಡ್ತೀನಿ ಅನ್ನೋ ಮಹದಾಸೆ ಇರಬಹುದು. ಆದ್ರೆ ಅತಿಯಾಗಿ ಅಥವಾ ಸರಿಯಾದ ಪ್ರಮಾಣದಲ್ಲಿ ಹಣ್ಣುಗಳ ಸೇವನೆ ಇಲ್ಲದಿದ್ದರೆ ಖಂಡಿತವಾಗ್ಲೂ ನೀವು ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ..

ತೂಕ ಕಳೆದುಕೊಳ್ಳಲು ಸಾಧ್ಯವಿಲ್ಲ
ನಿಜ ಬೇರೆ ಜಂಕ್ ಫುಡ್ ಮತ್ತು ಕರಿದ ಆಹಾರ ಪದಾರ್ಥಗಳಿಗಿಂತ ಹಣ್ಣುಗಳು ಅತ್ಯಂತ
ಉತ್ತಮವಾದ ಆಹಾರವೇ. ಆದರೆ ಅತಿಯಾಗಿ ಕಾರ್ಬೋಹೈಡ್ರೇಟ್ಸ್ ಸೇವಿಸೋದ್ರಿಂದ ನಮ್ಮ ಬ್ಲಡ್ ಶುಗರ್ ಲೆವೆಲ್ ಅಧಿಕವಾಗುತ್ತೆ. ಅದು ಇನ್ಸುಲಿನ್ ನ್ನು ಟ್ರಿಗರ್ ಮಾಡುತ್ತೆ.

ಅತಿಯಾದ ಹಣ್ಣುಗಳ ಸೇವನೆ ಹೊಟ್ಟೆಯಲ್ಲಿ ಗುಳುಗುಳು ಶಬ್ಧಕ್ಕೆ ಕಾರಣವಾಗುತ್ತೆ
ಅರ್ಥಾತ್ ಅದು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತೆ. ಹಣ್ಣುಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆನಾ ಅಂತ ನೀವು ಹುಬ್ಬೇರಿಸ್ಬಹುದು.. ಆದ್ರೆ ಹಣ್ಣುಗಳು ಸಿಹಿಯಾಗಿರಲು ಕಾರಣ ಫ್ರಕ್ಟೋಸ್ ಅನ್ನೋ ಸಕ್ಕರೆಯ ಅಂಶ..ಆದ್ರೆ ಈ ಫ್ರಕ್ಟೋಸ್ ಅಂಶವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವ ಅಥವಾ ಹೀರಿಕೊಳ್ಳುವ ಸಾಮರ್ಥ್ಯ ಪ್ರತಿಯೊಬ್ಬರಿಗೂ ಇರುವುದಿಲ್ಲ.

ಅತಿಯಾದ ಹಣ್ಣುಗಳ ಸೇವನೆ ಹೊಟ್ಟೆಯಲ್ಲಿ ಗುಳುಗುಳು ಶಬ್ಧಕ್ಕೆ ಕಾರಣವಾಗುತ್ತೆ
ಅಧ್ಯಯನದ ಪ್ರಕಾರ ಶೇಕಡಾ 40 ರಷ್ಟು ಮಂದಿ ಫ್ರಕ್ಟೋಸ್ಮೆ ಲಾಸಾರ್ಪ್ಶನ್(Malabsorption) ಸಮಸ್ಯೆಯಿಂದ ಬಳಲುತ್ತಾರಂತೆ. ಹಣ್ಣುಗಳು ನಮ್ಮನ್ನ ಆಕ್ಟೀವ್ ಮಾಡುವ ಬದಲಾಗಿ ಕೆಲವೊಮ್ಮೆ ನಮ್ಮ ದೇಹದಲ್ಲಿ ಸುಮ್ಮನೆ ಕೂತು ಬ್ಯಾಕ್ಟೀರಿಯಾಗಳ ಸಹಾಯದಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟುಮಾಡುತ್ತೆ ಅನ್ನೋದು ಅಧ್ಯಯನದಿಂದ ತಿಳಿದಿರುವ ಸತ್ಯ. ಅದೇ ಕಾರಣಕ್ಕೆ ಇರಬೇಕು ಹಿಂದಿನವ್ರು ಒಂದು ಗಾದೆ ಹೇಳೋದು. ಅತಿಯಾದ್ರೆ ಅಮೃತ ಕೂಡ ವಿಷ ಅಂತ. ಯಾವುದೇ ವಿಚಾರ ಇರಲಿ ಅದು ತಿನ್ನುವುದಕ್ಕೆ ಅಥವಾ ಹಣ್ಣುಗಳಿಗೆ ಮಾತ್ರವಲ್ಲ. ಅತಿಯಾಗಿ ವರ್ತಿಸಿದ್ರೆ ಖಂಡಿತ ಅದು ದುಷ್ಪರಿಣಾಮಕ್ಕೆ ಕಾರಣವಾಗದೇ ಇರೋದಿಲ್ಲ, ಹಾಗಾಗಿ ಹೆಲ್ತಿ ಡಯಟ್ ಅನುಸರಿಸಿ ನಿಮ್ಮ ಆರೋಗ್ಯದ ಕಡೆ ಗಮನವಿರಲಿ.. ಸರ್ವೇ ಜನಃ ಸುಖಿನೋ ಭವಂತು..



Click it and Unblock the Notifications
