ಸ್ನಾಯುಗಳ ಬೆಳವಣಿಗೆಗೆ ಹೇಳಿ ಮಾಡಿಸಿದ ಹಣ್ಣುಗಳಿವು!

By Arshad

ಸ್ನಾಯುಗಳ ಬೆಳವಣಿಗೆ ಇಚ್ಛಿಸುವ ವ್ಯಕ್ತಿಗಳು (ವಿಶೇಷವಾಗಿ ದೇಹದಾರ್ಢ್ಯ ಪಟುಗಳು) ಕಾರ್ಬೋಹೈಡ್ರೇಟು ಮತ್ತು ಪ್ರೋಟೀನು ಹೆಚ್ಚಿರುವ ಆಹಾರಗಳನ್ನೇ ಹೆಚ್ಚಾಗಿ ಸೇವಿಸುತ್ತಾರೆ. ಕೋಳಿಮಾಂಸ ಮತ್ತು ಮೊಟ್ಟೆಗಳು ಇವರ ಆದ್ಯತೆಯ ಆಹಾರಗಳಾಗಿವೆ. ಆದರೆ ಸ್ನಾಯುಗಳಿಗೆ ಕೇವಲ ಪ್ರೋಟೀನು ಮಾತ್ರ ಸಾಕಾಗುವುದಿಲ್ಲ. ಇದಕ್ಕೆ ಕೆಲವು ಪೂರಕವಾದ ಇತರ ಪೋಷಕಾಂಶಗಳ ಅಗತ್ಯವೂ ಇದೆ. ಇದನ್ನು ವಿವಿಧ ಹಣ್ಣುಗಳು ಪೂರೈಸುತ್ತವೆ.

ಹಣ್ಣುಗಳಿಲ್ಲದೇ ಕೇವಲ ಕಾರ್ಬೋಹೈಡ್ರೇಟುಗಳನ್ನು ಸೇವಿಸುವುದರಿಂದ ಸ್ನಾಯುಗಳು ಸುದೃಢವಾಗುವುದಿಲ್ಲ. ಸ್ನಾಯುಗಳನ್ನು ಬೆಳೆಸಿಕೊಳ್ಳುವವರು ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೇವಲ ಸ್ನಾಯುಗಳನ್ನು ಹೆಚ್ಚಿಸುವುದರಿಂದ ಆರೋಗ್ಯ ಹೆಚ್ಚುವುದಿಲ್ಲ. ಬದಲಿಗೆ ಇಡಿಯ ಶರೀರ ಉತ್ತಮ ಆರೋಗ್ಯವನ್ನು ಹೊಂದಿದ್ದು ಆ ಬಳಿಕ ಸ್ನಾಯುಗಳು ಬೆಳೆದರೆ ಮಾತ್ರ ಒಳ್ಳೆಯದು. ಇದಕ್ಕಾಗಿ ಪ್ರೋಟೀನುಗಳ ಜೊತೆಗೇ ವಿವಿಧ ಹಣ್ಣು ಮತ್ತು ತರಕಾರಿಗಳನ್ನೂ, ಸಾಕಷ್ಟು ನೀರು, ಹಣ್ಣಿನ ರಸ ಮತ್ತು ಇತರ ನೈಸರ್ಗಿಕ ಆಹಾರಗಳನ್ನೂ ಸೇವಿಸಬೇಕು. 11 ಅತ್ಯುತ್ತಮ ಸರ್ವಕಾಲಿಕ ಫಿಟ್ನೆಸ್ ರಹಸ್ಯಗಳು

ಅಲ್ಲದೇ ಪ್ರತಿ ಹಣ್ಣಿನಲ್ಲಿಯೂ ವಿವಿಧ ಪೋಷಕಾಂಶಗಳಿರುವುದರಿಂದ ವಿವಿಧ ರೀತಿಯ ಹಣ್ಣುಗಳನ್ನು ಸೇವಿಸುವುದು ಸ್ನಾಯುಗಳ ಬೆಳವಣಿಗೆಗೆ ಪೂರಕವಾಗಿದೆ. ಕೆಳಗಿನ ಸ್ಲೈಡ್ ಶೋ ಮೂಲಕ ಯಾವ ಹಣ್ಣುಗಳು ನಿಮ್ಮ ಸ್ನಾಯುಗಳನ್ನು ಬಲಪಡಿಸಲು ನೆರವಾಗುತ್ತವೆ ಎಂಬ ಮಾಹಿತಿಯನ್ನು ನೀಡಲಾಗಿದೆ.

ಖರ್ಜೂರ

ಖರ್ಜೂರ

ಖರ್ಜೂರ ಒಂದು ಹಣ್ಣು ಆಗಿದ್ದರೂ ಮಾಂಸದ ಮೂಲಕ ಸಿಗುವ ಪ್ರೋಟೀನ್ ಈ ಹಣ್ಣಿನಿಂದಲೂ ಲಭಿಸುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ನಿತ್ಯವೂ ಕೆಲವು ಖರ್ಜೂರಗಳನ್ನು ನಿಮ್ಮ ಆಹಾರದೊಡನೆ,ಅದರಲ್ಲೂ ಊಟದ ಬಳಿಕ ಸೇವಿಸಿದರೆ ಉತ್ತಮ ಪರಿಣಾಮ ಪಡೆಯಬಹುದು.

ಕಿವಿ ಹಣ್ಣು

ಕಿವಿ ಹಣ್ಣು

ಕಿವಿಹಣ್ಣಿನಲ್ಲಿರುವ ಉತ್ತಮ ಪ್ರಮಾಣದ ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸ್ನಾಯುಗಳ ಬೆಳವಣಿಗೆಗೆ ಪೂರಕವಾಗಿದೆ. ಅಲ್ಲದೇ ಈ ಹಣ್ಣನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬು ಬಳಕೆಯಾಗುವುದರಿಂದ ಹೆಚ್ಚುವರಿ ಕೊಬ್ಬು ಕರಗುತ್ತದೆ.

ಒಣ ಪ್ಲಮ್ ಹಣ್ಣು (Prunes)

ಒಣ ಪ್ಲಮ್ ಹಣ್ಣು (Prunes)

ಕೊಂಚ ಹುಳಿಯಾಗಿರುವ ಒಣ ಪ್ಲಮ್ ಹಣ್ಣು ಸಹಾ ಆರೋಗ್ಯಕ್ಕೆ ಉತ್ತಮವಾಗಿದ್ದು ದೇಹದಾರ್ಢ್ಯತೆಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಉತ್ತಮ ಪ್ರಮಾಣದ ನಾರು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದರ ಜೊತೆಗೇ ಇದರಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಸಕ್ಕರೆಯ ಮಟ್ಟ ಆರೋಗ್ಯಕರವಾಗಿರಲು ನೆರವಾಗುತ್ತದೆ.

ಬೆಣ್ಣೆಹಣ್ಣು

ಬೆಣ್ಣೆಹಣ್ಣು

ಬೆಣ್ಣೆಹಣ್ಣು ಅಥವ ಆವೋಕಾಡೋ ಸಹಾ ಪೋಷಕಾಂಶಗಳ ಆಗರವಾಗಿದ್ದು ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ. ಆದರೆ ಇದರಲ್ಲಿ ಕಡಿಮೆ ಪ್ರಮಾಣದ ನಾರು ಇರುವುದರಿಂದ ನಾರಿನಂಶ ಹೆಚ್ಚಿರುವ ಇತರ ಆಹಾರವನ್ನೂ ಸೇವಿಸುವುದು ಅಗತ್ಯ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿರುವ ಬ್ರೋಮಿಲೈನ್ ಎಂಬ ಪೋಷಕಾಂಶ ವಿಷೇಶವಾಗಿ ಪುರುಷರಲ್ಲಿ ಟೆಸ್ಟೋಸ್ಟೆರೋನ್ ರಸದೂತದ ಹೆಚ್ಚಳಕ್ಕೆ ನೆರವಾಗುತ್ತದೆ. ಇದು ಪರೋಕ್ಷವಾಗಿ ಸ್ನಾಯುಗಳ ಬೆಳವಣಿಗೆಗೆ ಪೂರಕವಾಗಿದೆ.

ಸೇಬುಹಣ್ಣು

ಸೇಬುಹಣ್ಣು

ಸೇಬಿನಲ್ಲಿರುವ ಉತ್ತಮ ಪೋಷಕಾಂಶಗಳು ಕೊಬ್ಬನ್ನು ಕರಗಿಸುವ ಕ್ರಿಯೆಯಲ್ಲಿ ಚುರುಕು ಮುಟ್ಟಿಸುವ ಮೂಲಕ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಮತ್ತು ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತವೆ. ಇದೇ ಕಾರಣಕ್ಕೆ ದೇಹದಾರ್ಢ್ಯ ಸ್ಪರ್ಧಿಗಳು ಸೇಬುಹಣ್ಣನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

ಪೇರಲೆ ಅಥವಾ ಸೀಬೆಹಣ್ಣು

ಪೇರಲೆ ಅಥವಾ ಸೀಬೆಹಣ್ಣು

ಇದು ಹೆಚ್ಚಿನ ಪ್ರಮಾಣದಲ್ಲಿ ನೀರಿನಂಶವನ್ನು ನೀಡುವ ಮೂಲಕ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೇ ಕೊಂಚ ಪ್ರಮಾಣದಲ್ಲಿ ಪ್ರೋಟೀನುಗಳನ್ನೂ ನೀಡುತ್ತದೆ. ವ್ಯಾಯಾಮದ ಬಳಿಕ ತಿನ್ನಲು ಈ ಹಣ್ಣು ಯೋಗ್ಯವಾಗಿದೆ.

ಬ್ಲೂಬೆರ್ರಿಗಳು

ಬ್ಲೂಬೆರ್ರಿಗಳು

ಈ ಹಣ್ಣಿನಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಕೊಬ್ಬನ್ನು ಶೀಘ್ರವಾಗಿ ಕರಗಿಸಲು ನೆರವಾಗುತ್ತವೆ. ಅಲ್ಲದೇ ಸ್ನಾಯುಗಳ ಬೆಳವಣಿಗೆಗೂ ನೆರವಾಗುತ್ತವೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಈ ಹಣ್ಣಿನ ನಿಯಮಿತ ಸೇವನೆಯಿಂದ ರಕ್ತಸಂಚಾರ ಉತ್ತಮಗೊಳ್ಳುವುದು ಮತ್ತು ನೀರಿನ ಅಂಶವನ್ನು ಜೀವಕೋಶಗಳು ಪಡೆಯಲು ನೆರವಾಗುತ್ತದೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಕಲ್ಲಂಗಡಿ ಉತ್ತಮವಾದ ಆಯ್ಕೆಯಾಗಿದೆ. ಇದೇ ಗುಣ ದೇಹದ ಸ್ನಾಯುಗಳ ಬೆಳವಣಿಗೆಗೂ ನೆರವಾಗುತ್ತದೆ. ಇಂತಹ ಇನ್ನೂ ಉಪಯುಕ್ತ ಮಾಹಿತಿ ಇದ್ದಲ್ಲಿ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.

Story first published: Monday, September 7, 2015, 23:09 [IST]
X
Desktop Bottom Promotion