Latest Updates
-
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ
ಆರೋಗ್ಯಕರ ಜೀವನ ಶೈಲಿಗೆ ಆಹಾರ ಕ್ರಮ ಹೇಗಿರಬೇಕು?
ಎಲ್ಲರ ರುಚಿ - ಅಭಿರುಚಿ ವಿಭಿನ್ನವಾಗಿರುತ್ತದೆ, ಎಲ್ಲರಿಗು ಎಲ್ಲಾ ಆಹಾರ ಪದಾರ್ಥಗಳು ಇಷ್ಟವಾಗುವುದಿಲ್ಲ. ಕೆಲವರಿಗೆ ಸಿಹಿ ಎಂದರೆ ಆಗುವುದಿಲ್ಲ. ಇನ್ನೂ ಕೆಲವರಿಗೆ ಕಹಿ ಎಂದರೆ ಆಗುವುದಿಲ್ಲ. ಇನ್ನೂ ಕೆಲವರು ಖಾರ ಎಂದರೆ ದೂರ ದೂರ!. ಕೆಲವರಿಗೆ ಹಾಗಲ ಕಾಯಿ ಆಗುವುದಿಲ್ಲ ಇನ್ನೂ ಕೆಲವರಿಗೆ ಬದನೆ ಕಾಯಿ ಆಗುವುದಿಲ್ಲ. ಇದು ಅವರವರ ಇಷ್ಟ ಕಷ್ಟ ಬಿಡಿ.
ಪ್ರಕೃತಿಯಲ್ಲಿ ಹಾಲಿನಷ್ಟೇ ಕ್ಯಾಲ್ಸಿಯಂ ಅನ್ನು ಹೊಂದಿರುವ ಹಲವಾರು ಆಹಾರ ಪದಾರ್ಥಗಳು ಬಹಳಷ್ಟಿವೆ - ಮೀನು, ಒಣ ಹಣ್ಣುಗಳು, ಒಣ ಬೀನ್ಸ್, ಹಸಿರು ಸೊಪ್ಪುಗಳು ಮತ್ತು ಧಾನ್ಯಗಳಲ್ಲಿ ಕ್ಯಾಲ್ಸಿಯಂ ಇರುತ್ತದೆ. ಮೀನನ್ನು ಸೇವಿಸುವಾಗ ಅದರ ಮೂಳೆ ಅಥವಾ ಮುಳ್ಳುಗಳನ್ನು ಸಹ ಅಗಿದು ನುಂಗಿ ಏಕೆಂದರೆ ಇವುಗಳಲ್ಲಿಯೇ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇರುವುದು. ಇನ್ನೂ ಪ್ರತಿದಿನ ಬೆಳಗ್ಗೆ ಒಣ ಹಣ್ಣುಗಳನ್ನು ಮತ್ತು ಧಾನ್ಯಗಳನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಅನ್ನು ನೀವು ಪಡೆಯಬಹುದು. ಅವು ಯಾವುದು ಎಂದು ನೋಡೋಣ ಬನ್ನಿ ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು

ಕಿತ್ತಳೆ ಹಣ್ಣಿನ ರಸ
2005ರಲ್ಲಿ ದಿ ಜರ್ನಲ್ ಆಫ್ ಅಮೆರಿಕನ್ ಡಯೆಟಿಕ್ ಅಸೋಸಿಯೇಷನ್‍ರವರು ಪ್ರಕಟಿಸಿದ ಒಂದು ಅಧ್ಯಯನದಲ್ಲಿ ಕುತೂಹಲಕಾರಿಯಾದ ಒಂದು ವಿಚಾರವು ಕಂಡು ಬಂದಿತು. ಅದೇನೆಂದರೆ ಕಿತ್ತಳೆ ಹಣ್ಣಿನ ರಸವನ್ನು ಸಂಸ್ಕರಣೆ ಮಾಡಲು ಎರಡು ಬಗೆಯ ಕ್ಯಾಲ್ಸಿಯಂಗಳನ್ನು ಬಳಸಲಾಗುತ್ತದೆಯಂತೆ. ಅದರಲ್ಲಿ ನಿಮ್ಮ ದೇಹವು ಟ್ರೈ ಕ್ಯಾಲ್ಸಿಯಂ ಫಾಸ್ಫೇಟ್ ಮತ್ತು ಕ್ಯಾಲ್ಸಿಯಂ ಲ್ಯಾಕ್ಟೇಟ್ ಇರುವ ಕಿತ್ತಳೆ ಹಣ್ಣಿನ ರಸಕ್ಕಿಂತ, ಕ್ಯಾಲ್ಸಿಯಂ ಸಿಟ್ರೇಟ್ ಮಲೇಟ್ ಇರುವ ಕಿತ್ತಳೆ ಹಣ್ಣಿನ ರಸದಲ್ಲಿರುವ ಕ್ಯಾಲ್ಸಿಯಂ ಅನ್ನು ಚೆನ್ನಾಗಿ ಹೀರಿಕೊಳ್ಳುತ್ತದೆಯಂತೆ. ಹಾಗಾಗಿ ಸಂಸ್ಕರಿಸಿದ ಕಿತ್ತಳೆ ಹಣ್ಣಿನ ರಸವನ್ನು ಕೊಳ್ಳುವುದಕ್ಕಿಂತ ಮೊದಲು ಅದರ ಮೇಲೆ ಈ ಅಂಶಗಳನ್ನು ನೋಡಿ ಖಾತ್ರಿ ಪಡಿಸಿಕೊಳ್ಳಿ.
ಬೆಂಡೆಕಾಯಿ
ಈ ಹಸಿರು ತರಕಾರಿಯಲ್ಲಿ ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ. ತಾಜಾ ಆಗಿದ್ದಾಗ ಇದನ್ನು ಹಸಿ ಹಸಿಯಾಗಿಯೇ ಸೇವಿಸಬಹುದು. ಇಲ್ಲವಾದಲ್ಲಿ ತಾಜಾ ತರಕಾರಿಯನ್ನು ಕಡಿಮೆ ಉರಿಯಲ್ಲಿ ಕರಿದು ಸೇವಿಸಬಹುದು. 100 ಗ್ರಾಂ ಬೆಂಡೆಕಾಯಿ: 81 ಮಿ.ಗ್ರಾಂ
ಸಾಲ್ಮನ್ ವೀನುಗಳು
ಹಲವಾರು ಮೀನುಗಳು ಕ್ಯಾಲ್ಸಿಯಂನ ಸಮೃದ್ಧ ಸಂಪನ್ಮೂಲಗಳಾಗಿವೆ. ಆದರೆ ಅವುಗಳನ್ನು ನೀವು ದಕ್ಕಿಸಿಕೊಳ್ಳಲು ಮೂಳೆಗಳನ್ನು ಸಹಿತ ಅಗಿದು ಸೇವಿಸಬೇಕಾಗುತ್ತದೆ. ಅರ್ಧ ಟಿನ್ ಸಾಲ್ಮನ್‍ನಲ್ಲಿ 440 ಮಿ.ಗ್ರಾಂ ಕ್ಯಾಲ್ಸಿಯಂ ಇರುತ್ತದೆ. 100 ಗ್ರಾಂ ಸಾಲ್ಮನ್ : 9 ಮಿ.ಗ್ರಾಂ ಪುದಿನ ಸೊಪ್ಪಿನ ಚಹಾ: ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!
ಬಾದಾಮಿ
ಒಣ ಬಾದಾಮಿಯನ್ನು ನೀವು ಸೇವಿಸುವಾಗ ಅದರ ಪ್ರಮಾಣದ ಕುರಿತು ಗಮನ ಹರಿಸಬೇಕು. ಏಕೆಂದರೆ ಇವುಗಳಲ್ಲಿ ಕ್ಯಾಲೊರಿಗಳು ಅಧಿಕ ಪ್ರಮಾಣದಲ್ಲಿವೆ - ಅರ್ಧ ಕಪ್ ಬಾದಾಮಿಯಲ್ಲಿ 500 ಕ್ಯಾಲೊರಿ ಇರುತ್ತವೆ - ಈಗಾಗಿ ಬಾದಾಮಿಗಳು ಕ್ಯಾಲ್ಸಿಯಂನ ಗಣಿ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿವೆ. 100 ಗ್ರಾಂ ಬಾದಾಮಿ : 264 ಮಿ.ಗ್ರಾಂ ಆಹಾ! ಬಿಸಿ ಬಿಸಿ ಶುಂಠಿ ಚಹಾದ ಅತ್ಯುನ್ನತ ಪ್ರಯೋಜನಗಳೇನು?
ಎಳ್ಳು ಕಾಳುಗಳು
ಇವುಗಳು ಸಮೃದ್ಧ ಪೋಷಕಾಂಶಗಳ ಆಗರ. ಒಂದು ಚಮಚ ಎಳ್ಳು ಕಾಳುಗಳನ್ನು ಅಗಿಯುವುದರಿಂದ ನಿಮಗೆ 50 ಮಿ.ಗ್ರಾಂ ಕ್ಯಾಲ್ಸಿಯಂ ದೊರೆಯುತ್ತದೆ. ಒಂದು ಹಿಡಿ ಎಳ್ಳು ಕಾಳುಗಳಲ್ಲಿ ಅಗತ್ಯವಾದ ಖನಿಜಗಳು, ವಿಟಮಿನ್‍ಗಳು, ಫೆನೊಲಿಕ್ ಆಂಟಿ- ಆಕ್ಸಿಡೆಂಟ್‍ಗಳು ಹಾಗು ಪ್ರೊಟೀನ್‍ಗಳು ನಿಮಗೆ ದೊರೆಯುತ್ತದೆ. 100 ಗ್ರಾಂ ಎಳ್ಳು ಕಾಳುಗಳು = 975 ಮಿ.ಗ್ರಾಂ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



