Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಿತ್ತಲ ಗಿಡದ ತರಕಾರಿ- ಆರೋಗ್ಯಕರ ಜೀವನಶೈಲಿಗೆ ರಹದಾರಿ
ಇಂದಿನ ಆಧುನಿಕ ಯುಗದಲ್ಲಿ ಸಿದ್ಧ ಆಹಾರ ಎಂಬ ರೆಡಿಮೇಡ್ ಆಹಾರ ಪದ್ಧತಿಗೆ ನಾವು ಹೆಚ್ಚು ಮರುಳಾಗುತ್ತಿದ್ದೇವೆ. ನಮ್ಮ ಜೀವನ ಕ್ರಮದಲ್ಲಿ ನಾವು ಎಷ್ಟು ಬ್ಯುಸಿಯಾಗಿದ್ದರೂ ನಮಗೆಂದೇ ಆಹಾರ ಸಿದ್ಧಪಡಿಸಿಕೊಳ್ಳುವ ವ್ಯವಧಾನ ಕೂಡ ನಮ್ಮಲ್ಲಿ ಇಲ್ಲವಾಗಿದೆ. ಕೆಲಸದ ಒತ್ತಡ, ಮಾನಸಿಕ ನೆಮ್ಮದಿ ಇಲ್ಲದಿರುವಿಕೆ, ದೇಹದ ಆಯಾಸ ಈ ಎಲ್ಲಾ ಕಾರಣಗಳು ಇಂದು ನಮ್ಮನ್ನು ಸಿದ್ಧ ಆಹಾರ ಪದ್ಧತಿಗೆ ಒಗ್ಗಿಕೊಳ್ಳುವಂತೆ ಮಾಡಿದೆ.
ಆದರೂ ಈ ಕ್ರಮದಲ್ಲಿ ಬದಲಾವಣೆಗಳನ್ನು ತರುವುದು ನಮ್ಮಿಂದ ಅಸಾಧ್ಯವೇನಲ್ಲ. ಹಿಂದೆಲ್ಲಾ ಹಳ್ಳಿಗಳಲ್ಲಿ ಹಣ್ಣು ತರಕಾರಿ ಸೊಪ್ಪುಗಳನ್ನು ತಮ್ಮ ತಮ್ಮ ಮನೆಯಂಗಳದಲ್ಲೇ ಬೆಳೆಸಿಕೊಳ್ಳುತ್ತಿದ್ದರು. ಅದಕ್ಕೆಂದೇ ತಮ್ಮ ನಿವಾಸದ ಪಕ್ಕದಲ್ಲಿ ಪ್ರತ್ಯೇಕ ಸ್ಥಳವನ್ನು ಕಾದಿರಿಸುತ್ತಿದ್ದರು. ಆದರೆ ನಗರಗಳಲ್ಲಿ ಈ ಪದ್ಧತಿಯನ್ನು ನಡೆಸಲು ಸ್ಥಳದ ಅಭಾವ ಕಾರಣವಾಗಿದ್ದರೂ ಅದನ್ನು ನಡೆಸುವ ವ್ಯವಧಾನ ನಮ್ಮಲ್ಲಿರುವುದಿಲ್ಲ. ಈ ಪದ್ಧತಿಯನ್ನು ನಮ್ಮ ನಗರ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಆರೋಗ್ಯಕರ ಜೀವನ ಪದ್ಧತಿಯನ್ನು ನಡೆಸಬಹುದು.

ಮಾನವನಲ್ಲಿ ಪ್ರಕೃತಿದತ್ತವಾಗಿಯೇ ಒದಗಿರುವ ರೋಗನಿರೋಧಕ ವ್ಯವಸ್ಥೆ ಅಥವಾ ರೋಗನಿರೋಧಕ ಶಕ್ತಿಯು ಆತನಿಗೆ ಇರುವ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಸಶಕ್ತವಾಗಿದೆ. ಇದರ ಜೊತೆಗೆ ಪ್ರಕೃತಿಯ ಮಡಿಲಿನಲ್ಲಿ ಉತ್ಪನ್ನವಾಗುವ ಅನೇಕ ಗಿಡಮೂಲಿಕೆಗಳು, ತರಕಾರಿಗಳು, ಹಾಗೂ ಹಣ್ಣುಹ೦ಪಲು ಮಾನವನನ್ನು ಮಾರಣಾ೦ತಿಕ ರೋಗಗಳಿ೦ದ ರಕ್ಷಿಸಬಲ್ಲ ಸಾಮರ್ಥ್ಯವನ್ನು ಹೊ೦ದಿರುವ ವಿಷಯವ೦ತೂ ಸೋಜಿಗವೆ೦ದೆನಿಸುತ್ತದೆ. ಬನ್ನಿ ಇಲ್ಲಿ ನೀಡಿರುವ ತರಕಾರಿಗಳನ್ನು ಮನೆಯ ಹಿತ್ತಲಿನಲ್ಲೇ ಬೆಳೆಸಿ, ಆರೋಗ್ಯ ವೃದ್ಧಿಸಿಕೊಳ್ಳಿ...
ಕುಂಬಳ ಕಾಯಿ
ಕುಂಬಳ ಕಾಯಿಯಲ್ಲಿರುವ ಪೋಷಕಾಂಶಗಳು ಮತ್ತು ಮುಖ್ಯವಾಗಿ ಇದು ಗಾಯಗಳನ್ನು ಮತ್ತು ಅನಾರೋಗ್ಯಕ್ಕೆ ತುತ್ತಾದ ಶರೀರ ಶೀಘ್ರವಾಗಿ ವಾಸಿ ಮಾಡುವ ಗುಣದ ಮೂಲಕ ಒಂದು ಶ್ರೀಮಂತ ಆಹಾರವಾಗಿದೆ. ಅಲ್ಲದೆ ಇದರಲ್ಲಿರುವ ಪೊಟ್ಯಾಶಿಯಂ ಹೃದಯದ ಕಾರ್ಯನಿರ್ವಹಣೆಗೆ ಅಗತ್ಯವಾದ ಪೋಷಕಾಂಶವಾಗಿದೆ. ಕುಂಬಳ ಕಾಯಿಯ ಒಣಗಿಸಿದ ಬೀಜಗಳ ತಿರುಳಿನಲ್ಲಿ ಒಮೆಗಾ-3 ಕೊಬ್ಬಿನ ತೈಲವಿದೆ. ಇದೂ ಸಹಾ ಹೃದಯಕ್ಕೆ ಉತ್ತಮವಾದ ಪೋಷಕಾಂಶವಾಗಿದೆ. ಜೊತೆಗೇ ಈ ಪೋಷಕಾಂಶಗಳು ಮೆದುಳನ್ನು ಚುರುಕುಗೊಳಿಸಲು ನೆರವಾಗುತ್ತವೆ. ಈ ಬೀಜಗಳಲ್ಲಿ ಕಬ್ಬಿಣ, ಪ್ರೋಟೀನುಗಳೂ ಉತ್ತಮ ಪ್ರಮಾಣದಲ್ಲಿದ್ದು ಆರೋಗ್ಯಕ್ಕೆ ಪೂರಕವಾಗಿದೆ.
ಕ್ಯಾರೆಟ್
ಕ್ಯಾರೆಟ್‍ನಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಇ, ನಾರಿನಂಶ, ವಿಟಮಿನ್ ಕೆ, ಪೊಟಾಶಿಯಂ, ವಿಟಮಿನ್ ಸಿ, ಪೊಟಾಶಿಯಂ, ಮೆಗ್ನಿಶಿಯಂ, ಫೋಲೆಟ್, ಮ್ಯಾಂಗನೀಸ್, ವಿಟಮಿನ್ ಇ ಮತ್ತು ಸತು ಇರುತ್ತದೆಯಂತೆ. ಅಲ್ಲದೆ ಕ್ಯಾರೆಟ್‍ನಲ್ಲಿ ಅತ್ಯದ್ಭುತವಾದ ಆಂಟಿ ಆಕ್ಸಿಡೆಂಟ್ ಸಹ ಇರುತ್ತದೆ. ವಿಟಮಿನ್ ಎ ಜೊತೆಗೆ ಇದರಲ್ಲಿ ಬೀಟಾ ಕೆರೊಟಿನ್, ಸಹ ಇರುತ್ತದೆ. ಅವುಗಳಿಂದಲೆ ಕ್ಯಾರೆಟ್‍ಗೆ ಕಡು ಕಿತ್ತಳೆ ಬಣ್ಣ ಬಂದಿರುವುದು. ತೂಕ ಕಡಿಮೆ ಮಾಡಿಕೊಳ್ಳಲು ಕ್ಯಾರೆಟ್‍ಗಳು ಹೇಳಿ ಮಾಡಿಸಿದ ತರಕಾರಿಗಳಾಗಿವೆ. ಕೈತೋಟದಲ್ಲಿ ಕ್ಯಾರೆಟ್ ಬೆಳೆಸಲು ಸರಳವಾದ ಸಲಹೆಗಳು
ಸಿಹಿ ಗೆಣಸು
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಸಿಹಿ ಗೆಣಸಿನಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ನಮ್ಮ ಥೈರಾಯ್ಡ್ ಗ್ರಂಥಿಗಳ ಕಾರ್ಯ ಮಾಡಲು ಅತ್ಯಾವಶ್ಯಕ. ಜೊತೆಗೆ ಇದು ಹಲ್ಲು, ಮೂಳೆ, ಹೃದಯ, ತ್ವಚೆ ಮತ್ತು ನಮ್ಮ ಶಕ್ತಿಯ ಮಟ್ಟದ ಕಾರ್ಯ ನಿರ್ವಹಿಸುವಿಕೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತದೆ. ಸಿಹಿ ಗೆಣಸಿನಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ನಮ್ಮ ಥೈರಾಯ್ಡ್ ಗ್ರಂಥಿಗಳ ಕಾರ್ಯ ಮಾಡಲು ಅತ್ಯಾವಶ್ಯಕ. ಜೊತೆಗೆ ಇದು ಹಲ್ಲು, ಮೂಳೆ, ಹೃದಯ, ತ್ವಚೆ ಮತ್ತು ನಮ್ಮ ಶಕ್ತಿಯ ಮಟ್ಟದ ಕಾರ್ಯ ನಿರ್ವಹಿಸುವಿಕೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತದೆ. ಮನೆಯ ಕೈತೋಟದಲ್ಲಿ ಸಿಹಿ ಗೆಣಸನ್ನು ಬೆಳೆಸುವುದು ಹೇಗೆ?
ಹೂಕೋಸು
ಹೂಕೋಸು ಹೂಕೋಸು ಹಾಗೂ ಇತರ ಕ್ಯಾಬೇಜು ವರ್ಗಕ್ಕೆ ಸೇರಿದ ತರಕಾರಿಗಳು ರಕ್ತದೊತ್ತಡವನ್ನು ಹಾಗೂ ಮೂತ್ರಪಿ೦ಡಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಬಲ್ಲವು.
ಮುಳ್ಳುಸೌತೆ
ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಅಂಶ ವಿಟಮಿನ್ ಆಗಿದೆ. ಮುಳ್ಳುಸೌತೆ ಎ, ಬಿ ಹಾಗೂ ಸಿ ಮತ್ತು ಕೆ ಸತ್ವಗಳಿಂದ ಕೂಡಿದ್ದು ದೇಹಕ್ಕೆ ವಿಟಮಿನ್‌ನ ಉತ್ತಮ ಪೂರೈಕೆಯನ್ನು ಮಾಡುತ್ತದೆ. ವಿಟಮಿನ್‌ಗಳು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ದೂರೀಕರಿಸಿ ನಿಮ್ಮ ತ್ವಚೆಯನ್ನು ಹೊಳೆಯುವಂತೆಮಾಡುತ್ತದೆ.
ಪಾಲಕ್ ಸೊಪ್ಪು
ಶಕ್ತಿವರ್ಧಿಸುವ ಗುಣದೊಂದಿಗೆ ಪಾಲಕ್ ನಮ್ಮ ಚರ್ಮಕ್ಕೂ ಒಳ್ಳೆಯದು. ಪಾಲಕ್ ನಲ್ಲಿರುವ ವಿಟಮಿನ್ ಮತ್ತು ಪೋಷಕಾಂಶಗಳು ಆರೋಗ್ಯ ಮತ್ತು ಚರ್ಮ ಹೊಳೆಯಲು ಪ್ರಮುಖ ಪಾತ್ರ ವಹಿಸುತ್ತದೆ. ಪಾಲಕ್ ನಿಂದ ಮೊಡವೆ, ಹಾನಿಗೊಳಗಾದ ಚರ್ಮದ ಸರಿಪಡಿಸುವಿಕೆ ಮತ್ತು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಪಾಲಕ್ ತ್ವಚೆಯ ಆರೈಕೆಗೆ ಅತ್ಯಂತ ಉಪಯುಕ್ತ ತರಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications






