Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೆಗಡಿಯನ್ನು ಹೊಡೆದೋಡಿಸುವ ಶಕ್ತಿಶಾಲಿ ಆಹಾರಗಳು
ನೆಗಡಿಯು ಸಾಮಾನ್ಯವಾಗಿ ಋತುಗಳ ಬದಲಾವಣೆಗಳು, ಅಲರ್ಜಿಗಳು, ತಣ್ಣಗಿರುವ ಆಹಾರಗಳ ಸೇವನೆಗಳು ಮತ್ತು ಕೆಲವೊಮ್ಮೆ ಬ್ಯಾಕ್ಟೀರಿಯ ಸೋಂಕುಗಳು ಇವೆಲ್ಲರ ಪ್ರಭಾವದಿಂದ ಉಂಟಾಗುತ್ತದೆ.
ಸಾಧಾರಣ ನೆಗಡಿ ಸಾಮಾನ್ಯವಾಗಿ ಏಳು ದಿನಗಳೊಳಗಾಗಿ ಕಡಿಮೆಯಾಗುತ್ತದೆ ಮತ್ತು ಅದಕ್ಕೆ ಅಂಟಿ ಬಯಾಟಿಕ್ ಔಷಧಿಯ ಅಗತ್ಯವಿರುವುದಿಲ್ಲ. ಆದರೆ ಬ್ಯಾಕ್ಟೀರಿಯ ಮೂಲದಿಂದ ಬಂದಿದ್ದರೆ, ನೀವು ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಅನೇಕ ಜನರು ಅಗಾಗ್ಗೆ ನೆಗಡಿಯಿಂದ ಬಳಲುತ್ತಾರೆ, ಏಕೆಂದರೆ ಅವರ ರೋಗ ನಿರೋಧಕ ಶಕ್ತಿಯು ಕಡಿಮೆಯಾಗಿರುವುದರಿಂದ ಮತ್ತು ಅವರು ಸ್ವಚ್ಛ ಆರೋಗ್ಯವನ್ನು ಪಾಲಿಸುತ್ತಿರುವುದಿಲ್ಲ. ನೀವು ಆಗಾಗ್ಗೆ ನೆಗಡಿಯಿಂದ ಬಳಲುತ್ತಿದ್ದರೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವರ್ಧಿಸಿಕೊಳ್ಳಬೇಕು ಮತ್ತು ಸರಿಯಾದ ಸ್ವಚ್ಛತೆ ನಿರ್ವಹಿಸಬೇಕು. ಕೆಮ್ಮು ನೆಗಡಿಗೆ ರಾಮಬಾಣ ಒಣ ಶುಂಠಿ ಕಷಾಯ
ನೆಗಡಿ ಬರುವುದನ್ನು ತಡೆಯಲು ಮತ್ತು ಅದರ ವಿರುದ್ಧ ಸೆಣಸಲು, ಕೆಲವು ಆಹಾರಗಳಿವೆ. ಈ ಆಹಾರಗಳ ಸೇವನೆಯಿಂದ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ನೆಗಡಿ ಬರುವ ಲಕ್ಷಣಗಳನ್ನು ನಿಭಾಯಿಸಲು ಸಹಾಯವಾಗುತ್ತದೆ. ನೆಗಡಿಯ ವಿರುದ್ಧ ಸೆಣಸಲು ಮತ್ತು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವರ್ಧಿಸಲು ಕೆಲವು ನೈಸರ್ಗಿಕ ಆಹಾರಗಳ ಕಡೆ ಗಮನ ಕೊಡೋಣ ಬನ್ನಿ:

ಪಪ್ಪಾಯಿ ಹಣ್ಣು
ಇದರಲ್ಲಿ ಅತ್ಯಧಿಕ ವಿಟಮಿನ್ ಎ, ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್ಸ್ ಇರುವುದರಿಂದ ನಿಮಗೆ ಬಂದಿರುವ ನೆಗಡಿಯ ಅವಧಿಯನ್ನು ಕಡಿಮೆ ಮಾಡುತ್ತದೆ. ಪಪ್ಪಾಯಿ ಹಣ್ಣು ನೆಗಡಿಯ ಲಕ್ಷಣಗಳನ್ನು ಶಮನ ಮಾಡುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಒಮೆಗಾ 3 ಸಮೃದ್ಧವಾಗಿರುವ ಮೀನು
ಸಾಲ್ಮನ್, ಟ್ಯೂನಾ, ಸಾರ್ಡೀನ್ ಮತ್ತು ಬಂಗಡೆ (ಮ್ಯಕೆರಲ್) ಜಾತಿಯ ಮೀನುಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲ ಸಮೃದ್ಧವಾಗಿವೆ.ಈ ಮೀನುಗಳು ಸಾಮಾನ್ಯ ನೆಗಡಿಯ ವಿರುದ್ಧ ಹೋರಾಡುವಲ್ಲಿ ಸಹಕಾರಿಯಾಗಿದೆ. ಈ ಮೀನುಗಳಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲದ ಸಹಾಯದಿಂದ ನಿಮಗೆ ನೆಗಡಿ ತಗಲುವುದನ್ನು ತಪ್ಪಿಸಿ ಅದರ ಲಕ್ಷಣಗಳನ್ನು ಶಮನ ಮಾಡುತ್ತವೆ.

ಬೆಳ್ಳುಳ್ಳಿ
ಇದರಲ್ಲಿ ಸಮೃದ್ಧ ಅಲ್ಲಿಸಿನ್ ಎಂಬ ಅಂಶವು ಉತ್ಕರ್ಷಣ ನಿರೋಧಕಗಳ ಸಮಾನ್ಯ ಮೂಲ. ನೀವು ಬೆಳ್ಳುಳ್ಳಿಯನ್ನು ಕಚ್ಚಾ ರೂಪದಲ್ಲಿಯಾದರೂ ಅಥವಾ ಆಹಾರಗಳ ಜೊತೆ ಪ್ರತಿದಿನವೂ ಸೇವಿಸುತ್ತಿದ್ದರೆ ನಿಮಗೆ ಸಾಮಾನ್ಯ ನೆಗಡಿ ಆಗಾಗ್ಗೆ ಬರುವುದೇ ಇಲ್ಲ. ಅದು ನಿಮ್ಮ ದೇಹದ ಇತರ ಬಾಧೆಗಳನ್ನು ವಾಸಿಮಾಡಲು ಸಹಾಯಕಾರಿಯಾಗಿರುವುದಲ್ಲದೆ, ಶೀತ ಲಕ್ಷಣಗಳನ್ನು ನಿವಾರಿಸುತ್ತದೆ.

ಕುಂಬಳಕಾಯಿಯ ಬೀಜಗಳು
ಸಮುದ್ರ ಆಹಾರಗಳಂತೆ ಇದರಲ್ಲಿ ಕೂಡ ಅತ್ಯಧಿಕ ಸತುವಿನ ಅಂಶವಿರುತ್ತದೆ. ಕುಂಬಳಕಾಯಿಯ ಬೀಜಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿ ನೆಗಡಿಯ ಲಕ್ಷಣಗಳನ್ನು ದೂರವಿಡುತ್ತದೆ. ಸಾಮಾನ್ಯ ನೆಗಡಿಯನ್ನು ಗುಣಪಡಿಸುವ ಆಹಾರಗಳಲ್ಲಿ ಇದು ಅತ್ಯುತ್ತಮ ಆಹಾರ.

ಬೀಟ್‌ರೂಟ್
ಸಾಮಾನ್ಯ ನೆಗಡಿಯನ್ನು ಗುಣಪಡಿಸುವ ಆಹಾರಗಳಲ್ಲಿ ಬೀಟ್‌ರೂಟ್ ಒಂದಾಗಿದೆ. ಅದು ವಿಟಮಿನ್ ಸಿ, ಆಂಟಿ-ಆಕ್ಸಿಡೆಂಟ್ಸ್, ಕಬ್ಬಿಣ ಮತ್ತು ಪೋಲೆಟ್ ಅತ್ಯಧಿಕವಾಗಿದ್ದು ಸಾಮಾನ್ಯ ನೆಗಡಿಯನ್ನು ನಿಭಾಯಿಸಲು ಸಹಾಯಕಾರಿಯಾಗಿದೆ. ಬೀಟ್‌ರೂಟ್ ಸೇವನೆಯಿಂದ ಸಾಮಾನ್ಯ ನೆಗಡಿಯನ್ನು ತಡೆಗಟ್ಟುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನೂ ಸಹ ಬಲಪಡಿಸುತ್ತದೆ.

ಶುಂಠಿ
ಶುಂಠಿಯನ್ನು ಬಳಸುವುದರಿಂದ ಮೂಗು ಕಟ್ಟಿರುವಿಕೆಯನ್ನು ಹೋಗಲಾಡಿಸಿ ನಿಮ್ಮ ಗಂಟಲು ಕೆರೆತವನ್ನು ಸಹ ಗುಣಪಡಿಸುತ್ತದೆ. ಇದು ನೆಗಡಿಗೆ ಅತ್ಯುತ್ತಮ ಪರಿಹಾರ ನೀಡುತ್ತದೆ. ಪ್ರತಿದಿನ ಎರಡುಬಾರಿ ಶುಂಟಿ ಟೀ ಸೇವಿಸಿದರೆ ಸಾಮಾನ್ಯ ನೆಗಡಿಯ ವಿರುದ್ಧ ಹೋರಾಡಬಹುದು. ಆಗಾಗ್ಗೆ ಬರುವ ನೆಗಡಿಯ ಬೇನೆಗಳನ್ನು ಇದರ ಮೂಲಕ ತಡೆಯಬಹುದು.



Click it and Unblock the Notifications