Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಆರೋಗ್ಯಕರ ಸಮಾಗಮಕ್ಕೆ ಇಂತಹ ಆಹಾರಗಳನ್ನು ಸೇವಿಸಿ!
ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಲೈಂಗಿಕ ಚಟುವಟಿಕೆಯೂ ಅಗತ್ಯ. ಜೀವನ ಸುಂದರವಾಗಿರಲು ಸಂಗಾತಿಗಳ ನಡುವಣ ಪ್ರೀತಿಯ ಜೊತೆಗೇ ಪ್ರಣಯವೂ ಅಗತ್ಯ. ಎರಡೂ ಕ್ರಿಯೆಗಳು ಒಂದಕ್ಕೊಂದು ಪೂರಕವಾಗಿವೆ.
ಪ್ರೀತಿಯಿಲ್ಲದ ಸಮಾಗಮ ಮತ್ತು ಸಮಾಗಮವಿಲ್ಲದ ಪ್ರೀತಿ ಇವೆರಡೂ ಸಿಹಿಯಿಲ್ಲದ ಕಬ್ಬಿನ ರಸದಂತೆ. ಪ್ರೀತಿಗೆ ಹೃದಯದಾಳದ ಭಾವ ಮುಖ್ಯವಾದರೆ ಸಮಾಗಮಕ್ಕೆ ಶಾರೀರಿಕ ದಾರ್ಢ್ಯತೆ ಮುಖ್ಯ.
ಇದಕ್ಕಾಗಿ ಶರೀರವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು ಅಗತ್ಯವಾಗಿದೆ. ಲೈಂಗಿಕ ಸಾಮರ್ಥ್ಯಕ್ಕೂ ನೀವು ಸೇವಿಸುವ ಆಹಾರಕ್ಕೂ ನೇರ ಸಂಬಂಧವಿದೆ. ಇಂದು ಈ ಸಾಮರ್ಥ್ಯಕ್ಕೆ ಪೂರಕವಾದ ಕೆಲವು ಆಹಾರಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಲಾಗಿದೆ. ಸಮಾಗಮಕ್ಕೆ ಮಹಿಳೆಯರಿಂದ ದೊರಕುವ ಗುಪ್ತ ಸಂಜ್ಞೆಗಳು
ಈ ಆಹಾರಗಳಲ್ಲಿ ಕೆಲವು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿದರೆ ಕೆಲವು ನಿಮ್ಮ ಮನೋಭಾವನೆಯನ್ನು ಉದ್ದೀಪಿಸಲು ನೆರವಾಗುತ್ತವೆ. ಆದ್ದರಿಂದಲೇ ಸೂಕ್ತವಾದ ಆಹಾರ ಸೇವಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಯಾವ ಆಹಾರ ಸೂಕ್ತ ಎಂದು ಕಂಡುಕೊಳ್ಳಲು ಶತಮಾನಗಳಿಂದ ಪ್ರಯತ್ನಗಳು ನಡೆಯುತ್ತಾ ಬಂದಿವೆ. ಲೈಂಗಿಕ ಆಸಕ್ತಿಯನ್ನೂ ಸಾಮರ್ಥ್ಯವನ್ನೂ ಜೊತೆಗೇ ಹೆಚ್ಚಿಸಬಲ್ಲ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಾ ಬಂದಿದೆ.
ಈ ಬಗ್ಗೆ ನಡೆದ ಹಲವು ಸಂಶೋಧನೆಗಳ ಬಳಿಕ ಕೆಲವು ಆಹಾರಗಳು ಇತರ ಆಹಾರಗಳಿಗಿಂತ ಉತ್ತಮವಾಗಿರುವುದು ಕಂಡುಬಂದಿದೆ. ಇವು ಯಾವುವು ಎಂಬ ಕುತೂಹಲ ಮೂಡಿತೇ? ಕೆಳಗಿನ ಸ್ಲೈಡ್ ಶೋ ಮೂಲಕ ಗಮನಿಸಿ, ಇಂದಿನಿಂದಲೇ ನಿಮಗೆ ಸೂಕ್ತವಾದುದನ್ನು ಅನುಸರಿಸಲು ತೊಡಗಿ..

ಬಾದಾಮಿ
ಬಾದಾಮಿಯ ನಿಯಮಿತ ಸೇವನೆಯಿಂದ ಹೃದಯಬಡಿತ ಮತ್ತು ರಕ್ತಸಂಚಾರ ಉತ್ತಮಗೊಳ್ಳುತ್ತದೆ. ಜೊತೆಗೇ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಲು ನೆರವಾಗುತ್ತದೆ.ಇದರಿಂದ ದೇಹದ ಇತರ ಭಾಗಗಳ ಜೊತೆಗೇ ಜನನಾಂಗಗಳಿಗೂ ಉತ್ತಮ ರಕ್ತಪೂರೈಕೆಯಾಗುತ್ತದೆ ಹಾಗೂ ಲೈಂಗಿಕ ಶಕ್ತಿಯೂ ಹೆಚ್ಚುತ್ತದೆ.

ಕಪ್ಪು ಚಾಕಲೇಟ್
ಲೈಂಗಿಕ ತಜ್ಞರ ಪ್ರಕಾರ ಹಾಸಿಗೆಯ ಮೇಲೆ ಮಲಗಿದ ಬಳಿಕ ಅಲ್ಪ ಸಮಯದಲ್ಲಿಯೇ ಲೈಂಗಿಕ ಬಯಕೆಯನ್ನು ಹೆಚ್ಚಿಸಲು ಆ ಸಮಯದಲ್ಲಿ ಕಪ್ಪು ಚಾಕಲೇಟು ತಿನ್ನುವ ಮೂಲಕ ಸಾಧ್ಯವಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಫೈಟೋ ನ್ಯೂಟ್ರಿಯೆಂಟುಗಳು ಆರೋಗ್ಯಕ್ಕೆ ಪೂರಕವಾಗಿದ್ದರೆ ಉತ್ತಮ ಪ್ರಮಾಣದಲ್ಲಿರುವ ಮೆಗ್ನೀಶಿಯಂ ಶರೀರದ ಎಲ್ಲಾ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಹಾಗೂ ನರಗಳ ಪೆಡಸನ್ನೂ ಕಡಿಮೆಗೊಳಿಸುತ್ತದೆ. ಪರಿಣಾಮವಾಗಿ ಲೈಂಗಿಕ ಬಯಕೆ ಭುಗಿಲೆದ್ದು ಸಮಾಗಮಕ್ಕೆ ಹೆಚ್ಚಿನ ಶಕ್ತಿಯೂ ದೊರಕುತ್ತದೆ.

ಟೊಮೇಟೊ
ಟೊಮೇಟೊ ಹಣ್ಣಿನಲ್ಲಿಯೂ ಆಂಟಿ ಆಕ್ಸಿಡೆಂಟುಗಳು ಮತ್ತು ಇತರ ಪೋಷಕಾಂಶಗಳಿವೆ. ಇವು ವಿಶೇಷವಾಗಿ ಪುರುಷರಲ್ಲಿ ಜನನಾಂಗಗಳಿಗೆ ರಕ್ತಸಂಚಾರವನ್ನು ಹೆಚ್ಚಿಸುವ ಮೂಲಕ ಲೈಂಗಿಕ ಸಾಮರ್ಥ್ಯವನ್ನು ಕ್ಷಿಪ್ರವಾಗಿ ಹೆಚ್ಚಿಸಲು ನೆರವಾಗುತ್ತವೆ. ಸಮಾಗಮಕ್ಕೂ ಕೊಂಚ ಹೊತ್ತಿನ ಮುನ್ನ ಸಿಪ್ಪೆ ಮತ್ತು ಬೀಜಗಳನ್ನು ನಿವಾರಿಸಿ ತಿರುಳಿನಿಂದ ತಯಾರಿಸಿದ ಜ್ಯೂಸ್ ಉತ್ತಮ ಫಲ ನೀಡುತ್ತದೆ.

ಸ್ಟ್ರಾಬೆರಿಗಳು
ಸ್ಟ್ರಾಬೆರಿ ಹಣ್ಣಿನಲ್ಲಿ ವಿಟಮಿನ್ ಬಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇದು ನರ ಮತ್ತು ಸ್ನಾಯುಗಳ ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ. ವಿಶೇಷವಾಗಿ ನರಗಳು ಸಡಿಲಗೊಳ್ಳುವುದರಿಂದ ಸುಗಮಗೊಳ್ಳುವ ರಕ್ತಸಂಚಾರ ಲೈಂಗಿಕ ಸಾಮರ್ಥ್ಯವನ್ನೂ ಹೆಚ್ಚಿಸುತ್ತವೆ.

ಚಿಯಾ ಬೀಜಗಳು
ಮೆಕ್ಸಿಕೋ ಮತ್ತು ಗ್ವಾಟೆಮಾಲ ದೇಶಗಳು ಮೂಲವಾದ ಚಿಯಾ ಬೀಜಗಳಲ್ಲಿ ಸತು, ಕಬ್ಬಿಣ ಮತ್ತು ಪ್ರೋಟೀನುಗಳ ಜೊತೆಗೇ ಉತ್ತಮ ಪ್ರಮಾಣದ ನಾರು ಸಹಾ ಇದೆ. ಇವೆಲ್ಲವೂ ರಕ್ತಸಂಚಾರ ಮತ್ತು ಲೈಂಗಿಕ ಸಾಮರ್ಥವನ್ನು ಹೆಚ್ಚಿಸಲು ಪೂರಕವಾಗಿದ್ದು ಸಮಾಗಮಕ್ಕೂ ಮುನ್ನ ಸೇವಿಸುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.

ಕೇಲ್ ಎಲೆಗಳು
ಕೇಲ್ ಎಲೆಗಳಲ್ಲಿ ಸಹಾ ವಿಟಮಿನ್ ಬಿ ಮತ್ತು ಮೆಗ್ನೀಶಿಯಂ ಹೇರಳವಾಗಿದೆ. ಇವೂ ರಕ್ತಸಂಚಾರವನ್ನು ಉತ್ತಮಗೊಳಿಸುವ ಮೂಲಕ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

ಕ್ಯಾರೆಟ್
ಕ್ಯಾರೆಟ್ ನಲ್ಲಿಯೂ ವಿವಿಧ ವಿಟಮಿನ್ ಮತ್ತು ಖನಿಜಗಳಿವೆ. ಇದರ ಉತ್ತಮ ಪರಿಣಾಮಕ್ಕಾಗಿ ಒಂದೆರಡು ಕ್ಯಾರೆಟ್ ಗಳನ್ನು ಹಸಿಯಾಗಿ ಅಥವಾ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.

ಮೀನು
ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನ ತೈಲ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ರಾತ್ರಿಯ ಊಟದಲ್ಲಿ ಸಾಕಷ್ಟು ಮೀನು ಇರುವಂತೆ ನೋಡಿಕೊಳ್ಳುವ ಮೂಲಕ ಸಮಾಗಮದಲ್ಲಿ ಹೆಚ್ಚಿನ ಫಲವನ್ನು ಕಾಣಬಹುದು.

ಪಾಲಕ್ ಎಲೆಗಳು
ಪಾಲಕ್, ಬಸಲೆ ಮೊದಲಾದ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಫೈಟೋ ನ್ಯೂಟ್ರಿಯೆಂಟ್, ಆಂಟಿ ಆಕ್ಸಿಡೆಂಟುಗಳು, ವಿವಿಧ ವಿಟಮಿನ್ ಮತ್ತು ಮುಖ್ಯವಾಗಿ ಕಬ್ಬಿಣ ಮತ್ತು ಇತರ ಖನಿಜಗಳು ಹೇರಳವಾಗಿವೆ. ಹೆಚ್ಚಿನ ಕಬ್ಬಿಣದ ಕಾರಣ ರಕ್ತಹೀನತೆಗೆ ಈ ಎಲೆಗಳು ಉತ್ತಮವಾಗಿವೆ. ಈ ಎಲೆಗಳ ನಿಯಮಿತ ಸೇವನೆಯಿಂದ ರಕ್ತಸಂಚಾರ ಉತ್ತಮಗೊಳ್ಳುವ ಜೊತೆಗೇ ಲೈಂಗಿಕ ಸಾಮರ್ಥ್ಯವೂ ಹೆಚ್ಚುತ್ತದೆ.

ವಿವಿಧ ಒಣಫಲಗಳು
ವಿವಿಧ ಒಣಫಲಗಳನ್ನು ಸಮಾಗಮಕ್ಕೂ ಕೊಂಚ ಮೊದಲು ಸೇವಿಸುವುದರಿಂದ ದೇಹದಲ್ಲಿ ವಿವಿಧ ಕೊಬ್ಬಿನ ಆಮ್ಲಗಳು ಲಭ್ಯವಾಗುತ್ತವೆ. ಇವು ಸಮಾಗಮಕ್ಕೆ ಅಗತ್ಯವಾದ ಹಾರ್ಮೋನುಗಳನ್ನು ಸ್ರವಿಸುವಂತೆ ಮಾಡಿ ಲೈಂಗಿಕ ಕ್ರಿಯೆಯನ್ನು ಸಂತೋಷಕರವಾಗಿರಲು ಸಹಕರಿಸುತ್ತವೆ.

ಬ್ರೋಕೋಲಿ
ಹಸಿರು ಬಣ್ಣದ ಹೂಕೋಸಿನಂತಿರುವ ಬ್ರೋಕೋಲಿಯಲ್ಲಿ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ಹಲವು ಪೋಷಕಾಂಶಗಳಿವೆ.ಇನ್ನು ಮುಂದೆ ಕಳಪೆ ಮಾತ್ರೆಗಳ ಜಾಹೀರಾತಿಗೆ ಮರುಳಾಗುವ ಮುನ್ನ ಬ್ರೋಕೋಲಿ ಸೇವಿಸಿ.

ಮೆಕ್ಕೆ ಜೋಳ
ಪಾಪ್ ಕಾರ್ನ್ ಮಾಡಲು ಉಪಯೋಗಿಸುವ ಮೆಕ್ಕೆ ಜೋಳದಲ್ಲಿ ಪೊಟಾಶಿಯಂ, ಮೆಗ್ನೀಶಿಯಂ ಮತ್ತು ಕಬ್ಬಿಣದ ಅಂಶವಿದೆ. ಆದರೆ ಇದನ್ನು ಪಾಪ್ ಕಾರ್ನ್ ರೂಪದಲ್ಲಲ್ಲದೇ ನಿಮ್ಮ ಆಹಾರದಲ್ಲಿ ಬೇಯಿಸಿ ತಿನ್ನುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.

ಹಸಿಮೆಣಸು
ಮೆಣಸಿಗೆ ಖಾರ ನೀಡುವ ಕ್ಯಾಪ್ಸೈಸಿನ್ ಎಂಬ ಪೋಷಕಾಂಶಕ್ಕೆ ಲೈಂಗಿಕ ಸಾಮರ್ಥ್ಯವನ್ನು ಉದ್ದೀಪನಗೊಳಿಸುವ ಸಾಮರ್ಥ್ಯವಿದೆ. ನಿಮ್ಮ ರಾತ್ರಿಯ ಊಟ ಖಾರವಾಗಿರುವಂತೆ ನೋಡಿಕೊಂಡರೆ ನಿಮ್ಮ ರಾತ್ರಿಯ ಚಟುವಟಿಕೆಯನ್ನು ಚುರುಕಾಗಿರುವಂತೆ ಮೆಣಸು ನೋಡಿಕೊಳ್ಳುತ್ತದೆ.

ಸೌತೆಕಾಯಿ
ಸೌತೆಕಾಯಿಯಲ್ಲಿರುವ ಕೆಲವು ಪೋಷಕಾಂಶಗಳು ಪುರುಷರಲ್ಲಿ ವಿಶೇಷವಾಗಿ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿನ ಹೊತ್ತು ಕಾದಿಡುವ ಸಾಮರ್ಥ್ಯ ಹೊಂದಿದೆ. ಇಂದೇ ಎಳೆಯ ಸೌತೆಕಾಯಿಯನ್ನು ಸೇವಿಸಿ ಇದು ನಿಜವೋ ಎಂದು ಪರೀಕ್ಷಿಸಿ.

ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ನಿಮ್ಮ ಆಹಾರದಲ್ಲಿ ಅಳವಡಿಸುವ ಮೂಲಕ ಉತ್ತಮಗೊಳ್ಳುವ ಜೀರ್ಣಕ್ರಿಯೆ ಮತ್ತು ರಕ್ತಸಂಚಾರ ಲೈಂಗಿಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ನಿಮ್ಮ ಆಹಾರದಲ್ಲಿ ಕೆಲವು ಹಸಿ ಬೆಳ್ಳುಳ್ಳಿಗಳನ್ನು ಸೇರಿಸುವುದರಿಂದ ಗಮನಾರ್ಹ ಬದಲಾವಣೆಯನ್ನು ನೋಡಬಹುದು.

ಬಾಳೆಹಣ್ಣು
ನಿತ್ಯ ಒಂದೆರಡು ಬಾಳೆಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದ ಮೆಗ್ನೀಶಿಯಂ, ಪೊಟಾಶಿಯಂ ಹಾಗೂ ಇನ್ನಿತರ ಪೋಷಕಾಂಶಗಳು ಲಭ್ಯವಾಗುತ್ತವೆ. ಒಟ್ಟಾರೆ ಆರೋಗ್ಯವನ್ನು ವೃದ್ದಿಸುವ ಇವು ಲೈಂಗಿಕ ಸಾಮರ್ಥ್ಯವನ್ನೂ ಹೆಚ್ಚಿಸುವ ಗುಣವನ್ನು ಹೊಂದಿವೆ.

ಈರುಳ್ಳಿ
ಹಸಿ ಈರುಳ್ಳಿಯ ಕೆಲವು ಭಾಗಗಳನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳುವ ಮೂಲಕ ನಿಮ್ಮ ಲೈಂಗಿಕ ಜೀವನಕ್ಕೆ ರಂಗು ಮೂಡಿಸಬಹುದು.ಇದಕ್ಕಾಗಿ ನಿಮ್ಮ ಊಟದಲ್ಲಿ ಸಾಲಾಡ್ ರೂಪದಲ್ಲಿ ಇತರ ತರಕಾರಿಗಳ ಜೊತೆಗೇ ಹಸಿ ಈರುಳ್ಳಿ ಇರುವಂತೆ ನೋಡಿಕೊಳ್ಳಿ.

ಹಸಿಶುಂಠಿ
ಶತಮಾನಗಳಿಂದಲೂ ಹಸಿಶುಂಠಿಯನ್ನು ಒಂದು ಕಾಮೋತ್ತೇಜಕವಾಗಿ ಬಳಸಿಕೊಳ್ಳಲಾಗುತ್ತಾ ಬಂದಿದೆ. ಇದರಲ್ಲಿರುವ ಹಲವು ಪೋಷಕಾಂಶಗಳು ಲೈಂಗಿಕ ತೃಷೆಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಸಮಾಗಮಕ್ಕೂ ಮುನ್ನ ಹಸಿಶುಂಠಿ ಸೇರಿಸಿದ ಚಹಾ ಸೇವನೆಯಿಂದ ಉತ್ತಮ ಪರಿಣಾಮ ಪಡೆಯಬಹುದು.

ಖರ್ಜೂರ
ಒಂದು ಪರಿಪೂರ್ಣ ಆಹಾರವಾಗಿರುವ ಖರ್ಜೂರದಲ್ಲಿ ವಿವಿಧ ವಿಟಮಿನ್‌ಗಳು, ಕಬ್ಬಿಣ, ಪೊಟ್ಯಾಷಿಯಂ, ಮ್ಯಾಂಗನೀಸ್ ಮೊದಲಾದ ಖನಿಜಗಳೂ ಹೇರಳವಾಗಿರುವುದರಿಂದ ದೇಹದ ಒಟ್ಟಾರೆ ಆರೋಗ್ಯದ ಜೊತೆಗೇ ಲೈಂಗಿಕ ಸಾಮರ್ಥ್ಯವನ್ನೂ ಹೆಚ್ಚಿಸಲು ನೆರವಾಗುತ್ತವೆ.

ಸೇಬು
ತಜ್ಞರ ಪ್ರಕಾರ ಲೈಂಗಿಕ ತೃಷೆ ಮತ್ತು ಸಾಮರ್ಥ್ಯವನ್ನು ಇಬ್ಬರಲ್ಲಿಯೂ ಸಮಾನವಾಗಿ ಹೆಚ್ಚಿಸಲು ಸೇಬು ಉತ್ತಮ ಆಹಾರವಾಗಿದೆ. ರಾತ್ರಿಯೂಟದ ಬಳಿಕ ಒಂದೆರಡು ಸೇಬುಗಳನ್ನು ಇಬ್ಬರೂ ಸೇವಿಸುವ ಮೂಲಕ ಸಮಾಗಮದಲ್ಲಿ ಹೆಚ್ಚಿನ ಫಲ ಕಂಡುಬರುತ್ತದೆ.



Click it and Unblock the Notifications











