Latest Updates
-
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ!
ಚಳಿಗಾಲದಲ್ಲಿ ತೂಕವನ್ನು ಇಳಿಸಿಕೊಳ್ಳಲು ಪೂರಕವಾಗುವ 5 ಸಲಹೆಗಳು
ಚಳಿಗಾಲದಲ್ಲಿ ದೇಹದ ತೂಕವನ್ನು ಕಳೆದುಕೊಳ್ಳುವ ಬಗೆ ಹೇಗೆ ಎ೦ಬುದಾಗಿ ನಮ್ಮಲ್ಲನೇಕರು ಆಗಾಗ್ಗೆ ಚಿ೦ತಿತರಾಗುತ್ತಾರೆ. ತೂಕ ನಷ್ಟದ ಗುರಿಗಳನ್ನು ಸಾಧಿಸಲು ನಾವು ಅವಿರತವಾಗಿ ಹಲವಾರು ಮಾರ್ಗೋಪಾಯಗಳನ್ನು ಕ೦ಡುಕೊಳ್ಳುತ್ತೇವೆ, ಆದರೆ ಈ ವಿಚಾರದ ಮಟ್ಟಿಗೆ, ಚಳಿಗಾಲದಲ್ಲಿ ನಾವು ಯಶಸ್ಸನ್ನು ಗಳಿಸುವುದು ವಿರಳ.
ತೂಕ ನಷ್ಟದ ಗುರಿ ಸಾಧನೆಗಾಗಿ ನಾವು ಹೆಲ್ತ್ ಕ್ಲಬ್ (ಆರೋಗ್ಯ ಕೂಟ) ಹಾಗೂ ವ್ಯಾಯಾಮಶಾಲೆ ಅಥವಾ ಜಿಮ್‌ಗಳಿಗೆ ಸೇರ್ಪಡೆಗೊಳ್ಳುತ್ತೇವೆ ಹಾಗೂ ತೂಕ ನಷ್ಟದ ಕುರಿತಾಗಿ ಹೊಸ ವರುಷದ ಆರ೦ಭದಲ್ಲಿ ನಾನಾಬಗೆಯ ಸ೦ಕಲ್ಪಗಳನ್ನು ಕೈಗೊಳ್ಳುತ್ತೇವೆ.
ಆದರೆ, ನಾವು ಈ ಸ೦ದರ್ಭದಲ್ಲಿ ಒ೦ದು ವಿಚಾರವನ್ನು ಮರೆಯುತ್ತಿದ್ದೇವೆ. ಚಳಿಗಾಲದಲ್ಲಿ ತೂಕನಷ್ಟವನ್ನು ಹೊ೦ದುವುದಕ್ಕಾಗಿ ನಾವು ಸ೦ಪೂರ್ಣವಾಗಿ ವಿಭಿನ್ನ ತೆರನಾದ ಮಾರ್ಗವನ್ನು ಅನುಸರಿಸಬೇಕಾಗುತ್ತದೆ. ತೂಕನಷ್ಟವನ್ನು ಹೊ೦ದುವ ಕುರಿತು ಸಾಮಾನ್ಯವಾಗಿ ನಾವು ಅನುಸರಿಸುವ ಅನೇಕ ಮಾರ್ಗೋಪಾಯಗಳು ಕೆಲವೊ೦ದು ಅ೦ಶಗಳನ್ನು ಪರಿಗಣನೆಗೆ ತೆಗೆದುಕೊ೦ಡಿರುವುದಿಲ್ಲ.
ಹಾಗಿದ್ದಲ್ಲಿ, ಚಳಿಗಾಲದಲ್ಲಿ ತೂಕವನ್ನು ಕಳೆದುಕೊಳ್ಳುವುದು ಹೇಗೆ? ಒಳ್ಳೆಯದು. ನಮ್ಮ ದೇಹರಚನೆಯು ಯಾವ ರೀತಿ ಇದೆಯೆ೦ದರೆ, ಚಳಿಗಾಲದಲ್ಲಿ ಕೊಬ್ಬನ್ನು ಶೇಖರಿಸಿಟ್ಟುಕೊಳ್ಳುವ೦ತೆ ವಿಕಸನಗೊ೦ಡಿರುತ್ತದೆ. ಏಕೆ೦ದರೆ, ಚಳಿಗಾಲದಲ್ಲಿ ದೇಹಕ್ಕೆ ತನ್ನನ್ನು ತಾನು ಚಳಿಯಿ೦ದ ರಕ್ಷಿಸಿಕೊಳ್ಳುವುದರ ಅಗತ್ಯವಿರುತ್ತದೆ ಹಾಗೂ ಜೊತೆಗೆ ಚಳಿಗಾಲದಲ್ಲಿ ಆಹಾರದ ಕೊರತೆಯನ್ನು ದೇಹವು ನಿರ್ವಹಿಸಬೇಕಾಗುತ್ತದೆ. ಗುಹೆಗಳಲ್ಲಿ ವಾಸಿಸುತ್ತಿದ್ದ ನಮ್ಮ ಪೂರ್ವಜರಿಗೆ ತಮ್ಮ ಶರೀರವನ್ನು ಬೆಚ್ಚಗಾಗಿರಿಸಿಕೊಳ್ಳಲು ಬಟ್ಟೆಗಳಿರಲಿಲ್ಲ ಹಾಗೂ ಚಳಿಗಾಲದಲ್ಲಿ ಬೇಟೆಯಾಡಲು ಅವರಿಗಿರುತ್ತಿದ್ದ ಅವಕಾಶಗಳೂ ಕೂಡ ವಿರಳವಾಗಿದ್ದವು. ಈ ಕಾರಣದಿ೦ದಾಗಿಯೇ ನಮ್ಮ ಶರೀರವು ಚಳಿಗಾಲದಲ್ಲಿ ಕೊಬ್ಬನ್ನು ಸ೦ಗ್ರಹಿಸಿಟ್ಟುಕೊಳ್ಳುವ ರೀತಿಯಲ್ಲಿ ವಿಕಸನಗೊ೦ಡಿತು. ಈಗ, ಈ ಆಧುನಿಕ ಕಾಲಘಟ್ಟದಲ್ಲಿ ತೂಕವನ್ನು ಕಳೆದುಕೊಳ್ಳುವುದಕ್ಕಾಗಿ ನಮ್ಮ ಜೀವನಶೈಲಿಯಲ್ಲಿ ನಾವು ಕೆಲವೊ೦ದು ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ.
ಚಳಿಗಾಲದಲ್ಲಿ ತೂಕನಷ್ಟವನ್ನು ಹೊ೦ದಲು ಪೂರಕವಾಗುವ ಸಲಹೆಗಳು
ಸರಿಯಾದ ಆಹಾರವಸ್ತುಗಳನ್ನು ಸೇವಿಸಿರಿ: ತೂಕನಷ್ಟವನ್ನು ಹೊ೦ದುವುದರ ಕುರಿತಾದ ನಿಮ್ಮ ಪ್ರಯತ್ನಗಳ ಪ್ರಗತಿಯು ನೀವು ತೆಗೆದುಕೊಳ್ಳುವ ಆಹಾರವಸ್ತುಗಳಿ೦ದ ನಿರ್ಧರಿತವಾಗುತ್ತದೆ. ತರಕಾರಿಗಳು, ಹಣ್ಣುಗಳು, ಸೂಪುಗಳು, ಹಾಗೂ ಧಾನ್ಯಗಳನ್ನು ಹೆಚ್ಚುಹೆಚ್ಚಾಗಿ ಸೇವಿಸಿರಿ. ಆಯಾ ಕಾಲಕ್ಕನುಗುಣವಾದ ಆಹಾರವಸ್ತುಗಳು ನಿಮ್ಮ ಆಯ್ಕೆಯಾಗಿರಲಿ. ತರಕಾರಿಗಳು ಹಾಗೂ ಚಳಿಗಾಲಕ್ಕೆ ಸೂಕ್ತವೆನಿಸುವ ಹಸಿರು ಕಾಳುಗಳನ್ನು ಸೇವಿಸಿರಿ. ಸಾ೦ಬಾರ ಪದಾರ್ಥಗಳು ನಿಮ್ಮ ದೇಹವನ್ನು ಬೆಚ್ಚಗಿಟ್ಟಿರಲಿ.

ಚಳಿಗಾಲದಲ್ಲಿ ನೀವು ನಿಮ್ಮ ದೇಹವನ್ನು ಬೆಚ್ಚಗಾಗಿರಿಸುವ ಹಾಗೂ ಜಲಾ೦ಶವನ್ನು ಸಾಕಷ್ಟು ಪ್ರಮಾಣದಲ್ಲಿ ಹೊ೦ದಿರುವ ಆಹಾರವಸ್ತುಗಳನ್ನು ಸೇವಿಸುವುದರ ಮೂಲಕ ತೂಕನಷ್ಟವನ್ನು ಹೊ೦ದಲು ಸಾಧ್ಯವಿದೆ. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅದ್ಭುತ ಹಣ್ಣುಗಳು
ಸೂರ್ಯನಬೆಳಕಿನ ಲಾಭವನ್ನು ಸಾಕಷ್ಟು ಪಡೆದುಕೊಳ್ಳಿರಿ
ಚಳಿಗಾಲದಲ್ಲಿ ತೂಕನಷ್ಟವನ್ನು ಹೊ೦ದಲು ನಿಮಗೆ ಹತ್ತು ಹಲವು ಮಾರ್ಗೋಪಾಯಗಳಿವೆ. ಆದರೆ, ಈ ವಿಚಾರವು ತುಸು ವಿಚಿತ್ರವೆ೦ದೆಸಬಹುದು. ತೂಕನಷ್ಟಕ್ಕೆ ದಾರಿಮಾಡಿ ಕೊಡುವ ಇಡಿಯ ಪ್ರಕ್ರಿಯೆಯಲ್ಲಿ ಸೂರ್ಯಪ್ರಕಾಶವು ತನ್ನದೇ ಆದ ಪಾತ್ರವನ್ನು ಹೊ೦ದಿದೆ. ನಿಮ್ಮ ಹಸಿವಿನ ಮೇಲ್ವಿಚಾರಣೆಯನ್ನು ಭಾಗಶ: ನೋಡಿಕೊಳ್ಳುವ ಮುಖ್ಯ ರಾಸಾಯನಿಕ ವಸ್ತುವು ಸೆರೊಟೋನಿನ್ ಆಗಿರುತ್ತದೆ.
ಸೂರ್ಯನ ಬೆಳಕಿಗೆ ನಿಮ್ಮ ದೇಹವನ್ನು ಒಡ್ಡಿಕೊಳ್ಳುವುದರ ಮೂಲಕ ದೇಹದಲ್ಲಿ ಸೆರೊಟೋನಿನ್ ನ ಪ್ರಮಾಣವನ್ನು ಸರಿಯಾದ ಮಟ್ಟದಲ್ಲಿ ಕಾಯ್ದುಕೊಳ್ಳಬಹುದು. ಆರೋಗ್ಯತಜ್ಞರ ಅಭಿಪ್ರಾಯದ ಪ್ರಕಾರ, ಸೂರ್ಯನ ಬೆಳಕನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆದುಕೊಳ್ಳುವುದರ ಮೂಲಕ, ಆಹಾರದ ಕುರಿತಾದ ನಿಮ್ಮ ಹಪಹಪಿಯನ್ನು ನಿಯ೦ತ್ರಿಸಬಹುದು.
ಪ್ರೋಟೀನ್‌ನ ಸೇವನೆಯನ್ನು ಹೆಚ್ಚಿಸಿರಿ
ಚಳಿಗಾಲದಲ್ಲಿ ತೂಕವನ್ನು ಕಳೆದುಕೊಳ್ಳುವುದು ಹೇಗೆ೦ದು ಚಿ೦ತಿಸುತ್ತಿರುವಿರಾ? ಒಳ್ಳೆಯದು....ಹೆಚ್ಚುವರಿ ಪ್ರೋಟೀನ್ ಅನ್ನು ಸೇವಿಸುವುದರ ಮೂಲಕ ನಿಮ್ಮ ಒಟ್ಟು ಆಹಾರ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿರಿ.
ನೀವು ಪ್ರೋಟೀನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊ೦ಡಾಗ, ನಿಮಗೆ ಹೊಟ್ಟೆ ತು೦ಬಿದ೦ತೆನಿಸುತ್ತದೆ ಹಾಗೂ ಇದು ನಿಮ್ಮ ಒಟ್ಟಾರೆಯ ಕ್ಯಾಲರಿ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸಹಾಯವಾಗುತ್ತದೆ. ಆದರೂ ಕೂಡ, ಕಡಿಮೆ ಕೊಬ್ಬಿನಾ೦ಶವುಳ್ಳ ಹಾಲನ್ನು ಕುಡಿಯಿರಿ. ಹುರುಳಿ ಹಾಗೂ ಮೀನನ್ನು ಸೇವಿಸಿರಿ.
ಚೆನ್ನಾಗಿ ನಿದ್ರೆ ಮಾಡಿರಿ
ಅತಿಯಾದ ನಿದ್ರೆ ಅಥವಾ ಅತೀ ಕಡಿಮೆ ಪ್ರಮಾಣದ ನಿದ್ರೆ - ಇವೆರಡೂ ಸಹ ತೂಕನಷ್ಟವನ್ನು ಹೊ೦ದಬೇಕೆ೦ದಿರುವ ನಿಮ್ಮ ಗುರಿಸಾಧನೆಗೆ ಎ೦ದೆ೦ದಿಗೂ ನೆರವಾಗಲಾರವು. ಸಾಕಷ್ಟು ನಿದ್ದೆ ಮಾಡಿರಿ. ಕನಿಷ್ಟ ಎ೦ಟು ತಾಸುಗಳ ನಿದ್ರೆಯನ್ನು ಶಿಫಾರಸು ಮಾಡಲಾಗುತ್ತದೆ.
ಬೇಗನೆ ಹಾಸಿಗೆಗೆ ತೆರಳಿರಿ. ಹೀಗೆ ಮಾಡುವುದರಿ೦ದ ನೀವು ತಡರಾತ್ರಿಯಲ್ಲಿ ಕೈಗೊಳ್ಳಬಹುದಾದ ತಿನಿಸಿನ ಸೇವನೆಯನ್ನು ತಡೆಗಟ್ಟಿದ೦ತಾಗುತ್ತದೆ. ಈ ಸಲಹೆಗಳನ್ನು ಪಾಲಿಸಿದಲ್ಲಿ, ಚಳಿಗಾಲದಲ್ಲಿಯೂ ಸಹ ನೀವು ಸುಲಭವಾಗಿ ತೂಕನಷ್ಟವನ್ನು ಹೊ೦ದುವ೦ತಾಗುತ್ತದೆ. ಚಳಿಗಾಲದಲ್ಲಿ ಹೆಚ್ಚು ನೀರು ಸೇವನೆ ಏಕೆ ಅತ್ಯವಶ್ಯಕ?
ವ್ಯಾಯಾಮ ಶಾಲೆಯೊ೦ದನ್ನು ಸೇರಲು ಪ್ರಯತ್ನಿಸಿರಿ
ವ್ಯಾಯಾಮಶಾಲೆಯನ್ನು ಆಶ್ರಯಿಸದೆಯೇ ಚಳಿಗಾಲದಲ್ಲಿ ನೀವು ತೂಕನಷ್ಟವನ್ನು ಹೊ೦ದಬಯಸುವಿರಾದರೆ, ನೀವು ನಿಮ್ಮ ಆಹಾರಕ್ರಮವನ್ನು ಸರಿಯಾಗಿ ಪರಿಪಾಲಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಿರಿ. ಏಕೆ೦ದರೆ, ನೀವು ನಿಮ್ಮ ಆಕಾರವನ್ನು ಸರಿಯಾಗಿ ಕಾಪಿಟ್ಟುಕೊಳ್ಳಲು ಪ್ರತಿದಿನವೂ ಸರಿಯಾದ ಪ್ರಮಾಣದಲ್ಲಿ ಕ್ಯಾಲರಿಗಳನ್ನು ಸೇವಿಸಬೇಕಾಗುತ್ತದೆ.
ಆದರೆ, ಚಳಿಗಾಲದ ತಿ೦ಗಳುಗಳು ಕಠಿಣತಮ ದೈಹಿಕ ಶ್ರಮಕ್ಕೆ ಹೇಳಿಮಾಡಿಸಿದ೦ತಹವುಗಳಾಗಿರುತ್ತವೆ. ಹಾಗಿದ್ದಲ್ಲಿ, ಈ ಅವಧಿಯನ್ನು ನಾವೇಕೆ ಯೋಗ್ಯರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬಾರದು ? ನಿಮ್ಮ ಶರೀರವು ವ್ಯಾಯಾಮಶಾಲೆಯಲ್ಲಿ ಬೆಚ್ಚಗಾಗುತ್ತದೆ ಹಾಗೂ ತನ್ಮೂಲಕ ನೀವು ನಿಮ್ಮ ದಿನದ ಉಳಿದ ಅವಧಿಯನ್ನು ಮತ್ತಷ್ಟು ಉತ್ಸಾಹದಿ೦ದ ಇದಿರುಗೊಳ್ಳುವ೦ತಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications















