ಮನೆ ಮದ್ದುಗಳ ಮೂಲಕ ಗೊರಕೆಯಿಂದ ಪರಿಹಾರ

By: Manohar.V
Subscribe to Boldsky

ಹೆಚ್ಚಿನ ಜನರು ಅನುಭವಿಸುವ ಸಮಸ್ಯೆಯೆಂದರೆ ಗೊರಕೆಯ ಸಮಸ್ಯೆಯಾಗಿದೆ. ನೀವು ಸುಖನಿದ್ದೆಯಲ್ಲಿದ್ದು, ನಿಮ್ಮ ಸಂಗಾತಿ ನಿದ್ದೆ ಇಲ್ಲದ ಹಲವು ರಾತ್ರಿಗಳನ್ನು ಕಳೆಯುತ್ತಿದ್ದರೆ ಅದರಷ್ಟು ತೊಂದರೆಯನ್ನು ಅನುಭವಿಸುವುದು ಬೇರೊಂದಿಲ್ಲ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ಬಯಸಿದ್ದರೆ ಈ ಲೇಖನವನ್ನು ಓದಿ.

ಇದೊಂದು ಮುಕ್ತಿಪಡೆಯಲಾಗದ ಸಮಸ್ಯೆಯೇನಲ್ಲ, ಉಸಿರಾಟದ ಸ್ವಾಭಾವಿಕ ಫಲಿತಾಂಶ ಇದಾಗಿದೆ. ನಿದ್ದೆ ಮಾಡುವ ಸಮಯದಲ್ಲಿ ವ್ಯಕ್ತಿ ಉಸಿರಾಡುವಾಗ, ಧ್ವನಿ ತರಂಗಗಳನ್ನು ಉಂಟುಮಾಡುವ ಗಾಳಿಯು ವೃತ್ತಾಕಾರವಾಗಿ ಸಂಚಲನವಾಗುತ್ತದೆ. ಹೆಚ್ಚು ಗಾಳಿ ಪ್ರವಹಿಸಿದಂತೆ, ಧ್ವನಿಯ ಶಬ್ಧ ದೊಡ್ಡದಾಗುತ್ತದೆ ಮತ್ತು ಇದು ಕಿರಿಕಿರಿಯಾಗುತ್ತದೆ. ನಿದ್ದೆಯ ಸಮಯದಲ್ಲಿ ನಿಮ್ಮ ಬಾಯಿ ಮತ್ತು ಮೂಗಿನ ಮೂಲಕ ಗಾಳಿಯು ಸುಲಭವಾಗಿ ಹರಿದಾಡದಿದ್ದರೆ ಗೊರಕೆ ಉಂಟಾಗುತ್ತದೆ.

ಕಟ್ಟಿದ ಮೂಗು ಅಥವಾ ಕೆಮ್ಮಿನ ಸಮಯದಲ್ಲಿ ಗೊರಕೆ ಸಾಂದರ್ಭಿಕವಾಗಿರುತ್ತದೆ. ಗೊರಕೆ ದೈನಂದಿನ ತೊಂದರೆಯಾಗಿದ್ದರೆ, ಅದು ನಿಜವಾಗಿಯೂ ಗಂಭೀರ ಸಮಸ್ಯೆ. ಮೂಗಿನ ನರದ ಮಾರ್ಗದಲ್ಲಿ ಉಂಟಾಗುವ ಧ್ವನಿಯ ತಂತುಕಂಪನದ ಮುಚ್ಚುವಿಕೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ವಯಸ್ಸು, ಮೂಗಿನ ಮತ್ತು ಉಬ್ಬಸದ ಸಮಸ್ಯೆ, ಅತಿ ತೂಕ ಮತ್ತು ಧೂಮಪಾನದಿಂದ ಗೊರಕೆಯುಂಟಾಗುತ್ತದೆ. ಮತ್ತು ನೀವು ನಿದ್ದೆ ಮಾಡುವ ಭಂಗಿ ಕೂಡ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ.

ಆರೋಗ್ಯ ಹಾಳು ಮಾಡುವುದರೊಂದಿಗೆ ಸಂಬಂಧವನ್ನೂ ಗೊರಕೆ ಹಾಳುಗೆಡವುತ್ತದೆ! ಇದು ಹಲವಾರು ಸಮಸ್ಯೆಗಳನ್ನು ಉಂಟುಮಾಡುವುದಂತೂ ಖಂಡಿತ. ಅದಕ್ಕಾಗಿ ನಾವಿಂದು ನಿಮಗಾಗಿ ಕೆಲವೊಂದು ನೈಸರ್ಗಿಕ ಪರಿಹಾರಗಳನ್ನು ನೀಡುತ್ತಿದ್ದೇವೆ, ಈ ವಿಧಾನವನ್ನು ಅನುಸರಿಸಿ ಗೊರಕೆಯಿಂದ ಮುಕ್ತಿ ಪಡೆಯಿರಿ.

1.ತಲೆದಿಂಬಿನ ಬಳಕೆ

1.ತಲೆದಿಂಬಿನ ಬಳಕೆ

ಹಾಸಿಗೆಯಲ್ಲಿ ಹಾಗೆಯೇ ಮಲಗುವುದರ ಬದಲಿಗೆ, ತಲೆದಿಂಬನ್ನು ಬಳಸಿ ಗಾಳಿಯ ತರಂಗಗಳಿಂದ ಉಂಟಾಗುವ ಗಂಟಲಲ್ಲಿನ ಅಧಿಕ ಧ್ವನಿಯನ್ನು ನಿರ್ಬಂಧಿಸಿ.

2.ಒಂದು ಬದಿಗೆ ಮಲಗುವುದು

2.ಒಂದು ಬದಿಗೆ ಮಲಗುವುದು

ರಾತ್ರಿ ಪೂರ್ತಿ ಒಂದೇ ಬದಿ ಮಲಗುವುದು ತುಂಬಾ ಕಷ್ಟಾಸಾಧ್ಯ. ನೀವು ಪ್ರಯತ್ನಪಟ್ಟರೆ ಒಂದೇ ಬದಿ ನಿಮ್ಮ ಕೈಗಳನ್ನು ಮಡಚಿ ತಲೆದಿಂಬಿಗೆ ತಲೆಯನ್ನು ಒರಗಿಸಿ ಮಲಗುವುದು ನಿರಂತರ ಪ್ರಕ್ರಿಯೆಯಾಗುತ್ತದೆ. ಒಂದೇ ಬದಿ ಮಲಗುವುದು ಗೊರಕೆಯನ್ನು ಹೋಗಲಾಡಿಸುವ ಒಂದು ಸರಳ ಉಪಾಯವಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ಗೊರಕೆ ಕಡಿಮೆಯಾಗುತ್ತದೆ.

3.ಆವಿ ಸೇವನೆ

3.ಆವಿ ಸೇವನೆ

ಆವಿ ತೆಗೆದುಕೊಳ್ಳುವುದು ಕೂಡ ಗೊರಕೆಗೆ ಉತ್ತಮ ಪರಿಹಾರವಾಗಿದೆ. ನೀವು ಆವಿಯನ್ನು ಒಳಕ್ಕೆಳೆದುಕೊಳ್ಳುವುದು ಉಸಿರಾಟದ ಹಾದಿಯನ್ನು ಸುಗಮಗೊಳಿಸಿ ಕಟ್ಟಿದ ಮೂಗನ್ನು ಬಿಡಿಸುತ್ತದೆ.

4.ಧೂಮಪಾನ ತ್ಯಜಿಸಿ

4.ಧೂಮಪಾನ ತ್ಯಜಿಸಿ

ಗೊರಕೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಧೂಮಪಾನ ಉಂಟುಮಾಡುತ್ತದೆ. ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುವ ಉರಿಯೂತ ಹಾಗೂ ಊತವನ್ನು ಗಂಟಲಲ್ಲಿ ಧೂಮಪಾನ ಉಂಟು ಮಾಡುತ್ತದೆ. ಇದರಿಂದ ಗೊರಕೆಯ ತೀವ್ರತೆ ಹೆಚ್ಚಾಗುತ್ತದೆ.

5.ಮದ್ಯಪಾನ ತ್ಯಜಿಸಿ

5.ಮದ್ಯಪಾನ ತ್ಯಜಿಸಿ

ಮದ್ಯಪಾನ, ನಿದ್ದೆ ಮಾತ್ರೆ, ಮಾಂಸಖಂಡಗಳನ್ನು ಹಗುರಗೊಳಿಸಿ ಕಟ್ಟುವಿಕೆಯನ್ನು ಉಂಟುಮಾಡುತ್ತದೆ.

6.ಕೆಮ್ಮಿಗೆ ಔಷಧಾಪಚಾರ

6.ಕೆಮ್ಮಿಗೆ ಔಷಧಾಪಚಾರ

ಕೆಮ್ಮು ಮತ್ತು ನೆಗಡಿ ಗೊರಕೆಗೆ ಮೂಲ ಕಾರಣವಾಗಿದೆ. ನಿಮಗೆ ಶೀತ ಕೆಮ್ಮು ಉಂಟಾಗಿದ್ದರೆ ಕೂಡಲೇ ಅದನ್ನು ಗುಣಪಡಿಸಿಕೊಳ್ಳಿ.

7.ಮಲಗುವ ಸಮಯದಲ್ಲಿ ತಿಂಡಿ ತಿನಿಸುಗಳ ಸೇವನೆ ಬೇಡ

7.ಮಲಗುವ ಸಮಯದಲ್ಲಿ ತಿಂಡಿ ತಿನಿಸುಗಳ ಸೇವನೆ ಬೇಡ

ಮಲಗುವ ಸಮಯದಲ್ಲಿ ತಿಂಡಿ ತಿನಿಸುಗಳ ಸೇವನೆ (ಪಿಜ್ಜಾ, ಬರ್ಗರ್, ಚೀಸ್, ಪಾಪ್‌ಕಾರ್ನ್) ಯಿಂದ ಕೊಬ್ಬಿನ ಅಂಶ ಹೆಚ್ಚಾಗುತ್ತದೆ ಇದು ನೆಗಡಿಯ ಸ್ರವಿಸುವಿಕೆಯನ್ನು ಹೆಚ್ಚಾಗಿಸಿ ಗೊರಕೆಯನ್ನು ಉಂಟುಮಾಡುತ್ತದೆ.

Read more about: health, ಆರೋಗ್ಯ
English summary

Stop Snoring With Home Remedies

Snoring is one of the most troublesome problem which a lot of people are facing. You might be deep asleep snoring, but your partner is spending countless nights without getting proper sleep.
Subscribe Newsletter