ನಿಮ್ಮನ್ನು ಕಾಡುವ ಸಾಮಾನ್ಯ ಸೋಂಕುಗಳಿಗೆ ನೈಸರ್ಗಿಕ ಚಿಕಿತ್ಸೆಗಳು

By Poornima Hegde

ನಾವು ಸೇವಿಸುವ ಸರಿಯಾದ ಆಹಾರಗಳು, ದೇಹದಲ್ಲಿ ಖನಿಜಗಳು, ಜೀವಸತ್ವಗಳು, ಮತ್ತು ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತವೆ ಎನ್ನುವುದು ನಮಗೆಲ್ಲ ತಿಳಿದಿರುವ ಸಾಮಾನ್ಯ ಸಂಗತಿ. ಆದರೂ ದೈನಂದಿನ ಸಮಸ್ಯೆಯಾದ ಬಿಕ್ಕಳಿಕೆಯಿಂದ ಹಿಡಿದು ಇಸುಬು ರೋಗಗಳವರೆಗೆ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಗಂಭೀರವಾದ ಆರೋಗ್ಯ ಸಮಸ್ಯೆಯಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ ಎಂಬುದನ್ನು ನೆನಪಿನಲ್ಲಿಡಬೇಕಾದ ಅಂಶ. ಆದರೆ ಈ ಕೆಳಗಿನ 10 ವಸ್ತುಗಳು ನೀವು ನಿಮ್ಮ ಒಂದು ಸಣ್ಣ ಆರೋಗ್ಯ ಸಮಸ್ಯೆಯಿಂದ ಬಳಲದೇ ಅದಕ್ಕೆ ತಕ್ಷಣ ನೀವೇ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಸಹಾಯಮಾಡುತ್ತವೆ. ಪಪ್ಪಾಯಿ ಹಣ್ಣಿನ ಅತ್ಯುತ್ತಮ ಆರೋಗ್ಯಕಾರಿ ಪ್ರಯೋಜನಗಳು

ಮುಟ್ಟಿನ ಸೆಳೆತಕ್ಕೆ ಶುಂಠಿ

ಮುಟ್ಟಿನ ಸೆಳೆತಕ್ಕೆ ಶುಂಠಿ

ಸಾಂಪ್ರದಾಯಿಕ ಚೀನೀ ಔಷಧದಲ್ಲಿ 2,000 ವರ್ಷಗಳಿಂದ ಶುಂಠಿಯನ್ನು ಬಳಸಲಾಗುತ್ತಿದೆ. ಶುಂಠಿ ರಕ್ತದ ಹರಿವನ್ನು ಸುಧಾರಿಸಲು ಮತ್ತು ಮುಟ್ಟಿನ ಸಂದರ್ಭದಲ್ಲಿ ಗರ್ಭಕೋಶದ ಸ್ನಾಯು ಸೆಳೆತವನ್ನು ಸೇರಿದಂತೆ ಮುಟ್ಟಿನ ನೋವನ್ನು ನಿವಾರಿಸಲು ಸಹಾಯಮಾಡುತ್ತದೆ. ಸ್ಥಳೀಯ ಮತ್ತು ಪೂರಕ ಔಷಧಗಳಿಂದಲೂ ಸಾಬೀತಾಗಿರುವುದೆನೆಂದರೆ ಶುಂಠಿ, ಐಬುಪ್ರೊಫೇನ್ ಮಾತ್ರೆಗಳಷ್ಟು ಪರಿಣಾಮಕಾರಿಯಾಗಿ ಮುಟ್ಟಿನ ನೋವನ್ನು ನಿವಾರಿಸುತ್ತದೆ (ಹೆಚ್ಚಿನ ಸಂಶೋಧನೆ ಅಗತ್ಯ). ತಿಂಗಳಿನ ನೋವನ್ನು ನಿವಾರಿಸಲು/ಸಹಿಸಿಕೊಳ್ಳಲು, ಬೆಚ್ಚಗಿನ ಶುಂಠಿ ಚಹಾವನ್ನು ಒಂದು ಲೋಟದಷ್ಟು ಸೇವಿಸಿ.

ಮೂತ್ರ ಸಂಬಂಧಿ ಸಮಸ್ಯೆಗೆ ಕ್ರಾನ್ ಬೆರ್ರಿ ಪರಿಹಾರ

ಮೂತ್ರ ಸಂಬಂಧಿ ಸಮಸ್ಯೆಗೆ ಕ್ರಾನ್ ಬೆರ್ರಿ ಪರಿಹಾರ

ಕ್ರಾನ್ ಬೆರ್ರಿ ಹಣ್ಣುಗಳಲ್ಲಿ ಪ್ರೊವಾಂಥೋ ಸೈಂಡಿಯಾಸಿಸ್ ಎಂಬ ಸಂಯುಕ್ತ ಪದಾರ್ಥವಿದ್ದು ಇದು ಮೂತ್ರನಾಳದಲ್ಲಿ ಸೋಂಕನ್ನು ಉಂಟುಮಾಡುವ ಬಾಕ್ಟೀರಿಯಾವನ್ನು ಹಿಮ್ಮೆಟ್ಟಿಸುತ್ತದೆ. ಕೊಲೈಯು ಮೂತ್ರನಾಳದ ಸೋಂಕನ್ನು ಉಂಟುಮಾಡುವುದರಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂಯುಕ್ತ ಪದಾರ್ಥವು ಮೂತ್ರನಾಳದಲ್ಲಿ ಸೋಂಕನ್ನು ಉಂಟುಮಾಡುವ ಬಾಕ್ಟೀರಿಯಾಗಳನ್ನು ಮೂತ್ರಕೋಶದ ಗೋಡೆಗೆ ಅಂಟಿಕೊಳ್ಳುವುದನ್ನು ತಡೆಯುವ ಮೂಲಕ ಸೋಂಕು ಬಾರದಂತೆ ತಡೆಯುತ್ತದೆ. ಈಗಾಗಲೇ ನಿಮಗೆ ಸೋಂಕು ಇದ್ದಲ್ಲಿ ಕ್ರಾನ್ ಬೆರ್ರಿ ಹಣ್ಣುಗಳು ಸಹಕಾರಿಯಾಗದೇ ಇರಬಹುದು ಆದರೆ ಮುಂದೆ ಉಂಟಾಗಬಹುದಾದ ಸೋಂಕನ್ನು ತಡೆಯುವ ಉದ್ದೇಶದಿಂದ ಇವನ್ನು ನಿರಂತರವಾಗಿ ಸೇವಿಸಿದಲ್ಲಿ ಪರಿಣಾಮ ಖಂಡಿತ ಇದ್ದೇ ಇದೆ. ಸೋಂಕು ಇದ್ದ 20% ಮಹಿಳೆಯರು ಇದನ್ನೇ ಮರಳಿ ಪಡೆಯುವ ಸಾಧ್ಯತೆ ಇರುವ ಕಾರಣ 20% ಕ್ರಾನ್ ಬೆರ್ರಿ ಹಣ್ಣುಗಳ ರಸ ಇರುವ ಹಣ್ಣಿನ ರಸದ ಸೇವನೆ ಬಹಳ ಪರಿಣಾಮಕಾರಿ.

ಋತುಚಕ್ರ ಪೂರ್ವ ಲಕ್ಷಣಗಳಿಗಾಗಿ ಕಾಲ್ಸಿಯಮ್ ಯುಕ್ತ ಆಹಾರ

ಋತುಚಕ್ರ ಪೂರ್ವ ಲಕ್ಷಣಗಳಿಗಾಗಿ ಕಾಲ್ಸಿಯಮ್ ಯುಕ್ತ ಆಹಾರ

ನಿಮ್ಮ ಋತು ಚಕ್ರದ ಮಾಸಿಕ ದಿನಗಳ ನಿಮ್ಮ ಮೂಡ್ ಬದಲಾವಣೆಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿವೆಯೇ? ಹೌದು ಎಂದಾದರೆ ಇದು ಕೇವಲ ನಿಮ್ಮ ಒಬ್ಬರ ಸಮಸ್ಯೆಯಲ್ಲ ಜಗತ್ತಿನ ಋತುಚಕ್ರ ನಡೆಯುತ್ತಿರುವ 85% ಮಹಿಳೆಯರಲ್ಲಿ ಒಂದಲ್ಲ ಒಂದು ಲಕ್ಷಣಗಳು ಕಾಣುತ್ತಲೇ ಇರುತ್ತವೆ. ಆದರೆ ಒಳ್ಳೆಯ ಸುದ್ದಿ ಎಂದರೆ ನೀವು ಸೇವಿಸುವ ಆಹಾರ ಈ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಡಾ. ರೋಸರ್ ಹೇಳುವ ಪ್ರಕಾರ ಋತು ಚಕ್ರ ಪೂರ್ವ ಲಕ್ಷಣಗಳು ಇರುವ ಮಹಿಳೆಯರಲ್ಲಿ ಕಾಲ್ಸಿಯಂ ಅಂಶ ಕಡಿಮೆ ಇರುತ್ತದೆ ಇದೇ ಈ ಲಕ್ಷಣಗಳಿಗೆ ಕಾರಣವಾಗುತ್ತದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ದಿನವೊಂದಕ್ಕೆ 1000 ಮಿಲಿಗ್ರಾಂ ಕಾಲ್ಸಿಯಂ ಸೇವನೆ ಮಾಡಬೇಕು. ಹಾಲಿನ ಪದಾರ್ಥಗಳು ಕಾಲ್ಸಿಯಂಯುಕ್ತ ಆಹಾರಗಳು ಎಂದು ನಿಮಗೆ ತಿಳಿದೇ ಇದೆ. ಇದರ ಜೊತೆಗೆ ಬಾದಾಮಿ, ಕೋಸುಗೆಡ್ಡೆ, ಹಸಿರು ತರಕಾರಿ ಮತ್ತು ಸಾರ್ಡೀನ್ ಗಳು ಕೂಡ ಹೌದು.

ಎಸ್ಜಿಮಾ ಅಥವಾ ಇಸುಬು ಕಾಯಿಲೆಗಾಗಿ ಓಟ್ ಹಿಟ್ಟು

ಎಸ್ಜಿಮಾ ಅಥವಾ ಇಸುಬು ಕಾಯಿಲೆಗಾಗಿ ಓಟ್ ಹಿಟ್ಟು

ಉರಿಯುವ ಹಾಗೂ ಊತ ಇರುವ ಚರ್ಮವನ್ನು ಶಾಂತಗೊಳಿಸಲು ಓಟ್ಸ್ ಹಿಟ್ಟಿನ ಆಹಾರ ಸೇವಿಸಬಹುದು. ಓಟ್ಸ್ ನಲ್ಲಿ ಫೈಟೋ ಕೆಮಿಕಲ್ಸ್ ಇರುವ ಕಾರಣ ಇದು ಉರಿಯನ್ನು ಕಡಿಮೆ ಮಾಡಿ ತುರಿಕೆಯನ್ನು ಕಡಿಮೆ ಮಾಡುತ್ತದೆ. ನ್ಯೂ ಯಾರ್ಕ್ ನ ಚರ್ಮ ತಜ್ಞೆ ಎಮ್. ಡಿ. ಕವಿತಾ ಮರಿವಾಲಾ ಹೇಳುವ ಪ್ರಕಾರ ಕಾಲು ಕಪ್ ಓಟ್ಸ್ ಹುಡಿಯನ್ನು ನೀರಿನಲ್ಲಿ ಬೆರೆಸಿ ಆದರೆ ಇದರಲ್ಲಿ ಯಾವುದೇ ಫ್ಲೇವರ್ಸ್ ಗಳು ಇರಬಾರದು. ಇದನ್ನು ಕಡಿಮೆ ಬಿಸಿ ಇರುವ ನೀರಿನಲ್ಲಿ ಬೆರೆಸಿ ಹಾಗೂ ಕಲಕಲು ಆರಂಭಿಸಿ. ನೀರಿನ ಬಣ್ಣ ಬಿಳಿಯ ಬಣ್ಣಕ್ಕೆ ತಿರುಗುವ ತನಕ ಹೀಗೆಯೇ ಮಾಡಿ ಹಾಗೂ ಇದರಿಂದ ಸ್ನಾನ ಮಾಡಿ. ಇನ್ನೊಂದು ವಿಧಾನದ ಮೂಲಕ ಕಾಲು ಕಪ್ ಓಟ್ಸ್ ಹುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಪೇಸ್ಟ್ ನಂತೆ ಮಾಡಿ ದೇಹಕ್ಕೆ ಹಚ್ಚಿಕೊಂಡು ಹತ್ತು ನಿಮಿಷಗಳ ನಂತರ ಸ್ನಾನ ಮಾಡಬಹುದು.

ಒಣ ಚರ್ಮ ನಿವಾಕರ ಸಮುದ್ರ ಉಪ್ಪು

ಒಣ ಚರ್ಮ ನಿವಾಕರ ಸಮುದ್ರ ಉಪ್ಪು

ನಿಮ್ಮ ಮಂಡಿಗಳು, ಮೊಣಕೈ ಮತ್ತು ಹಿಮ್ಮಡಿಯ ಒಣ ಚರ್ಮಕ್ಕೆ ದುಬಾರಿ ಚರ್ಮದ ರಕ್ಷಣೆಯ ಉತ್ಪನ್ನಗಳನ್ನು ಕೊಳ್ಳುವ ಅಗತ್ಯವಿಲ್ಲ. ಮನೆಯಲ್ಲಿ ಮಾಡಿದ ಸಮುದ್ರ ಉಪ್ಪಿನ ಸ್ಕೃಬ್ ಇಂತಹ ಉತ್ಪನ್ನಗಳಂತೆಯೇ ಕೆಲಸ ಮಾಡುತ್ತದೆ. ಒಣ ಚರ್ಮವನ್ನು ತೆರವುಗೊಳಿಸಲು ಸಮುದ್ರ ಉಪ್ಪು ಉತ್ತಮ ವಸ್ತುವಾಗಿದೆ ಏಕೆಂದರೆ ಇದು ದಪ್ಪ ಪದರವನ್ನು ಹೊಂದಿದ್ದು ಒಣ ಚರ್ಮವನ್ನು ಸ್ವಚ್ಛಗೊಳಿಸಲು ಸಹಾಯಕವಾಗಿದೆ. ಆದರೂ, ನಿಮ್ಮ ಮುಖ ಮತ್ತು ತೋಳುಗಳು ಹಾಗೂ ದೇಹದ ಇತರ ಸೂಕ್ಷ್ಮ ಪ್ರದೇಶಗಳಿಂದ ಇದನ್ನು ದೂರವಿಡುವುದು ಉತ್ತಮ. ಇದು ಸೂಕ್ಷ್ಮ ಚರ್ಮದ ಮೇಲೆ ಕಠಿಣ ಪರಿಣಾಮವನ್ನೂ ಬೀರಬಹುದು.

ಊದಿದ ಕಣ್ಣುಗಳ ಚಿಕಿತ್ಸಕ ಸೌತೆಕಾಯಿಗಳು

ಊದಿದ ಕಣ್ಣುಗಳ ಚಿಕಿತ್ಸಕ ಸೌತೆಕಾಯಿಗಳು

ನಿಮ್ಮ ಕಣ್ಣುಗಳ ಮೇಲೆ ತಂಪು ಸೌತೆಕಾಯಿ ಚೂರುಗಳನ್ನು ಇಟ್ಟುಕೊಳ್ಳುವುದು ಸ್ವಲ್ಪ ತಮಾಷೆ ಎನ್ನಿಸಿದರೂ, ವಯಸ್ಸು ಕಳೆದಂತೆ ಕಳೆದುಕೊಳ್ಳುವ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸಲು ಇದು ನಿಜವಾಗಿಯೂ ಸಹಾಯಮಾಡುತ್ತದೆ. ಶೇಕಡಾ 95 ರಷ್ಟು ನೀರಿನ ಅಂಶವನ್ನು ಹೊಂದಿರುವ ಸೌತೆಕಾಯಿ ಉತ್ತಮ ತಂಪು ಸಂವೇದನೆಯನ್ನು ಕಣ್ಣುಗಳಿಗೆ ನೀಡುತ್ತದೆ. ಮತ್ತು ಇದರಲ್ಲಿನ ಶೈತ್ಯ ಸಂಕೋಚನ, ರಕ್ತನಾಳಗಳನ್ನು ರಕ್ಷಿಸಲು ಮತ್ತು ಉರಿಯನ್ನು ಕಡಿಮೆಗೊಳಿಸಲು ಕಾರಣವಾಗುತ್ತದೆ. ಐಸ್ ಪ್ಯಾಕ್ ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಸೌತೆಕಾಯಿಗಳು ಹೇಗೆ ಕೆಲಸ ವಿರ್ವಹಿಸುತ್ತವೆ ಎನ್ನುವುದಕ್ಕೆ ಕಾರಣಗಳಿವೆ. ನೀವು ಕೇವಲ 10 ನಿಮಿಷಗಳ ಕಾಲ ಸೌತೆಕಾಯಿಯನ್ನು ಕಣ್ಣುಗಳ ಮೇಲಿಟ್ಟುಕೊಂಡರೆ, ಕಣ್ಣುಗಳು ಹೊಳಪನ್ನು( ತಾಜಾತನ) ಪಡೆದುಕೊಳ್ಳುತ್ತವೆ.

ಮಲಬದ್ಧತೆ ನಿವಾರಕ ಒಣದ್ರಾಕ್ಷಿ

ಮಲಬದ್ಧತೆ ನಿವಾರಕ ಒಣದ್ರಾಕ್ಷಿ

ಒಣಗಿದ ದ್ರಾಕ್ಷಿ ಕರಗದ ಫೈಬರ್ (ಕೊಬ್ಬು) ಅಂಶವನ್ನು ಹೊಂದಿರುತ್ತದೆ. ಇದು ಮಲಬದ್ಧತೆಯೊಂದಿಗೆ ಹೋರಾಡಲು ಒಂದು ಪ್ರಮುಖ ಪೋಷಕಾಂಶವಾಗಿದೆ. ಇದರಲ್ಲಿರುವ ಫೈಬರ್ ಅಂಶ ನೀರಿನಲ್ಲಿ ಕರಗುವುದಿಲ್ಲ ಮತ್ತು ಇದು ತ್ಯಾಜ್ಯವನ್ನು ಜೀರ್ಣಾಂಗ ವ್ಯವಸ್ಥೆಯ ಮೂಲಕ ಹೊರಹಾಕಲು ಸಹಾಯಮಾಡುತ್ತದೆ. ಆದ್ದರಿಂದ ದಿನವೂ ಒಣ ದ್ರಾಕ್ಷಿಯನ್ನು ಸೇವಿಸಲು ಆರಂಭಿಸಿ. ಇದರಿಂದ ಹೆಚ್ಚಿನ ಪರಿಣಾಮ ಕಾಣದಿದ್ದಲ್ಲಿ ದಿನಕ್ಕೆ ಎರಡು ಅಥವಾ ಮೂರು ದ್ರಾಕ್ಷಿಯನ್ನು ಸೇವಿಸಿ.

ಬಿಕ್ಕಳಿಕೆ ನಿವಾರಕ ಸಕ್ಕರೆ

ಬಿಕ್ಕಳಿಕೆ ನಿವಾರಕ ಸಕ್ಕರೆ

ನೀವು ಬಿಕ್ಕಳಿಸುವಾಗ ಧ್ವನಿಫಲಕ ಸರಣಿ ಸೆಳೆತಕ್ಕೆ ಒಳಗಾಗುತ್ತದೆ. ಆದರೆ ನೀವು ಒಂದು ಚಮಚ ಸಕ್ಕರೆಯನ್ನು ಬಾಯಿಗೆ ಹಾಕಿಕೊಳ್ಳುವುದರ ಮೂಲಕ ನಿಮ್ಮ ದೇಹದ ಈ ಪ್ರಕ್ರಿಯೆಯನ್ನು ನಿಯಂತ್ರಿಸಬಹುದು. ಸಿಹಿ ಸಂವೇದನೆ ವೇಗಸ್ ನರವನ್ನು ಉತ್ತೇಜಿಸುವ ಸಾಕಷ್ಟು ಪ್ರಬಲವಾಗಿರುತ್ತದೆ. ನಿಮ್ಮ ಮೆದುಳಿನ ಕಾಂಡದಿಂದ (ಬುಡದ ನರಗಳು) ಪ್ರಾರಂಭವಾಗುವ ಅತೀ ಉದ್ದದ ನರವು, ನಿಮ್ಮ ದ್ವನಿಫಲಕದಿಂದ ಹೊಟ್ಟೆ ನಿಯಂತ್ರಿಸುವವರೆಗೆ ವಿಸ್ತರಿಸಿರುತ್ತದೆ. ಬಿಕ್ಕಳಿಕೆಯನ್ನು ನಿಲ್ಲಿಸಲು, ನಾಲಿಗೆಯ ಕೆಳಗೆ ಸಕ್ಕರೆಯನ್ನು ಇಟ್ಟುಕೊಳ್ಳಿ ಮತ್ತು ಹೆಚ್ಚು ಸಂವೇದನೆಗಾಗಿ ನಿಮ್ಮ ಗಂಟಲಿಗೆ ತಗಲುವಂತೆ ಸಕ್ಕರೆಯನ್ನು ನುಂಗಿ. ಇದರಿಂದ ತಕ್ಷಣದಲ್ಲಿ ಬಿಕ್ಕಳಿಕೆ ನಿಲ್ಲುತ್ತದೆ.

ಎದೆಯುರಿ ನಿವಾರಕ ಸೇಬು

ಎದೆಯುರಿ ನಿವಾರಕ ಸೇಬು

ಹುಳಿ ತೇಗು ಅಥವಾ ಎದೆಯುರಿಯನ್ನು ಹೋಗಲಾಡಿಸಲು ಮಾಡಬೇಕಾದ ಅತ್ಯಗತ್ಯ ಅಂಶ, ಸೋಡಾ, ಕೊಬ್ಬಿನ ಗೋಮಾಂಸ, ಮತ್ತು ಏನಾದರೂ ಹುರಿದ ಪದಾರ್ಥಗಳ ಸೇವನೆಯನ್ನು ತಪ್ಪಿಸುವುದು. ನಿಮ್ಮ ಆಹಾರದಲ್ಲಿ ಇರಲೇಬೇಕಾದ ಒಂದು ಪ್ರಮುಖ ಆಹಾರ, ಸೇಬು. ಸೇಬು ಹಣ್ಣಿನಲ್ಲಿರುವ, ಕೊಬ್ಬು ಕರಗಿಸುವ ಪೆಕ್ಸಿನ್ ಅಂಶ ನಿಜವಾಗಿಯೂ ಜಠರದ ಆಮ್ಲ ಹೀರಿಕೊಳ್ಳುವ ಉತ್ತಮ ಶಕ್ತಿಯಾಗಿದೆ.

ಸೋಂಕು ನಿವಾರಕ ಅರಿಶಿನ

ಸೋಂಕು ನಿವಾರಕ ಅರಿಶಿನ

ಭಾರತದಲ್ಲಿ ಪವಿತ್ರ ಎಂದು ಕರೆಯಲ್ಪಡುವ ಅರಿಶಿನ ಪುಡಿ ಸೋಂಕು ಮತ್ತು ಗಾಯಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದರಲ್ಲಿರುವ ಕರ್ಕ್ಯುಮಿನ್ ನಂತಹ ಸಂಯುಕ್ತ ಎಲ್ಲಾ ರೋಗ ನಿವಾರಕ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಕರ್ಕ್ಯುಮಿನ್ ಇರುವ ಆಹಾರಗಳು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುತ್ತವೆ. ನಿಮ್ಮ ಔಷಧ ಅಥವಾ ಮುಲಾಮು ತತ್ ಕ್ಷಣದಲ್ಲಿ ಪರಿಣಾಮ ಬೀರದಿದ್ದರೆ ನೀವು ನಿಮ್ಮ ಬಾಹ್ಯ ಗಾಯಗಳಿಗೆ ಅರಿಶಿನವನ್ನು ಲೇಪಿಸಬಹುದು. ಇದರಿಂದ ಗಾಯ ಅಥವಾ ಯಾವುದೇ ಸೋಂಕು ತಗುಲದಂತೆ ದೇಹವನ್ನು ರಕ್ಷಿಸಬಹುದು.

X
Desktop Bottom Promotion