Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಆಹಾರಗಳ ಬಳಕೆಯಿಂದ ರೋಗಗಳನ್ನು ನಾವು ಹೇಗೆ ತಡೆಯಬಹುದು?
ಆಹಾರಗಳು ನಮ್ಮ ಶರೀರವನ್ನು ಪೋಷಣೆ ಮಾದುವುದಲ್ಲದೆ ನಮ್ಮ ದೈನಂದಿನ ಚಟುವಟಿಕೆಗಳಿಗೆ ಉತ್ತೇಜನಕೊಡುತ್ತದೆಂದು ಎಲ್ಲರಿಗೂ ತಿಳಿದ ವಿಷಯ. ಆದರೆ ಅದೇ ಆಹಾರದಿಂದ ಕೆಲವು ಕಾಯಿಲೆಗಳನ್ನು - ಅಂದರೆ ಅಧಿಕ ರಕ್ತದೊತ್ತಡ, ಅಸ್ತಮಾ, ಚರ್ಮ ತುರಿಕೆ ಮತ್ತು ಮೂತ್ರಕೋಶ ಸೋಂಕು - ಇಂತಹ ಕಾಯಿಲೆಗಳನ್ನು ತಡೆಗಟ್ಟಬಹುದುದೆಂದು ನಿಮಗೆ ಗೊತ್ತೇ?
ಒಂದು ಸಮತೋಲೀನ ಆಹಾರ ಒಟ್ಟಾರೆ ಅರೋಗ್ಯಕ್ಕೆ ಅಡಿಪಾಯವಾದರೆ ಕೆಲವು ನಿರ್ದಿಷ್ಟ ಕಾಯಿಲೆಗಳು ಮತ್ತು ಅವುಗಳ ಲಕ್ಷಣಗಳನ್ನು ತೊಡೆದುಹಾಕಲು ಸಹಾಯವಾಗುವ ಕೆಲವು ಆಹಾರ ಪೋಷಕಾಂಶಗಳ ಕ್ರಮಬದ್ಧವಾದ ಸೇವನೆಯಿಂದ ಸಾಧ್ಯ. ಈ ದಿಶೆಯಲ್ಲಿ ಕೆಲವು ಆಹಾರಪದಾರ್ಥಗಳಿಂದ ಯಾವುದೇ ಅಡ್ಡ ಪರಿಣಾಮವಿಲ್ಲದೆ ನಿರ್ದಿಷ್ಟವಾದ ಕೆಲವೇ ಕಾಯಿಲೆಗಳನ್ನು ಗುಣಪಡಿಸಲು ಹೇಗೆಂಬುದನ್ನು ಮುಂದೆ ಓದಿ ತಿಳಿಯಿರಿ:
ಮಳೆಗಾಲದಲ್ಲಿ ಕಾಯಿಲೆ ಬೀಳದಿರಲು ಇವುಗಳನ್ನು ಪಾಲಿಸಿ

1. ಅವಕಾಡೊ
ಅವಕಾಡೊಗಳ ಸಹಾಯದಿಂದ ಕೆಟ್ಟ ಕೊಲೆಸ್ಟರಾಲನ್ನು ಕಡಿಮೆ ಮಾಡಲು ಸಾಧ್ಯ. ಅವಕಾಡೋವಿನಲ್ಲಿ ಅಪರ್ಯಾಪ್ತ (Unsaturated) ಕೊಬ್ಬಿನ ಅಂಶ ಹೇರಳವಾಗಿದ್ದು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟರಾಲ್ ಕಡಿಮೆಯಾಗಿ ಉತ್ತಮ ಕೊಲೆಸ್ಟರಾಲನ್ನು ಹೆಚ್ಚಿಸುತ್ತದೆ. ಆದ್ದರಿಂದ ಪ್ರತಿದಿನ ಅವಕಾಡೊ ತಿನ್ನುವುದರಿಂದ ಆರ್ಟರಿ ಶುದ್ಧೀಕರಣವಾಗುತ್ತದೆ.

2. ಅನಾನಸ್
ಅನಾನಸ್ ಹಣ್ಣಿನಲ್ಲಿ ಮೂಳೆ ಆರೋಗ್ಯಕ್ಕೆ ಮತ್ತು ಸಂಯೋಜಕ ಅಂಗಾಂಶವನ್ನು ವೃದ್ಧಿಗೊಳಿಸಲು ಮುಖ್ಯವಾದ ಮ್ಯಾಂಗನೀಸ್ ಖನಿಜವಿರುತ್ತದೆ. ಒಂದು ಲೋಟ ಅನಾನಸ್ ರಸವನ್ನು ಪ್ರತಿ ದಿನ ಕುಡಿಯುವುದರಿಂದ ದೇಹಕ್ಕೆ ಶೇಕಡಾ 73 ಭಾಗದಷ್ಟು ಮ್ಯಾಂಗನೀಸ್ ದೊರಕುತ್ತದೆ.

3, ಬ್ರೊಕೊಲಿ
ಬ್ರೊಕೊಲಿಯಲ್ಲಿ ವಿಟಮಿನ್‌ಗಳು, ಖನಿಜಗಳು, ನಾರಿನಾಂಶ ಮತ್ತು ಆಂಟಿಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳಿಂದ ಮುಕ್ತ ಮೂಲ ಸ್ವರೂಪಗಳಿಗಾಗುವ ಅಪಾಯವನ್ನು ತಡೆಗಟ್ಟಬಹುದು. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸಲು ಒಂದು ಅತ್ಯಂತ ವಿಶಿಷ್ಟವಾದ ಆಹಾರ.

4. ಬೆರಿಹಣ್ಣುಗಳು
ಬೆರಿಹಣ್ಣುಗಳು ಮೆದುಳಿನ ಆಲೋಚನಾಶಕ್ತಿಯನ್ನು ಹೆಚ್ಚಿಸಲು ಮತ್ತು ಜ್ಞಾಪಕ ಶಕ್ತಿಯನ್ನು ಸರಿಮಾಡಲು ಒಂದು ಸುಲಭವಾದ ಮತ್ತು ಸುರಕ್ಷಿತ ಹಣ್ಣು. ಬೆರಿ ಹಣ್ಣಿನಲ್ಲಿ ಸಸ್ಯಜನ್ಯ ಅಧಿಕವಾಗಿರುವುದರಿಂದ ವಯಸ್ಸು ಸಂಬಂಧಿತ ಕೊರತೆಗಳನ್ನು ಹಿಮ್ಮೆಟ್ಟಿಸಲು ಸಹಯಾಯಮಾಡುತ್ತದೆ. ಕೆಲವೇ ಹಣ್ಣುಗಳನ್ನು ಪ್ರತಿದಿನ ತಿನ್ನುವುದರಿಂದ ನಿಮ್ಮ ನರಮಂಡಲದ ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸಿ ಜ್ಞಾಪಕಶಕ್ತಿಯನ್ನು ವೃದ್ಧಿಗೊಳಿಸುತ್ತದೆ.

5. ಈರುಳ್ಳಿ
ಬಿಳಿ, ಹಳದಿ ಮತ್ತು ಕೆಂಪು ಬಣ್ಣದ ಈರುಳ್ಳಿ ಮತ್ತು ಇತರ ಅದೇ ತರಹ ಇರುವ ತರಕಾರಿಗಳು ಸ್ವಾದಿಷ್ಟ ಅಲ್ಲಿಯುಂ (allium) ಗುಂಪಿಗೆ ಸೇರಿದೆ. ಈ ಗುಂಪಿಗೆ ಸೇರಿದ ಮಹಾನ್ ತರಕಾರಿಗಳಲ್ಲಿ ಪಲ್ಯ್ಫೆನಾಲ್ ಕ್ವರ್ಸೆಟಿನ್ (Polyphenol Quercetin) ಎಂಬ ಅಂಶವಿರುತ್ತದೆ. ಕ್ವರ್ಸೆಟಿನ್ (Quercetin) ಒಂದು ನೈಸರ್ಗಿಕ ಅಲರ್ಜಿಯನ್ನು ಕಡಿಮೆ ಮಾಡುವ ಗುಣ ಹೊಂದಿರುತ್ತದೆ. ಈ ಗುಣದಿಂದ ಆಸ್ತಮಾ ಕಾಯಿಲೆಯನ್ನು ತಡೆಯಬಹುದು. ಕ್ವರ್ಸೆಟಿನ್ (Quercetin) ಅಂಶದಿಂದ ಹಿಸ್ಟಮೀನ್ ಎಂಬ ಅಂಶವು ಬಿಡುಗಡೆಯಾಗಿ ನಮ್ಮ ಶರೀರದಲ್ಲಿ ಉಂಟಾಗುವ ಅಲರ್ಜಿ ಪ್ರತಿಕ್ರಿಯೆಗಳನ್ನು ತಪ್ಪಿಸುತ್ತದೆ. ಹಾಗೆಯೇ ಅದು ಹೃದಯ ರೋಗಗಳು, ಕ್ಯಾನ್ಸರ್ ಮತ್ತು ಮೂತ್ರಕೋಶ ಸೋಂಕು ಅಪಾಯವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.

6. ಸೆಲರಿ (Celery)
ಸೆಲರಿ (Celery) ಎಂಬ ಸಾಮಾನ್ಯ ತರಕಾರಿಯು ರಕ್ತದೊತ್ತಡವನ್ನು ಕಡಿಮೆಗೊಳಿಸಲು ಉಪಯೋಗಿಸುವ ತರಕಾರಿಗಳಲ್ಲಿ ಅತ್ಯಂತ ಉತ್ತಮ ತರಕಾರಿ. ಇದರಲ್ಲಿ ಪ್ತಾಲ್ಲೈಡ್ (Phthalide) ಎಂಬ ಅಂಶವಿರುವುದರಿಂದ ಆರ್ಟರಿಯ ಸುತ್ತ ಇರುವ ಮಾಂಸಖಂಡಗಳನ್ನು ಸಡಲಿಸಿ ರಕ್ತಸಂಚಾರಕ್ಕೆ ಹೆಚ್ಚು ಜಾಗವನ್ನು ಸೃಷ್ಟಿಸುತ್ತದೆ. ಕೇವಲ ನಾಲ್ಕು ಸೆಲರಿ ಕಡ್ಡಿಯನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ರಕ್ತದೊತ್ತಡವನ್ನು ಗಣನೀಯವಾಗಿ ಕಡಿಮೆಮಾಡಿಕೊಳ್ಳಬಹುದು.

7.ಅರಶಿನ
ಅರಶಿನದ ಗಡ್ಡೆ ಅಥವ ಪುಡಿಯ ಕ್ರಿಯಾತ್ಮಕ ಗುಣದಿಂದ ಸಂಧಿವಾತದ ತೊಂದರೆಗಳನ್ನು ಕಡಿಮೆಮಾಡಬಹುದು. ಇದರಲ್ಲಿರುವ ಸರ್ಕಮಿನೈದ್ಸ್ (Circuminoids) ಅಂಶವು ಉರಿಯೂತ ಕಡಿಮೆಯಾಗುವುದರಿಂದ ಕೀಲುಗಳ ಊತವನ್ನೂ ಸಹ ಕಡಿಮೆಮಾಡಲು ಸಹಾಯಮಾಡುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಅರಶಿನವನ್ನು ಮರೆಯದೇ ಉಪಯೋಗಿಸಿ ಅದರ ಗುಣಗಳಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

8. ಎಲೆಕೋಸು
ಎಲೆಕೋಸಿನಲ್ಲಿ ಹಲವಾರು ಕ್ಯಾನ್ಸರ್ ತಡೆಯುವ ಗುಣಲಕ್ಷಣಗಳಿವೆ. ಇದರಲ್ಲಿರುವ ಉತ್ಕರ್ಷಣ (Antioxidant) ಮತ್ತು ಗ್ಲೂಕೊಸಿನೋಲೇಟ್ಸ್ (Glucosinolates) ಅಂಶಗಳು ಇದಕ್ಕೆ ಸಹಾಯಮಾಡುತ್ತವೆ. ಹಾಗೆಯೇ ಇದರಲ್ಲಿರುವ ಐಸೊತಿಯೋಸೈನೇಟ್ಸ್ (Isothiocynates) ಮತ್ತು ಇಂಡಾಲ್ 3 ಕಾರ್ಬಿನಾಲ್(Indol 3 Carbinol) ಅಂಶಗಳಿಂದ ಕ್ಯಾನ್ಸರ್ ಕಾಯಿಲೆಯನ್ನು ಮತ್ತು ಈಸ್ಟ್ರೋಜೆನ್ (Estrogen) ಗಳಿಂದ ಆಗುವ ಕೆಟ್ಟ ಪರಿಣಾಮಗಳನ್ನು ತಡೆಯಬಹುದು. ಎಲೆಕೋಸು ಮತ್ತು ಇಂತಹ ಇತರ ತರಕಾರಿಗಳಲ್ಲಿರುವ ನಾರಿನಾಂಶದಿಂದ ಕ್ಯಾನ್ಸರ್ ರೋಗದ ಅಪಾಯವನ್ನು ತಡೆಯಬಹುದು.

9. ಗ್ರೀನ್ ಟೀ
ಅನೇಕ ದೇಶಗಳಲ್ಲಿ ಮೆದುಳಿನ ಹಠಾತ್ ಅಘಾತ (Stroke) ದಿಂದ ಸಾವಿಗೆ ಒಂದು ಪ್ರಮುಖ ಕಾರಣವಾಗಿದೆ. ಅಗ್ಗದ ಗ್ರೀನ್ ಟೀ (Green Tea) ಕುಡಿಯುವುದರಿಂದ ಇಂತಹ ರೋಗಗಳನ್ನು ತಡೆಗಟ್ಟಬಹುದಾಗಿದೆ. ಹಸಿರು ಚಾನಲ್ಲಿ ಕ್ರಿಯಾತ್ಮಕ ಪ್ಲಾವೊನಾಯಿಡ್ಗಳು (Flavonoids) ಇರುವುದರಿಂದ ಹೃದಯ ರಕ್ತನಾಳದ ಅಪಾಯವನ್ನು ತಡೆಯಲು ಪ್ರಯೋಜನಕಾರಿಯಾಗಿದೆ. ದಿನಂಪ್ರತಿ ನಾಲ್ಕು ಕಪ್ ಗ್ರೀನ್ ಟೀ ಸೇವಿಸಿದರೆ ನಿಮ್ಮ ಮೆದುಳಿನ ಹಠಾತ್ ಅಘಾತವನ್ನು ತಡೆಯಬಹುದು.

10. ಕೆಂಪು ಮೆಣಸಿನಕಾಯಿ
ಕೆಂಪು ಮೆಣಸಿನಕಾಯಿ (Cayenne Pepper) ಯನ್ನು ಶತಮಾನಗಳಿಂದ ನೋವು, ಉರಿಯೂತ, ನೋಯುತ್ತಿರುವ ಗಂಟಲು ನೋವು, ಜೀರ್ಣಾಂಗ ತೊಂದರೆಗಳು ಮತ್ತು ತಲೆನೋವು ಚಿಕಿತ್ಸೆಗಳಿಗೆ ಗುಣಪಡಿಸಲು ಬಳಸಲಾಗುತ್ತಿದೆ. ಇದರ ಪುಡಿಯನ್ನು ಸೇವಿಸಿದ ತಕ್ಷಣವೇ ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಹಾಗಾಗುವುದರಿಂದ ಮಂದವಾದ ಎದೆಯ ಬಡಿತ ಮತ್ತು ತಲೆನೋವನ್ನು ಹಗುರಗೊಳಿಸುತ್ತದೆ. ಆದ್ದರಿಂದ ನಿಮಗೆ ಮುಂದೆ ತಲೆನೋವು ಕಾಣಿಸುವಂತಾದರೆ ಸ್ವಲ್ಪ ಕೆಂಪು ಮೆಣಸಿನಕಾಯಿಯನ್ನು ಮೆಲಕು ಹಾಕಿ.

11. ಬಾಳೆಹಣ್ಣು
ಬಾಳೆಹಣ್ಣನ್ನು ಜಠರಗೊಳಗಿನ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳಲು ಶಿಫಾರಸು ಮಾಡುತ್ತಾರೆ. ಬಾಳೆಹಣ್ಣಿನಲ್ಲಿ ನಾರಿನಾಂಶವಿರುವುದರಿಂದ ಮಲವಿಸರ್ಜನೆಗೆ ಅನುಕೂಲಮಾಡಿಕೊಡುತ್ತದೆ. ಇದು ಸ್ವಾಭಾವಿಕ ಆಂಟಾಸಿಡ್ ಕೂಡ ಆಗಿದೆ.

12. ಚಾಮೊಮೈಲ್
ಚಾಮೊಮೈಲ್ (Chamomile) ಎಂಬ ಹೂವಿನ ರೇಖನ್ನು ಚಾ ಪುಡಿಯೊಂದಿಗೆ ಬೆರಸಿ ತಯಾರಾದ ಚಾ ಕುಡಿಯುವುದರಿಂದ ನಮ್ಮಲ್ಲಿರತಂಕ ಆತಂಕ ಕಡಿಮೆಮಾಡಿ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ಕೊಡುತ್ತದೆ. ಈ ಹೂವನ್ನು ಸಾಮಾನ್ಯವಾಗಿ ರಷ್ಯಾ ದೇಶದಲ್ಲಿ ಬೆಳೆಯುತ್ತಾರೆ. ಇದರ ಎಲೆಯನ್ನು ಮಲಗುವಮುಂಚೆ ದಿಂಬಿನ ಅಡಿಯಲ್ಲಿಟ್ಟು ಮಲಗಿದರೆ ವಿಶ್ರಾಂತಿ ದೊರೆತು ನಿದ್ರೆ ಬಾರದಿರುವುದನ್ನು ತಡೆಯುತ್ತದೆ.

13. ದಾಳಿಂಬೆ ಹಣ್ಣು
ದಾಳಿಂಬೆ ಹಣ್ಣಿನಲ್ಲಿ ಅಧಿಕವಾಗಿ ಎಲ್ಲಾಜಿಕ್ ಎಂಬ ಆಮ್ಲವಿರುತ್ತದೆ. ಈ ಆಮ್ಲದಿಂದ ನಿಮ್ಮ ಚರ್ಮವನ್ನು ಉವಿಎ (UVA) ಮತ್ತು ಉವಿಬಿ(UVB) ಪ್ರೇರಿತ ಜೀವಕೋಶಹಾನಿಯಾಗದಂತೆ ತಡೆಯಬಹುದು. ದಾಳಿಂಬೆ ಹಣ್ಣು ಸೂರ್ಯನ ತೀಕ್ಷ್ಣ ಕಿರಣಗಳಿಂದ ರಕ್ಷಣೆಯನ್ನು ಕೊಡುವ ಸಂಯುಕ್ತವನ್ನು ಹೊಂದಿದೆ. ಇದರಿಂದ ನಿಮಗೆ ಅಚ್ಚರಿಯಾಗುವ ಪರಿಹಾರ ನೀಡುತ್ತದೆ.

14. ಸೇಬಿನ ಸೈಡರ್
ಸೇಬಿನ ಸೈಡರ್ (Cider) ವಿನೇಗರ್ ವಿರೋಧಿ ಶಿಲೀಂದ್ರ ಮತ್ತು ವಿರೋಧಿ ಬ್ಯಾಕ್ಟೀರಿಯಾ ವ್ಯಾಪಕವಾಗಿ ಗುಣಗಳಿಂದ ಚರ್ಮ ತುರಿಕೆ ಮತ್ತು ವಿಶೇಷವಾಗಿ ಒಣ ಚರ್ಮ ಇವುಗಳನ್ನು ನಿವಾರಿಸಬಹುದು. ಇದು ಉರಿಯೂತ ಮತ್ತು ಕಿರಿಕಿರಿಯಾಗುವುದನ್ನು ಕಡಿಮೆಮಾಡುತ್ತದೆ. ಈ ವಿನೇಗರಿನ ಕೆಲವು ಹನಿಗಳನ್ನು ಒಂದು ಹತ್ತಿಯಉಂನಡೆ ಅಥವಾ ವಾಶ್ ಮಾಡಿದ ಬಟ್ಟೆಯ ಮೇಲೆ ಹಾಕಿಕೊಂಡು ಬಾಧಿತ ಚರ್ಮದಮೇಲೆ ಸವರಿ ವಾಸಿಮಾಡಿಕೊಳ್ಳಬಹುದು.

15. ಕೊಬ್ಬಿರುವ ಮೀನುಗಳು
ಕೊಬ್ಬಿರುವ ಮೀನುಗಳು ಅಂದರೆ ಸಾಲ್ಮನ್ ಮತ್ತು ಟ್ಯುನ ಇವುಗಳಲ್ಲಿ ದೀರ್ಘಸರಣಿ ಅಪರ್ಯಾಪ್ತ ಮೇದಾಮ್ಲಗಳು (Polyunsaturated Fatty Acids) ಸಮೃದ್ಧಿಯಾಗಿರುತ್ತವೆ. ಇದಕ್ಕೆ ಒಮೆಗ 3 ಕೊಬ್ಬಿನ ಅಮ್ಲ ಎಂಬ ರಾಸಾಯನಿಕ ವಸ್ತುಗಳು. ಇದರಿಂದ ಪ್ರೋಸ್ಟಾಗ್ಲಾಂಡಿನ್ಗಳ ಉತ್ಪಾದನೆಯನ್ನು ಕಡಿಮೆ ಮಾಡುವುದರಿಂದ ಉರಿಯೂತ ಮತ್ತು ನೋವು ಕಡಿಮೆಯಾಗುತ್ತದೆ. ಆದ್ದರಿಂದ ವಾರಕ್ಕೆ ಎರಡುಬಾರಿ ಇಂತಹ ಕೊಬ್ಬಿರುವ ಮೀನುಗಳನ್ನು ಸೇವಿಸಿ ಗರಿಷ್ಟಲಾಭ ಪಡೆಯಿರಿ.

16. ಬೆಳ್ಳುಳ್ಳಿ
ಬೆಳ್ಳುಳ್ಳಿಯು ವೈರಸ್ ವಿರೋಧಿ, ಬ್ಯಾಕ್ಟೀರಿಯ ವಿರೋಧಿ ಮತ್ತು ಶಿಲೀಂದ್ರ ವಿರೋಧಿ ಗುಣಗಳನ್ನು ಹೊಂದಿದೆ. ಆದ್ದರಿಂದ ಇದನ್ನು ನೀವು ಸದಾ ನಿಮ್ಮ ಹತ್ತಿರವಿಟ್ಟುಕೊಂಡು ಶೀತ ಮತ್ತು ಫ಼್ಲೂ ಬಂದಾಗ ಹೋಗಲಾಡಿಸಿಕೊಳ್ಳಿ. ಬೆಳ್ಳುಳ್ಳಿಯೂ ಸಹ ಈರುಳ್ಳಿಯಂತೆ ಅಲ್ಲಿಸಿನ್ ಗುಂಪಿಗೆ ಸೇರಿದೆ. ಬೆಳ್ಳುಳ್ಳಿಯನ್ನು ನೀವು ಮಾಡುವ ಸೂಪ್ ಮತ್ತು ಇತರ ಆಹಾರಗಳಿಗೆ ಸೇರಿಸಿ ಉಪಯೋಗಿಸಿ ಹಾಗೂ ಹಸಿ ಬೆಳ್ಳುಳ್ಳಿಯನ್ನು ಸಹ ಬಳಸಬಹುದು.

17. ತುಳಸಿ ಎಲೆ
ಬಾಯಿಹುಣ್ಣಿನಿಂದ ಬಹಳ ನೋವು ಆಗುತ್ತದೆ. ಅದರಿಂದ ಒಂದು ಬಿಳಿ ಬಣ್ಣದ ಹುಣ್ಣು ಮತ್ತು ನಾಲಿಗೆ, ವಸಡು, ಗಲ್ಲ ಮತ್ತು ತುಟಿಗಳ ಒಳಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಗೆ ತುಳಸಿಎಲೆಯನ್ನು ತಿನ್ನುವುದರಿಂದ ಯಾತನೆಯು ಕಡಿಮೆಯಾಗಿ ಗುಣವಾಗುತ್ತದೆ. ನಾಲ್ಕರಿಂದ ಐದು ತುಳಸಿ ಎಲೆಗಳನ್ನು ಮೆಲಕುಹಾಕಿ ತಿನ್ನುತ್ತಿದ್ದರೆ ಅದರಿಂದ ಬರುವ ರಸದಿಂದ ಹುಣ್ಣು ಗುಣಹೊಂದುವುದಲ್ಲದೆ ಕೆಟ್ಟ ಉಸಿರನ್ನೂ ಸಹ ತಡೆಯಬಹುದು.

18. ಬೆರ್ರಿಹಣ್ಣು
ಬೆರ್ರಿಹಣ್ಣು ಮೂತ್ರ ನಾಳದ ಸೋಂಕನ್ನು ತಡೆದು ಗುಣಪಡಿಸಲು ಅತ್ಯಂತ ಉತ್ತಮವಾಗಿದೆ. ಮೂತ್ರನಾಳದ ಸೋಂಕು ಸಾಧರಣವಾಗಿ ಈ.ಕೊಲಿ(E.coli) ಬ್ಯಾಕ್ಟೀರಿಯದಿಂದ ಬರುತ್ತದೆ. ಬೆರ್ರಿಹಣ್ಣು ಈ ಬ್ಯಾಕ್ಟೀರಿಯ ಮೂತ್ರನಾಳದ ಒಳಭಾಗಕ್ಕೆ ಅಂಟಿಕೊಳ್ಳುವುದನ್ನು ತಡೆಯುತ್ತದೆ. ಆದ್ದರಿಂದ ಆದಷ್ಟೂ ಬೆರ್ರಿ ಹಣ್ಣು ಅಥವ ಅದರ ತಾಜ ರಸವನು ಸೇವಿಸಿ ಗರಿಷ್ಟ ಪ್ರಯೋಜನವನ್ನು ಪಡೆಯಿರಿ.

19. ಶತಾವರಿ
ನಾವು ಊಟಮಾಡಿದ ನಂತರ ಕೆಲವು ಬಾರಿ ತಿಂದಿರುವ ಆಹಾರದಿಂದ ಒಂದು ಆಮ್ಲ ಅನ್ನನಾಳದ ಮೂಲಕ ಬಾಯಿಗೆ ಮರುಕಳಿಸುತ್ತದೆ. ಇದರಿಂದ ಗ್ಯಾಸ್ಟ್ರೋ ಇಸೊಫಾಗೆಲ್ ರಿಪ್ಲಕ್ಸ್ ಡಿಸೀಸ್ (GERD) ಎಂಬ ಕಾಯಿಲೆ ಬರುವ ಸಾಧ್ಯತೆಯಿದೆ. ಈ ಪರಿಸ್ಥಿತಿಯನ್ನು ಸ್ವಾಭಾವಿಕವಾಗಿ ಕಡಿಮೆಗೊಳಿಸಲು ಶತಾವರಿ (Asparagus) ಸೇವಿಸುವುದರಿಂದ ನಿಯಂತ್ರಿಸಬಹುದು. ಶತಾವರಿಯು ಆಮ್ಲ ಮತ್ತು ಕ್ಷಾರೀಯ (Alkaline) ಇವುಗಳು ಸಮತೋಲನವಾಗಿರಲು ಕಾರ್ಯ ನಿರ್ವಹಿಸುತ್ತದೆ ಮತ್ತು ಆಮ್ಲ ಹಿಂತಿರುಗಿ ಬರುವ ಸಂಭವಗಳನ್ನು ಕಡಿಮೆಮಾಡುತ್ತದೆ.



Click it and Unblock the Notifications











