Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಈ ಮಳೆಗಾಲವನ್ನು ಆಯುರ್ವೇದ ಮಾರ್ಗದಲ್ಲಿ ಆನಂದಿಸಿ!
ಭಾರತದಲ್ಲಿ ಮಳೆಗಾಲವೆಂದರೆ ಹಬ್ಬ ಬಂದಂತೆ. ಸುಡುವ ಬೇಸಿಗೆಯ ನಂತರ ಪ್ರತಿಯೊಬ್ಬರು ವರುಣ ದೇವನ ಆಗಮನಕ್ಕಾಗಿ ಕಾದು ಕುಳಿತಿರುತ್ತಾರೆ. ಮಳೆ ಬಂತೆಂದರೆ ಆ ಮಳೆಯಲ್ಲಿ ಮುಳುಗೇಳುವ ಸಂಭ್ರಮ ಇಲ್ಲಿನ ಜನರಿಗೆ. ಆದರೆ ಅದೇ ಮಳೆ ಬರುತ್ತ, ಬರುತ್ತ ಹಲವಾರು ರೋಗ ರುಜಿನಗಳನ್ನು ಮತ್ತು ಇನ್‍ಫೆಕ್ಷನ್‍ಗಳನ್ನು ಹೊತ್ತು ತರುತ್ತದೆ. ವಾತಾವರಣದ ಉಷ್ಣಾಂಶದಲ್ಲಿನ ಏರುಪೇರು, ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸಿಬಿಡುತ್ತದೆ. ಹಾಗಾಗಿ ನಮ್ಮ ದೇಹವು ರೋಗರುಜಿನಗಳಿಗೆ ಗುರಿಯಾಗುತ್ತದೆ.
ಆಯುರ್ವೇದದ ಪ್ರಕಾರ ಮಳೆಗಾಲದಲ್ಲಿ ಪಿತ್ತವು ತುತ್ತ ತುದಿಗೆ ಏರುತ್ತದೆಯಂತೆ. ಇದು ದೇಹದ ನಮ್ಮ ದೇಹದ ಪ್ರಮುಖ ಕಾರ್ಯಕಾರಿ ಶಕ್ತಿಯಾಗಿರುತ್ತದೆ, ಜೊತೆಗೆ ಇದು ಆಹಾರವನ್ನು ಜೀರ್ಣಮಾಡಿಕೊಳ್ಳಲು ಮತ್ತು ದೇಹದ ಚಯಾಪಚಯ ಕ್ರಿಯೆಗೆ ಪ್ರಮುಖ ಆಧಾರವಾಗಿರುತ್ತದೆ.
ಈ ಅವಧಿಯಲ್ಲಿ ಜೀರ್ಣ ಶಕ್ತಿಯು ಕುಂಠಿತಗೊಳ್ಳುತ್ತದೆ. ಪಿತ್ತದಿಂದ ನಮ್ಮ ದೇಹದಲ್ಲಿ ಅಜೀರ್ಣ, ಹೈಪರ್ ಆಸಿಡಿಟಿ, ಚರ್ಮ ವ್ಯಾಧಿಗಳು (ಕಜ್ಜಿ, ಉಕ್ಕು ಮತ್ತು ಬೊಯಿಲ್‍ಗಳು ), ಕೂದಲು ಉದುರುವಿಕೆ ಮತ್ತು ಇನ್‍ಫೆಕ್ಷನ್‍ನಂತಹ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ಅವಧಿಯಲ್ಲಿ ವಾತಾವರಣದಲ್ಲಿ ಆರ್ದ್ರತೆಯು ಸಹ ಕಡಿಮೆಯಾಗುತ್ತದೆ. ಇದರಿಂದಾಗಿ ನಮ್ಮ ದೇಹದಲ್ಲಿನ ಜೀವಾಧಾರಕ ದ್ರವವಾದ ಓಜಸ್ಸು ಕಡಿಮೆಯಾಗುತ್ತದೆ.
ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣವು ಸಹ ಕಡಿಮೆಯಾಗಿರುವುದರಿಂದ ಜನರು ಉಸಿರಾಟದ ತೊಂದರೆ ಮತ್ತು ನಿಶ್ಶಕ್ತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಹಾಗಾಗಿ ನೀವು ಈ ಮಳೆಗಾಲವನ್ನು ಆನಂದದಿಂದ ಮತ್ತು ಆರೋಗ್ಯದಿಂದ ಕಳೆಯಬೇಕು ಎಂದಾದಲ್ಲಿ ಈ ಕೆಳಗೆ ನೀಡಿರುವ ಸಲಹೆಗಳನ್ನು ತಪ್ಪದೆ ಪಾಲಿಸಿ.
ಮಳೆಗಾಲದ ಸಮಯದಲ್ಲಿ ತ್ವಚೆಯ ಆರೈಕೆಗೆ ಸೂಕ್ತ ಸಲಹೆಗಳು

ಖಾರ ಮತ್ತು ಉಪ್ಪು ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ
ಅತಿಯಾದ ಖಾರ ಮತ್ತು ಉಪ್ಪು ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ( ಉಪ್ಪಿನಕಾಯಿ, ಚಟ್ನಿ, ಮೆಣಸಿನಕಾಯಿ, ಯೋಗರ್ಟ್, ಕರ್ರಿ ಇತ್ಯಾದಿ) ಇವುಗಳು ಅಜೀರ್ಣ, ನಿರ್ಜಲೀಕರಣ ಮತ್ತು ಉಬ್ಬಸವನ್ನುಂಟು ಮಾಡುತ್ತವೆ ಅದರ ಜೊತೆಗೆ ಅತಿಯಾಗಿ ಕರಿದ ಆಹಾರ , ಜಂಕ್ ಫುಡ್ ಮತ್ತು ಮಾಂಸವನ್ನು ಸಹ ಸೇವಿಸಬೇಡಿ. ಇದಲ್ಲದೆ ಈ ಅವಧಿಯಲ್ಲಿ ಸಲಾಡ್ ಮತ್ತು ಸೊಪ್ಪುಗಳನ್ನು ಸಹ ಸೇವಿಸಬೇಡಿ.

ಲಘು ಆಹಾರವನ್ನು ಸೇವಿಸಿ
ಸುಲಭವಾಗಿ ಜೀರ್ಣವಾಗಬಹುದಾದ ಲಘು ಆಹಾರವನ್ನು ಸೇವಿಸಿ. ಬೇಯಿಸಿದ ತರಕಾರಿ, ಝುಚ್ಚಿನಿ, ಸ್ಕ್ವಾಷ್, ಕುಂಬಳಕಾಯಿ, ಉಗಿಯಲ್ಲಿ ಬೇಯಿಸಿದ ಸಲಾಡ್, ಹಣ್ಣುಗಳು, ಹೆಸರು ಬೇಳೆ, ಕಿಚಡಿ, ಮೆಕ್ಕೆ ಜೋಳ, ಕಡಲೆ ಹಿಟ್ಟು ಮತ್ತು ಓಟ್ ಮಿಲ್ ಇತ್ಯಾದಿಗಳನ್ನು ಸೇವಿಸಿ.

ಎಣ್ಣೆ ಬಳಕೆ ಕಡಿಮೆ ಮಾಡಿ
ತುಪ್ಪ, ಆಲೀವ್ ಎಣ್ಣೆ, ಜೋಳದ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಆಹಾರ ತಯಾರಿಸಲು ಬಳಸಿ. ಇವು ಲಘು ಎಣ್ಣೆಗಳು ಆರೋಗ್ಯಕ್ಕೆ ಉತ್ತಮ. ಸಾಸಿವೆ ಎಣ್ಣೆ, ಬೆಣ್ಣೆ, ಕಡಲೆ ಕಾಳು ಎಣ್ಣೆ ಮತ್ತು ಇನ್ನಿತರ ಭಾರವಾದ ಎಣ್ಣೆಗಳನ್ನು ಬಳಸಬೇಡಿ. ಈ ಎಣ್ಣೆಗಳು ಉಷ್ಣಕಾರಕ ಗುಣಗಳನ್ನು ಹೊಂದಿರುತ್ತವೆ.

ಆಯಾಸವನ್ನುಂಟು ಮಾಡುವ ಆಟದಲ್ಲಿ ಪಾಲ್ಗೊಳ್ಳಬೇಡಿ
ಓಟ, ಸೈಕ್ಲಿಂಗ್ ಇತ್ಯಾದಿಗಳಂತಹ ಅತಿಯಾದ ಆಯಾಸವನ್ನುಂಟು ಮಾಡುವ ಆಟಗಳಲ್ಲಿ ಪಾಲ್ಗೊಳ್ಳಬೇಡಿ. ಇವುಗಳು ಪಿತ್ತವನ್ನು ಹೆಚ್ಚಿಸುತ್ತವೆ. ಯೋಗ, ನಡೆಯುವುದು, ಈಜು ಮತ್ತು ಸ್ಟ್ರೆಚ್ಚಿಂಗ್‍ನಂತಹ ವ್ಯಾಯಾಮಗಳಲ್ಲಿ ಪಾಲ್ಗೊಳ್ಳಿ.

ರಸ್ತೆ ಬದಿಯ ಆಹಾರ ಸೇವಿಸಬೇಡಿ
ನೀವು ಆಹಾರವನ್ನು ಸೇವಿಸುವ ಪರಿಸರವು ಶುಚಿಯಾಗಿ ಮತ್ತು ಆರೋಗ್ಯಕರವಾಗಿದೆಯೇ ಎಂಬುದನ್ನು ಗಮನಿಸಿ. ತೆರೆದಿಟ್ಟ ಆಹಾರವನ್ನು ಯಾವುದೇ ಕಾರಣಕ್ಕು ಸೇವಿಸಲು ಹೋಗಬೇಡಿ. ಅದರಲ್ಲೂ ರಸ್ತೆ ಬದಿಯ ವ್ಯಾಪಾರಿಗಳ ಬಳಿ ಬೇಡವೇ ಬೇಡ.

ಹಣ್ಣು ಮತ್ತು ತರಕಾರಿಯನ್ನು ಚೆನ್ನಾಗಿ ತೊಳೆದುಕೊಳ್ಳಿ
ಹಣ್ಣು ಮತ್ತು ತರಕಾರಿಯನ್ನು ಮೊದಲು ಚೆನ್ನಾಗಿ ತೊಳೆದು ನಂತರವಷ್ಟೇ ಬಳಸಿ.

ಹಾಗಲಕಾಯಿ ಸೇವಿಸಿ
ಕಹಿಯು ಪಿತ್ತವನ್ನು ಕಡಿಮೆ ಮಾಡುತ್ತದೆ.ಅದಕ್ಕಾಗಿ ಹಾಗಲಕಾಯಿ, ಬೇವು, ಫೆನುಗ್ರೀಕ್ ಮತ್ತು ಅರಿಶಿಣಗಳನ್ನು ಬಳಸಿ. ಇವುಗಳು ಇನ್‍ಫೆಕ್ಷನ್‍ಗಳನ್ನು ದೂರವಿಡುತ್ತವೆ.

ವಾರಕ್ಕೆರಡು ಬಾರಿ ಮಸಾಜ್ ಮಾಡಿಕೊಳ್ಳಿ
ಮಳೆಗಾಲದಲ್ಲಿ ಎಳ್ಳೆಣ್ಣೆಯಿಂದ ವಾರಕ್ಕೆರಡು ಬಾರಿ ಮಸಾಜ್ ಮಾಡಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕೆಲವರಿಗೆ ಎಳ್ಳೆಣ್ಣೆಯು ಉಷ್ಣವನ್ನು ಉಂಟು ಮಾಡಬಹುದು. ಅಂತಹವರು ತೆಂಗಿನಕಾಯಿ ಎಣ್ಣೆಯನ್ನು ಬಳಸಬಹುದು. ಅಲ್ಲದೆ ಕೋಪ, ಕಿರಿಕಿರಿ, ಅಸೂಯೆ ಮತ್ತು ಅಹಂಗಳನ್ನು ತ್ಯಜಿಸಿ. ಏಕೆಂದರೆ ಇವುಗಳು ಸಹ ದೇಹದ ಉಷ್ಣ ಅಂದರೆ ಪಿತ್ತವನ್ನು ಹೆಚ್ಚಿಸುತ್ತವೆ. ಪಿತ್ತ ಹೆಚ್ಚಾದರೆ ದೇಹದಲ್ಲಿ ಕಜ್ಜಿ, ಎದೆ ಉರಿ ಅಥವಾ ಮೂತ್ರನಾಳದಲ್ಲಿ ಇನ್‍ಫೆಕ್ಷನ್ ಕಂಡು ಬರುತ್ತದೆ ಎಂಬುದನ್ನು ಮರೆಯಬೇಡಿ.



Click it and Unblock the Notifications
