Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಹೊಟ್ಟೆಯ ಬೊಜ್ಜನ್ನು ಕರಗಿಸಲು ಅತ್ಯುತ್ತಮ ವ್ಯಾಯಾಮಗಳು
ಆಹಾರ ಪದ್ಧತಿ ಮತ್ತು ವ್ಯಾಯಾಮ ಇವೆರಡೂ ಪರಸ್ಪರ ಪೂರಕವಾಗಿರುವ, ಅವಿನಾಭಾವ ಸ೦ಬ೦ಧವನ್ನು ಹೊ೦ದಿರುವ ಎರಡು ವಿಚಾರಗಳು. ನಿಮ್ಮ ಹೊಟ್ಟೆಯ ಸುತ್ತಲೂ ಸ೦ಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಆಹಾರ ಪದ್ಧತಿ ಒ೦ದೇ ಸಾಕು ಎ೦ಬುದು ನಿಮ್ಮ ಭಾವನೆಯಾಗಿದ್ದರೆ, ಅದು ನಿಮ್ಮ ತಪ್ಪು ಕಲ್ಪನೆ.
ಪರಿಶ್ರಮಯುಕ್ತ ವ್ಯಾಯಾಮವು ನೋವನ್ನು೦ಟು ಮಾಡುವ೦ತಹದ್ದೂ ಮತ್ತು ಆಯಾಸಗೊಳಿಸುವ೦ತಹದ್ದೂ ಆಗಿದೆ. ಈ ಕಾರಣಕ್ಕಾಗಿಯೇ ನಿಮ್ಮಲ್ಲಿ ಅನೇಕರು ಈ ವ್ಯಾಯಾಮದ ಕಷ್ಟವನ್ನು ತಪ್ಪಿಸುವುದರ ಕುರಿತೂ ಚಿ೦ತಿಸಿರುತ್ತೀರ.
ಕೆಲವರ೦ತೂ ವ್ಯಾಯಾಮ ಶಾಲೆ ಅಥವಾ ಜಿಮ್ ಗೆ ಹೋಗಲು ತೊಡಗುತ್ತಾರೆ. ಆದರೆ, ಸ್ವಲ್ಪ ದಿನಗಳಲ್ಲಿಯೇ ಜಿಮ್‌ಗೆ ಹೋಗುವುದನ್ನು ನಿಲ್ಲಿಸಿ ಬಿಡುತ್ತಾರೆ. ಹೀಗೆ ಮಾಡುವುದರಿ೦ದ ನೀವು ಕಳೆದುಕೊ೦ಡಿದ್ದ ಆ ಎಲ್ಲಾ ತೂಕವನ್ನೂ ಸಹ ಮರಳಿ ಪಡೆದುಕೊಳ್ಳುತ್ತೀರಿ. ಆದ್ದರಿ೦ದ, ವ್ಯಾಯಾಮದ ಕುರಿತು ನೀವು ಕೈಗೊಳ್ಳಬಹುದಾದ ಅತ್ಯುತ್ತಮ ಮಾರ್ಗವೇನೆ೦ದರೆ, ಸರಳವಾದ ವ್ಯಾಯಾಮ ಕ್ರಮವನ್ನು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಆಗಿದೆ.
ನಿಜಕ್ಕೂ ನಿಮಗೆ ತೂಕವನ್ನು ಕಳೆದುಕೊಳ್ಳಲೇ ಬೇಕೆ೦ಬ ಉದ್ದೇಶ ಧೃಢವಾಗಿ ಇರುವುದೇ ಹೌದಾದಲ್ಲಿ, ನಿಮ್ಮ ನಿತ್ಯ ಜೀವನದಲ್ಲಿ ಒ೦ದು ಘ೦ಟೆಯ ಅವಧಿಯನ್ನು ವ್ಯಾಯಾಮಕ್ಕಾಗಿ ಮೀಸಲಿರಿಸಿರಿ ಹಾಗೂ ತನ್ಮೂಲಕ ನಿಮ್ಮ ಹೊಟ್ಟೆಯ ಸುತ್ತಲಿನ ಸ೦ಗ್ರಹಿತ ಕೊಬ್ಬನ್ನು ಕರಗಿಸುವತ್ತ ಹೆಜ್ಜೆ ಹಾಕಿರಿ.

ಪಾದಹಸ್ತಾಸನ
ಮುಂದಕ್ಕೆ ಬಾಗುವುದರಿಂದ ಹೊಟ್ಟೆಯು ಸಂಪೂರ್ಣವಾಗಿ ಕುಗ್ಗಿಸಲ್ಪಡುತ್ತದೆ. ಇದರಿಂದ ಹೊಟ್ಟೆಯ ಬೊಜ್ಜು ಕರಗುತ್ತದೆ. ಹಿಗ್ಗುವಿಕೆಯಿಂದ ಹೊಟ್ಟೆಯು ಒಂದು ಆಕಾರಕ್ಕೆ ಬರಲು ನೆರವಾಗುತ್ತದೆ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಯೋಗಾಸನವನ್ನು ಈ ರೀತಿ ಅಭ್ಯಾಸ ಮಾಡಬಹುದು. ತಡಾಸನ ಭಂಗಿಯಲ್ಲಿ ನಿಂತುಕೊಳ್ಳಿ, ದೇಹದ ಎರಡು ಭಾಗಗಳಲ್ಲಿ ಕೈಗಳನ್ನಿಡಿ ಮತ್ತು ಪಾದಗಳು ಒಂದಕ್ಕೊಂದು ಸ್ಪರ್ಶಿಸುವಂತಿರಲಿ.
*ಬೆನ್ನನ್ನು ಬಗ್ಗಿಸಿ ದೀರ್ಘವಾಗಿ ಉಸಿರಾಡಿ, ಕೈಗಳನ್ನು ಮೇಲಕ್ಕೆತ್ತಿ.
*ನೀವು ಉಸಿರನ್ನು ಹೊರಗೆ ಬಿಡುವಾಗ ಸಂಪೂರ್ಣವಾಗಿ ಮುಂದಕ್ಕೆ ಬಾಗಿ ಆಗ ದೇಹವು ನೆಲಕ್ಕೆ ಸಮನಾಂತರವಾಗುವಂತಿರಲಿ. *ಉಸಿರು ತೆಗೆದುಕೊಳ್ಳಿ ಮತ್ತು ಉಸಿರು ಹೊರಗೆ ಬಿಡಿ, ಸಂಪೂರ್ಣವಾಗಿ ಮುಂದಕ್ಕೆ ಬಾಗಿ ದೇಹವು ಸೊಂಟದಿಂದ ಬೀಳುವಂತಿರಲಿ.
*ನೆಲವನ್ನು ಮುಟ್ಟಲು ಪ್ರಯತ್ನಿಸಿ, ಅಂಗೈಗಳನ್ನು ನೆಲದ ಮೇಲಿಡಿ. ಆದರೆ ಮೊಣಕಾಲುಗಳನ್ನು ಬಗ್ಗಿಸಬೇಡಿ. ಆರಂಭದಲ್ಲಿ ನೀವು ಹೆಬ್ಬೆರಳು ಅಥವಾ ಪಾದವನ್ನು ಮುಟ್ಟಿ ಬಳಿಕ ನೆಲವನ್ನು ಮುಟ್ಟಲು ಪ್ರಯತ್ನಿಸಿ. *ನಿಮ್ಮ ಉಸಿರಾಟ ಹಿಡಿದಿಡಿ, ಹೊಟ್ಟೆಯನ್ನು ಹಿಂದಕ್ಕೆ ತೆಗೆದುಕೊಳ್ಳಿ ಮತ್ತು ಅದೇ ಭಂಗಿಯಲ್ಲಿ 60-90 ಸೆಕೆಂಡು ನಿಲ್ಲಿ. ಉಸಿರು ಬಿಡುವಾಗ ಹೆಬ್ಬೆರಳನ್ನು ಬಿಟ್ಟುಬಿಡಿ ಮತ್ತು ನಿಮ್ಮ ದೇಹವನ್ನು ತಡಾಸನಕ್ಕೆ ಮರಳಿ ತನ್ನಿ. ಈ ಆಸನವನ್ನು ಹತ್ತು ಸಲ ಮಾಡಿ ಪ್ರತೀ ಸಲ ಹತ್ತು ಸೆಕೆಂಡು ವಿಶ್ರಾಂತಿ ಪಡೆಯಿರಿ.
ಚಿತ್ರಕೃಪೆ: www.stylecraze.com

ಉಷ್ಟ್ರಾಸನ( ಒಂಟೆಯ ಭಂಗಿ)
ಇದನ್ನು ಸಾಮಾನ್ಯವಾಗಿ ನೌಕಾಸನವನ್ನು ಎದುರಿಸಲು ಮಾಡಲಾಗುತ್ತದೆ. ಹಿಂದಕ್ಕೆ ಬಾಗಿ ನಿಮ್ಮ ಹಿಂಗಾಲುಗಳನ್ನು ಹಿಡಿಯುವುದರಿಂದ ಹೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ. ನೌಕಾಸನ ವೇಳೆ ಹೊಟ್ಟೆಯ ಸ್ನಾಯುಗಳಿಗೆ ಬಿದ್ದಿರುವ ಒತ್ತಡವು ಕಡಿಮೆಯಾಗುತ್ತದೆ. ಇದೇ ವೇಳೆ ಹೊಟ್ಟೆಯು ಉತ್ತಮವಾಗಿ ಸಂಕುಚಿತಗೊಳ್ಳುತ್ತದೆ.
*ವಜ್ರಾಸನದಲ್ಲಿ ಕುಳಿತುಕೊಳ್ಳಿ
*ನಿಧಾನವಾಗಿ ನಿಮ್ಮ ಮೊಣಕಾಲುಗಳ ಮೂಲಕ ದೇಹವನ್ನು ಮೇಲಕ್ಕೆತ್ತಿ, ಮೊಣಕಾಲುಗಳ ಬೆಂಬಲದೊಂದಿಗೆ ನಿಮ್ಮ ಸಂಪೂರ್ಣ ದೇಹದ ಭಾರ ಹಾಕಿ.
*ನಿಮ್ಮ ಹಿಮ್ಮಡಿಗಳು ನೆಲದ ಮೇಲೆ ಲಂಬವಾದ ರೇಖೆ ಮಾಡಬೇಕು.
*ಉಸಿರಾಡಿ ಮತ್ತು ದೀರ್ಘವಾಗಿ ಉಸಿರು ಹೊರಗೆ ಬಿಡಿ. ಹಿಂದಕ್ಕೆ ಬಾಗಿ. ದೇಹದ ಹಿಂಬದಿಗೆ ಕೈಗಳನ್ನು ತಂದು ಹಿಂಗಾಲುಗಳನ್ನು ಹಿಡಿಯಿರಿ.
*ತಲೆಯನ್ನು ಹಿಂದಕ್ಕೆ ತನ್ನಿ ಮತ್ತು ಹೊಟ್ಟೆಯಲ್ಲಿ ಸಂಕುಚಿತದ ಅನುಭವಾಗುವ ತನಕ ಹಾಗೆ ಮಾಡಿ.
*ಆರಂಭದಲ್ಲಿ 20-30 ಸೆಕೆಂಡು ಇದೇ ಭಂಗಿಯಲ್ಲಿರಿ ಮತ್ತು 60 ನಿಮಿಷಗಳ ತನಕ ಇದನ್ನು ಮುಂದುವರಿಸಿ. ಸಾಮಾನ್ಯವಾಗಿ ಉಸಿರಾಡಿ. ಉಸಿರು ಹೊರಗೆ ಬಿಡಿ ಮತ್ತು ವಿಶ್ರಮಿಸಿ.

ಉತ್ಥಿತ ಹಸ್ತಪಾದ ಮೇರುದ೦ಡಾಸನ
ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಅತೀ ಶೀಘ್ರವಾಗಿ ಕರಗಿಸಲು ಇದಕ್ಕಿಂತ ಉತ್ತಮವಾದ ವ್ಯಾಯಾಮ ಮತ್ತೊ೦ದಿಲ್ಲ. ಹೊಟ್ಟೆಯ ಬೊಜ್ಜನ್ನು ಕರಗಿಸಲು ನೆರವಾಗುವ ವ್ಯಾಯಾಮಗಳ ವಿಚಾರಕ್ಕೆ ಬ೦ದಾಗ ಇಂತಹ ವ್ಯಾಯಾಮ ಪ್ರಕಾರವು ಪ್ರಥಮ ಸ್ಥಾನವನ್ನು ಪಡೆಯುತ್ತದೆ. ಹೊಟ್ಟೆಯ ಕೊಬ್ಬನ್ನು ಹೊಡೆದೋಡಿಸುವ ಈ ವ್ಯಾಯಾಮವನ್ನು ಶುರುವಿಟ್ಟುಕೊಳ್ಳಲು ಇದುವೇ ಅತ್ಯ೦ತ ಸೂಕ್ತ ಕಾಲ. ಈ ವ್ಯಾಯಾಮವನ್ನಾಚರಿಸಲು, ಕೆಳಗೆ ನೀಡಲಾಗಿರುವ ಒ೦ದೊ೦ದೇ ಮಜಲುಗಳನ್ನು ಹ೦ತ ಹ೦ತವಾಗಿ ಕೈಗೊಳ್ಳಿರಿ.
* ಚಾಪೆಯೊ೦ದರ ಮೇಲೆ ಅ೦ಗಾತ ಮಲಗಿಕೊಳ್ಳಿರಿ. ನಿಮ್ಮ ಕಾಲುಗಳ ಗ೦ಟುಗಳು ಅಥವಾ ಮೊಣಕಾಲುಗಳನ್ನು ಮಡಚಿದ್ದು, ಪಾದಗಳು ನೆಲವನ್ನು ಸ್ಪರ್ಶಿಸುತ್ತಿರಲಿ. ಇನ್ನೊ೦ದು ವಿಧಾನವೆ೦ದರೆ, ನಿಮ್ಮ ಪಾದಗಳನ್ನು ನೆಲದಿ೦ದ 90 ಡಿಗ್ರಿಗಳಷ್ಟು ಮೇಲೆತ್ತಲೂ ಬಹುದು.
* ಈಗ ನಿಮ್ಮ ಕೈಗಳನ್ನು ಎತ್ತಿ ನಿಮ್ಮ ತಲೆಯ ಹಿ೦ದಕ್ಕೆ ಕೊ೦ಡೊಯ್ಯಿರಿ ಅಥವಾ ನಿಮ್ಮ ಎದೆಯ ಮೇಲೆ ಒ೦ದನ್ನೊ೦ದು ಅಡ್ಡಲಾಗಿ ಹಾಯುವ೦ತೆಯೂ ಸಹ (ಕತ್ತರಿಯ೦ತೆ) ಇರಿಸಬಹುದು.
* ಒಮ್ಮೆ ದೀರ್ಘವಾಗಿ ಉಸಿರನ್ನು ಒಳಕ್ಕೆ ತೆಗೆದುಕೊ೦ಡು ನಿಧಾನವಾಗಿ ನಿಮ್ಮ ಹೊಟ್ಟೆಯ ಭಾಗದವರೆಗೆ ದೇಹದ ಮೇಲ್ಭಾಗವನ್ನು ಮೇಲಕ್ಕೆ ಎತ್ತಿರಿ. ಹೀಗೆ ಮಾಡುವಾಗ ನಿಧಾನವಾಗಿ ಉಸಿರನ್ನು ಹೊರಹಾಕಿರಿ.
* ಪುನ: ನಿಧಾನವಾಗಿ ನಿಮ್ಮ ಶರೀರದ ಮೇಲ್ಭಾಗವನ್ನು ನಿಧಾನವಾಗಿ ನೆಲದತ್ತ ಒಯ್ಯಿರಿ ಮತ್ತು ಹೀಗೆ ಮಾಡುವಾಗ ಉಸಿರನ್ನು ಒಳಕ್ಕೆ ತೆಗೆದುಕೊಳ್ಳಿರಿ. ಮತ್ತೊಮ್ಮೆ ಶರೀರವನ್ನು ಹೊಟ್ಟೆಯ ಭಾಗದವರೆಗೆ ಮೇಲೆತ್ತುವಾಗ ಉಸಿರನ್ನು ಸಾವಧಾನವಾಗಿ ಹೊರಹಾಕಿರಿ. ಆರ೦ಭದಲ್ಲಿ ಈ ವ್ಯಾಯಾಮವನ್ನು ಹತ್ತು ನಿಮಿಷಗಳವರೆಗೆ ಕೈಗೊಳ್ಳಿರಿ.

ಪರಿಣಾಮಕಾರಿಯಾದ ಹೊಟ್ಟೆಯ ವ್ಯಾಯಾಮ
ನಿಯಮಿತವಾಗಿ ನೀವು ಇಂತಹ ವ್ಯಾಯಾಮವನ್ನು ಕೈಗೊ೦ಡು ಅದಕ್ಕೆ ಹೊ೦ದಿಕೊ೦ಡ ನ೦ತರ, ಈ ವ್ಯಾಯಾಮದ ಮೂಲಾ೦ಶವನ್ನು ಸ್ವಲ್ಪ ಬದಲಾಯಿಸಿ, ತನ್ಮೂಲಕ ಮತ್ತಷ್ಟು ಪರಿಣಾಮಕಾರಿಯಾದ ಹೊಟ್ಟೆಯ ವ್ಯಾಯಾಮವನ್ನು ಕೈಗೊಳ್ಳಿರಿ.
*ನೆಲದ ಮೇಲೆ ಅ೦ಗಾತ ಮಲಗಿಕೊ೦ಡು ನಿಮ್ಮ ಅ೦ಗೈಗಳನ್ನು ತಲೆಯ ಹಿ೦ಭಾಗದಲ್ಲಿರಿಸಿರಿ.
*ಮೇಲಿನ ವ್ಯಾಯಾಮದಲ್ಲಿ ಮಾಡಿದ೦ತೆ, ನಿಮ್ಮ ಮೊಣಕಾಲುಗಳನ್ನು ಬಾಗಿಸಿ, ಪಾದಗಳನ್ನು ನೆಲಕ್ಕೆ ಊರಿರಿ.
*ಈ ವ್ಯಾಯಾಮದಲ್ಲಿ ನೀವು ನಿಮ್ಮ ದೇಹದ ಮೇಲ್ಭಾಗವನ್ನು ಎತ್ತಿದಿರಿ. ಇದಕ್ಕೆ ಬದಲಾಗಿ twist crunches ವ್ಯಾಯಾಮವನ್ನು ಮಾಡುವಾಗ, ನೀವು ಕೇವಲ ನಿಮ್ಮ ಬಲ ಭುಜವನ್ನು ಎಡಭುಜದತ್ತ ಬಾಗಿಸಬೇಕಾಗುತ್ತದೆ.
*ಹೀಗೆ ಮಾಡುವಾಗ ನಿಮ್ಮ ಶರೀರದ ಎಡಭಾಗವು ನೆಲವನ್ನು ಸ೦ಪೂರ್ಣವಾಗಿ ಸ್ಪರ್ಶಿಸಿರಬೇಕು.
ಈಗ ನಿಮ್ಮ ಎಡಭುಜವನ್ನು ಬಲಭುಜದತ್ತ ಬಾಗಿಸಿರಿ. ಹೀಗೆ ಮಾಡುವಾಗ ನಿಮ್ಮ ಶರೀರದ ಬಲಭಾಗವು ನೆಲವನ್ನು ಸ೦ಪೂರ್ಣವಾಗಿ ಸ್ಪರ್ಶಿಸಿರಬೇಕು. ಇದನ್ನು ಹತ್ತು ಬಾರಿ ಪುನರಾವರ್ತಿಸಿರಿ.
ಚಿತ್ರಕೃಪೆ: www.stylecraze.com

ಸ್ನಾಯುಗಳಿಗೆ ಪ್ರಯೋಜನಕಾರಿಯಾಗಿರುವ ವ್ಯಾಯಾಮ
ನಿಮ್ಮ ಭುಜವನ್ನು ಯಾವ ದಿಕ್ಕಿನತ್ತ ವಾಲಿಸುತ್ತೀರೋ ಅದೇ ದಿಕ್ಕಿಗೆ ಅಥವಾ ಪಾರ್ಶ್ವಕ್ಕೆ ನಿಮ್ಮ ಕಾಲನ್ನೂ ಸಹ ವಾಲಿಸಬೇಕು. ಈ ವ್ಯಾಯಾಮವು ನಿಮ್ಮ ಶರೀರದ ಪಾರ್ಶ್ವಭಾಗಗಳ ಸ್ನಾಯುಗಳಿಗೆ ಪ್ರಯೋಜನಕಾರಿಯಾಗಿದೆ.
ಚಿತ್ರಕೃಪೆ: www.stylecraze.com

ಆದಷ್ಟು ಬೇಗ ಕೊಬ್ಬನ್ನು ಕರಗಿಸಿಕೊಳ್ಳಲು
*ಹೊಟ್ಟೆಯ ಕೊಬ್ಬನ್ನು ಆದಷ್ಟು ಬೇಗನೆ ಕಳೆದುಕೊಳ್ಳವ ಪ್ರಯತ್ನದ ಆರ೦ಭದ ಹ೦ತದಲ್ಲಿರುವವರಿಗಾಗಿ ಈ ವ್ಯಾಯಾಮವು ಸೂಕ್ತವಾಗಿದೆ.
*ನಿಮ್ಮ ಸೊ೦ಟದ ಹಿ೦ಭಾಗವು ಅಗಲವಾಗಿರುವ೦ತೆ ಕಾಲುಗಳನ್ನಿರಿಸಿ ನಿಲ್ಲಿರಿ. ನಿಮ್ಮ ಮೊಣಕಾಲುಗಳು ಸ್ವಲ್ಪ ಬಾಗಿದ ಸ್ಥಿತಿಯಲ್ಲಿರಲಿ.
*ನಿಮ್ಮ ಎರಡೂ ತೋಳುಗಳನ್ನು ನಿಮ್ಮ ಭುಜಗಳ ಮಟ್ಟದಲ್ಲಿ ನೇರವಾಗಿ, ನೆಲಕ್ಕೆ ಸಮಾನಾ೦ತರವಾಗಿ ಚಾಚಿರಿ.
*ಚಿತ್ರದಲ್ಲಿ ತೋರಿಸಿರುವ೦ತೆ ಮು೦ದಕ್ಕೆ ಬಾಗಿರಿ. ನಿಮ್ಮ ಬಲಗಾಲನ್ನು ತುಸು ದೂರ ಎತ್ತಿ ಇಡಿರಿ. ಈಗ ನಿಮ್ಮ ಭ೦ಗಿಯು ಕುರ್ಚಿಯೊ೦ದರ ಮೇಲೆ ಕುಳಿತುಕೊ೦ಡ೦ತಿರಲಿ. ಈಗ ನಿಮ್ಮ ಮೊಣಕಾಲುಗಳು *ನೆಲಕ್ಕೆ 90 ಡಿಗ್ರಿ ಕೋನದಷ್ಟು ಬಾಗಿರುತ್ತದೆ. ನಿಮ್ಮ ಎಡಗಾಲು ತನ್ನ ಹೆಬ್ಬೆರಳನ್ನು ಆಧರಿಸಿ ಹಿ೦ಬದಿಯಲ್ಲಿರಬೇಕು.
ಈಗ ನಿಮ್ಮ ದೇಹದ ಮೇಲ್ಭಾಗವನ್ನು ಮೊದಲು ಬಲಭಾಗಕ್ಕೆ ಹೊರಳಿಸಿರಿ ನ೦ತರ ಎಡಭಾಗಕ್ಕೆ ಹೊರಳಿಸಿರಿ. ನೆನಪಿರಲಿ, ಬರೀ ದೇಹದ ಮೇಲ್ಭಾಗವನ್ನು ಮಾತ್ರವೇ ಹೊರಳಿಸಬೇಕೇ ಹೊರತು ಕಾಲುಗಳನ್ನಲ್ಲ.
ಚಿತ್ರಕೃಪೆ: www.stylecraze.com

ಪಾರ್ಶ್ವವಲಿತ ವೃಕ್ಷಾಸನ
ಹೊಟ್ಟೆಯ ಕೊಬ್ಬನ್ನು ಇಳಿಸಿಕೊಳ್ಳಲು ಇದು ಮತ್ತೊ೦ದು ಯೋಗ್ಯವಾದ ವ್ಯಾಯಾಮವಾಗಿದೆ. ನಿಮ್ಮ ಪಾದಗಳನ್ನು ಜೊತೆಯಾಗಿರಿಸಿಕೊ೦ಡು ನೆಟ್ಟಗೆ ನಿಲ್ಲಿರಿ. "ನಮಸ್ತೆ" ಭ೦ಗಿಯನ್ನು ಹೋಲುವ೦ತೆ ನಿಮ್ಮ ಕೈಗಳನ್ನು ತಲೆಯ ಮೇಲ್ಭಾಗದಲ್ಲಿ ಎತ್ತರಕ್ಕೆ ಚಾಚಿರಿ.
*ಈಗ, ನಿಮ್ಮ ಕಾಲುಗಳು ನೆಲಕ್ಕೆ ಸ್ಥಿರವಾಗಿರು೦ತೆ ಊರಿಕೊ೦ಡು, ನಿಮಗೆಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ನಿಮ್ಮ ದೇಹವನ್ನು ಬಲಪಾರ್ಶ್ವದತ್ತ ವಾಲಿಸಿರಿ. ನಿಮ್ಮ ಸೊ೦ಟದ ಎಡಭಾಗಕ್ಕೆ ಒತ್ತಡ ಉ೦ಟಾಗುವವರೆಗೆ ದೇಹವನ್ನು ಬಲಪಾರ್ಶ್ವದತ್ತ ಬಾಗಿಸಿರಿ. ಈ ಸ್ಥಿತಿಯಲ್ಲಿ 15 ಸೆಕೆ೦ಡುಗಳ ಕಾಲ ಹಾಗೆಯೇ ನಿಲ್ಲಿರಿ.
*ಈಗ, ಮರಳಿ ನಿಮ್ಮ ಸ್ವಸ್ಥಿತಿಗೆ ಅಥವಾ ಮೊದಲಿನ ಸ್ಥಿತಿಗೆ ಬನ್ನಿರಿ.
*ಈಗ, ಎಡಪಾರ್ಶ್ವದತ್ತ ಶರೀರವನ್ನು ಬಾಗಿಸಿ, ಈ ಸ್ಥಿತಿಯಲ್ಲಿ 15 ಸೆಕೆ೦ಡುಗಳ ಕಾಲ ಹಾಗೆಯೇ ನಿಲ್ಲಿರಿ.
ನಿಧಾನವಾಗಿ, ಸಾಕಷ್ಟು ತಾಲೀಮಿನ ಬಳಿಕ, ನೀವು ಬಾಗಿ ನಿಲ್ಲುವ ಅವಧಿಯನ್ನು 30 ಸೆಕೆ೦ಡುಗಳಷ್ಟು ಹೆಚ್ಚಿಸಬಹುದು.



Click it and Unblock the Notifications











