Latest Updates
-
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್
ಬಡವರ ಪಾಲಿನ ಸಂಜೀವಿನಿಯಾಗಿರುವ ಸಾಬೂದಾನದ ಹಿನ್ನಲೆ ಏನು?
ಹಬ್ಬಗಳಲ್ಲಿ ಸಾಬೂದಾನ (ಸಬ್ಬಕ್ಕಿ) ಪಾಯಸವನ್ನು ನಾವೆಲ್ಲಾ ಸವಿದೇ ಇದ್ದೇವೆ. ಆದರೆ ಬೆಳ್ಳಗಿನ ಚಿಕ್ಕ ಚಿಕ್ಕ ಉಂಡೆಗಳಂತಿರುವ ಸಾಬೂದಾನದ ಕಾಳು ಹೇಗಿರುತ್ತದೆ ಎಂದು ನೋಡಿದ್ದೀರಾ? ಸಾಮಾನ್ಯವಾಗಿ ಹೆಚ್ಚಿನವರಿಗೆ ಇದರ ಬಗ್ಗೆ ಹೆಚ್ಚು ಗೊತ್ತಿಲ್ಲ. ಏಕೆಂದರೆ ಸಾಬೂದಾನ ಕಾಳೇ ಇಲ್ಲ! ಇದನ್ನು ತಯಾರಿಸುವುದು ಅಪ್ಪಟ ಮರಗೆಣಸಿನ ಗಡ್ಡೆಯಿಂದ.
ಹೆಚ್ಚಿನ ಪ್ರಮಾಣದಲ್ಲಿ ಸಿಗುವ ಮರಗೆಣಸನ್ನು ತುರಿದು ಪುಡಿಮಾಡಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿಸಿ ಒಣಗಿಸಿದ ಬಳಿಕ ದೊರಕುವ ಅಪ್ಪಟ ಬೆಳ್ಳಗಿನ ಈ ಕಾಳುಗಳೇ ಸಾಬೂದಾನ ಇದು ಹಿಟ್ಟಿನ ರೂಪದಲ್ಲಿಯೂ ಸಿಗುತ್ತದಾದರೂ ಹೆಚ್ಚು ಕಾಲ ಕೆಡದೇ ಇಡಲು ಸಾಧ್ಯವಿಲ್ಲದಿರುವುದರಿಂದ ಚಿಕ್ಕ ಚಿಕ್ಕ ಉಂಡೆಗಳ ರೂಪದಲ್ಲಿಯೇ ಬಹುತೇಕವಾಗಿ ಲಭ್ಯವಾಗುತ್ತದೆ. ವಿವಿಧ ಭಕ್ಷ್ಯ, ಸಿಹಿತಿಂಡಿ, ಪಾಯಸ ಮೊದಲಾದವುಗಳಲ್ಲಿ ಸಬ್ಬಕ್ಕಿಯನ್ನು ಉಪಯೋಗಿಸಲಾಗುತ್ತದೆ. ಅಗ್ಗವಾಗಿ ಮತ್ತು ವರ್ಷವಿಡೀ ಲಭ್ಯವಿರುವುದರಿಂದ ಸಮಾಜದ ಎಲ್ಲಾ ವರ್ಗದ ಜನರಲ್ಲಿ ಸಬ್ಬಕ್ಕಿ ಜನಪ್ರಿಯ ಆಹಾರವಾಗಿದೆ.
ಮೂಲತಃ ಬ್ರೆಜಿಲ್ ದೇಶದ ಮೂಲಬೆಳೆಯಾಗಿರುವ ಮರಗೆಣಸು ಇತರ ಸಮಶೀತೋಷ್ಣ ವಲಯದ ದೇಶಗಳಲ್ಲಿಯೂ ಜನಪ್ರಿಯವಾಗಿದೆ. ಸಾಬೂದಾನ ರೂಪದಲ್ಲಿ ಇದು ವಿಶ್ವದೆಲ್ಲೆಡೆ ಲಭ್ಯ. ಆರೋಗ್ಯದ ವಿಷಯಕ್ಕೆ ಬಂದರೆ ಇದು ಮರಗೆಣಸಿನ ಎಲ್ಲಾ ಉತ್ತಮ ಗುಣಗಳನ್ನು ಹೊಂದಿರುವ ರಾಯಭಾರಿಯಾಗಿದೆ. ಇದರಲ್ಲಿ ಪ್ರಮುಖವಾದ ಆರು ಗುಣಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಸಾಬೂದಾನದ ಕಥೆ ಗೊತ್ತಿದೆಯೇ ನಿಮಗೆ?

ಸ್ನಾಯುಗಳು ಹುರಿಗಟ್ಟಲು ಸಹಾಯ ಮಾಡುತ್ತದೆ
ಪಿಷ್ಟದ ಜೊತೆಗೇ ಹೆಚ್ಚಿನ ಪ್ರಮಾಣದಲ್ಲಿರುವ ಪ್ರೋಟೀನ್ ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುವುದರೊಂದಿಗೆ ಸ್ನಾಯುಗಳು ಹುರಿಗಟ್ಟಲೂ ಸಾಬೂದಾನ ಸಹಾಯಕವಾಗಿದೆ. ಸ್ನಾಯುಗಳು ಹುರಿಗಟ್ಟಲು ಇಂದು ಮಾರುಕಟ್ಟೆಯಲ್ಲಿ ಸ್ನಾಯುಗಳನ್ನು ನೂರಾರು ದುಬಾರಿ ಆಹಾರಗಳಿವೆ. ಆದರೆ ಇವೆಲ್ಲಕ್ಕಿಂತಲೂ ಅಗ್ಗವಾದ ಆದರೆ ಅತಿಹೆಚ್ಚಿನ ಪರಿಣಾಮವನ್ನು ಸಬ್ಬಕ್ಕಿ ನೀಡುತ್ತದೆ.

ರಕ್ತಸಂಚಾರ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ರಕ್ತದೊತ್ತಡ ಮತ್ತು ಸುಗಮ ಸಂಚಾರಕ್ಕಾಗಿ ನಮ್ಮ ಆಹಾರದಲ್ಲಿ ಪೊಟ್ಯಾಶಿಯಂ ಇರುವುದು ಅಗತ್ಯವಾಗಿದೆ. ಸಾಬೂದಾನದಲ್ಲಿ ಸಮಪ್ರಮಾಣದ ಪೊಟ್ಯಾಶಿಯಂ ಇರುವುದರಿಂದ ರಕ್ತದೊತ್ತಡ ನಿಯಂತ್ರಿಸುವಲ್ಲಿ ಮತ್ತು ಇಡಿಯ ದೇಹದ ಸುಗಮ ರಕ್ತಪರಿಚಲನೆಯಲ್ಲಿ ಸಬಕ್ಕಿ ನೆರವಾಗುತ್ತದೆ.

ಮೂಳೆಗಳ ಆರೋಗ್ಯ ವೃದ್ಧಿಸುತ್ತದೆ
ಮೂಳೆಗಳಿಗೆ ಕ್ಯಾಲ್ಸಿಯಂ ಅಗತ್ಯವಾದ ಧಾತುವಾಗಿದೆ. ಸಾಬೂದಾನದಲ್ಲಿ ಕ್ಯಾಲ್ಸಿಯಂ ಹೇರಳವಾಗಿದ್ದು ಜೊತೆಗೆ ವಿಟಮಿನ್ ಕೆ ಮತ್ತು ಕಬ್ಬಿಣ ಸಹಾ ಇದೆ. ಇವು ಮೂಳೆಗಳನ್ನು ಸದೃಢಗೊಳಿಸಲು ನೆರವಾಗುತ್ತವೆ. ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ಟೊಳ್ಳಾಗುವ (osteoporosis) ತೊಂದರೆ ಇರುವವರು ನಿಯಮಿತವಾಗಿ ಸಾಬೂದಾವನ್ನು ಸೇವಿಸುತ್ತಾ ಬಂದರೆ ಉತ್ತಮ ಪರಿಣಾಮ ಕಂಡುಬರುತ್ತದೆ.

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ
ಬೆಳಗ್ಗಿನ ಉಪಾಹಾರದಲ್ಲಿ ಸಬ್ಬಕ್ಕಿಯ ಖಾದ್ಯ ಅಥವಾ ಸಿಹಿಪದಾರ್ಥವನ್ನು ಸೇವಿಸಿದರೆ ಇಡಿಯ ದಿನಕ್ಕಾಗುವಷ್ಟು ಶಕ್ತಿಯನ್ನು ದೇಹ ಪಡೆಯುವುದರಿಂದ ಆಯಾಸವಾಗುವುದಿಲ್ಲ ಮತ್ತು ಇಡಿಯ ದಿನ ಉಲ್ಲಾಸದಿಂದಿರಲು ನೆರವಾಗುತ್ತದೆ. ಇದರಲ್ಲಿರು ಪೋಷಕಾಂಶಗಳು ಒಮ್ಮೆಲೇ ರಕ್ತಕ್ಕೆ ಬಿಡುಗಡೆಯಾಗದೇ ನಿಧಾನವಾಗಿ ಬಿಡುಗಡೆಯಾಗುವುದೇ ಇದಕ್ಕೆ ಕಾರಣ. ಇಡಿಯ ದಿನದ ಕೆಲಸದ ಒತ್ತಡದಲ್ಲಿರುವವರಿಗೆ ಸಾಬೂದಾನ ಒಂದು ವರದಾನವಾಗಿದೆ.

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ
ಅಜೀರ್ಣ ಹಾಗೂ ವಾಯುಪ್ರಕೋಪದ ತೊಂದರೆಯಿಂದ ಬಳಲುವವರಿಗೆ ಸಾಬೂದಾನ ಉತ್ತಮ ಆಹಾರವಾಗಿದೆ. ಅಲ್ಲದೇ ಮಲಬದ್ಧತೆ ಮತ್ತು ಮೂಲವ್ಯಾಧಿಯ ತೊಂದರೆಯವರಿಗೂ ಸಾಬೂದಾನ ಸರಳವಾದ ಆಹಾರವಾಗಿದೆ.

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ
ಇದರಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದ್ದು ವಿಸರ್ಜನಾಕ್ರಿಯೆಯನ್ನು ಸುಲಭಗೊಳಿಸುತ್ತದೆ. ಒಟ್ಟಾರೆ ಸುಲಭವಾದ ಜೀರ್ಣಕ್ರಿಯೆಗೆ ಸಾಬೂದಾನ ಒಂದು ಉತ್ತಮ ಆಹಾರವಾಗಿದೆ.



Click it and Unblock the Notifications