Just In
Don't Miss
- News ಕೇರಳದಲ್ಲೂ ಖಾತೆ ತೆರೆಯಲ್ಲ ಬಿಜೆಪಿ: ಈ ಬಾರಿಯೂ ಮೋದಿ ಅಲೆ ಸೊನ್ನೆ ಎಂದ ಸಮೀಕ್ಷೆ- ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
- Sports MI vs CSK IPL 2024: ಮುಂಬೈ vs ಚೆನ್ನೈ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Movies "ಏ ಏನಮ್ಮ ಬೇಜಾರು ಮಾಡಿಕೊಳ್ಳುತ್ತೀಯಾ? ಆರಾಮಾಗಿ ಇರೋಣ" ಎಂದಿದ್ದ ಸೌಂದರ್ಯ ಜಗದೀಶ್
- Finance ಅಮೇರಿಕನ್ ಕಂಪನಿಗಳಿಗೆ ಸೆಡ್ಡು ಹೊಡೆಯಲು ಮುಂದಾದ ಆರ್ಬಿಐ, ಫೋನ್ಪೇ, ಗೂಗಲ್ಗೆ ಆತಂಕ!
- Technology Poco: ಶೀಘ್ರದಲ್ಲೇ ಲಾಂಚ್ ಆಗಲಿದೆ ಪೊಕೊ F6 ಸ್ಮಾರ್ಟ್ಫೋನ್: ನಿರೀಕ್ಷಿತ ಫೀಚರ್ಸ್ ಏನು?
- Automobiles ಬಿಡುಗಡೆಗೆ ಸಜ್ಜಾದ ಫೋರ್ಸ್ ಗೂರ್ಖಾ 5-ಡೋರ್ ಎಸ್ಯುವಿ: ಮಹೀಂದ್ರಾ ಥಾರ್ಗೆ ಎದೆಬಡಿತ ಶುರು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀಘ್ರಸ್ಖಲನಕ್ಕೆ ಶಾಶ್ವತ ಪರಿಹಾರ; ಇವನ್ನು ಸೇವಿಸಿ
ಹೆಚ್ಚಿನ ಪುರುಷರಲ್ಲಿ ಶೀಘ್ರ ಸ್ಖಲನ ಹೆಚ್ಚಾಗಿ ಕಂಡುಬರುವ ಒಂದು ಸಾಮಾನ್ಯ ಪ್ರಕ್ರಿಯೆ. ಅದಾಗ್ಯೂ ಇದು ಹೆಚ್ಚಾಗಿ ಕಾಣಿಸಿಕೊಂಡು ನಿಮ್ಮ ಲೈಂಗಿಕ ಜೀವನವನ್ನು ಕೊನೆಗೊಳಿಸುವ ಘಟ್ಟಕ್ಕೆ ಕೂಡ ಇದು ತಲುಪಬಹುದು. ಆಗ ಮಾತ್ರ ಇದನ್ನು ನಿರ್ಲಕ್ಷಿಸದೇ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ.
ಅಧ್ಯಯನಗಳು ಹೇಳುವಂತೆ ಶೀಘ್ರ ಸ್ಖಲನವು ವಯಸ್ಸಿನೊಂದಿಗೆ ನೇರವಾದ ಸಂಬಂಧವನ್ನು ಹೊಂದಿದೆ. ಪುರುಷರಿಗೆ ವಯಸ್ಸಾದಂತೆ ಮತ್ತು ಟೆಸ್ಟೋಸ್ಟಿರಾನ್ ಮಟ್ಟಗಳು ವಯಸ್ಸಿನೊಂದಿಗೆ ಕುಂದಿ, ಶೀಘ್ರ ಸ್ಖಲನವು ಇದಕ್ಕೆ ಹೊಂದಿಕೊಳ್ಳುತ್ತದೆ. ಈ ಲೇಖನದಲ್ಲಿ, ನಿಮ್ಮ ಶೀಘ್ರ ಸ್ಖಲನ ಸಮಸ್ಯೆಯನ್ನು ದೂರಮಾಡುವಂತಹ ಆಹಾರಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಇವುಗಳು ನಿಮ್ಮ ಶೀಘ್ರ ಸ್ಖಲನ ಸಮಸ್ಯೆಯನ್ನು ದೂರಮಾಡಿ ಪುರುಷರಲ್ಲಿನ ಟೆಸ್ಟೋಸ್ಟಿರಾನ್ ಮಟ್ಟಗಳನ್ನು ವರ್ಧಿಸುತ್ತದೆ.
ಇದು ನಿಮ್ಮ ದೇಹದಲ್ಲಿ ಪೋಷಕಾಂಶಗಳ ಅತ್ಯವಶ್ಯಕ ಪೂರೈಕೆಯನ್ನು ಮಾಡಿ ನಿಮ್ಮಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಯಸ್ಸಿಗೆ ನೇರವಾಗಿ ಸಂಬಂಧ ಇರುವುದನ್ನು ಹೊರತುಪಡಿಸಿ ಅಂದರೆ ಪೆನಾಲ್ ನರದ ಹೆಚ್ಚುವರಿ ಉದ್ದೀಪನೆಯು ಪುರುಷರಲ್ಲಿ ಶೀಘ್ರ ಸ್ಖಲನದ ಸಮಸ್ಯೆಯನ್ನು ತಂದೊಡ್ಡುತ್ತದೆ. ಆದ್ದರಿಂದ ಇಂದಿನ ಲೇಖನದಲ್ಲಿ ಈ ಸಮಸ್ಯೆಯನ್ನು ನಿವಾರಿಸುವ ಕೆಲವೊಂದು ಆಹಾರ ಪದಾರ್ಥಗಳತ್ತ ನೋಟ ಹರಿಸೋಣ.
ಕ್ಯಾರೆಟ್ ಮತ್ತು ಮೊಟ್ಟೆಗಳು
ಎರಡು ಕ್ಯಾರೆಟ್‍ಗಳನ್ನು ಕತ್ತರಿಸಿ ಮತ್ತು ಅದನ್ನು ಅರೆ ಬೆಂದ ಮೊಟ್ಟೆಯ ಜೊತೆಗೆ ಬೆರೆಸಿ. ಇದಕ್ಕೆ ಒಂದು ಚಮಚದಷ್ಟು ಜೇನು ತುಪ್ಪವನ್ನು ಬೆರೆಸಿ. ಈ ಮಿಶ್ರಣವನ್ನು ದಿನವೂ ಮಾಡಿ ಮೂರು ತಿಂಗಳುಗಳ ಕಾಲ ಸೇವಿಸುತ್ತಿರಬೇಕು. ಇದರಿಂದಾಗಿ ಮೂರು ತಿಂಗಳ ನಂತರ ನೀವು ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವತ್ತ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಎಲ್ಲಾ ರೀತಿಯ ವಿಟಮಿನ್‌ಗಳು ಮತ್ತು ಮಿನರಲ್‌ಗಳನ್ನು ಯಥೇಚ್ಛವಾಗಿ ಹೊಂದಿರುವ ಕ್ಯಾರೇಟ್ ಪೆನಾಲ್ ಸ್ನಾಯುಗಳನ್ನು ಬಲಪಡಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಇದು ಪುರುಷ ಲೈಂಗಿಕ ಅಂಗಗಳಲ್ಲಿ ರಕ್ತದ ಹರಿವನ್ನು ಉತ್ತೇಜಿಸುತ್ತದೆ.
ವ್ಯಾಯಾಮ
ಶೀಘ್ರ ವೀರ್ಯ ಸ್ಖಲನವನ್ನು ನಿವಾರಿಸುವಲ್ಲಿ ಕೆಲವೊಂದು ವ್ಯಾಯಾಮಗಳು ಸಹ ನಿಮ್ಮ ನೆರವಿಗೆ ಬರುತ್ತವೆ. ಅದರಲ್ಲೂ ಕೆಗೆಲ್ ವ್ಯಾಯಾಮವು ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಅಂದರೆ ಪೆಲ್ವಿಕ್ ಸ್ನಾಯುಗಳನ್ನು ಶಕ್ತಿಶಾಲಿಗೊಳಿಸುತ್ತದೆ. ಈ ಸ್ನಾಯುಗಳು ನಿಮ್ಮ ಜನನಾಂಗದ ನಿಮಿರುವಿಕೆ ಮತ್ತು ಸ್ಖಲನವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಇದೊಂದು ಸುಲಭವಾದ ವ್ಯಾಯಾಮವಾಗಿದ್ದು, ಎಲ್ಲಿ ಬೇಕಾದರು ಇದನ್ನು ಮಾಡಬಹುದಾಗಿದೆ. ಈ ವ್ಯಾಯಾಮ ಮಾಡಲು ಮೊದಲು ನೇರವಾಗಿ ನಿಲ್ಲಿ. ನಂತರ ನಿಮ್ಮ ಸ್ನಾಯುಗಳನ್ನು ನಿಮ್ಮ ಪೃಷ್ಠದ ಭಾಗದತ್ತ ಎಳೆದುಕೊಳ್ಳಿ. ಇದರಿಂದಾಗಿ ನಿಮ್ಮ ಕಿಬ್ಬೊಟ್ಟೆಯ ಭಾಗವು ಸದೃಢಗೊಳ್ಳುತ್ತದೆ ಹಾಗು ಶೀಘ್ರ ವೀರ್ಯ ಸ್ಖಲನ ಸಮಸ್ಯೆಯಿಂದ ನಿಮಗೆ ಮುಕ್ತಿ ದೊರೆಯುತ್ತದೆ. ಅತ್ಯುತ್ತಮವಾದ ಫಲಿತಾಂಶವನ್ನು ನಿಮ್ಮದಾಗಿಸಿಕೊಳ್ಳಲು ಈ ವ್ಯಾಯಾಮವನ್ನು ದಿನಕ್ಕೆ 15-20 ಬಾರಿ ಮಾಡಿ.
ಹಸಿ ಬೆಳ್ಳುಳ್ಳಿ
ಹಸಿ ಬೆಳ್ಳುಳ್ಳಿಯು ಗಂಡಸರಲ್ಲಿ ಶೀಘ್ರ ವೀರ್ಯ ಸ್ಖಲನ ಹಾಗು ಇತ್ಯಾದಿ ಸಮಸ್ಯೆಗಳನ್ನು ದೂರ ಮಾಡಲು ನೆರವಾಗುತ್ತದೆ. 3-4 ಬೆಳ್ಳುಳ್ಳಿಯ ತುಣುಕುಗಳನ್ನು ಜಗಿಯುವುದರಿಂದ ಶೀಘ್ರ ವೀರ್ಯ ಸ್ಖಲನದ ಸಮಸ್ಯೆಯಲ್ಲಿ ಗಣನೀಯವಾದ ಪರಿಹಾರವನ್ನು ನೀವು ಕಾಣಬಹುದಾಗಿದೆ. ಇದರ ಜೊತೆಗೆ ನಿಮ್ಮ ಆರೋಗ್ಯವು ಸಹ ಸುಧಾರಿಸುತ್ತದೆ. ಬೆಳ್ಳುಳ್ಳಿಯನ್ನು ಶುದ್ಧವಾದ ಹಸುವಿನ ತುಪ್ಪದಲ್ಲಿ ಕರಿದು ಸಹ ಬಳಸಬಹುದು. ಏಕೆಂದರೆ ತುಪ್ಪದಲ್ಲಿ ಕರಿದ ನಂತರವು ಬೆಳ್ಳುಳ್ಳಿಯಲ್ಲಿರುವ ಕಾಮೋತ್ತೇಜಕ ಗುಣಗಳು ಅದರಿಂದ ಹೋಗಲಾರವು. ಬೆಳ್ಳುಳ್ಳಿಯು ಜನನಾಂಗದ ನಿಮಿರುವುಕೆಯಲ್ಲಿರುವ ಲೋಪ ದೋಷಗಳನ್ನು ಸರಿಪಡಿಸುತ್ತದೆ ಮತ್ತು ಶೀಘ್ರ ವೀರ್ಯಸ್ಖಲನದ ಸಮಸ್ಯೆಯನ್ನು ದೂರಮಾಡುತ್ತದೆ.
ಶತಾವರಿ
ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವಂತಹ ಗುಣವನ್ನು ಶತಾವರಿ ಹೊಂದಿದೆ. ಪುರುಷರಲ್ಲಿ ಹಾರ್ಮೋನುಗಳ ಉತ್ಪತ್ತಿಗೆ ಕಾರಣವಾಗಿರುವ ವಿಟಮಿನ್ ಇ ಅನ್ನು ಅಧಿಕವಾಗಿ ಹೊಂದಿರುವ ಶತಾವರಿ ಹೆಚ್ಚಿನ ಮಿನರಲ್ ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿದೆ.
ಮೊಟ್ಟೆ
ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಡಿಯ ಪಾತ್ರ ಕೂಡ ಅಧಿಕವಾದುದು. ನಿತ್ಯವೂ ಎರಡು ಮೊಟ್ಟೆಗಳನ್ನು ಸೇವಿಸುವುದು ಪುರುಷರಲ್ಲಿ ಟೆಸ್ಟೋಸ್ಟಿರಾನ್ ಮಟ್ಟಗಳನ್ನು ವರ್ಧಿಸುತ್ತವೆ. ಇದು ಪುರುಷರಲ್ಲಿ ಕಂಡುಬರುವ ಶೀಘ್ರ ಸ್ಖಲನ ಸಮಸ್ಯೆಯನ್ನು ನಿವಾರಿಸುವ ಸೂಪರ್ ಆಹಾರವಾಗಿದೆ.
ಚಾಕಲೇಟ್‌ಗಳು
ಚಾಕಲೇಟ್‌ಗಳೂ ಕೂಡ ಪುರುಷರಲ್ಲಿ ಶೀಘ್ರ ಸ್ಖಲನ ಸಮಸ್ಯೆಯನ್ನು ದೂರಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಪುರುಷರ ಲೈಂಗಿಕ ಅಂಗಕ್ಕೆ ರಕ್ತದ ಹರಿವನ್ನು ಉತ್ತೇಜಿಸುವ ಎಲ್ - ಅರ್ಜಿನಿನ್ ಎಚ್‌ಸಿಎಲ್ ಮುಖ್ಯವಾದ ಅಮೈನೋ ಆಮ್ಲವನ್ನು ಗಾಢ ಚಾಕಲೇಟ್ ಒಳಗೊಂಡಿದೆ. ಇದು ದೇಹದಲ್ಲಿ ಹಾರ್ಮೋನ್ ಉತ್ಪತ್ತಿಯನ್ನು ನಿಯಂತ್ರಿಸುತ್ತದೆ.
ಓಟ್ಸ್
ಸೆರೋಟಿನ್ ಎಂದು ಕರೆಯಲಾಗುವ ರಾಸಾಯನಿಕವನ್ನು ಓಟ್ಸ್ ಒಳಗೊಂಡಿದ್ದು ಇದು ಆತಂಕ ಮತ್ತು ಒತ್ತಡವನ್ನು ದೂರಮಾಡುತ್ತದೆ. ಶೀಘ್ರ ಸ್ಖಲನವು ಒತ್ತಡ ಮತ್ತು ಆತಂಕಕ್ಕೆ ನೇರವಾದ ಸಂಬಂಧವನ್ನು ಹೊಂದಿದೆ. ಇಷ್ಟಲ್ಲದೆ ಓಟ್ಸ್ ಅಧಿಕ ಪ್ರೋಟೀನ್ ಅನ್ನು ಒಳಗೊಂಡಿರುವುದರಿಂದ ಇದು ಟೆಸ್ಟೋಸ್ಟಿರಾನ್ ಅನ್ನು ಕೂಡ ವರ್ಧಿಸುತ್ತದೆ.
ಅಶ್ವಗಂಧ
ಭಾರತದ ಪಶ್ಚಿಮ ಭಾಗದ ಈ ಗಿಡಮೂಲಿಕೆಯು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಬಲಪಡಿಸುವಲ್ಲಿ ಬಳಸುವಂಥದ್ದಾಗಿದೆ. ಇದು ಪುರುಷರಲ್ಲಿ ಕಂಡುಬರುವ ಶೀಘ್ರ ಸ್ಖಲನ ಸಮಸ್ಯೆಯನ್ನು ನಿವಾರಿಸಿ ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ. ವೀರ್ಯಸ್ಖಲನದಂತಹ ಸಮಸ್ಯೆಯನ್ನು ದೂರಮಾಡುವಲ್ಲಿ ಕೂಡ ಅಶ್ವಗಂಧ ಪಾತ್ರ ಹಿರಿದಾದುದು.
ಅವೊಕಾಡೊ
ವಿಟಮಿನ್ ಸಿ, ಕೆ ಮತ್ತು ಬಿಯನ್ನು ಯಥೇಚ್ಛವಾಗಿ ಹೊಂದಿರುವ ಸರ್ವಗುಣ ಸಂಪನ್ನ ಹಣ್ಣಾಗಿದೆ ಅವೊಕಾಡೊ. ದೇಹದ ಮುಖ್ಯಭಾಗಕ್ಕೆ ರಕ್ತದ ಹರಿವನ್ನು ಉತ್ತೇಜಿಸುವ ಕಾರ್ಯವನ್ನು ವಿಟಮಿನ್ ಕೆ ಮಾಡುತ್ತದೆ. ಅಷ್ಟಲ್ಲದೇ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ವಿಟಮಿನ್ ಮತ್ತು ಮಿನರಲ್‌ಗಳನ್ನು ಕೂಡ ಅವೊಕಾಡೊ ಒಳಗೊಂಡಿದೆ.
ಬ್ಲೂಬೆರ್ರಿ
ಶೀಘ್ರ ಸ್ಖಲನ ಸಮಸ್ಯೆಯನ್ನು ನಿವಾರಿಸುವಲ್ಲಿ ಬ್ಲೂಬೆರ್ರಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ದೇಹದಲ್ಲಿ ಮುಕ್ತ ರಾಡಿಕಲ್‌ಗಳನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮುಕ್ತ ರಾಡಿಕಲ್ಸ್ ಪುರುಷರಲ್ಲಿ ವೀರ್ಯಾಣು ಹಸ್ತಕ್ಷೇಪವನ್ನು ಮಾಡುತ್ತವೆ.
ಬಾಳೆಹಣ್ಣು
ಪುರುಷರಲ್ಲಿ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ಎಂಜಿಮ್ ಆದ ಬ್ರೊಮಿಲಿಯನ್ ಅಂಶವನ್ನು ಬಾಳೆಹಣ್ಣು ಒಳಗೊಂಡಿದೆ. ಇದು ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆಯನ್ನು ವೃದ್ಧಿಸುತ್ತದೆ.
ವಾಲ್‌ನಟ್
ನಿಮಿರುವಿಕೆ ನಿಷ್ಕ್ರಿಯತೆ ಮತ್ತು ಶೀಘ್ರ ಸ್ಖಲನದಂತಹ ಸಮಸ್ಯೆಯನ್ನು ನಿವಾರಿಸುವಲ್ಲಿ ವಾಲ್‌ನಟ್ ಪ್ರಮುಖ ಪಾತ್ರ ವಹಿಸುತ್ತದೆ. ಇವುಗಳು ಪ್ರೋಟೀನ್‌ಗಳು ಮತ್ತು ಅವಶ್ಯ ಖನಿಜಗಳನ್ನು ಹೇರಳವಾಗಿ ಹೊಂದಿದೆ.
ಸೆರೆಲ್ಸ್
ನಿಮ್ಮ ಲೈಂಗಿಕ ಸ್ವಾಸ್ಥ್ಯವನ್ನು ಹೆಚ್ಚಿಸುವ ಗುಣವನ್ನು ಹೊಂದಿರುವ ಸೆಲೆಲ್ಸ್ ನಿಮ್ಮಲ್ಲಿ ಶೀಘ್ರ ಸ್ಖಲನದಂತಹ ತೊಂದರೆಯನ್ನು ನಿವಾರಿಸುತ್ತದೆ. ಥೈಮಿನ್ ಮತ್ತು ನಿಯಾಸಿನ್ ಅನ್ನು ಸೆಲೆಲ್ಸ್ ಒಳಗೊಂಡಿರುತ್ತವೆ. ನಿಯಾಸಿನ್ ಬಲಯುತವಾದ ಮತ್ತು ದೃಢವಾದ ಜನನಾಂಗ ಉದ್ರೇಕ ಸಾಮರ್ಥ್ಯವನ್ನು ನೀಡುವಲ್ಲಿ ಸಹಕಾರಿಯಾಗಿದೆ.
ಹಸಿರು ಸೆಲೆರಿ
ಅಂಡ್ರೊಸ್ಟಿನನ್ ಮತ್ತು ಅಡ್ರೊಸ್ಟಿನಲ್ ಅಂಶವನ್ನು ಹೇರಳವಾಗಿ ಒಳಗೊಂಡಿರುವ ಹಸಿರು ಸೆಲೆರಿ ಶೀಘ್ರ ಸ್ಖಲನದಂತಹ ಸಮಸ್ಯೆಯನ್ನು ನಿವಾರಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ.
ಬಾದಾಮಿ
ಬಾದಾಮಿಯಲ್ಲಿ ಜಿಂಕ್ ಮತ್ತು ಪ್ರೋಟೀನುಗಳು ಹೇರಳವಾಗಿವೆ. ಶೀಘ್ರ ಸ್ಖಲನದಂತಹ ಸಮಸ್ಯೆಯನ್ನು ಜಿಂಕ್ ನಿವಾರಿಸುತ್ತದೆ.
ಬೆಂಡೆಕಾಯಿ
ಬೆಂಡೆಕಾಯಿಯನ್ನು ಪುಡಿ ಮಾಡಿ ಸೇವಿಸುವುದರಿಂದ ಶೀಘ್ರ ವೀರ್ಯ ಸ್ಖಲನವನ್ನು ಪರಿಹರಿಸಿಕೊಳ್ಳಬಹುದು. ಒಂದು ಲೋಟ ಬೆಚ್ಚನೆಯ ಹಾಲನ್ನು ತೆಗೆದುಕೊಳ್ಳಿ. ಅದಕ್ಕೆ 10ಗ್ರಾಂ ಬೆಂಡೆಕಾಯಿಯ ಪುಡಿಯನ್ನು ಬೆರೆಸಿ. ಇದಕ್ಕೆ ಎರಡು ಚಮಚದಷ್ಟು ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ, ನಂತರ ಸೇವಿಸಿ. ಪ್ರತಿ ರಾತ್ರಿ ಇದನ್ನು ಪುನರಾವರ್ತಿಸಿ. ಹೀಗೆ ಒಂದು ತಿಂಗಳು ಮಾಡುವುದರಿಂದ ಶೀಘ್ರ ವೀರ್ಯಸ್ಖಲನ ಸಮಸ್ಯೆಯಿಂದ ಮುಕ್ತಿ ಹೊಂದುವಲ್ಲಿ ಗಮನಾರ್ಹವಾದ ಬೆಳವಣಿಗೆಯು ನಿಮ್ಮಲ್ಲಿ ಕಂಡು ಬರುತ್ತದೆ.
ಈರುಳ್ಳಿಗಳು
ಹಸಿರು ಈರುಳ್ಳಿಯ ಬೀಜಗಳು ಅತ್ಯುತ್ತಮವಾದ ಕಾಮೋತ್ತೇಜಕ ಗುಣಗಳನ್ನು ಹೊಂದಿದ್ದಾವೆ. ಇದರಿಂದಾಗಿ ಇವು ಶೀಘ್ರ ವೀರ್ಯ ಸ್ಖಲನವನ್ನು ತಡೆಗಟ್ಟಿ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅದಕ್ಕಾಗಿ ಒಂದು ಚಮಚದಷ್ಟು ಹಸಿರು ಈರುಳ್ಳಿಯ ಬೀಜಗಳನ್ನು ತೆಗೆದುಕೊಂಡು, ಅದನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ. ಇವುಗಳನ್ನು ಚೆನ್ನಾಗಿ ಕಲೆಸಿ ಪ್ರತಿ ಬಾರಿ ಊಟ ಮಾಡುವ ಮುನ್ನ ಇದನ್ನು ಸೇವಿಸಿ. ಇದರಿಂದ ನಿಮ್ಮ ದೇಹದ ಶಕ್ತಿ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ನೀವು ನಿಮ್ಮ ವೀರ್ಯ ಸ್ಖಲನವನ್ನು ಹತೋಟಿಯಲ್ಲಿಡಬಹುದು. ಬಿಳಿ ಈರುಳ್ಳಿಗಳು ಸಹ ಅತ್ಯುತ್ತಮವಾದ ಕಾಮೋತ್ತೇಜಕ ಗುಣಗಳನ್ನು ತಮ್ಮಲ್ಲಿ ಹೊಂದಿವೆ. ಇವು ನಿಮ್ಮ ಜನನಾಂಗಗಳನ್ನು ಸದೃಢಗೊಳಿಸಿ ಶೀಘ್ರ ವೀರ್ಯ ಸ್ಖಲನವನ್ನು ತಡೆಯುತ್ತವೆ. ಇದರಲ್ಲಿರುವ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಲು ಈರುಳ್ಳಿಗಳನ್ನು ಹಸಿಯಾಗಿ ಸೇವಿಸಿ ಸಾಕು.