ಕೇವಲ 10 ನಿಮಿಷಗಳಲ್ಲಿ ಕೊಬ್ಬು ಕರಗಿಸಿಕೊಳ್ಳಬಹುದೇ?

By Poornima Hegde

ಫಿಟ್‌ನೆಸ್ ಎಲ್ಲರಿಗೂ ಬೇಕು. ಆದರೆ ಅದಕ್ಕಾಗಿ ದಿನವಿಡೀ ಸಮಯ ಮೀಸಲಿಡುವುದು ಕಷ್ಟಸಾಧ್ಯ. ಹಾಗೆಂದ ಮಾತ್ರಕ್ಕೆ ಫಿಟ್‌ನೆಸ್ ಗಳಿಸುವುದು ಕಷ್ಟವಲ್ಲ. ನಿಮ್ಮ ದಿನದ ಹತ್ತು ನಿಮಿಷಗಳು ನಿಮ್ಮ ದೇಹ ದಾಢ್ಯತೆಗೆ ನೆರವಾಗಬಹುದು. ಇಂದು ನಾವು ಇಂತಹ ಕೆಲವು ತಾಲಿಮುಗಳನ್ನು ನಿಮಗೆ ಹೇಳುತ್ತೇವೆ. ಇದರಿಂದ ಖಂಡಿತವಾಗಿಯೂ ನೀವು ಕೊಬ್ಬು ಕಳೆದುಕೊಂಡು, ತೂಕ ಕಡಿಮೆ ಮಾಡಿಕೊಳ್ಳಬಹುದು.

ಈ ತಾಲೀಮುಗಳಿಗಾಗಿ ನೀವು ಸ್ವಲ್ಪ ಸಮಯ ಮತ್ತು ಶಕ್ತಿ, ಸಮಾಧಾನ ಮೀಸಲಿಟ್ಟರೆ ಸಾಕು. ನಿಮ್ಮ ಆಯ್ಕೆಯ ತಾಲೀಮಿನ ಆಧಾರದ ಮೇಲೆ 100 ರಿಂದ 250 ರಷ್ಟು ಕ್ಯಾಲೋರಿಗಳನ್ನು ಕಳೆದುಕೊಳ್ಳಲು ಸಾಧ್ಯ. ನೀವು ನಿಮ್ಮ ಫಿಟ್‌ನೆಸ್‌ಗಾಗಿ ಕೆಳಗಿನ ಉತ್ತಮ 6 ತಂತ್ರಗಳನ್ನು ಪ್ರಯೋಗಿಸಿ ನೋಡಿ.

10 ನಿಮಿಷಗಳ ಕಾಲ ಝುಂಬಾ: ಝುಂಬಾ, ದಕ್ಷಿಣ ಅಮೆರಿಕಾದ ಸಂಗೀತ ಬೀಟ್ಸ್ ಹೊಂದಿರುವ ಫಿಟ್ನೆಸ್ ಗಾಗಿ ಹೊಂದಿಸಲಾಗಿರುವ ಏರೋಬಿಕ್ ನೃತ್ಯ. ಇದು ಮೋಜಿನ ಮೂಲಕ ಫಿಟ್ನೆಸ್‌ನ್ನು ಪಡೆಯಲು ಒಂದು ಉತ್ತಮ ದಾರಿ. ಅತ್ತಿಂದಿತ್ತ ಓಡಾಡುತ್ತ ಮಾಡುವ ಈ ನೃತ್ಯ ಉತ್ತಮ ಭಾವನೆಯನ್ನು ಮೂಡಿಸುವುದರ ಜೊತೆಗೆ ದೇಹದ ಫಿಟ್ನೆಸ್ ಉಳಿಸಿಕೊಳ್ಳಲೂ ಸಹಾಯಕವಾಗಿದೆ. ಈ ಝುಂಬಾ ನೃತ್ಯಕ್ಕೆ ಒಂದು ಜೊತೆ ಸರಿಯಾದ ನೃತ್ಯ ಶೂಗಳು ಅಥವಾ ತರಬೇತುದಾರರು ಸಲಹೆ ಮಾಡಿದ ಶೂಗಳನ್ನು ಧರಿಸಬೇಕಾಗುತ್ತದೆ. ಈ ನೃತ್ಯದಿಂದ, ದೇಹದ ತೂಕ, ಲಿಂಗ, ಫಿಟ್ನೆಸ್ ಮಟ್ಟ ಮತ್ತು ಇತರ ಭೌತಿಕ ಅಂಶಗಳನ್ನು ಆಧರಿಸಿ, ನೀವು ಪ್ರತಿ ಗಂಟೆಗೆ 400 ಗೆ 600 ಕ್ಯಾಲೋರಿಗಳವರೆಗೆ ಕರಗಿಸಬಹುದು. ಮುಂಜಾನೆ ವ್ಯಾಯಾಮದ ಪ್ರಯೋಜನಗಳು

10 ನಿಮಿಷಗಳ ಕಾಲ ಸ್ವಚ್ಛಗೊಳಿಸುವುದು: ನಿಮ್ಮ ಮನೆಯ ಸ್ವಚ್ಛಗೊಳಿಸುವುದು ನಿಮ್ಮ ದಿನದ ಚಟುವಟಿಕೆಯೇ. ಆದರೆ ಅದರ ಜೊತೆಗೆ ಇನ್ನಷ್ಟು ಕೆಲಸವನ್ನು ಸೇರಿಸಿಕೊಂಡು ಮಾಡಿದರೆ ನಿಮ್ಮ ಫಿಟ್ನೆಸ್ ಗೆ ನೆರವಾಗುವುದಲ್ಲದೇ ಅನಗತ್ಯ ಕೊಬ್ಬನ್ನೂ ಕೂಡ ಕರಗಿಸಬಹುದು. ಇದು ನೀವು 20 ಗಳ ಕಾಲ ಮಾಡುವ ಚುರುಕಾದ ನಡಿಗೆ (ಸ್ಪೀಡ್ ವಾಕ್) ಗೆ ಸಮನಾಗಿದ್ದು ಸುಮಾರು 200 ರಿಂದ 300 ಕ್ಯಾಲೋರಿಗಳನ್ನು ಕರಗಿಸುತ್ತದೆ. ಆದಾಗ್ಯೂ, ನೀವು ಕೊಬ್ಬು ಕರಗಿಸಲು10 ನಿಮಿಷಗಳ ಕಾಲ ನಿರಂತರವಾಗಿ ಬಟ್ಟೆ ಒಗೆಯುವಂತಹ ಕೆಲಸವನ್ನೇ ಮಾಡಬೇಕೆಂದಿಲ್ಲ. ಆರಾಮದಾಯಕವಾಗಿ ನಿಮ್ಮ ಫಿಟ್ನೆಸ್ ದಿನಚರಿಯ ಜೊತೆಗೆ ಹೆಚ್ಚುವರಿ 20 ರಿಂದ 30% ಕೆಲಸವನ್ನೂ ಸೇರಿಸಿಕೊಳ್ಳಬಹುದು.

10 ನಿಮಿಷಗಳ ಕಾಲ ಹೆಚ್ ಐ ಐ ಟಿ (HIIT- high intensity interval training ): 10 ನಿಮಿಷ, ಹೆಚ್ಚಿನ ತೀವ್ರತೆಯುಳ್ಳ (ವಿರಾಮದ) ತರಬೇತಿ ನಿರ್ವಹಿಸುವ ಮೂಲಕ ಖಂಡಿತವಾಗಿ ನೀವು 150 ರಿಂದ 250 ಕ್ಯಾಲರಿಗಳನ್ನು ಕಳೆದುಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಎಲ್ಲರು ಅತ್ಯುತ್ತಮವಾದ, ಹೃದಯದ ಬಡಿತ ಸವಾಲಿನ ಹೆಚ್ ಐ ಐ ಟಿ ವ್ಯಾಯಾಮ ವಿಶೇಷ ಪ್ರಕಾರದ್ದಾಗಿದೆ. ನೀವು ಈ ರೀತಿ, ನಿಮ್ಮ ವಯಸ್ಸು, ಸಾಮರ್ಥ್ಯ, ಶಕ್ತಿಯನ್ನು ಆಧರಿಸಿ ಹೆಚ್ ಐ ಐ ಟಿ ತರಬೇತಿ ಮಟ್ಟವನ್ನು ನಿಮ್ಮ ದೇಹ ಪ್ರತಿ ವಾರ ನಿಭಾಯಿಸಲು ಸಾಧ್ಯವಾಗುವಂತೆ ಸರಿಹೊಂದಿಸಬಹುದು. ಇದು ವಿಶೇಷವಾಗಿ ನಿರ್ದಿಷ್ಟ ಕ್ರೀಡೆಗಳಿಗೆ, ದಿನದ ಜೀವನದಲ್ಲಿ ಶಕ್ತಿ ಹೆಚ್ಚಿಸಲಿಕ್ಕೆ ಸಹಾಯಕವಾಗಿದೆ. ಹೆಚ್ ಐ ಐ ಟಿಯನ್ನು ನಿಮ್ಮ ಅಗತ್ಯಗಳಿಗೆ ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ಸರಿಹೊಂದಿಸಿಕೊಳ್ಳಬಹುದು. ಗಲ್ಲ ದೃಢವಾಗಿಸಲು ವ್ಯಾಯಾಮಗಳು

10 ನಿಮಿಷಗಳ ಕಾಲ ಹಗ್ಗ ಜಿಗಿತದಿಂದ ದೇಹತೂಕ ಇಳಿಸುವುದು: 10 ನಿಮಿಷಗಳ ಕಾಲ ಈ ಸರ್ಕ್ಯೂಟ್ ಆರಿಸಿಕೊಳ್ಳಿ:
ಸರ್ಕ್ಯೂಟ್ 1: ಪುಶ್ ಅಪ್ ಗಳು (10 ಸಲ), ಕುಳಿತುಕೊಳ್ಳುವುದು (15), ಕ್ರೌಂಚಸ್ (25), ರೋಪ್ ಸ್ಕಿಪ್ಸ್ (ನಿಮ್ಮಲ್ಲಿ ಸಾಧ್ಯವಾದಷ್ಟು ವೇಗವಾಗಿ- 100-200 ಸಲ). 1-2 ನಿಮಿಷಗಳ ಕಾಲ ವಿಶ್ರಾಂತಿ ಪಡೆದು ನಿಮ್ಮ ಫಿಟ್‌ನೆಸ್ ಮಟ್ಟವನ್ನು ಅವಲಂಭಿಸಿ ಈ ಇಡೀ ವಿಧಾನವನ್ನು 2-3 ಬಾರಿ ಪುನರಾವರ್ತಿಸಿ.

10 ನಿಮಿಷಗಳ ಕಾಲ ಚುರುಕಾದ ನಡಿಗೆ: ಚುರುಕಾದ ನಡಿಗೆಗೆ ವಿಶೇಷ ಉಪಕರಣಗಳ ಅಗತ್ಯವಿಲ್ಲ, ಒಂದು ಜೊತೆ ಉತ್ತಮವಾದ ವಾಕಿಂಗ್ ಬೂಟುಗಳಿದ್ದರೆ ಸಾಕು. ನೀವು ಸತತ 10-20 ನಿಮಿಷ ವೇಗವಾದ ನಡಿಗೆಯ ಈ ತಾಲೀಮನ್ನು ನಿಮ್ಮ ದಿನಚರಿಯಾಗಿ ಅಳವಡಿಸಿಕೊಳ್ಳಬಹುದು. ಹೆಚ್ಚಿನ ಪರಿಣಾಮಕ್ಕಾಗಿ ನಿಮಗೆ ಸಾಧ್ಯವಾದಷ್ಟು ವೇಗವಾಗಿ ನೀವು ನಡೆಯಬಹುದು. ಹೆಚ್ಚುವರಿ ಸ್ನಾಯುಗಳ ಬಲಕ್ಕಾಗಿ ಓಟವನ್ನು (ಜಾಗಿಂಗ್) ಕೂಡ ಮಾಡಬಹುದು. ಕ್ರೀಡೆ ಮೆಡಿಸಿನ್ ಅಮೆರಿಕನ್ ಕಾಲೇಜ್ ನ ಕ್ರೀಡಾ ವೈದ್ಯಕೀಯ ವಿಭಾಗದ ಪ್ರಕಾರ, 10 ನಿಮಿಷಗಳ ಕಾಲ ಮಾಡುವ ಚುರುಕಾದ ವಾಕಿಂಗ್ ಸುಮಾರು 106 ಕ್ಯಾಲೊರಿಗಳನ್ನು ಕರಗಿಸುತ್ತದೆ. ಈ ಪ್ರಕ್ರಿಯೆಯಲ್ಲಿ ನಿಮ್ಮ ತೋಳುಗಳಿಗೆ ವ್ಯಾಯಾಮವಾಗುತ್ತದೆ ಮತ್ತು ವೇಗವಾಗಿ ಚಲಿಸುವುದರಿಂದ ದೇಹ ತೂಕ ಕಳೆದುಕೊಳ್ಳಲಾರಂಭಿಸುತ್ತದೆ.

10 ನಿಮಿಷಗಳ ಕಾಲ ದೈಹಿಕವಾಗಿ ಆಡುವ ವೀಡಿಯೊ ಗೇಮ್‌ಗಳು: ಬ್ರಿಗ್ಯಾಮ್ನ ನ ಯಂಗ್ ಯುನಿವರ್ಸಿಟಿ ಆಂಡ್ ಯೂನಿವರ್ಸಿಟಿ ಆಫ್ ಮ್ಯಾಸಚೂಸೆಟ್ಸ್ ವಿಜ್ಞಾನಿಗಳ ಪ್ರಕಾರ ನಿಮ್ಮ ಮಕ್ಕಳು (ಮತ್ತು ನೀವು!) ಏಕಾಂಗಿಯಾಗಿ ವಿಡಿಯೋ ಗೇಮ್ಸ್ ಗಳನ್ನು ಮಾಡುವುದರ ಮೂಲಕ ಹೆಚ್ಚಿನ ಫಿಟ್‌ನೆಸ್ ಗಳಿಸಬಹುದು. ಇಲ್ಲಿನ ಮುಖ್ಯ ಅಂಶವೆಂದರೆ ವಿಡಿಯೋ ಗೇಮ್ ಗಳನ್ನು ಆಡುವಾಗ ಸೌಮ್ಯವಾದ ದೈಹಿಕ ಚಟುವಟಿಕೆ ಚುರುಕುಗೊಳ್ಳುತ್ತದೆ. 11 ಅತ್ಯುತ್ತಮ ಸರ್ವಕಾಲಿಕ ಫಿಟ್ನೆಸ್ ರಹಸ್ಯಗಳು

ನಿಮ್ಮ ಮಗುವಿನ ದೇಹದ ತೂಕ ಮತ್ತು ಸಾಮರ್ಥ್ಯದ ಮೇಲೆ ನೇರ ಮತ್ತು ರಚನಾತ್ಮಕವಾಗಿ ಪ್ರಭಾವ ಹೊಂದಿರುವ ಆಟಗಳನ್ನು ಆಯ್ಕೆ ಮಾಡಿಕೊಳ್ಳಿ. 10 ನಿಮಿಷಗಳ ಕಾಲ ವೈ ಬಾಕ್ಸಿಂಗ್ ನಂತಹ ನಿರ್ದಿಷ್ಟ ಆಟಗಳು 10 ನಿಮಿಷಗಳ ಕಾಲ ಟ್ರೆಡ್ ಮಿಲ್ ಮೇಲೆ ನಡೆಯುವ ಚುರುಕಾದ ನಡಿಗೆಗೆ ಸಮಾನ ನಿಮ್ಮ ಫಿಟ್‌ನೆಸ್ ಬಗ್ಗೆ ನಿಜವಾದ ಕಾಳಜಿ ನಿಮಗಿದ್ದರೆ ಮೇಲಿನ ಈ ತಾಲೀಮುಗಳು ಖಂಡಿತವಾಗಿಯೂ ನಿಮಗೆ ಸಕಾರಾತ್ಮಕ ಪರಿಣಾಮವನ್ನು ಒದಗಿಸುವುದರಲ್ಲಿ ಸಂಶಯವಿಲ್ಲ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

X
Desktop Bottom Promotion