Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಧೂಮಪಾನ ತ್ಯಜಿಸಿದರೆ ಅನಾನುಕೂಲ ಕೂಡ ಇದೆ!
ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ, ಇದು ಶಾಸನ ವಿಧಿಸಿದ ಎಚ್ಚರಿಕೆ ಎಂದು ತಿಳಿದಿದ್ದರೂ, ಧೂಮಪಾನ ಬಿಡಲಾಗದ ಮತ್ತು ಬಿಡಿಸಲಾಗದ ಚಟ. ಒತ್ತಡದಲ್ಲಿರುವ ಮನುಷ್ಯ ಹೆಚ್ಚಾಗಿ ಧೂಮಪಾನದ ದಾಸನಾಗುತ್ತಾನೆ. ಬಹಳಷ್ಟು ಮಂದಿ ಈ ಸಿಗರೇಟು ಮತ್ತು ಹೊಗೆಸೊಪ್ಪಿನ ಚಟದಿಂದ ಹೊರಬರಲು ವಿಭಿನ್ನ ಪ್ರಯತ್ನ ನಡೆಸಿದರೂ ಅದರಲ್ಲಿ ಯಶಸ್ಸು ಕಂಡವರು ಅಪರೂಪ ಎನ್ನಬಹುದು.
ಧೂಮಪಾನಕ್ಕೆ ವಿದಾಯ ಹೇಳುವುದು ಆರೋಗ್ಯದ ಮತ್ತು ಆರ್ಥಿಕ ದೃಷ್ಟಿಯಿಂದ ಉತ್ತಮ. ಸಿಗರೇಟು ಬಿಟ್ಟರೆ ಆಗುವ ಅನುಕೂಲ ಮತ್ತು ಅನಾನುಕೂಲವನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
ಧೂಮಪಾನ ತ್ಯಜಿಸಿದರೆ ಆಗುವ ಉಪಯೋಗಗಳು

1.ರಕ್ತದೊತ್ತಡ ಕಡಿಮೆ ಮಾಡುತ್ತೆ
ತೀರಾ ಹೆಚ್ಚಳವಾಗಿರುವ ರಕ್ತದೊತ್ತಡದ ಮಟ್ಟವನ್ನು ಸಾಮಾನ್ಯ ಮಟ್ಟಕ್ಕೆ ಇಪ್ಪತ್ತು ನಿಮಿಷದಲ್ಲಿ ಇಳಿಸುತ್ತದೆ.

2.ಕಾರ್ಬನ್ ಮೊನೊಕ್ಷೈಡ್
ರಕ್ತದ ಕಾರ್ಬನ್ ಮೊನೊಕ್ಷೈಡ್ ಅಂಶವು ನಿಧಾನವಾಗಿ ಸಾಮಾನ್ಯ ಮಟ್ಟಕ್ಕೆ ಎಂಟು ಗಂಟೆಗಳ ಅವಧಿಯಲ್ಲಿ ಇಳಿಯುತ್ತದೆ.

3.ವಾಸನೆ ಮತ್ತು ರುಚಿಯನ್ನು ಗ್ರಹಿಸುವ ಶಕ್ತಿ
ಎರಡು ದಿನದದಲ್ಲಿ ದೇಹದಲ್ಲಿರುವ ಹೊಗೆಸೊಪ್ಪಿನ ಅಂಶವು ಸಂಪೂರ್ಣ ಬಿಟ್ಟು, ವಾಸನೆ ಮತ್ತು ರುಚಿಯನ್ನು ಗ್ರಹಿಸುವ ಶಕ್ತಿ ಸಾಮಾನ್ಯ ಮಟ್ಟಕ್ಕೆ ಬರುತ್ತದೆ.

4.ಉತ್ಸಾಹ ವೃದ್ದಿಯಾಗುವುದು
ನಾಲ್ಕು ದಿನದಲ್ಲಿ ದೇಹದ ಶ್ವಾಸನಳಿಕೆಗೆ ಸಂಬಂಧ ಪಟ್ಟ ಟ್ಯೂಬ್ ಗಳು ಸಡಿಲವಾಗಿ ಉತ್ಸಾಹ ವೃದ್ದಿಯಾಗುತ್ತದೆ.

5.ರಕ್ತ ಪರಿಚಲನೆ
ಎರಡು ವಾರದಲ್ಲಿ ರಕ್ತಾಭಿಸರಣೆ ಉತ್ತಮವಾಗಿ ಮುಂದಿನ ಹತ್ತು ವಾರದಲ್ಲಿ ಇನ್ನಷ್ಟು ವೃದ್ದಿಯಾಗುತ್ತದೆ.

6.ಶ್ವಾಸಕೋಸದ ಸಾಮರ್ಥ್ಯ ಹೆಚ್ಚುವುದು
ಒಂಬತ್ತು ವಾರದಲ್ಲಿ ಉಸಿರಾಟಕ್ಕೆ ಸಂಬಂಧಪಟ್ಟ ತೊಂದರೆಗಳು ಕಮ್ಮಿಯಾಗಿ ಶ್ವಾಸಕೋಸದ ಸಾಮರ್ಥ್ಯ ಶೇ. ಹತ್ತರಷ್ಟು ವೃದ್ದಿಯಾಗುತ್ತದೆ.

7.ಆರೋಗ್ಯವಂತ ಹೃದಯ
ಐದು ವರ್ಷದಲ್ಲಿ ಹೃದಯ ಮತ್ತು ಶ್ವಾಸಕೋಸ ಧೂಮಪಾನ ಮಾಡದೇ ಇದ್ದವರ ದೇಹದ ಸ್ಥಿತಿಯಂತೆ ಕೆಲಸ ಮಾಡಲಾರಂಭಿಸುತ್ತದೆ. ಹಾಗಾಗಿ ಹೃದಯಾಘಾತ ಮತ್ತು ಶ್ವಾಸಕೋಸದ ಕ್ಯಾನ್ಸರ್ ಕಮ್ಮಿಯಾಗಬಹುದು.

1.ಧೂಮಪಾನ ಬಿಟ್ಟರೆ ಆಗುವ ಅನಾನುಕೂಲಗಳು
ಧೂಮಪಾನ ತ್ಯಜಿಸಿದರೆ ಮುಖ್ಯವಾಗಿ ದೇಹಕ್ಕಾಗುವ ಶೀಘ್ರ ಬದಲಾವಣೆಯಿಂದಾಗಿ ಕೆಲವು ಅನಾನುಕೂಲಗಳು ಆಗುವ ಸಾಧ್ಯತೆಯಿದೆ. ಈ ಲಕ್ಷಣಗಳು ಕೆಲವೊಮ್ಮೆ ಕೆಲವೇ ಸಮಯದಲ್ಲಿ ತೊಂದರೆ ತರಬಹುದು.

2.ಅನುಭವಿಸ ಬಹುದಾದ ಬದಲಾವಣೆಗಳು
ಧೂಮಪಾನ ಬಿಟ್ಟರೆ ಹುಳಿಯಾಗುವಿಕೆ, ಅಜೀರ್ಣ ಮತ್ತು ಎದೆಯುರಿ ಮುಂತಾದವು ಕೂಡಲೇ ಬರುವ ಸಾಧ್ಯತೆಯಿದೆ. ಇದರ ಜೊತೆಗೆ ವಾಯು, ಅತಿಭೇಧಿ, ಹೊಟ್ಟೆಕಟ್ಟಿಸುವುದು ಮತ್ತು ವಾಕರಿಕೆ ಬರುವ ಸಾಧ್ಯತೆಯಿದೆ.

3.ಉಸಿರಾಟದ ಬದಲಾವಣೆ
ಧೂಮಪಾನದಿಂದ ದೇಹದೊಳಗೆ ಹೊಗೆ ತುಂಬದೇ ಇರುವುದರಿಂದ ಉಸಿರಾಟದ ವ್ಯವಸ್ಥೆಯಲ್ಲಿ ಬದಲಾವಣೆಯಾಗಬಹುದು. ಇದರಿಂದ ಸೈನಸ್, ಶೀತ, ಗಂಟಲು ಕೊರೆತ ಮತ್ತು ಧ್ವನಿ ಗಡಸಾಗುವುದು ಮುಂತಾದ ಬದಲಾವಣೆಯನ್ನು ಕಾಣಬಹುದು.

4.ರಕ್ತಾಭಿಸರಣೆಯಲ್ಲಿ ಬದಲಾವಣೆ
ಹೃದಯಕ್ಕೆ ಅತಿಯಾದ ರಕ್ತದೊತ್ತಡ ಇಲ್ಲದಿರುವುದರಿಂದ, ಸಮತೋಲನದ ರಕ್ತ ಸಂಚಲನವಿರುವುದರಿಂದ ಕೆಲವೊಂದು ತಾತ್ಕಾಲಿಕ ಸೈಡ್ ಎಫೆಕ್ಟ್ ಇರುವ ಸಾಧ್ಯತೆಯಿದೆ. ಪ್ರಮುಖವಾಗಿ ಬೆರಳುಗಳು, ದೇಹದ ಅಂಗಾಂಗಳು ಗಟ್ಟಿಯಾಗುವ ಸಾಧ್ಯತೆಯಿದೆ.

5.ಮಾನಸಿಕವಾಗಿ ಆಗಬಹುದಾದ ಬದಲಾವಣೆಗಳು
ಹೊಗೆಸೊಪ್ಪು ದೇಹಕ್ಕೆ ಮಾರಿಯಾಗಿರುವುದರಿಂದ ಮತ್ತು ಇದರಿಂದ ಹೃದಯ ವೀಕ್ ಆಗುವ ಸಾಧ್ಯತೆಯಿದೆ. ಮತ್ತು ಹೃದಯ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಕೆಲಸ ನಿರ್ವಹಿಸಲು ಆರಂಭಿಸುವುದರಿಂದ ಉಲ್ಲಾಸ ಇಲ್ಲದೇ ಇರುವುದು, ಜಿಗುಟುತನ ಬರುವ ಸಾಧ್ಯತೆಯಿದೆ.

6.ದುಃಸ್ವಪ್ನ
ನಿದ್ರೆಯ ಸಮಯದಲ್ಲಿ ಬದಲಾಗುವ ಸಾಧ್ಯತೆ ಇರುವುದರಿಂದ ಮತ್ತು ಅಗಾಗ ಬರುವ ದುಃಸ್ವಪ್ನ ಬರಬಹುದಾಗಿದೆ. ಧೂಮಪಾನದಿಂದ ಒತ್ತಡ ಕಮ್ಮಿಯಾಗುತ್ತದೆ ಎನ್ನುವ ನಂಬಿಕೆ ಧೂಮಪಾನಿಗಳಲ್ಲಿ ಇರುತ್ತದೆ. ಹಾಗಾಗಿ ಧೂಮಪಾನ ಬಿಡುವುದು ಕೆಲವೊಮ್ಮೆ ಕಿರಿಕಿರಿಯಾಗುವ ಸಾಧ್ಯತೆಗಳಿರುತ್ತದೆ.
ಆದರೆ ಎಲ್ಲದಕ್ಕೂ ಮೇಲಾಗಿ ಧೂಮಪಾನ ಬಿಡುವ ನಿರ್ಧಾರ ನಿಮ್ಮ ಜೀವವನ್ನು ಉಳಿಸುತ್ತದೆ. ದೇಹವು ಧೂಮಪಾನ ರಹಿತ ಜೀವನಕ್ಕೆ ಒಗ್ಗಲು ಕೆಲವು ಕಾಲ ತೆಗೆದುಕೊಂಡರೂ, ಕೆಲವೊಂದು ಸೈಡ್ ಎಫೆಕ್ಟ್ ಇದ್ದರೂ ಧೂಮಪಾನ ತ್ಯಜಿಸುವುದು ಉತ್ತಮ. ಆರೋಗ್ಯಕರ ಜೀವನವು ಬೇಕಾದಲ್ಲಿ ಧೂಮಪಾನ ರಹಿತ ಜೀವನ ನಡೆಸುವುದು ಉತ್ತಮ.



Click it and Unblock the Notifications
