ಕೊಲೆಸ್ಟ್ರಾಲ್ ಹೆಚ್ಚಾಗಲು ಇವೇ ಪ್ರಮುಖ10 ಕಾರಣಗಳು

By Super

ಕೊಲೆಸ್ಟ್ರಾಲ್ ಲೆವೆಲ್ ಜಾಸ್ತಿಯಾಗಿದೆಯಂತೆ ಎಂಬ ಮಾತನ್ನು ನೀವು ಇತ್ತೀಚೆಗೆ ಸಾಮಾನ್ಯವಾಗಿ ಅಲ್ಲಿ ಇಲ್ಲಿ ಕೇಳಿಸಿಕೊಂಡಿರಬಹುದು. ಇದು ಒಂದು ರೋಗವಲ್ಲ. ಆದರೆ ಮುಂದೆ ಬರಬಹುದಾದ ಹಲವು ಅನಾರೋಗ್ಯಗಳಿಗೆ ಮೂಲವಾಗಿದೆ. ಕೊಲೆಸ್ಟ್ರಾಲ್ ಪ್ರಮಾಣ ರಕ್ತದಲ್ಲಿ ಹೆಚ್ಚುವುದು ಖಂಡಿತ ಒಂದು ಆರೋಗ್ಯಕರ ಸೂಚನೆಯಲ್ಲ. ಕೊಲೆಸ್ಟ್ರಾಲ್ ಹೆಚ್ಚುತ್ತದೆ, ಹೇಗೆ ಇದನ್ನು ನಿಯಂತ್ರಣದಲ್ಲಿಡಬಹುದು ಎಂದು ತಿಳಿಯಬೇಕೆ. ಒಮ್ಮೆ ಇತ್ತ ಕಣ್ಣು ಹಾಯಿಸಿ.

ನಮ್ಮ ದೇಹ ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ರಕ್ತದಲ್ಲಿ ಸ್ವಲ್ಪ ಮಟ್ಟಿನ ಕೊಲೆಸ್ಟ್ರಾಲ್ಅಗತ್ಯವಾಗಿದೆ. ಆದರೆ ರಕ್ತದಲ್ಲಿ ಇದರ ಪ್ರಮಾಣ ಹೆಚ್ಚಾದಾಗ ಇದು ರಕ್ತ ಪರಿಚಲನೆಗೆ ತಡೆ ಉಂಟು ಮಾಡುತ್ತದೆ. ಇದರಿಂದಾಗಿ ಪಾರ್ಶ್ವವಾಯು ಮತ್ತು ಇತರೆ ಹೃದಯದ ರಕ್ತನಾಳ ಸಂಬಂಧಿ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ.

ಇತ್ತೀಚೆಗೆ ಹೆಚ್ಚು ಹೆಚ್ಚು ವಯಸ್ಕರು ಈ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವಕ್ಕೆ ಕಾರಣಗಳು ಹಲವು. ಇಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಇರುವ ಕೆಲವು ಪ್ರಮುಖ ಕಾರಣಗಳನ್ನು ಪಟ್ಟಿಮಾಡಲಾಗಿದೆ ನೋಡಿ.

ಸಮರ್ಪಕವಾಗಿರದ ಆಹಾರ ಕ್ರಮ

ಸಮರ್ಪಕವಾಗಿರದ ಆಹಾರ ಕ್ರಮ

ಹೆಚ್ಚಿನ ಪ್ರಮಾಣದ ಕೊಬ್ಬಿನಂಶ (ಸ್ಯಾಚುರೇಟೆಡ್ ಫ್ಯಾಟ್) ಇರುವ ಆಹಾರವನ್ನು ಸೇವಿಸುವುದು ಮೊದಲ ಕಾರಣವಾಗಿದೆ. ಸ್ಯಾಟುರೇಟೆಡ್ ಫ್ಯಾಟ್ ಕೊಲೆಸ್ಟ್ರಾಲ್ ಹೆಚ್ಚಿರುವ ಹಾಗೂ ಕೊಬ್ಬಿನಂಶ ಹೆಚ್ಚಿರುವ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿರುತ್ತದೆ. ಇವುಗಳಲ್ಲಿ ಮುಖ್ಯವಾದುವುಗಳೆಂದರೆ ಕೊಬ್ಬಿನಂಶ ಹೆಚ್ಚಾಗಿರುವ ಮಾಂಸ, ಬೆಣ್ಣೆ, ಗಿಣ್ಣು, ಕೇಕ್ ಗಳು, ತುಪ್ಪ ಇತ್ಯಾದಿ, ಇಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಡಿ ಅಥವಾ ಸೇವಿಸುವುದನ್ನು ಕಡಿಮೆ ಮಾಡಿ.

ಅನುವಂಶಿಕ ಕಾರಣಗಳು

ಅನುವಂಶಿಕ ಕಾರಣಗಳು

ಒಂದು ವೇಳೆ ನಿಮ್ಮಲ್ಲಿರುವ ಹೆಚ್ಚಿನ ಕೊಲೆಸ್ಟ್ರಾಲ್ ಅನುವಂಶಿಕ ಕಾರಣದಿಂದಾಗಿದ್ದರೆ ನೀವು ಸ್ವಲ್ಪ ಯೋಚಿಸಬೇಕಾಗುತ್ತದೆ. ಇದು ನೀವು ಬೇಗನೆ ಹೃದಯದ ರಕ್ತನಾಳ ಸಂಬಂಧಿ ಸಮಸ್ಯೆಗಳಿಗೆ ಈಡಾಗುವಂತೆ ಮಾಡುತ್ತದೆ.

ಹೆಚ್ಚಿನ ತೂಕ

ಹೆಚ್ಚಿನ ತೂಕ

ಹೆಚ್ಚಿನ ತೂಕವೂ ನಿಮ್ಮಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಾಗಿಸಲು ಒಂದು ಪ್ರಮುಖ ಕಾರಣವಾಗಿದೆ. ನಿಮ್ಮ ಸಾಮಾಜಿಕ ಜೀವನವನ್ನು ಇದು ಪ್ರಭಾವಿಸುವುದಷ್ಟೇ ಅಲ್ಲದೇ ಇದು ಟ್ರೈಗ್ಲಿಸರೈಡ್ ಅನ್ನು ಹೆಚ್ಚಿಸುತ್ತದೆ ಇದು ರಕ್ತನಾಳಗಳಲ್ಲಿ ತಡೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ತೂಕವನ್ನು ಕೊಲೆಸ್ಟ್ರಾಲ್ ಹೆಚ್ಚಾಗುವ ಮಟ್ಟದ ತನಕ ಏರದಂತೆ ಜಾಗೃತೆ ವಹಿಸಿ.

ಆಲಸ್ಯ

ಆಲಸ್ಯ

ಇಡಿ ದಿನ ಮಲಗಿರುವ ಅಥವಾ ಕುಳಿತು ಸಮಯ ತೆಗೆಯುತ್ತಿರುವ ಜನರಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಪ್ರಮಾಣ ಹೆಚ್ಚಾಗಿರುತ್ತದೆ. ನೀವು ಕ್ರಿಯಾಶೀಲರಾಗಿದ್ದಷ್ಟು ನಿಮ್ಮ ರಕ್ತದಲ್ಲಿ ಟ್ರೈಗ್ಲಿಸರೈಡ್ ಹೆಚ್ಚುವ ಭೀತಿ ಕಡಿಮೆಯಾಗಿರುತ್ತದೆ.

ಧೂಮಪಾನ

ಧೂಮಪಾನ

ಸಿಗರೇಟು ಸೇವನೆ ಕೂಡ ಕೊಲೆಸ್ಟ್ರಾಲ್ ಹೆಚ್ಚಲು ಒಂದು ಪ್ರಮುಖ ಕಾರಣವಾಗಿದೆ. ಇದು ಒಳ್ಳೆಯ ಕೊಲೆಸ್ಟ್ರಾಲ್ ಕಡಿಮೆ ಮಾಡಿ ನಿಮ್ಮ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.

ಹಾಗಾಗಿ ಧೂಮಪಾನವನ್ನು ಇಂದೇ ಬಿಡಿ ಮತ್ತು ನಿಮ್ಮ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಮತ್ತು ಆರೋಗ್ಯವಾಗಿ ಬಾಳಿ.

ವಯಸ್ಸು ಮತ್ತು ಲಿಂಗ

ವಯಸ್ಸು ಮತ್ತು ಲಿಂಗ

ನಿಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ನೀವು 20 ವರ್ಷ ತಲುಪಿದ ನಂತರ ಆರಂಭವಾಗುತ್ತದೆ. ಹಾಗೂ ಇದು ಪುರುಷ ಮತ್ತು ಮಹಿಳೆಯರಲ್ಲಿ 60-65 ವರ್ಷವಾಗುವ ತನಕ ಹೆಚ್ಚಾಗುತ್ತಾ ಇರುತ್ತದೆ.

ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸಮಯದ ತನಕ ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್ ಹೊಂದಿರುತ್ತಾರೆ. ಆದರೆ ಇದರ ನಂತರ ಪುರುಷರಿಗಿಂತಲೂ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಮಹಿಳೆಯರಲ್ಲಿ ಕಾಣಬಹುದು. ಹಾಗಾಗಿ ನೀವು ವಯಸ್ಸಿಗೆ ಅನುಗುಣವಾಗಿ ಉತ್ತಮ ಆಹಾರ ಪದ್ಧತಿ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಿ.

ಔಷಧಗಳು

ಔಷಧಗಳು

ನೀವು ಸೇವಿಸುವ ಕೆಲವು ಔಷಧಗಳು ನಿಮ್ಮ ರಕ್ತದಲ್ಲಿ ಟ್ರೈಗ್ಲಿಸರೈಡ್ ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗಾಗಿ ಯಾವುದೇ ಔಷಧವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಮದ್ಯಪಾನ

ಮದ್ಯಪಾನ

ನಿಯಮಿತವಾಗಿ ಮದ್ಯಪಾನ ಮಾಡುವುದರಿಂದ ನಿಮ್ಮ ಜಠರ ಮತ್ತು ಹೃದಯದ ಸ್ನಾಯುಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ನಿಮ್ಮ ರಕ್ತದೊತ್ತಡ ಹೆಚ್ಚಾಗುತ್ತದೆ. ಹಾಗೂ ಇದು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತದೆ.

ಒತ್ತಡ

ಒತ್ತಡ

ಜನರು ಒತ್ತಡಕ್ಕೊಳಗಾದಾಗ ಸಾಮಾನ್ಯವಾಗಿ ಧೂಮಪಾನ, ಮದ್ಯಪಾನಮಾಡುವುದು ಅಥವಾ ಹೆಚ್ಚಿನ ಕೊಬ್ಬಿನಂಶ ಇರುವ ಆಹಾರವನ್ನು ಸೇವಿಸುವುದು ಸಾಮಾನ್ಯವಾಗಿದೆ. ಹೀಗೆ ನಿರಂತರ ಒತ್ತಡ ಕೊಲೆಸ್ಟ್ರಾಲ್ ಹೆಚ್ಚಾಗುವುದಕ್ಕೆ ಒಂದು ಕಾರಣವಾಗಬಹುದು.

ರೋಗಗಳು

ರೋಗಗಳು

ಮಧುಮೇಹ ಹೈಪೋ ಥೈರೋಡಿಸಂ ನಂತಹ ಕೆಲವು ಕಾಯಿಲೆಗಳು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ನಿಮ್ಮ ರಕ್ತದ ಕೊಲೆಸ್ಟ್ರಾಲ್ ಪ್ರಮಾಣ ಈ ಎಲ್ಲಾ ಕಾರಣಗಳಿಂದ ಹೆಚ್ಚಾಗಬಹುದು ಹಾಗಾಗಿ ನಿಯಮಿತವಾಗಿ ಇದನ್ನು ಪರೀಕ್ಷಿಸುತ್ತಾ ಇರುವುದು ಕ್ಷೇಮ.

X
Desktop Bottom Promotion