ಮಹಿಳೆಯ ಆರೋಗ್ಯದಲ್ಲಿ ಜಿಮ್ ನ ಪಾತ್ರ

By Poornima heggade

ಆರೋಗ್ಯವರ್ಧನೆಗಾಗಿ ದೇಹ ಫಿಟ್ ಆಗಿರುವುದು ಬಹಳ ಮುಖ್ಯ. ಇದರಿಂದಾಗಿ ಹೊರಗಡೆ ನೀವು ಬೆರೆತಾಗ ನಿಮ್ಮನ್ನು ಎಲ್ಲರು ಗುರುತಿಸುವಂತಾಗುವುದೂ ಸುಳ್ಳಲ್ಲ. ನಿಮ್ಮ ಮೈಕಟ್ಟು ಅಂದವಾಗಿರಬೇಕಾದುದು ಇಂದಿನ ಫ್ಯಾಷನೇಬಲ್ ಬಹಳ ಮುಖ್ಯ. ಇಂದಿನ ಕಾಲದಲ್ಲಿ ದುಡಿಯುವ ವರ್ಗ ಬಹಳ ಕಡಿಮೆ ಹಾಗಾಗಿ ಮೈಕಟ್ಟು ಬೆಳೆಯಬೇಕಾದರೆ ನೈಸರ್ಗಿಕವಾದ ಯಾವುದೇ ಮಾರ್ಗಗಳಿಲ್ಲ. ಹಾಗಾಗಿ ಈಗಿನ ಯುವಜನತೆ ಜಿಮ್ ನತ್ತ ಮುಖಮಾಡಿದ್ದಾರೆ

ಜಿಮ್ ಪುರುಷ ಮತ್ತು ಮಹಿಳೆಯರೀರ್ವರಿಗೂ ಬಹಳ ಸಹಾಯಕವಾದ ಚಟುವಟಿಕೆಯಾಗಿದೆ. ಇಲ್ಲಿ ಎಲ್ಲರಿಗಾಗಿಯೂ ಸರಿಹೊಂದುವ ವ್ಯಾಯಾಮಗಳಿರುತ್ತವೆ. ಜಿಮ್ ನಿಂದಾಗಿ ಮಹಿಳೆಯರಲ್ಲಿ ತೂಕ ಬೇಗನೆ ಕಡಿಮೆಯಾಗುವುದೂ ಸುಳ್ಳಲ್ಲ. ಮಹಿಳೆಯರ ಜಿಮ್ ಚಟುವಟಿಕೆಗಳಲ್ಲಿ ಏರೋಬಿಕ್ಸ್, ವೈಟ್ಸ್, ಕಾರ್ಡಿಯೋ ಮತ್ತು ಸ್ತ್ರೆಚಿಂಗ್ ಕೂಡ ಬಹಳ ಮಹತ್ವದ ಅಂಗವಾಗಿವೆ. ಇವು ಮಹಿಳೆಯರ ದೇಹಕ್ಕೆ ಬಲ ತುಂಬುತ್ತವೆ ಮತ್ತು ದೇಹವನ್ನು ಸಡಿಲಗೊಳಿಸುತ್ತವೆ. ಇದರಿಂದಾಗಿ ದೇಹದಲ್ಲಿ ಹೆಚ್ಚಿನ ತೂಕವೂ ಕಂಡುಬರುವುದಿಲ್ಲ.

Reasons why gyming is healthy for women

ಇಂದಿನ ಯುಗದಲ್ಲಂತೂ ಇದರ ಮಹತ್ವ ಬಹಳ ಹೆಚ್ಚು. ಇಂದಿನ ಮಹಿಳೆಯರು ಹಿಂದಿನವರಂತೆ ದೈಹಿಕ ಶ್ರಮದ ಕೆಲಸಗಳನ್ನು ಮಾಡುವುದು ಬಹಳ ಕಡಿಮೆ. ಎಲ್ಲಾ ಕೆಲಸಗಳನ್ನು ಇಂದಿನ ತಂತ್ರಜ್ಞಾನ ಸುಲಭವನ್ನಾಗಿಸಿದೆ. ಇದರಿಂದಾಗಿ ಮಹಿಳೆಯರಲ್ಲಿ ಶ್ರಮದ ಕೆಲಸಗಳು ಇಲ್ಲವಾಗಿವೆ. ದೈಹಿಕ ಶ್ರಮ ಇಲ್ಲದೇ ಹೋದರೂ ಮಾನಸಿಕ ಒತ್ತಡ ಬಹಳ ಹೆಚ್ಚಾಗಿದೆ.

ಜಿಮ್ ಚಟುವಟಿಕೆಗಳು ಕೇವಲ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಬಹಳ ನೆರವಾಗುತ್ತದೆ. ಜಿಮ್ ಮಹಿಳೆಯರಿಗಾಗಿ ಉಪಯುಕ್ತ ಹೇಗೆ ಎಂಬುದಕ್ಕಾಗಿ ಕೆಲವು ಕಾರಣಗಳು ಹೀಗಿವೆ:

1. ದೈಹಿಕವಾಗಿ ಫಿಟ್ ಆಗುತ್ತೀರಿ: ನಿಮ್ಮ ದೇಹ ಚಟುವಟಿಕೆಯಿಂದ ಕೂಡಿರಲು ಮತ್ತು ಮೈಕಟ್ಟು ಅಂದವಾಗಿರಲು ಜಿಮ ಅಗತ್ಯ. ಮಹಿಳೆಯರು ಕೊಬ್ಬು ಕಡಿಮೆ ಮಾಡಲು ಮತ್ತು ಮಧುಮೇಹದಂತಹ ಕಾಯಿಲೆಗಳು ಬಾರದಂತೆ ಮಾಡಲು ಜಿಮ್ ಅಗತ್ಯ. ಇದರಿಂದಾಗಿ ದೇಹದಲ್ಲಿ ಶಕ್ತಿಯ ಮಟ್ಟವೂ ಹೆಚ್ಚಾಗುತ್ತದೆ. ದೇಹದ ಜೀವಸತ್ವಗಳು ನಾಶವಾದುದನ್ನು ಮರಳಿ ಪಡೆಯಲೂ ಇದು ನೆರವಾಗುತ್ತದೆ. ಮಹಿಳೆ ಆರೋಗ್ಯಯುತವಾಗಿದ್ದರೆ ಆಕೆಯ ಕುಟುಂಬವೂ ಆರೋಗ್ಯಕರವಾಗಿರುತ್ತದೆ. ಚಟುವಟಿಕೆಯೊಂದಿಗೆ ದಿನ ಆರಂಭವಾದರೆ ಆ ದಿನ ಬಹಳ ಯಶಸ್ವಿಯಾಗಿ ಕಳೆಯುತ್ತದೆ.

2. ದೇಹ ತೂಕದಲ್ಲಿ ಇಳಿಕೆ
: ಜಿಮ್ ನಿಂದಾಗಿ ಇದು ಬಹಳ ಮುಖ್ಯ ಉಪಯೋಗ. ದೇಹದ ತೂಕದಲ್ಲಿ ಇಳಿಕೆಯಾಗುತ್ತದೆ. ಇಂದಿನ ಮಹಿಳೆಯರು ತಮ್ಮ ದೇಹ ತೂಕದ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಅಂಥವರಿಗೆ ಇದು ಬಹಳ ಸೂಕ್ತ. ಜ಼ೀರೋ ಫಿಗರ್ ಇಂದಿನ ಮತ್ತೊಂದು ಟ್ರೆಂಡ್ ಅದಕ್ಕೂ ಜಿಮ್ ಬಹಳ ಮುಖ್ಯ. ಇದರ ಜೊತೆಗೆ ಸ್ನಾಯುಗಳಲ್ಲಿ ಬಲವನ್ನೂ ತುಂಬುತ್ತದೆ.

3. ಸರಿಯಾಗಿ ಆಹಾರ ಸೇವನೆ
: ನಿಯಮಿತವಾಗಿ ಜಿಮ್ ಗೆ ಹೋದಲ್ಲಿ ನಿಮ್ಮ ಆಹಾರ ಸೇವನೆ ಸಹಜವಾಗಿ ಉತ್ತಮ ಸ್ಥಿತಿಗೆ ಬರುತ್ತದೆ. ನಿಮ್ಮಲ್ಲಿ ಹಸಿವು ಸರಿಯಾಗಿ ಆಗುತ್ತದೆ. ಚೀಸ್ ಮತ್ತು ಜಂಕ್ ಫುಡ್ ಗಳು ನಿಮಗೆ ಸಹಜವಾಗಿ ಬೇಡವೆನ್ನಿಸಲು ಆರಂಭವಾಗುತ್ತವೆ. ಇದರಿಂದಾಗಿ ನಿಮ್ಮ ಆಹಾರ ಸೇವನೆ ಮತ್ತು ನಿಮ್ಮ ಜೀವನ ಶೈಲಿಯಲ್ಲೂ ಶಿಸ್ತು ಮೂಡುತ್ತದೆ.

4. ಶಕ್ತಿ
: ಮಹಿಳೆಯರ ಮೇಲಿನ ಹಲ್ಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತವೆ. ಮಹಿಳೆಯರ ಸುರಕ್ಷತೆ ಇಂದಿನ ಜಗತ್ತಿನ ಪ್ರಮುಖ ವಿಷಯವಾಗಿದೆ. ಇದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಬಹಳ ಅಗತ್ಯ. ಇದಕ್ಕಾಗಿ ದೈಹಿಕ ಸಕ್ಷಮತೆ ಮತ್ತು ಶಕ್ತಿ ಅಗತ್ಯ. ಇದನ್ನು ಜಿಮ್ ಮಹಿಳೆಗೆ ನೀಡುತ್ತದೆ. ಸ್ವ ರಕ್ಷಣೆ ಮಾಡಲು ಜಿಮ್ ಅಗತ್ಯ. ಇದಕ್ಕಾಗಿಯೇ ಜಿಮ್ ನಲ್ಲಿ ಕೆಲವು ವಿಶೇಷ ವ್ಯಾಯಾಮಗಳೂ ಇವೆ.

5. ಆರೋಗ್ಯಕರ ಭಾವ: ಜಿಮ್ ಒಂದು ರೀತಿಯ ದೈಹಿಕ ಚಟುವಟಿಕೆ. ದೈಹಿಕ ಚಟುವಟಿಕೆಗಳು ನಮ್ಮಲ್ಲಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಹಾರ್ಮೋನುಗಳೂ ಸರಿಯಾಗಿ ಕೆಲಸಮಾಡುವಂತೆ ಮಾಡುತ್ತವೆ. ಇದರಿಂದಾಗಿ ಮಾನಸಿಕ ಒತ್ತಡವೂ ಕಡಿಮೆ ಆಗುತ್ತದೆ. ಪ್ರತಿದಿನದ ಜಿಮ್ ಚಟುವಟಿಕೆ ಆದ ಮೇಲೆ ನಿಮ್ಮಲ್ಲಿ ಹೊಸ ಹುರುಪು ಬರುವುದು ಸುಳ್ಳಲ್ಲ.

6. ಹೃದಯದಾರೋಗ್ಯ: ಜಿಮ್ ಚಟುವಟಿಕೆಗಳು ನಮ್ಮ ಹೃದಯದಾರೋಗ್ಯಕ್ಕೂ ಬಹಳ ಮುಖ್ಯ. ಹೃದಯದ ಆರೋಗ್ಯವನ್ನು ಉತ್ತಮ ಪಡಿಸಲು ವಿಶೇಷವಾದ ಕೆಲವು ಚಟುವಟಿಕೆಗಳಿವೆ. ಇದರಿಂದಾಗಿ ದೇಹದಲ್ಲಿ ಆಮ್ಲಜನಕದ ಪೂರೈಕೆ ಹೆಚ್ಚಾಗುತ್ತದೆ. ಆರೋಗ್ಯಕರ ಹೃದಯ ಆರೋಗ್ಯಕರ ಜೀವನಕ್ಕೆ ಬಹಳ ಮುಖ್ಯ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

X
Desktop Bottom Promotion