Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಈ ಆಹಾರಗಳ ಕುರಿತು ಬೆಚ್ಚಿ ಬೀಳುವಂತಹ ನಂಬಿಕೆಗಳು!
ನಮ್ಮ ಬದುಕಿನಲ್ಲಿ ಹಲವು ಬಗೆಯ ಪುರಾಣಗಳನ್ನು ಆಧರಿಸಿದ ಮೂಢನಂಬಿಕೆಗಳಿವೆ. ವಾಸ್ತವ ಮತ್ತು ಪುರಾಣಗಳ ನಡುವಿನ ವ್ಯತ್ಯಾಸವನ್ನು ಅರಿತಾಗ ನಮ್ಮ ಬದುಕಿನ ಶೈಲಿಯನ್ನೇ ಬದಲಿಸಿಕೊಳ್ಳಬಹುದು. ಈಗ ಆಹಾರದ ವಿಷಯಕ್ಕೆ ಬಂದರೆ ನಮಗೆ ಆಹಾರ ವಸ್ತುಗಳ ಮೇಲಿರುವ ಲೇಬಲ್ ಗಳೇ ದೇವರುಗಳು. ಅವುಗಳಲ್ಲಿ ಹೇಳಿರುವುದನ್ನೆಲ್ಲ ನಿಜವೆಂದು ನಂಬಿಬಿಡುತ್ತೇವೆ.
ಆದ್ದರಿಂದಲೇ ಹೇಳಿದ್ದು ನಂಬುವುದಕ್ಕೂ ಮುಂಚೆ ಪ್ರಮಾಣಿಸಿ ನೋಡಿದ ಸತ್ಯ ತಿಳಿದಿದ್ದರೆ ಆರೋಗ್ಯಕರ ಬದುಕಿನ ಕ್ರಮವನ್ನು ನಮ್ಮದಾಗಿಸಿಕೊಳ್ಳಬಹುದು ಅಲ್ಲವೇ? ಆಗ ಉತ್ತಮ ಆರೋಗ್ಯಕರ ಜೀವನ ನಿಮ್ಮದಾಗುವುದಲ್ಲದೆ ತೂಕ ಕಳೆದುಕೊಳ್ಳಬೇಕು, ಆರೋಗ್ಯದ ಸಮಸ್ಯೆಗಳಿಂದ ಹೇಗೆ ದೂರ ಉಳಿಯಬೇಕು ಎನ್ನುವ ತಲೆನೋವು ತಪ್ಪುತ್ತದೆ. ಇಲ್ಲಿವೆ ನೋಡಿ ನಾವು ಆಹಾರದ ವಿಷಯದಲ್ಲಿ ಇಟ್ಟುಕೊಂಡಿರುವ ಅಂತಹ ಕೆಲ ಮೂಢನಂಬಿಕೆಗಳು.

ಮೊಟ್ಟೆ ಅನಾರೋಗ್ಯಕ್ಕೆ ಮೂಲ
ಈ ರೀತಿಯ ಜನಪ್ರಿಯ ನಂಬಿಕೆಯೊಂದಿದೆ. ಆದರೆ ಇದು ಸುಳ್ಳು. ಮೊಟ್ಟೆ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ ಮತ್ತು ಹೃದಯಸಂಬಂಧಿ ತೊಂದರೆಗಳ ಅಪಾಯವನ್ನು ತಗ್ಗಿಸುತ್ತದೆ. ಮೊಟ್ಟೆ ತೂಕ ಕಳೆದುಕೊಳ್ಳಲು ಕೂಡ ನೆರವು ನೀಡುತ್ತದೆ. ಮೊಟ್ಟೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಹೆಚ್ಚಿದ್ದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ಸಂಪೂರ್ಣವಾಗಿ ಆರ್ದ್ರಗೊಳಿಸಿದ ಕೊಬ್ಬಿನ ಬಳಕೆ ಹಾನಿಕಾರಿ
ಅಧ್ಯಯನಗಳು ಈ ನಂಬಿಕೆ ಸುಳ್ಳು ಎಂದು ತೋರಿಸಿದೆ. ಹೃದಯ ಸಂಬಂಧಿ ಖಾಯಿಲೆಗೂ ಈ ಕೊಬ್ಬಿಗೂ ಯಾವುದೇ ಸಂಬಂಧವಿಲ್ಲ. ಇದರ ಬಳಕೆಯಿಂದ ಹೆಚ್ಡಿಎಲ್ನ ಪ್ರಮಾಣ ಹೆಚ್ಚುತ್ತದೆ ಮತ್ತು ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತದೆ. ಮಾಂಸ, ಕೊಬ್ಬರಿ ಎಣ್ಣೆ, ಬೆಣ್ಣೆ ಮತ್ತು ಚೀಸ್ ಗಳ ಮಿತವಾದ ಬಳಕೆ ಆರೋಗ್ಯಕ್ಕೆ ಒಳ್ಳೆಯದು. ಎಲ್ಲರೂ ಕಾಳುಗಳನ್ನು ತಿನ್ನಬೇಕು
ತರಕಾರಿಗಳಿಗೆ ಹೋಲಿಸಿದಾಗ ಕಾಳುಗಳಲ್ಲಿ ಪೌಷ್ಟಿಕಾಂಶ ಕಡಿಮೆ. ಇವುಗಳಲ್ಲಿ ಫೈಟಿಕ್ ಆಸಿಡ್ ಹೆಚ್ಚಿರುತ್ತದೆ. ಇದು ಕರುಳಿನಲ್ಲಿ ಖನಿಜಾಂಶಗಳನ್ನು ಹಿಡಿದಿಡುತ್ತದೆ ಮತ್ತು ಇದರಲ್ಲಿ ಗ್ಲುಟೆನ್ ಇರುತ್ತದೆ. ಗ್ಲುಟೆನ್ ಎಲ್ಲರಿಗೂ ಅಪಾಯಕಾರಿಯಲ್ಲ. ಎಲ್ಲೊ ಕೆಲವರು ಮಾತ್ರ ಗ್ಲುಟೆನ್ನಿಂದ ತೊಂದರೆಗೆ ಒಳಗಾಗುತ್ತಾರೆ.

ಹೆಚ್ಚಿನ ಪ್ರೊಟೀನ್ಯುಕ್ತ ಡಯಟ್ ನಿಮಗೆ ಹಾನಿಕಾರಕ
ಈ ವಿಷಯವಾಗಿ ಸಂಶೋಧನೆಯಿಂದ ತಿಳಿದುಬಂದಿರುವ ಸತ್ಯ ನಿಮಗೆ ನೋವುಂಟುಮಾಡುವಂತಹದ್ದಲ್ಲ. ಸಂಶೋಧನೆಗಳು ತೋರಿಸಿಕೊಟ್ಟಿರುವಂತೆ ಪ್ರೊಟೀನ್ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಮೂಳೆಮುರಿತದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಹೆಚ್ಚಿನ ಪ್ರೊಟೀನ್ಯುಕ್ತ ಆಹಾರ ಸೇವನೆಯಿಂದ ಯಾವುದೇ ರೀತಿಯ ಮೂತ್ರಪಿಂಡದ ಸಮಸ್ಯೆಗಳುಂಟಾಗುವುದಿಲ್ಲ. ಬದಲಿಗೆ ಈ ಬಗೆಯ ಆಹಾರ ಸೇವನೆಯಿಂದ ಡಯಾಬಿಟೀಸ್ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ಕಡಿಮೆಯಾಗುತ್ತದೆ.

ಹೆಚ್ಚಿನ ಪ್ರೊಟೀನ್ಯುಕ್ತ ಡಯಟ್ ನಿಮಗೆ ಹಾನಿಕಾರಕ
ಈ ವಿಷಯವಾಗಿ ಸಂಶೋಧನೆಯಿಂದ ತಿಳಿದುಬಂದಿರುವ ಸತ್ಯ ನಿಮಗೆ ನೋವುಂಟುಮಾಡುವಂತಹದ್ದಲ್ಲ. ಸಂಶೋಧನೆಗಳು ತೋರಿಸಿಕೊಟ್ಟಿರುವಂತೆ ಪ್ರೊಟೀನ್ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಮೂಳೆಮುರಿತದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಹೆಚ್ಚಿನ ಪ್ರೊಟೀನ್ಯುಕ್ತ ಆಹಾರ ಸೇವನೆಯಿಂದ ಯಾವುದೇ ರೀತಿಯ ಮೂತ್ರಪಿಂಡದ ಸಮಸ್ಯೆಗಳುಂಟಾಗುವುದಿಲ್ಲ. ಬದಲಿಗೆ ಈ ಬಗೆಯ ಆಹಾರ ಸೇವನೆಯಿಂದ ಡಯಾಬಿಟೀಸ್ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ಕಡಿಮೆಯಾಗುತ್ತದೆ.

ದಿನಪೂರ್ತಿ ಸ್ವಲ್ಪ ಸ್ವಲ್ಪವಾಗಿ ಏನಾದರೂ ತಿನ್ನುತ್ತಿರಿ
ಶಕ್ತಿ ಸಂಚಯಿಸಿಕೊಳ್ಳಲು ದಿನಪೂರ್ತಿ ಸ್ವಲ್ಪ ಸ್ವಲ್ಪ ಆಹಾರ ಆಗಾಗ ತಿನ್ನುತ್ತಿರಬೇಕು ಎನ್ನುವುದು ಮೂಢನಂಬಿಕೆ. ಕಡೆಗೂ ಮುಖ್ಯವಾಗುವುದು ನೀವು ಎಷ್ಟು ಶಕ್ತಿ ವ್ಯಯಿಸುತ್ತೀರಿ ಎನ್ನುವುದೇ ಹೊರತು ಎಷ್ಟು ತಿನ್ನುತ್ತೀರಿ ಎನ್ನುವುದಲ್ಲ. ಉಪವಾಸ ಅಥವಾ ಹೆಚ್ಚು ಬಾರಿ ತಿನ್ನದಿರುವುದು ಆರೋಗ್ಯಕ್ಕೆ ಒಳ್ಳೆಯದು.

ಸಕ್ಕರೆಯಲ್ಲಿ ಕ್ಯಾಲೋರಿಗಳಿರುವುದಿಲ್ಲ
ಸಕ್ಕರೆಯಲ್ಲಿ ಯಾವುದೇ ಪೌಷ್ಟಿಕಾಂಶಗಳಿಲ್ಲ ಬದಲಿಗೆ ಹೆಚ್ಚಿನ ಕ್ಯಾಲೋರಿಗಳಿವೆ. ಆದರಿದು ಅರ್ಧಸತ್ಯ ಮಾತ್ರ. ಸಕ್ಕರೆಯಲ್ಲಿ ಹೆಚ್ಚಿನ ಫ್ರುಕ್ಟೊಸ್ ಅಂಶವಿರುತ್ತದೆ ಮತ್ತಿದು ಮೆಟಬಾಲಿಸಂನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ವೇಗವಾಗಿ ಕೊಬ್ಬು ಶೇಖರಣೆಯಾಗುತ್ತದೆ. ಆದ್ದರಿಂದ ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಕ್ಕರೆಯಿಂದ ತೂಕ ಹೆಚ್ಚುತ್ತದೆ ಮತ್ತಿತರ ಗಂಭೀರ ಸಮಸ್ಯೆಗಳು ಕೂಡ ಉಂಟಾಗುತ್ತವೆ.



Click it and Unblock the Notifications
