Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಸದಾ ಕಾಲ ಆರೋಗ್ಯದಿಂದಿರುವುದು ಹೇಗೆ?
ಆರೋಗ್ಯವಂತ ವ್ಯಕ್ತಿಯಾಗಿರಲು ಬಯಸಿದ್ದೀರಾ? ಕೆಲವೊಂದು ನಿಧಾನ ಬದಲಾವಣೆಗಳ ಮೂಲಕ ಖಂಡಿತವಾಗಿಯೂ ಇದು ಸಾಧ್ಯ. ಈ ಲೇಖನದಲ್ಲಿರುವ ಕೆಲವು ಸಲಹೆಗಳು ನಿಮ್ಮ ಆರೊಗ್ಯ ಕಾಳಜಿಗೆ ನೆರವಾಗಬಲ್ಲವು. ದೀರ್ಘಕಾಲ ಕಾಡುವ ಕ್ಯಾನ್ಸರ್, ಲ್ಯಾನ್ಸ್‌ರ್ ಪ್ರೇಮ್‌ಗಳನ್ನೂ ದೂರವಿರಿಸಿ ನೆಮ್ಮದಿಯಿಂದ ಜೀವನ ಅನುಭವಿಸಬಹುದು.
ನಿದ್ದೆ ಮಾಡಿ: ಆರೋಗ್ಯಕರ ಶರೀರ ನಿಮ್ಮದಾಗಬೇಕಿದ್ದರೆ ನಿತ್ಯವೂ 8-10 ಗಂಟೆಗಳ ಕಾಲ ನಿದ್ರೆ ಅಗತ್ಯ. ನಿಯಮಿತ ನಿದ್ದೆ ನಿಮ್ಮನ್ನು ಎಚ್ಚರದ ಅವಧಿಯಲ್ಲಿ ಜಾಗೃತವಾಗಿರಿಸುತ್ತದೆ. ಕೆಪೇನ್ ಮತ್ತು ಸಕ್ಕರೆ ಮಿಶ್ರಿತ ಪೇಯಗಳನ್ನು ಸೇವಿಸಬೇಡಿ. ಶಾಲೆಗೆ ಹೋಗುತ್ತಿರುವ ಮಗು ನೀವಾಗಿದ್ದರೆ, ರಾತ್ರಿ ಚೆನ್ನಾಗಿ ನಿದ್ದೆ ಮಾಡಿ.

ನಗುವಿರಲಿ ಮುಖತುಂಬಾ! ಹೌದು, ನಗು ಮನಸ್ಸಿನ ಉಲ್ಲಾಸದ ಪ್ರತೀಕ. ನಗು ನಿಮ್ಮ ಮುಖದಲ್ಲಿ ಹರೆಯದ ಕಳೆಯನ್ನು ತುಂಬುತ್ತದೆ. ಇಷ್ಟೇ ಅಲ್ಲ, ವಿಜ್ಞಾನವೂ ಇದನ್ನೇ ಹೇಳಿದೆ: ನಗು ಆರೋಗ್ಯವನ್ನು ಹೆಚ್ಚಿಸುತ್ತದೆ.
ಸುಮ್ಮನಿದ್ದುಬಿಡಿ: ನಿಮ್ಮ ಬಿಡುವಿನ ವೇಳೆಯಲ್ಲಿ ಹತ್ತು ನಿಮಿಷ ಏನೂ ಮಾಡದೇ ಸುಮ್ಮನಿದ್ದುಬಿಡಿ. ಶಾಂತವಾದ ಪರಿಸರದಲ್ಲಿ ಹೀಗೆ ಕೂರುವುದರಿಂದ ನಿಮ್ಮಮ ಮನಸ್ಸು ನಿರಾಳವಾಗುತ್ತದೆ. ದಿನವಿಡೀ ಉಲ್ಲದಿಂದ ಕಳೆಯುವಂತಾಗುತ್ತದೆ. ಕೆಲಸ ಕಾರ್ಯಗಳ ಯಾವುದೇ ಒತ್ತಡವಿಲ್ಲದೇ ಕಳೆದ ಈ ಹತ್ತು ನಿಮಿಷಗಳು ನಿಮ್ಮನ್ನು ರಿಪ್ರೆಷ್ ಮಾಡುತ್ತದೆ. ದಿನಕ್ಕೆರಡು ಬಾರಿ ಹೀಗೆ ಮಾಡಿದರೆ ಇನ್ನೂ ಒಳ್ಳೆಯದು.
ಹಣ್ಣು ತಿನ್ನಿ: ಏನಾದರೂ ತಿನ್ನಬೇಕೆನಿಸಾದಗಲೆಲ್ಲಾ ಹಣ್ಣು , ಅತವಾ ತರಕಾರಿಗಳನ್ನು ತಿನ್ನಿ. ಇದು ನಿಮ್ಮ ಅರೋಗ್ಯವನ್ನು ಕಾಯುತ್ತದೆ. ನಾಲಿಗೆಗೂ ಸವಿ! ದಿನಕ್ಕೆ ಐದರಿಂದ ಒಂಭತ್ತು ಬಾರಿ ಹಣ್ಣು ಸೇವಿಸಬಹುದು.
ನೀರೆಂಬೋ ಅಮೃತ ಪಾನ! : ಹೌದು, ನೀರು ಅಮೃತ ಸಮಾನ. ಹೆಚ್ಚೆಚ್ಚು ನೀರು ಕುಡಿದಷ್ಟೂ ನಿಮ್ಮ ಆರೋಗ್ಯ ವೃದ್ಧಿಸುತ್ತದೆ. ಪ್ರತಿನಿತ್ಯ ಎಂಟು ಔನ್ಸ್‌ಗಳಷ್ಟು ನೀರು ಕುಡಿಯಲೇಬೇಕು. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ಮರುಪೂರಣಗೊಳಿಸಲು ಸಹಕಾರಿ. ತಲೆನೋವು, ಅಜಿರ್ಣ ಮತ್ತಿತ್ಯಾದಿ ಸಮಸ್ಯೆಗಳನ್ನು ನೀರು ಇನ್ನಿಲ್ಲದಂತೆ ಮಾಡುತ್ತದೆ.
ವ್ಯಾಯಾಮ: ದಿನಾ ಬೆಳಿಗ್ಗೆ ಎದ್ದಾಕ್ಷಣ ಜಿಮ್ ಕ್ಲಾಸಿಗೋ, ವ್ಯಾಯಾವ ಶಾಲೆಗೋ ಹೋಗಿ. ನಿಯಮಿತವಾಗಿ ಮಾಡುವ ವ್ಯಾಯಾಮ ನಿಮ್ಮ ಸ್ನಾಯುಗಳನ್ನು ಬಲಗೊಳಿಸುತ್ತವೆ ಮತ್ತು ಆರೋಗ್ಯಯುತವಾಗಿಸುತ್ತವೆ. ದೇಹದ ಯಾವುದೇ ಅಂಗವನ್ನು ಹೆಚ್ಚೆಚ್ಚು ಬಳಸಿದಂತೆಯೂ ಅವು ಬಲಶಾಲಿಯಾಗುತ್ತವೆ. ಇದು ಹೆಚ್ಚು ಕಾಲ ನಿಮ್ಮನ್ನು ಬಾಳುವಂತೆ ಮಾಡುವುದು ನಿಸ್ಸಂದೇಹ.
ಜಾಗಿಂಗು..: ನಿತ್ಯ ಹತ್ತು ಮೈಲಿ ಓಡಿ ಅಂತ ಹೇಳ್ತಿಲ್ಲ, ಆದರೆ ಕನಿಷ್ಠ ಹತ್ತು ನಿಮಿಷಗಳ ಕಾಲ ಮುಂಜಾನೆಯ ಹಿತವಾದ ವಾತಾವರಣದಲ್ಲಿ ಓಡಿದರೆ ಖಂಡಿತವಾಗಿ ನಿಮ್ಮ ದೇಹಕ್ಕೆ ಚೆಂದನೆಯ ಆಕಾರ ಬರುತ್ತದೆ. ಆರೋಗ್ಯವೂ ಸುಧಾರಿಸುತ್ತದೆ. ಮತ್ತು ಮನಸ್ಸೂ ಉಲ್ಲಸಿತವಾಗಿರುತ್ತದೆ. ಕನಿಷ್ಠ ವಾರದಲ್ಲಿ 2 ದಿನವಾದರೂ ಈ ರೀತಿ ಓಡುವುದರಿಂದ ನಿಮ್ಮ ಸ್ನಾಯುಗಳು ಬಲಶಾಲಿಯಾಗುತ್ತವೆ. ಆದರೆ ಒಂದು ಎಚ್ಚರಿಕೆ ವಹಿಸಲೇ ಬೇಕು: ಓಡುತ್ತಿರುವಾಗ ತಟ್ಟನೇ ನಿಂತುಬಿಡಬೇಡಿ. ಇದರಿಂದ ಸ್ನಾಯುಗಳುಗೆ ಪೆಟ್ಟು. ಓಡುವಾಗ ಆಳವಾದ ಉಸಿರಾಡಿ. ಇದು ನಿಮ್ಮ ಆರೋಗ್ಯಕ್ಕೆ ಸಹಕಾರಿ.
ಸವಾಲು ಹಾಕಿಕೊಳ್ಳಿ: ನಿತ್ಯ ವ್ಯಾಯಾಮ ಮಾಡುವಾಗ ನಿಮಗೆ ನೀವೇ ಸವಾಲು ಹಾಕಿಕೊಳ್ಳಿ. ಇವತ್ತು 10 ಪುಶ್ ಅಪ್ ಮಾಡಿದವರು ನಾಳೆ 12 ಮಾಡುವಂತೆ ಸವಾಲು ಹಾಕಿಕೊಳ್ಳಿ. ಇದರಿಂದ ನಿಮ್ಮ ದೇಹವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಬಹುದು.
ನಿಮಗೇನಿಷ್ಟವೋ ಅದನ್ನು ಮಾಡಿ: ನಿಮ್ಮ ಮನೆಯ ಬೆಕ್ಕು, ನಾಯಿ... ಪಂಜರದ ಬಣ್ಣದ ಹಕ್ಕಿಗಳೊಂದಿಗೆ ಆಟವಾಡಿ. ಈಜಾಡಿ... ಅಲ್ಲೇಲ್ಲೋ ಹಾರಬೇಕನಿಸಿದರೆ ಹಾರಿ! ನಿಮಗಿಷ್ಟವಾದಂತೆ ಮಾಡುವುದರಿಂದ ನಿಮ್ಮ ಮನಸ್ಸು ಉಲ್ಲಸಿತವಾಗುತ್ತದೆ. ನಿಮ್ಮ ಉಲ್ಲಾಸ ಆರೋಗ್ಯವನ್ನು ಕಾಯುತ್ತದೆ. ತುಂಬಾ ಎಲ್ಲಿಗೋ ಹೋಗಬೇಕನಿಸಿದರೆ ಬೈಕ್ ಹತ್ತಿ ಹೊರಟು ಬಿಡಿ... ಲಾಂಗ್ ಡ್ರೈವ್ ನಿಮ್ಮನ್ನು ಇನ್ನಷ್ಟು ಮತ್ತಷ್ಟು ಖುಷಿಗೊಳಿಸುತ್ತದೆ.
ನಿಮ್ಮ ಬಗ್ಗೆ ಒಳ್ಳೆಯ ಭಾವನೆಯಿರಲಿ: ನಿಮ್ಮನ್ನು ನೀವು ಯಾರೊಂದಿಗೂ ತುಲನೆ ಮಾಡಿಕೊಳ್ಳಬೇಡಿ. ಯಾರಲ್ಲೂ ಇಲ್ಲದ ಯಾವುದೋ ವಿಶೇಷವಾದ ಪ್ರತಿಭೆ ನಿಮ್ಮಲ್ಲಿರಬಹುದು. ಅದನ್ನು ಹುಡುಕಿಕೊಳ್ಳಿ. ನಿಮ್ಮ ಬಗ್ಗೆ ನಿಮಗೇ ಒಳ್ಳೆಯ ಭಾವನೆಗಳಿಲ್ಲದಿದ್ದರೆ ಕೀಳರಿಮೆಯಲ್ಲಿ ಆರೋಗ್ಯ ಬೇಗ ಹದಗೆಡುತ್ತದೆ.
ಏನನ್ನಾದರೂ ಸಾಧಿಸಿ: ನಿಮ್ಮಲ್ಲಿರುವ ವಿಶೇಷವಾದ ಪ್ರತಿಭೆಯನ್ನು ಬಳಸಿಕೊಂಡು ಏನನ್ನಾದರೂ ಸಾಧಿಸಿ. ಇತರರು ಹೌದೌದೆನ್ನುವಂತೆ ನೀವು ನಿಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಿ.
ಪುಟ್ಟ ವ್ಯಾವಾಮ ಮಾಡಿ: ನಿತ್ಯವೂ ನಿಗದಿತ ವ್ಯಾಯಾಮ ಮಾಡಿ. ಇದು ನಿಮ್ಮನ್ನು ಉಲ್ಲಸಿತವಾಗಿರಿಸುವುದಷ್ಟೇ ಅಲ್ಲ. ನಿಮ್ಮನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ. ಇಡೀ ದಿನ ನಿಮ್ಮನ್ನು ಕ್ರಿಯಾಶೀಲರನ್ನಾಗಿರುಸುತ್ತದೆ.
ಬೀ ಕೂಲ್! ತಾಳ್ಮೆಯಿಂದಿರಿ : ಯಾವುದೇ ವಿಷಯದ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳಬೇಡಿ. ಇದು ನಿಮ್ಮ ಆರೋಗ್ಯ ಹಾಳುಮಾಡುತ್ತದೆ, ಮನಸಿನ ನೆಮ್ಮದಿ ಕೆಡುತ್ತದೆ. ಇಂಥ ಹೊತ್ತಲ್ಲಿ ಬೇರೆ ಚಟುವಟಿಕೆಗಳತ್ತ ಗಮನ ಕೊಡಿ. ವಿಶ್ರಾಂತಿ ತೆಗೆದುಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications








