ತೂಕ ಕಳಕೊಳ್ಳಲು ರಜಾದಿನದ ಟಿಪ್ಸ್ ಗಳು

By Hemanth P

ರಜಾ ಋತು ಹತ್ತಿರ ಬರುತ್ತಿರುವಂತೆ ಪ್ರತಿಯೊಬ್ಬರು ಮೋಜು, ಮನರಂಜನೆ, ಆಟಾಟೋಪದಲ್ಲಿ ತೊಡಗಿಕೊಳ್ಳುವ ಮೂಡ್ ನಲ್ಲಿರುತ್ತಾರೆ. ಮೋಜಿನ ಸಮಯದಲ್ಲಿ ತಮ್ಮ ಆಹಾರ ಕ್ರಮ ಅಥವಾ ಉಪವಾಸದ ಬಗ್ಗೆ ಯಾವುದೇ ನಿಯಂತ್ರಣವಿರುವುದಿಲ್ಲ. ವರ್ಷವಿಡಿ ಕಠಿಣ ಆಹಾರ ಕ್ರಮ ಮತ್ತು ನಿಯಮಿತ ವ್ಯಾಯಾಮದ ಮೂಲಕ ದೇಹಕ್ಕೆ ಒಂದು ಆಕಾರ ನೀಡಿರಬಹುದು. ಆದರೆ ಚಳಿಗಾಲದ ರಜಾ ಋತುವಿನಲ್ಲಿ ಪಾರ್ಟಿ ಮತ್ತು ಕೂಟಗಳು ಹೆಚ್ಚಾಗುತ್ತದೆ. ಚಳಿಗಾಲದ ರಜಾ ದಿನಗಳು ವರ್ಷದ ಅತ್ಯಂತ ಅಮೋಘ ದಿನಗಳಾಗಿರುತ್ತದೆ. ಹೆಚ್ಚುವರಿ ಕ್ಯಾಲೋರಿಗಳು ನಮ್ಮ ದೇಹವನ್ನು ಸೇರುತ್ತಿರುವುದರಿಂದ ಕಠಿಣ ಆಹಾರ ಕ್ರಮಗಳು ಮೂಲೆ ಸೇರಿಬಿಡುತ್ತದೆ. ಕ್ರಿಸ್ಮಸ್ ಮತ್ತು ಹೊಸವರ್ಷದ ಮಧ್ಯೆ ಕಡಿಮೆ ತಿಂದು, ವ್ಯಾಯಾಮ ಮಾಡಬೇಕೆನ್ನುವ ಯೋಜನೆಗಳೆಲ್ಲವೂ ಉಲ್ಟಾಪಲ್ಟಾ ಆಗುತ್ತದೆ. ಫ್ರಾಸ್ಟೆಡ್ ಕುಕ್ಕಿಗಳು, ಸೇಬು ಪೈ, ಜೆಲ್ಲಿ ಡೊನುಟ್ಸ್ ಮತ್ತು ಚಾಕಲೇಟುಗಳಂತಹ ಹೆಚ್ಚಿನ ಕ್ಯಾಲರಿ ಇರುವ ಆಹಾರಗಳನ್ನು ತಿನ್ನದೆ ಇರುವುದು ತುಂಬಾ ಕಠಿಣ. ಇದರ ರುಚಿಯು ನಮ್ಮನ್ನು ಮತ್ತಷ್ಟು ತಿನ್ನುವಂತೆ ಮಾಡುತ್ತದೆ. ಇದರಿಂದ ರಜಾ ದಿನಗಳಲ್ಲಿ ತೂಕ ಹೆಚ್ಚಾಗುವುದನ್ನು ತಡೆಯುವುದ ಹೇಗೆ? ರಜಾ ದಿನಗಳಲ್ಲಿ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುವುದು ದೊಡ್ಡ ಸವಾಲಿನ ಕೆಲಸ. ತೂಕ ಹೆಚ್ಚುವುದನ್ನು ತಡೆಯಲು ನೀವು ಆಸೆಗಳನ್ನು ಮಿತಿಯಲ್ಲಿಡಬೇಕಾಗುತ್ತದೆ.

ಕೊಬ್ಬು ಇರುವ ಆಹಾರಗಳನ್ನು ತಿನ್ನದಿರುವುದು ತೂಕ ಹೆಚ್ಚುವುದನ್ನು ತಡೆಯಲು ಒಂದು ಜಾಣ್ಮೆಯ ನಡೆ. ತೂಕ ಕಳಕೊಳ್ಳುವ ರಜಾ ದಿನಗಳ ಆಹಾರ ಕ್ರಮ ಪಾಲಿಸಿದರೆ ನೀವು ಸರಿಯಾಗಿ ತಿಂದು, ರಜಾ ದಿನಗಳ ಮಜಾ ಅನುಭವಿಸಿದರೂ ತೂಕ ಹೆಚ್ಚಾಗದು. ತೂಕ ಕಳಕೊಳ್ಳಲು ಕೆಲವೊಂದು ಟಿಪ್ಸ್ ಗಳನ್ನು ಇಲ್ಲಿ ನೀಡಲಾಗಿದೆ. ಇದರಿಂದ ನೀವು ಹೆಚ್ಚಿನ ಕ್ಯಾಲರಿ ತಿನ್ನುವುದು ತಪ್ಪುತ್ತದೆ.

ನಿಮ್ಮ ತೂಕದ ಕಡೆ ಗಮನವಿರಲಿ

ನಿಮ್ಮ ತೂಕದ ಕಡೆ ಗಮನವಿರಲಿ

ನೀವು ಉಪವಾಸ ಅಥವಾ ಆಹಾರ ಪಥ್ಯ ಪಾಲಿಸುತ್ತಿದ್ದರೆ ಪಾರ್ಟಿಗಳಿಗೆ ಹೋಗಬೇಡಿ. ನೀವು ಆಹಾರವನ್ನು ನೋಡಿ ಪ್ರಲೋಭನೆಗೆ ಒಳಗಾಗುವುದನ್ನು ತಪ್ಪಿಸಲು ಸ್ವಲ್ಪ ಪೌಷ್ಠಿಕಾಂಶಗಳ್ಳುಳ್ಳ ಆಹಾರ ಸೇವಿಸಿ. ನಿಮ್ಮ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಸ್ವಲ್ಪವೇ ತೂಕ ಹೆಚ್ಚುವಂತಾಗಲು ಆರೋಗ್ಯಕರ ತಿಂಡಿಗಳು ರಜಾದಿನಗಳಲ್ಲಿ ತೂಕ ಕಳಕೊಳ್ಳಲು ಇರುವ ಒಂದು ವ್ಯವಸ್ಥಿತ ಯೋಜನೆ.

ನಿಮ್ಮ ಗಮನ ಬೇರೆಡೆ ಹರಿಸಿ

ನಿಮ್ಮ ಗಮನ ಬೇರೆಡೆ ಹರಿಸಿ

ರಜಾ ಋತುವೆಂದರೆ ಆಹಾರ ಮತ್ತು ಆಲ್ಕೋಹಾಲ್ ಮಾತ್ರವಲ್ಲ, ಇದು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಬೆರೆಯುವುದು. ಆರೋಗ್ಯಕರ ಆಹಾರ ಹವ್ಯಾಸವನ್ನು ಕಡೆಗಣಿಸದೆ ನೀವು ಮನರಂಜನೆ ಪಡೆಯಬಹುದು. ನೀವು ರಾತ್ರಿ ವೇಳೆ ನಡೆದ ಪಾರ್ಟಿಯಲ್ಲಿ ಹೆಚ್ಚಿನ ಕ್ಯಾಲರಿ ಇರುವ ಆಹಾರಗಳನ್ನು ತಿಂದಿದ್ದರೆ ದಿನದಲ್ಲಿ ನಿಮ್ಮ ಆಹಾರವನ್ನು ಕಡಿಮೆ ಮಾಡಿ.

ಚಟುವಟಿಕೆಯಿಂದ ಇರಿ

ಚಟುವಟಿಕೆಯಿಂದ ಇರಿ

ದೈಹಿಕ ಚಟುವಟಿಕೆ ಹೊರತಾಗಿ ರಜಾ ಋತುವಿನಲ್ಲಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಬೇರೆ ಯಾವುದೇ ವಿಧಾನವಿಲ್ಲ. ರಜಾ ದಿನಗಳಲ್ಲಿ ನೀವು ಇಡೀ ದಿನ ತುಂಬಾ ವ್ಯಸ್ತರಾಗಿರಬಹುದು ಮತ್ತು ನಿಮಗೆ ಸ್ವಲ್ಪವೂ ಸಮಯ ಸಿಗಲಿಕ್ಕಿಲ್ಲ. ನಿಮಗೆ ಜಿಮ್ ಅಥವಾ ಯೋಗ ತರಗತಿಗೆ ಹೋಗಲು ಸಮಯ ಸಿಗುವುದಿಲ್ಲವೆಂದಾದರೆ ಆಗ ನೀವು ಕೆಲವು ಸರಳ ವ್ಯಾಯಾಮಗಳೊಂದಿಗೆ ನಿಮ್ಮ ದೈಹಿಕ ಫಿಟ್ ನೆಸ್ ನ್ನು ಕಾಪಾಡಿಕೊಳ್ಳಬಹುದು. 15-20 ನಿಮಿಷ ನಡೆದರೆ ನೀವು ಫಿಟ್ ಆಗಿರಬಹುದು.

ಆಯ್ಕೆ ಬಗ್ಗೆ ಗಮನವಿರಲಿ

ಆಯ್ಕೆ ಬಗ್ಗೆ ಗಮನವಿರಲಿ

ಔತಣ ಕೂಟಗಳಲ್ಲಿ ನೀವು ತುಂಬಾ ಉಪ್ಪು ಅಥವಾ ಸಕ್ಕರೆ ಇರುವ ತಿಂಡಿಗಳನ್ನು ಆಯ್ಕೆ ಮಾಡಿ ಆರೋಗ್ಯ ಕಡೆಗಣಿಸಬೇಡಿ. ಹೆಚ್ಚಿನ ಕೊಬ್ಬು ಇರುವ ಆಹಾರವನ್ನು ತಿನ್ನುವುದನ್ನು ತಡೆಯಲು ನೀವು ಬಫೆಗೆ ಹೋಗುವ ಮೊದಲು ಏನೆಲ್ಲಾ ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿ. ತೂಕ ಕಳಕೊಳ್ಳಲು ಟಿಪ್ಸ್ ಎಂದರೆ ನೀವು ತುಂಬಾ ಜಿಪುಣನಂತೆ ವರ್ತಿಸಿ ಮತ್ತು ತಿನ್ನಬೇಕಾಗಿರುವ ಆಹಾರ ಆಯ್ಕೆ ಮಾಡಿ. ಸಾಧ್ಯವಾದರೆ ಸಣ್ಣ ಪ್ಲೇಟ್ ಆಯ್ಕೆ ಮಾಡಿ ಮತ್ತು ಮಿತಿಯಲ್ಲಿ ತಿನ್ನಿ. ತಾಜಾ ತರಕಾರಿ ಮತ್ತು ಹಣ್ಣುಗಳು ಒಳ್ಳೆಯ ಆಯ್ಕೆ.

ಪ್ಲೇಟ್ ನಲ್ಲಿರುವುದೆಲ್ಲವನ್ನೂ ತಿನ್ನಬೇಡಿ

ಪ್ಲೇಟ್ ನಲ್ಲಿರುವುದೆಲ್ಲವನ್ನೂ ತಿನ್ನಬೇಡಿ

ನಿಮ್ಮ ತೂಕದ ಬಗ್ಗೆ ಗಮನಹರಿಸುವುದಾದರೆ ಆತಿಥೇಯರನ್ನು ಖುಷಿಪಡಿಸಲು ನೀವು ಎಲ್ಲಾ ಆಹಾರದ ರುಚಿ ನೋಡಬೇಕೆಂದಿಲ್ಲ. ನಿಮ್ಮ ಆತಿಥೇಯರಿಂದ ಪ್ರಶಂಸೆಗೆ ಒಳಗಾಗಲು ನಿಮ್ಮ ಪ್ಲೇಟ್ ನಲ್ಲಿ ಇರುವುದೆಲ್ಲವನ್ನೂ ಖಾಲಿ ಮಾಡಬೇಕೆಂದಿಲ್ಲ.

ಇಲ್ಲ ಎಂದು ಹೇಳಿ

ಇಲ್ಲ ಎಂದು ಹೇಳಿ

ನಿಮ್ಮ ಆತಿಥೇಯರಿಗೆ ಇಲ್ಲ ಎಂದು ಹೇಳುವುದು ಕೆಟ್ಟ ಯೋಚನೆಯಲ್ಲ. ದಯವಿಟ್ಟು ಕ್ಷಮಿಸಿ, ಇದು ತುಂಬಾ ಒಳ್ಳೆಯ ಆಹಾರ. ಆದರೆ ನನ್ನ ಹೊಟ್ಟೆ ತುಂಬಿದೆ ಎಂದು ಹೇಳಿ. ನಿರಾಕರಿಸುವಾಗ ದೃಢವಾಗಿರಿ. ಆದರೆ ನಿಮ್ಮ ಆತಿಥೇಯರಿಗೆ ಒಂದು ಧನ್ಯವಾದ ಹೇಳಲು ಮರೆಯಬೇಡಿ.

ಭಾವನಾತ್ಮಕ ಬೆಂಬಲ ಪಡೆಯಿರಿ

ಭಾವನಾತ್ಮಕ ಬೆಂಬಲ ಪಡೆಯಿರಿ

ಕಡಿಮೆ ತಿನ್ನುವುದು ನಿಮ್ಮ ಕಡುಬಯಕೆಯನ್ನು ಅಂಚಿನಲ್ಲಿ ತಂದು ನಿಲ್ಲಿಸಬಹುದು. ತೂಕ ಕಡಿಮೆ ಮಾಡುವ ರಜಾ ದಿನಗಳ ಆಹಾರ ಪಥ್ಯವನ್ನು ಮಾಡುವುದು ಮಿತಿಯನ್ನು ಪರೀಕ್ಷಿಸಬಹುದು. ನಿಮ್ಮ ಸ್ನೇಹಿತರು ಇದೇ ಪಥ್ಯ ಅನುಸರಿಸುತ್ತಿದ್ದರೆ ಅವರಿಂದ ಬೆಂಬಲ ಪಡೆಯಿರಿ ಮತ್ತು ನೀವು ತುಂಬಾ ನಿರಾಶರಾದಾಗ ಅವರಿಂದ ಭಾವನಾತ್ಮಕ ಬೆಂಬಲ ಪಡೆಯಿರಿ. ತೂಕ ಕಡಿಮೆಗೊಳಿಸಲು ಜಾಗೃತಿ ಮತ್ತು ಬದ್ಧತೆ ಬೇಕಾಗಿದೆ.

ಪಾನೀಯಗಳಿಗೆ ಕಡಿವಾಣ ಹಾಕಿ

ಪಾನೀಯಗಳಿಗೆ ಕಡಿವಾಣ ಹಾಕಿ

ಯಾವುದೇ ಫಿಜ್ಜಿ ಪಾನೀಯಗಳು ನಿಮ್ಮ ಹೊಟ್ಟೆ ಉಬ್ಬರುವಂತೆ ಮಾಡಬಹುದು. ಪಾನೀಯಗಳಲ್ಲಿ ಇರುವ ಕಾರ್ಬನ್ ಡೈಯಾಕ್ಸೈಡ್ ಹೊಟ್ಟೆಯಲ್ಲಿ ಗಾಳಿ ಹೆಚ್ಚಿಸಿ ಗ್ಯಾಸ್ ಗೆ ಕಾರಣವಾಗಬಹುದು.

ರಜಾ ದಿನಗಳಲ್ಲಿ ಆಹಾರ ತಿನ್ನುವುದರಲ್ಲಿ ನಿಯಂತ್ರಣ ಸಾಧಿಸುವುದರಿಂದ ರಜಾ ದಿನಗಳಲ್ಲಿ ತೂಕ ಹೆಚ್ಚಿಸಿಕೊಳ್ಳುವ ರೋಗದಿಂದ ಪಾರಾಗಬಹುದು. ರಜಾ ದಿನಗಳಲ್ಲಿ ತೂಕ ಹೆಚ್ಚಿಸಿಕೊಳ್ಳಲು ಬಯಸುವುದಿಲ್ಲವೆಂದಾದರೆ ಈ ಟಿಪ್ಸ್ ಗಳನ್ನು ಪಾಲಿಸಿ.

Story first published: Sunday, December 8, 2013, 23:05 [IST]
X
Desktop Bottom Promotion