Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಬೇರಿನಲ್ಲಿ ಬೆಳೆಯುವ ಈ ತರಕಾರಿಗಳ ವಿಶೇಷತೆ ಏನು?
ನಾವು ಹೆಚ್ಚಿನ ತರಕಾರಿಗಳನ್ನು ಅದರ ಪ್ರಾಮುಖ್ಯತೆ ಅರಿಯದೆ ತಿನ್ನುತ್ತೇವೆ, ನಮಗೆ ಇಷ್ಟವಿಲ್ಲದ ತರಕಾರಿಯನ್ನು ತಿನ್ನದೆ ಕೆಲವೊಂದನ್ನು ದೂರವಿಡುತ್ತೇವೆ. ತರಕಾರಿಗಳಲ್ಲಿ 2 ವಿಧ. 1. ಭೂಮಿಯ ಕೆಳಗೆ ಬೆಳೆಯುವ ತರಕಾರಿ 2. ಭೂಮಿಯ ಮೇಲೆ ಬೆಳೆಯುವ ತರಕಾರಿ.
ಜೈನ್ ಧರ್ಮದವರು ಭೂಮಿಯ ಕೆಳಗೆ ಬೆಳೆದ ತರಕಾರಿಗಳನ್ನು ತಿನ್ನುವುದಿಲ್ಲ. ಅದಕ್ಕೆ ಕಾರಣ ಭೂಮಿಯ ಕೆಳಗೆ ಬೇರುಗಳಲ್ಲಿ ಬೆಳೆದ ತರಕಾರಿಯನ್ನು ಅದರ ಗಿಡವನ್ನು ಕಿತ್ತು ಆ ತರಕಾರಿಗಳನ್ನು ಕೀಳುತ್ತಾರೆ. ಹೀಗೆ ಮಾಡಿದಾಗ ಆ ಗಿಡ ಸಂಪೂರ್ಣವಾಗಿ ಸತ್ತು ಹೋಗುತ್ತದೆ, ಅದೇ ಭೂಮಿಯ ಮೇಲೆ ಬೆಳೆಯುವ ತರಕಾರಿಗಳನ್ನು ಮಾತ್ರ ಕೀಳುತ್ತೇವೆ. ಗಿಡ ಹಾಗೇ ಇರುತ್ತದೆ. ಆದ್ದರಿಂದಲೇ ಅಹಿಂಸೆ ತತ್ವ ಪಾಲಿಸುವವ ಜೈನ್ ಧರ್ಮದವರು ಭೂಮಿಯ ಕೆಳಗೆ ಬೆಳೆದ ತರಕಾರಿಗಳನ್ನು ತಿನ್ನುವುದಿಲ್ಲ.
ಎರಡು ಬಗೆಯ ತರಕಾರಿ ತಿನ್ನುವವರು ಬೇರಿನಲ್ಲಿ ಬೆಳೆಯುವ ತರಕಾರಿಗಳನ್ನು ದೂರ ಮಾಡಬೇಡಿ. ಏಕೆಂದರೆ ಇವುಗಳಲ್ಲಿ ಖನಿಜಾಂಶ, ಪೋಷಕಾಂಶ ಅಧಿಕವಾಗಿರುತ್ತದೆ. ಇಲ್ಲಿ ನಾವು ಭೂಮಿ ಕೆಳಗೆ ಬೆಳೆಯುವ ತರಕಾರಿಗಳಲ್ಲಿ ಯಾವೆಲ್ಲಾ ಪೋಷಕಾಂಶಗಳಿರುತ್ತದೆ ಎಂದು ಮಾಹಿತಿ ನೀಡಿದ್ದೇವೆ ನೋಡಿ:

ಬೀಟ್ ರೂಟ್
ಅನಿಮೀಯಾ ಅಥವಾ ರಕ್ತ ಹೀನತೆ ಸಮಸ್ಯೆ ಬೀಟ್ ರೂಟ್ ತಿಂದರೆ ಉಂಟಾಗುವುದಿಲ್ಲ. ಇದರಲ್ಲಿರುವ ಬೀಟಾ ಕೆರೋಟಿನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ನೂಕೋಲು
ಇದನ್ನು ತಿಂದರೆ ಹೃದಯಕ್ಕೆ ತುಂಬಾ ಒಳ್ಳೆಯದು, ಎದೆ ಉರಿ, ಹೊಟ್ಟೆ ಉರಿ ಸಮಸ್ಯೆ ಇರುವವರು ಇದನ್ನು ತಿನ್ನುವುದು ತುಂಬಾ ಒಳ್ಳೆಯದು.

ಆಲೂಗಡ್ಡೆ
ಹೆಚ್ಚಿನವರು ಆಲೂಗಡ್ಡೆ ಒಳ್ಳೆಯದಲ್ಲ ಎಂದು ಅದನ್ನು ತಿನ್ನುವುದಿಲ್ಲ. ಇದನ್ನು ಸಿಪ್ಪೆ ಸಹಿತ ತಿಂದರೆ ಅಧಿಕ ರಕ್ತದೊತ್ತಡ ಕಡಿಮೆಯಾಗುವುದು ಹಾಗೂ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಈರುಳ್ಳಿ
ಇದರಲ್ಲಿ ಸತುವಿನಂಶ ಅಧಿಕವಾಗಿದೆ, ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ, ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಈರುಳ್ಳಿ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ.

ಮೂಲಂಗಿ
ಮೂಲವ್ಯಾಧಿಯಂತಹ ಕಾಯಿಲೆಯನ್ನು ಗುಣ ಪಡಿಸುವ ಸಾಮರ್ಥ್ಯ ಮೂಲಂಗಿಗೆ ಇದೆ. ಇದರ ಸೊಪ್ಪು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬೆಳ್ಳುಳ್ಳಿ
ಇದರಲ್ಲಿರುವ ಅಲಿಸಿನ್ (allicin) ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ.

ಗುಡ್ಡ ಸೋಂಪಿನ ಗಿಡ
ಇದರಲ್ಲಿ ಫೋಲೆಟ್ ಅಂಶ ಅಧಿಕವಾಗಿದೆ. ಇದು ನರಗಳು ತನ್ನ ಕಾರ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಂತೆ ಮಾಡುವಲ್ಲಿ ಸಹಕಾರಿಯಾಗಿದೆ.

ಶುಂಠಿ
ಶುಂಠಿ ನಾನಾ ಕಾಯಿಲೆಗಳಿಗೆ ರಾಮಬಾಣವಾಗಿದೆ. ಪ್ರತಿನಿತ್ಯ ಅಡುಗೆಗೆ ಬಳಸಿದರೆ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ.

ಕ್ಯಾರೆಟ್
ಕ್ಯಾರೆಟ್ ನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸಿಹಿ ಗೆಣಸು
ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದರೂ ಒಳ್ಳೆಯದಲ್ಲ, ಅದೇ ರೀತಿ ಕಮ್ಮಿಯಾದರೂ ಪಾರ್ಶ್ವವಾಯು ಬರುವುದು. ದೇಹದಲ್ಲಿ ಸಕ್ಕರೆಯಂಶ ಕಡಿಮೆ ಇರುವವರು ಸಿಹಿ ಗೆಣಸು ತಿಂದರೆ ಸಕ್ಕರೆಯಂಶವನ್ನು ಕಡಿಮೆ ಪ್ರಮಾಣದಲ್ಲಿಡಬಹುದು. ಇದರಲ್ಲಿರುವ ವಿಟಮಿನ್ ಬಿ ನಮ್ಮ ದೇಹದಲ್ಲಿ ಇನ್ಸುಲಿನ್ ಅನ್ನು ನಿಯಂತ್ರಣದಲ್ಲಿಡುತ್ತದೆ.

ಗೆಡ್ಡೆ ಗೆಣಸು
ಕೆಸ, ಹುತ್ತರಿ ಗೆಣಸು (ಮುಳ್ಳು ಗೆಣಸು), ಗೆಣಸು ಇವೆಲ್ಲಾ ಕೂಡ ಹೇರಳವಾದ ಖನಿಜಾಂಶ ಹೊಂದಿರುವ ತರಕಾರಿಯಾಗಿದೆ.



Click it and Unblock the Notifications