Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಆಪಲ್ ಜ್ಯೂಸ್, ಮಿಲ್ಕ್ ಶೇಕ್ ಆರೋಗ್ಯಕರವಲ್ಲ!
ಸೇಬು ಆರೋಗ್ಯಕರ ಅನ್ನುವುದು 100% ಒಪ್ಪಿಕೊಳ್ಳುವಂತಹ ಮಾತು. ಹಾಗಂತ ಸೇಬಿನ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಸೇಬಿನಷ್ಟೇ ಆರೋಗ್ಯಕರವೇ ಎಂದು ನೋಡುವಾಗ ಆಪಲ್ ಜ್ಯೂಸ್ ಅಥವಾ ಮಿಲ್ಕ್ ಶೇಕ್ ದಿನಾ ಕುಡಿಯುವಷ್ಟು ಆರೋಗ್ಯಕರವಲ್ಲ ಎಂದು ಹೇಳಬಹುದು! ಏಕೆ ಆರೋಗ್ಯಕರವಲ್ಲ, ಇದರಲ್ಲಿರುವ ಗುಣಗಳ ಜೊತೆ ಅವಗುಣಗಳೇನು ಎಂದು ತಿಳಿಯಲು ಮುಂದೆ ಓದಿ.
ಆಪಲ್ ಜ್ಯೂಸ್ ಅಥವಾ ಮಿಲ್ಕ್ ಶೇಕ್: ಇದನ್ನು ತಯಾರಿಸುವಾಗ ನಾವು ಬರೀ ಸೇಬು ಮಾತ್ರವಲ್ಲ, ಅದಕ್ಕೆ ಹಾಲು ಮತ್ತು ಸಕ್ಕರೆ ಹಾಕುತ್ತೇವೆ. ಇದರಿಂದ ಇದರಲ್ಲಿರುವ ಸಕ್ಕರೆಯಂಶ ಹೆಚ್ಚಾಗುತ್ತದೆ. ಆದ್ದರಿಂದ ಮಧುಮೇಹಿಗಳು ಸೇಬು ಮಾತ್ರ ತಿನ್ನಿ, ಆಪಲ್ ಜ್ಯೂಸ್ ಮತ್ತು ಮಿಲ್ಕ್ ಶೇಕ್ ಕುಡಿಯದಿರುವುದು ಒಳ್ಳೆಯದು.
ಇದರ ಇತರ ಅಡ್ಡ ಪರಿಣಾಮಗಳ ಬಗ್ಗೆ ತಿಳಿಯಲು ಮುಂದೆ ಓದಿ:

ಡಯಟ್ ಪ್ಲಾನ್ ನಲ್ಲಿ ಇದ್ದೀರಾ?
* ಆಪಲ್ ಜ್ಯೂಸ್ ನಲ್ಲಿ ಕ್ಯಾಲೋರಿ ಅಧಿಕವಿದೆ. ಇದರಿಂದ ಮೈ ತೂಕ ಕಮ್ಮಿ ಮಾಡುವ ಪ್ರಯತ್ನಿದಲ್ಲಿರುವವರು ಆಪಲ್ ಜ್ಯೂಸ್ ಮತ್ತು ಮಿಲ್ಕ್ ಶೇಕ್ ಇವುಗಳನ್ನು ಕುಡಿಯದಿರುವುದು ಒಳ್ಳೆಯದು.

ಆರ್ಸೆನಿಕ್
* ಆಪಲ್ ಜ್ಯೂಸ್ ನಲ್ಲಿ ಆರ್ಸೆನಿಕ್ ಅಂಶ ಅಧಿಕವಿರುತ್ತದೆ, ಇದು ಅಷ್ಟೊಂದು ಆರೋಗ್ಯಕರವಿಲ್ಲ.

ಮೈ ತೂಕ ಹೆಚ್ಚಾಗುವುದು
* ದಿನಾ ಆಪಲ್ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಕುಡಿದರೆ ಕುಡಿದರೆ ಬೇಗನೆ ಮೈ ತೂಕ ಹೆಚ್ಚಾಗುವುದು.

ಕಾರ್ಬೋಹೈಡ್ರೇಟ್ಸ್
* ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಅಧಿಕವಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಹಾಲಿಗೆ ಹಾಕುವುದಕ್ಕಿಂತ ಮಿಲ್ಕ್ ಶೇಕ್ ಗೆ ಹೆಚ್ಚು ಸಕ್ಕರೆಯನ್ನು ಹಾಕುತ್ತೇವೆ.

ರಕ್ತದೊತ್ತಡ ಹೆಚ್ಚಾಗುವುದು
* ಇದರಲ್ಲಿ ಸಕ್ಕರೆಯಂಶ ಅಧಿಕವಿರುವುದರಿಂದ ರಕ್ತದೊತ್ತಡ ಇರುವವರು ಇದನ್ನು ಕುಡಿದರೆ ರಕ್ತದೊತ್ತಡ ಹೆಚ್ಚಾಗುವುದು.

ಪ್ಯಾಕೆಟ್ ಆಪಲ್ ಜ್ಯೂಸ್
* ಅದಲ್ಲದೆ ಪ್ಯಾಕೇಜ್ಡ್ ಆಪಲ್ ಜ್ಯೂಸ್ ಹಾಳಾಗದಂತೆ ಕೆಮಿಕಲ್ ಬಳಸುತ್ತಾರೆ. ಆದ್ದರಿಂದ ಮಾರ್ಕೆಟ್ ನಲ್ಲಿರುವ ಪ್ಯಾಕೆಟ್ ನಲ್ಲಿರುವ ಆಪಲ್ ಜ್ಯೂಸ್ ಕೊಳ್ಳುವುದನ್ನು ಕಮ್ಮಿ ಮಾಡಿ.

ಸೇಬು
ತಾಜಾ ಸೇಬು ತಿನ್ನಿ ಆರೋಗ್ಯವಾಗಿರಿ. ಸೇಬನ್ನು ಸಿಪ್ಪೆ ಸಹಿತ, ಚಾಕುವಿನಿಂದ ಕತ್ತರಿಸದೆ ಹಾಗೇ ತಿಂದರೆ ಹೆಚ್ಚು ಆರೋಗ್ಯಕರ.



Click it and Unblock the Notifications