Latest Updates
-
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು?
ಕುಂಬಳಕಾಯಿ ಬೀಜದಲ್ಲಿರುವ ಅದ್ಭುತ ಗುಣಗಳು
ಸಾರು ಅಥವಾ ಪಲ್ಯ ಮಾಡಲು ಕುಂಬಳಕಾಯಿಯನ್ನು ಕತ್ತರಿಸುವಾಗ ಅದರ ಬೀಜವನ್ನು ತೆಗೆದು ಎಸೆಯುವವರೇ ಅಧಿಕ. ಕೆಲವರು ಮಾತ್ರ ಅದನ್ನು ತೆಗೆದು ಇಟ್ಟು ಒಣಗಿಸಿ ಹುರಿದು ತಿನ್ನುತ್ತಾರೆ. ಅದು ರುಚಿಯಾಗಿದೆಯೆಂದು ತಿನ್ನುತ್ತಾರೆ ಹೊರತು ಅದರ ಆರೋಗ್ಯಕರ ಗುಣಗಳ ಬಗ್ಗೆ ತಿಳಿದುಕೊಂಡು ತಿನ್ನುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ.
ಆದರೆ ಇದರಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ತಿಳಿದರೆ ಖಂಡಿತವಾಗಿಯೂ ಇದನ್ನು ಬಿಸಾಡಲು ಮನಸ್ಸಾಗುವುದಿಲ್ಲ, ಬನ್ನಿ ಕುಂಬಳಕಾಯಿ ಬೀಜದಲ್ಲಿರುವ ವಿಶೇಷತೆ ಏನು ಎಂದು ನೋಡೋಣ:

ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ
ಮಾನಸಿಕ ಒತ್ತಡ ಅನೇಕ ಸಮಸ್ಯೆಗಳನ್ನು ತರುತ್ತದೆ, ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ. ಖಿನ್ನತೆ ಕಾಡುತ್ತದೆ. ಈ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಕುಂಬಳಕಾಯಿ ಬೀಜ ಸಹಾಯ ಮಾಡುತ್ತದೆ.

ಸಂಧಿವಾತ
ಸಂಧಿವಾತ ಸಮಸ್ಯೆ ಇರುವವರು ಪ್ರತೀದಿನ ಕುಂಬಳಕಾಯಿ ಬೀಜವನ್ನು ತಿನ್ನುವುದು ಒಳ್ಳೆಯದು. ಇದರಲ್ಲಿರುವ ಸತುವಿನಂಶ ಸಂಧಿವಾತ ಕಾಯಿಲೆಯ ವಿರುದ್ಧ ಹೋರಾಡುತ್ತದೆ.

ಕೊಲೆಸ್ಟ್ರಾಲ್
ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಕೂಡ ಪ್ರತೀದಿನ ಕುಂಬಳಕಾಯಿ ಬೀಜ ತಿನ್ನುವುದು ಒಳ್ಳೆಯದು, ಇದರಲ್ಲಿರುವ Phytosterol ಅಂಶ ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ
ಎಲ್ಲಾ ಬಗೆಯ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕ್ಯಾನ್ಸರ್ ಗೆ ಇದೆ. ಅದರಲ್ಲೂ ಸ್ತನ ಕ್ಯಾನ್ಸರ್ ತಡೆಯುವಲ್ಲಿ ತುಂಬಾ ಸಹಕಾರಿಯಾಗಿದೆ.

ಮಧುಮೇಹ
ಮಧುಮೇಹಿಗಳು ಸಿಹಿ ತಿನ್ನಬಾರದು, ಆದರೆ ಸಿಹಿ ಕುಂಬಳಕಾಯಿಯ ಬೀಜ ತಿಂದರೆ ಒಳ್ಳೆಯದು. ಮಧುಮೇಹಿಗಳಲ್ಲಿ ಕಿಡ್ನಿ ಸಮಸ್ಯೆ ಕಾಡುವುದು ಸಹಜ, ಅದನ್ನು ತಡೆಗಟ್ಟುವಲ್ಲಿ ಕುಂಬಳಕಾಯಿ ಬೀಜ ಸಹಾಯ ಮಾಡುತ್ತದೆ.

ನೋವನ್ನು ಕಡಿಮೆ ಮಾಡುತ್ತದೆ
ಉರಿಯೂತದ ಸಮಸ್ಯೆ ಕಂಡು ಬಂದರೆ ಯಾವುದೇ ಅಡ್ಡಪರಿಣಾಮವಿಲ್ಲದೆ ಗುಣಪಡಿಸುವಲ್ಲಿ ಕುಂಬಳಕಾಯಿ ಬೀಜ ಸಹಾಯಮಾಡುತ್ತದೆ.

ಪೋಷಕಾಂಶ
ಕೆಲ ಮಕ್ಕಳು ಚೆನ್ನಾಗಿ ತಿನ್ನುವುದಿಲ್ಲ, ಅಂತಹ ಮಕ್ಕಳಿಗೆ ಕುಂಬಳಕಾಯಿ ಬೀಜ ತಿನ್ನಲು ಕೊಟ್ಟರೆ ಇದು ರುಚಿಯಾಗಿರುವುದರಿಂದ ತಿನ್ನುತ್ತಾರೆ, ಇದರಿಂದಾಗಿ ಪೋಷಕಾಂಶದ ಕೊರತೆ ಉಂಟಾಗುವುದನ್ನು ತಡೆಯಬಹುದು.

ಸೂಪರ್ ಫುಡ್
ವ್ಯಾಯಾಮಕ್ಕೆ ಮುನ್ನ ತಿನ್ನಬಹುದಾದ ಕೆಲವು ಸೂಪರ್ ಫುಡ್ ಗಳಲ್ಲಿ ಕುಂಬಳಕಾಯಿ ಬೀಜ ಕೂಡ ಒಂದು. ಇದು ಶಕ್ತಿವರ್ಧಕವಾಗಿದೆ.

ಹೃದಯದ ಆರೋಗ್ಯಕ್ಕೆ
ಹೃದಯದ ಸಮಸ್ಯೆ ಇರುವವರು ದಿನಾ ಕುಂಬಳಕಾಯಿ ಬೀಜ ತಿಂದರೆ ಹೃದಯದ ಬಡಿತವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ.



Click it and Unblock the Notifications