Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ರಕ್ತದಾನ ಮಾಡದಿದ್ದರೆ ಆರೋಗ್ಯಕ್ಕೆ ಹಾನಿ!
ರಕ್ತದಾನದ ಬಗ್ಗೆ ಅನೇಕರಲ್ಲಿ ತಪ್ಪು ಕಲ್ಪನೆ ಇದೆ. ರಕ್ತ ದಾನ ಮಾಡಿದರೆ ನನಗೆ ವೀಕ್ ನೆಸ್ ಉಂಟಾಗಬಹುದು, ಕಾಯಿಲೆ ಬರಬಹುದು ಎಂಬ ಭಯವಿದೆ. ಆದರೆ ಸತ್ಯಾಂಶವೆಂದರೆ ರಕ್ತದಾನ ಮಾಡಿದರೆ ನಿಮ್ಮ ಆರೋಗ್ಯ ಮತ್ತಷ್ಟು ವೃದ್ಧಿಸುವುದು!
ರಕ್ತದಾನ ಮಾಡಿದರೆ ಯಾವ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದೆಂದು ಈ ಕೆಳಗೆ ವಿವರಿಸಲಾಗಿದೆ ನೋಡಿ:

ದೇಹದಲ್ಲಿ ಕಬ್ಬಿಣದಂಶ ಸರಿಯಾದ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುತ್ತದೆ:
ಇದರ ಬಗ್ಗೆ ನಡೆಸಿದ ಸಂಶೋಧನೆಯಿಂದ ರಕ್ತದಾನದಿಂದ ದೇಹದಲ್ಲಿ ಕಬ್ಬಿಣದಂಶವನ್ನು ಸಮಪ್ರಮಾಣದಲ್ಲಿ ಇಡಬಹುದೆಂದು ತಿಳಿದು ಬಂದಿದೆ. ದೇಹದಲ್ಲಿ ಕಬ್ಬಿಣದಂಶ ಕಡಿಮೆಯಾದರೂ ಕಷ್ಟವೇ? ಅಧಿಕವಾದರೂ ಒಳ್ಳೆಯದಲ್ಲ. ರಕ್ತದಲ್ಲಿ ಕಬ್ಬಿಣದಂಶ ಅಧಿಕವಾದರೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಮಹಿಳೆಯರಿಗೆ ಮಟ್ಟು ದೇಹದಲ್ಲಿ ಕಬ್ಬಿಣದಂಶ ಸರಿಯಾದ ರೀತಿಯಲ್ಲಿರುವಂತೆ ನೋಡಿಕೊಳ್ಳುತ್ತದೆ. ಪುರುಷರು ಮತ್ತು ಮುಟ್ಟು ನಿಂತ ಮಹಿಳೆಯರು ದೇಹದಲ್ಲಿ ಕಬ್ಬಿಣದಂಶವನ್ನು ಸರಿಯಾದ ಪ್ರಮಾಣದಲ್ಲಿ ಇಡಲು ರಕ್ತದಾನ ಸಹಾಯ ಮಾಡುತ್ತದೆ.
ಆರೋಗ್ಯದ ತಪಾಸಣೆ ನಡೆಸಲಾಗುವುದು:
ರಕ್ತದಾನ ಮಾಡುವ ಮುನ್ನ ವೈದ್ಯರು ನಮ್ಮ ಆರೋಗ್ಯವನ್ನು ತಪಾಸಣೆ ಮಾಡುತ್ತಾರೆ. ಇದರಿಂದ ಕೆಲವೊಮ್ಮೆ ನಮ್ಮಲ್ಲಿ ನಮಗೇ ತಿಳಿಯದೇ ಏನಾದರೂ ಕಾಯಿಲೆ ಇದ್ದರೆ ತಿಳಿದು ಬರುವ ಸಾಧ್ಯತೆ ಇದೆ. ನಮ್ಮ ರಕ್ತದಾನಕ್ಕೆ ವೈದ್ಯರು ಒಪ್ಪಿದರೆ ನಾವು ಆರೋಗ್ಯವಂತರು ಎಂದು ತಿಳಿದು ಸಂತೋಷ ಉಂಟಾಗುವುದು.
ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ:
ದೇಹದಲ್ಲಿ ಕಬ್ಬಿಣದಂಶ ಸಮಾನ ಪ್ರಮಾಣದಲ್ಲಿದ್ದರೆ ಗಂಟಲಿನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ:
ನಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಇರುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಕೊಲೆಸ್ಟ್ರಾಲ್ ಕಾಯಿಲೆ ಬರುತ್ತದೆ. ರಕ್ತದಾನ ಮಾಡುವುದರಿಂದ ಕೊಲೆಸ್ಟ್ರಾಲ್ ಬರದಂತೆ ತಡೆಯಬಹುದು.
ರಕ್ತ ಉತ್ಪತ್ತಿಗೆ ಸಹಾಯ ಮಾಡುತ್ತೆ:
ರಕ್ತದಾನ ಮಾಡಿದಾಗ ಆ ರಕ್ತ ತುಂಬಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹೊಸ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ. ಇವು ಒಂದು ವೇಳೆ ನಿಮಗೆ ಗಾಯವಾಗಿ ಹೆಚ್ಚು ರಕ್ತ ಹೋದರೆ ಬೇಗನೆ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ ನಿಮ್ಮ ದೇಹಕ್ಕೆ ಶಕ್ತಿಯನ್ನು ತುಂಬುವಂತೆ ಮಾಡುತ್ತದೆ.
ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಿದ ತೃಪ್ತಿ ಜೊತೆ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಈಗ ಹೇಳಿ ನೀವು ರಕ್ತದಾನಕ್ಕೆ ಸಿದ್ಧ ತಾನೆ?
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications