Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸ್ವ ಚಿಕಿತ್ಸೆಯ ಅಡ್ಡ ಪರಿಣಾಮದ ಬಗ್ಗೆ ತಿಳಿದಿದೆಯೇ?
ಸ್ವಲ್ಪ ಮೈ ಬಿಸಿಯಾದರೆ, ತಲೆ ನೋವು ಶೀತ, ಕೆಮ್ಮು ಕಾಣಿಸಿಕೊಂಡರೆ ಈ ಚಿಕ್ಕ-ಪುಟ್ಟ ಕಾಯಿಲೆಗೆಲ್ಲಾ ಯಾರು ವೈದ್ಯರ ಹತ್ತಿರ ಹೋಗುತ್ತಾರೆ? ಎಂದು ಸ್ವಚಿಕಿತ್ಸೆ ಮಾಡಿಕೊಳ್ಳುವವರೇ ಹೆಚ್ಚು. ವೈದ್ಯರ ಸಲಹೆ ಪಡೆಯದೆ ವಿಟಮಿನ್ ಮಾತ್ರೆಗಳನ್ನು ಕೂಡ ತೆಗೆದುಕೊಳ್ಳಬಾರದು, ಆದರೆ ಯಾರೂ ಇದರ ಬಗ್ಗೆ ಚಿಂತಿಸುವುದೇ ಇಲ್ಲ.
ತಲೆನೋವು ಕಾಣಿಸಿಕೊಂಡಾಗ ತಲೆನೋವಿನ ಮಾತ್ರೆ ನುಂಗಿದರೆ ಸ್ವಲ್ಪ ಹೊತ್ತಿಗೆಲ್ಲಾ ಕಮ್ಮಿಯಾಗುತ್ತದೆ, ಮತ್ತೆ ನಾವು ನಮ್ಮ ಕೆಲಸದತ್ತ ಗಮನ ಕೊಡುತ್ತೇವೆ, ಸ್ವಲ್ಪ ದಿನ ಬಿಟ್ಟು ತಲೆ ನೋವು ಕಾಣಿಸಿಕೊಂಡರೆ ಮತ್ತೆ ಮಾತ್ರೆ ನುಂಗುತ್ತೇವೆ. ಇದೇ ರೀತಿ ಎಲ್ಲಾ ಚಿಕ್ಕ ಪುಟ್ಟ ಕಾಯಿಲೆಗಳು ಕಾಣಿಸಿಕೊಂಡಾಗಲೂ ಮಾಡುತ್ತೇವೆ. ಈ ರೀತಿಯ ಸ್ವಚಿಕಿತ್ಸೆಯಿಂದ ಎಂತಹ ಅಪಾಯ ಉಂಟಾಗುವುದೆಂದು ನಿಮಗೆ ಗೊತ್ತೇ? ಸ್ವ ಚಿಕಿತ್ಸೆಯ ಅಡ್ಡ ಪರಿಣಾಮದ ಬಗ್ಗೆ ತಿಳಿಯಲು ಮುಂದೆ ಓದಿ:

ಕಾಯಿಲೆ ಏನೆಂದು ತಿಳಿಯುವುದಿಲ್ಲ
ಕೆಲವೊಮ್ಮೆ ಕಾಯಿಲೆ ಏನೆಂದು ತಿಳಿಯುವುದಿಲ್ಲ, ಕೊನೆಗೆ ಕಾಯಿಲೆ ತುಂಬಾ ಅಧಿಕವಾದಾಗ ವೈದ್ಯರ ಬಳಿ ಹೋದಾಗ ತಿಳಿಯುತ್ತದೆ. ಯಾವುದೇ ಕಾಯಿಲೆ ಇರಲಿ ಮೊದಲಿಗೆ ಗುರುತಿಸಿದರೆ ಗುಣ ಪಡಿಸುವುದು ಸುಲಭ ಹಾಗೂ ತಗುಲುವ ವೆಚ್ಛ ಕೂಡ ಕಡಿಮೆ ಅನ್ನುವುದನ್ನು ಮರೆಯದಿರಿ. ಆದ್ದರಿಂದ ಯಾವುದೇ ಕಾಯಿಲೆ ಆದರೂ ನಿರ್ಲಕ್ಷ್ಯ ಮಾಡಬೇಡಿ.

ಸರಿಯಾದ ಪ್ರಮಾಣದ ಡೋಸೇಜ್ ಗೊತ್ತಾಗುವುದಿಲ್ಲ
ಡೋಸೇಜ್ ನಲ್ಲಿ ವ್ಯತ್ಯಾಸವಾದರೆ ಶರೀರದ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಡೋಸೇಜ್ ಜಾಸ್ತಿಯಾದರೆ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಕೂಡ ಇದೆ. ಆದ್ದರಿಂದ ಸರಿಯಾದ ಪ್ರಮಾಣದ ಡೋಸೇಜ್ ತೆಗೆದುಕೊಳ್ಳಲು ವೈದ್ಯರ ಸಲಹೆ ಮೇರೆಗಷ್ಟೇ ಔಷಧಿ ತೆಗೆದುಕೊಳ್ಳುವುದು ಒಳ್ಳೆಯದು.

ಚಟವಾಗಿ ಬಿಡುತ್ತದೆ
ಕೆಲವರಿಗೆ ಸ್ವಚಿಕಿತ್ಸೆ ಒಂದು ಚಟವಾಗಿ ಬಿಡುತ್ತದೆ. ಹೇಗೆಂದರೆ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುವ ಚಟವಿರುತ್ತದೆ. ಕೆಲವೊಮ್ಮೆ ಸ್ವಚಿಕಿತ್ಸೆ ಮಾಡಿ, ವೈದ್ಯರು ನೀಡುವ ಔಷಧಿಗೆ ನಮ್ಮ ದೇಹ ಪ್ರತಿಸ್ಪಂದಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ.

ವ್ಯತಿರಿಕ್ತ ಪರಿಣಾಮ ಬೀರಬಹುದು
ಕೆಲವೊಮ್ಮೆ ಒಂದು ಕಾಯಿಲೆಯನ್ನು ಗುಣ ಪಡಿಸಲು ತೆಗೆದುಕೊಂಡ ಔಷಧಿ ಮತ್ತೊಂದು ಸಮಸ್ಯೆ ಇರಬಹುದು. ಕೆಲವೊಂದು ಔಷಧಿಯನ್ನು ತೆಗೆದುಕೊಳ್ಳುವಾಗ ಕೆಲವೊಂದು ಆಹಾರಗಳನ್ನು ತಿನ್ನಬಾರದು. ಮತ್ತೆ ಒಬ್ಬರಿಗೆ ಜ್ವರ ಅಂತ ಔಷಧಿಯನ್ನು ಮನೆಯಲ್ಲಿ ಮತ್ತೊಬ್ಬರಿಗೆ ಜ್ವರ ಕಾಣಿಸಿದಾಗ ಕೊಡಬೇಡಿ. ಅಡ್ಡ ಪರಿಣಾಮ ಉಂಟಾಗಬಹುದು.

ಬಿಪಿ ಮತ್ತು ಮಧುಮೇಹದಂತಹ ಸಮಸ್ಯೆ ಇರುವವರು
ಇವರಂತೂ ಯಾವುದೇ ಔಷಧಿಯನ್ನು ವೈದ್ಯರ ಸಲಹೆಯಿಲ್ಲದೆ ಸ್ವಚಿಕಿತ್ಸೆ ಮಾಡುವ ಸಾಹಸ ಮಾಡದಿರುವುದು ಒಳ್ಳೆಯದು.

ಗರ್ಭಿಣಿಯರು
ಗರ್ಭಿಣಿಯರು ವಾಂತಿ, ತಲೆ ನೋವು ಹೀಗೆ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಂಡರೂ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಔಷಧಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ವಿಟಮಿನ್ ಮಾತ್ರೆಗಳು
ವಿಟಮಿನ್ ಮಾತ್ರೆಗಳು ಆರೋಗ್ಯಕರವಾದರೂ ವೈದ್ಯರ ಸಲಹೆ ಪಡೆಯದೆ ತೆಗೆದುಕೊಳ್ಳಬೇಡಿ. ಏಕೆಂದರೆ ದೇಹದಲ್ಲಿ ವಿಟಮಿನ್ ಅಂಶ ಅಧಿಕವಾದರೂ ತೊಂದರೆಗಳು ಕಾಣಿಸಿಕೊಳ್ಳುವುದು.



Click it and Unblock the Notifications
