Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಪಧಮನಿಗಳಲ್ಲಿನ ತೊಂದರೆಯ ಲಕ್ಷಣಗಳು
ಇತ್ತೀಚೆಗೆ ಎಲ್ಲೆಡೆ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚುತ್ತಿವೆ. ಈ ಖಾಯಿಲೆಗೆ ವಯಸ್ಸಿನ ಮಿತಿಯಿಲ್ಲ. ಯುವಕ ಯುವತಿಯರು ತಮ್ಮ 30ರ ಹರೆಯದಲ್ಲೇ ಈ ಖಾಯಿಲೆಗೆ ತುತ್ತಾಗುತ್ತಿದ್ದಾರೆ.
ಹೃದಯಾಘಾತ ಎನ್ನುವುದು ಇಂದು ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುತ್ತಿರುವ ವಿಷಯವಾಗಿದೆ. ದೇಶ ಯಾವುದೇ ಇರಲಿ ಈ ಸಮಸ್ಯೆಯನ್ನು ನಿಯಂತ್ರಿಸಬೇಕಾಗಿದೆ. ನಿಮ್ಮ ಹೃದಯಕ್ಕೆ ಆಪತ್ತು ಕಾದಿದೆ ಎಂಬುದನ್ನು ನೀವು ಹಲವು ವಿಧಗಳಿಂದ ತಿಳಿದುಕೊಳ್ಳಬಹುದು.
ಉದಾಹರಣೆಗೆ ಅಪಧಮನಿಗಳಲ್ಲಿ ರಕ್ತಪರಿಚಲನೆಗೆ ತೊಡಕುಂಟಾದಾಗ ಹೃದಯಾಘಾತವಾಗುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ತೂಕ, ಕೊಬ್ಬು ಮತ್ತು ಕ್ಯಾಲೊರಿಗಳು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಕ್ತ ಗಟ್ಟಿಯಾದಾಗ ಅದು ಅಪಧಮನಿಗಳಲ್ಲಿ ಸರಾಗವಾಗಿ ಹರಿಯದೆ ಅಲ್ಲೇ ನಿಂತುಬಿಡುತ್ತದೆ.
ಆದ್ದರಿಂದ ಹೃದಯಾಘತದಿಂದ ತಪ್ಪಿಸಿಕೊಳ್ಳಬೇಕೆಂದಿದ್ದರೆ ನೀವು ಅಪಧಮನಿಗಳತ್ತ ಸದಾ ಒಂದು ಕಣ್ಣಿಟ್ಟಿರಬೇಕು. ನಿಮಗೆ ಮಾಡಬೇಕಾದದ್ದೇನು ಎಂದು ಒಮ್ಮೆ ಅರಿವಾದರೆ ನಿಮ್ಮ ಜೀವನಶೈಲಿ ಮತ್ತು ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಪ್ರತಿನಿತ್ಯ ತಪ್ಪದೆ ವ್ಯಾಯಾಮ ಮಾಡುವುದು ರಕ್ತಪರಿಚಲನೆಯನ್ನು ಉತ್ತಮಗೊಳಿಸಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವು ನೀಡುತ್ತವೆ.
ಅಪಧಮನಿಗಳಲ್ಲಿನ ತೊಂದರೆಯನ್ನು ಸೂಚಿಸುವ ಲಕ್ಷಣಗಳು:

ತೀಕ್ಷ್ಣ ನೋವು
ನಿಮಗೆ ಇದ್ದಕ್ಕಿದ್ದಂತೆ ಯಾರೋ ಚಾಕುವಿನಿಂದ ಇರಿದಂತಹ ಅನುಭವವಾಗುವಂತಹ ತೀಕ್ಷ್ಣ ನೋವು ಹೃದಯದಲ್ಲಿ ಕಾಣಿಸಿಕೊಂಡರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ. ಇದು ಅಪಧಮನಿಯಲ್ಲಿ ಏನೋ ತೊಂದರೆಯಾಗಿದೆ ಎಂದು ಸೂಚಿಸುವಂತಹ ಲಕ್ಷಣ.

ಶಿಶ್ನದ ನಿಮಿರುವಿಕೆಯಲ್ಲಿ ತೊಂದರೆ
ಗಂಡಸರಿಗೆ ಶಿಶ್ನದ ನಿಮಿರುವಿಕೆಯಲ್ಲಿ ಮತ್ತಿತರ ಲೈಂಗಿಕ ಕ್ರಿಯೆಯಲ್ಲಿ ತೊಂದರೆ ಕಾಣಿಸಿಕೊಂಡರೆ ಇದು ಪೆಲ್ವಸ್ ನಲ್ಲಿ ರಕ್ತಪರಿಚಲನೆಯಲ್ಲಿ ತೊಂದರೆಯಿದೆ ಎಂದರ್ಥ. ಹೃದಯಾಘಾತಕ್ಕೆ ಮುನ್ನ ಈ ತೊಂದರೆ ಕಾಣಿಸಿಕೊಳ್ಳಬಹುದು.

ಬಳಲಿಕೆ
ಅಸಹಜ ರಕ್ತಪರಿಚಲನೆಯಿಂದಾಗಿ ನೀವು ಬಹುಬೇಗ ಸುಸ್ತಾಗಿಬಿಡುವಿರಿ. ಇದು ಕೂಡ ಹೃದಯಾಘಾತದ ಆರಂಭಿಕ ಲಕ್ಷಣಗಳಲ್ಲೊಂದು. ನಿರ್ಲಕ್ಷ್ಯಮಾಡದೆ ಪರೀಕ್ಷೆ ಮಾಡಿಸಿಕೊಳ್ಳಿ.

ಎದೆಯುರಿ
ನೀವು ದಿನವೂ ಎದೆಯುರಿಯಿಂದ ಬಳಲುತ್ತಿದ್ದು ಅಜೀರ್ಣದ ಸಮಸ್ಯೆಯಿದ್ದರೆ ಇದು ಕೂಡ ಅಪಧಮನಿಯೊಂದಿಗೆ ಸಂಬಂಧ ಹೊಂದಿದೆ ಎಂದರ್ಥ.

ಸರಿಯಾಗಿ ನಿದ್ದೆ ಮಾಡಲಾಗದಿರುವುದು
ಇದು ಹೃದಯಾಘಾತದ ಪ್ರಮುಖ ಲಕ್ಷಣ. ಒತ್ತಡ, ಖಿನ್ನತೆ ಮತ್ತು ಆತಂಕ ಹೃದಯದ ಸ್ಥಿತಿಯ ಮೇಲೆ ಗಾಢ ಪರಿಣಾಮ ಬೀರುತ್ತದೆ.

ಗಮನಕೇಂದ್ರಿಕರಿಸಲು ಸಾಧ್ಯವಾಗದಿರುವುದು
ಯಾವುದರಲ್ಲೂ ಆಸಕ್ತಿ ಇಲ್ಲ, ಏನು ಮಾಡಲು ಮನಸ್ಸಾಗುತ್ತಿಲ್ಲ ಎಂದರೆ ಏನೋ ತೊಂದರೆಯಾಗಿದೆ ಎಂದರ್ಥ. ಹೃದಯಾಘಾತದಿಂದ ದೂರವುಳಿಯಲು ಯೋಗಾಭ್ಯಾಸ ಮಾಡಿ.

ಉಸಿರಾಟದ ತೊಂದರೆ
ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟಲಾರಂಭಿಸಿದಾಗ ನಿಮಗೆ ಉಸಿರಾಡಲು ತೊಂದರೆಯಾಗುತ್ತದೆ. ನೀವು ಬಹಳ ಸುಲಭವಾಗಿ ಸುಸ್ತಾಗಿ ಬಿಡುವಿರಿ ಮತ್ತು ಉಸಿರಾಡಲು ಕಷ್ಟ ಪಡುವಿರಿ.

ಬೋಳುತಲೆ
ನೆತ್ತಿಯ ಮೇಲೆ ವೇಗವಾಗಿ ಕೂದಲುದುರುತ್ತಿದ್ದರೆ ಇದು ಅಪಧಮನಿಗಳಲ್ಲಿ ತೊಂದರೆಯ ಸೂಚನೆ. ಈ ಸಮಸ್ಯೆ ಗಂಡು ಹೆಣ್ಣು ಇಬ್ಬರಲ್ಲೂ ಕಾಣಿಸಿಕೊಳ್ಳಬಹುದು.

ಇಯರ್ ಕ್ರೀಸ್
ಕಿವಿಯಲ್ಲಿನ ಒಂದು ನಾಳ ನೇರವಾಗಿ ಹೃದಯದೊಂದಿಗೆ ಸಂಪರ್ಕಹೊಂದಿರುತ್ತದೆ. ಇಯರ್ ಕ್ರೀಸ್ ನ ತೊಂದರೆ ಕಾಣಿಸಿಕೊಳ್ಳುವುದು ಈ ನಾಳದಲ್ಲಿಯೇ. ಅಪಧಮನಿಗಳಲ್ಲಿನ ರಕ್ತಪರಿಚಲನೆಗೆ ತೊಂದರೆಯುಂಟಾದಾಗ ಈ ತೊಂದರೆ ಕಾಣಿಸಿಕೊಳ್ಳುತ್ತದೆ.

ಮೀನುಖಂಡಗಳಲ್ಲಿನ ನೋವು
ಸಿಹೆಚ್ ಡಿ ಕಾಣಿಸಿಕೊಳ್ಳುವ ಮೊದಲು ಕಾಲಿನ ಅಪಧಮನಿಗಳಲ್ಲಿ ರಕ್ತಪರಿಚಲನೆಗೆ ತೊಂದರೆಯುಂಟಾಗಿ ನೋವು ಕಾಣಿಸಿಕೊಳ್ಳಬಹುದು. ಧೂಮಪಾನಿಗಳಲ್ಲಿ ಇದನ್ನು ಹೆಚ್ಚಾಗಿ ಕಾಣುತ್ತೇವೆ. ನಡೆಯುವಾಗ ಅಥವ ಕೆಲಸಮಾಡುವಾಗ ಈ ನೋವು ಕಾಣಿಸಿಕೊಳ್ಳುತ್ತದೆ.



Click it and Unblock the Notifications