Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸೋರೆಕಾಯಿಯಲ್ಲಿದೆ ಅನೇಕ ಆರೋಗ್ಯಕರ ಗುಣಗಳು
ಸೋರೆಕಾಯಿ ಅಧಿಕ ನೀರಿನಂಶ ಹೊಂದಿರುವ ತರಕಾರಿ ಮಾತ್ರವಲ್ಲ, ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿರುವ ತರಕಾರಿಯಾಗಿದೆ. ಕೆಲವು ನಿರ್ಧಿಷ್ಟ ಕಾಯಿಲೆಗಳನ್ನು ಹೋಗಲಾಡಿಸಲು ಸೋರೆಕಾಯಿಯಯನ್ನು ಮದ್ದಾಗಿ ಉಪಯೋಗಿಸುತ್ತಾರೆ.
ಸೋರೆಕಾಯಿ ಸೂಪ್ ತೂಕ ಇಳಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿರುವುದರಿಂದ ಮೈ ಬೊಜ್ಜು ಕಡಿಮೆ ಮಾಡುವವರು ಈ ಸೂಪ್ ಕುಡಿಯುವುದು ಒಳ್ಳೆಯದು. ಸೋರೆಕಾಯಿಯಲ್ಲಿರುವ ಇತರ ಪ್ರಮುಖ ಪ್ರಯೋಜನಗಳನ್ನು ಸ್ಲೈಡ್ ನಲ್ಲಿ ನೀಡಲಾಗಿದೆ ನೋಡಿ:

ಅಜೀರ್ಣ ಸಮಸ್ಯೆ ಹೋಗಲಾಡಿಸುತ್ತದೆ
ಕೆಲವೊಮ್ಮೆ ಮಿತಿ ಮೀರಿ ತಿಂದು ಬಿಡುತ್ತೇವೆ. ಹೀಗೆ ತಿಂದಾಗ ಅಜೀರ್ಣ ಸಮಸ್ಯೆ ಉಂಟಾದರೆ ಅದನ್ನು ಹೋಗಲಾಡಿಸಲು ಸೋರೆಕಾಯಿಯ ಸೂಪ್ ಕುಡಿದರೆ ಸಾಕು.

ಇನ್ಸುಲಿನ್ ನ ಸಮತೋಲನಕ್ಕೆ
ಇನ್ಸುಲಿನ್ ಅನ್ನು ಸಮತೋಲನದಲ್ಲಿಡುವಲ್ಲಿ ಸೋರೆಕಾಯಿ ತುಂಬಾ ಪ್ರಯೋಜನಕಾರಿ. ಮಧುಮೇಹಿಗಳು ಇದನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬಹುದು.

ದೇಹದ ಉಷ್ಣತೆ ಹೆಚ್ಚಾದಾಗ
ಜ್ವರ ಬಂದಾಗ ದೇಹದ ಉಷ್ಣತೆ ಹೆಚ್ವಾಗುವುದು. ಹೆಚ್ಚಾದ ಮೈ ಉಷ್ಣತೆ ಸೋರೆಕಾಯಿ ಸೂಪ್ ಕುಡಿದರೆ ಕಡಿಮೆಯಾಗುವುದು.

ಮೈತೂಕ ಕಮ್ಮಿ ಮಾಡಲು
ಮೈ ತೂಕ ಕಮ್ಮಿ ಮಾಡ ಬಯಸುವವರು ದಿನಾ ಎರಡು ಕಪ್ ಸೋರೆಕಾಯಿ ಸೂಪ್ ಕುಡಿದರೆ ಮೈ ತೂಕ ಬೇಗನೆ ಕಮ್ಮಿಯಾಗುವುದು.

ಲಿವರ್ ನ ಆರೋಗ್ಯಕ್ಕೆ
ಲಿವರ್ ನ ಆರೋಗ್ಯ ಹೆಚ್ಚಿಸುವ ಗುಣ ಸೋರೆಕಾಯಿಯಲ್ಲಿದೆ. ಇದು ಹೊಟ್ಟೆಯಲ್ಲಿ ಉರಿ, ಲಿವರ್ ನ ತೊಂದರೆ ಮುಂತಾದ ಸಮಸ್ಯೆಗಳು ಬರದಂತೆ ತಡೆಯುತ್ತದೆ.

ಡಯಾಲಿಸಿಸ್ ಮಾಡಿಸುವವರಿಗೆ ಉತ್ತಮ ಆಹಾರ
ಡಯಾಲಿಸಿಸ್ ಮಾಡಿಸುವವರು ಈ ಖಾದ್ಯವನ್ನು ತಿಂದರೆ ದೇಹಕ್ಕೆ ಶಕ್ತಿಯನ್ನು ನೀಡಿ, ಸುಸ್ತನ್ನು ನಿವಾರಿಸುತ್ತದೆ.

ಬೇಧಿ ಹೋಗಲಾಡಿಸುತ್ತದೆ
ಬೇಧಿ ಕಾಣಿಸಿದರೆ ಸೋರೆಕಾಯಿಯನ್ನು ರುಬ್ಬಿ, ಅದನ್ನು ಜ್ಯೂಸ್ ಮಾಡಿ, ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕುಡಿಯಿರಿ. ಬೇಧಿ ನಿಂತ ಮೇಲೂ 3 ದಿನ ಈ ಜ್ಯೂಸ್ ಕುಡಿಯಿರಿ. ಇದರಿಂದ ಬೇಧಿ ಸಂಪೂರ್ಣವಾಗಿ ನಿಂತು ಹೋಗುತ್ತದೆ, ಸುಸ್ತೂ ಕಡಿಮೆಯಾಗುವುದು.

ನಿದ್ರಾಹೀನತೆ
ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಮಲಗುವ ಒಂದು ಗಂಟೆ ಮೊದಲು ಕುಡಿಯಿರಿ. ಇದು ನಿಮಗೆ ಸುಖ ನಿದ್ದೆ ಬರುವಂತೆ ಮಾಡುತ್ತದೆ.

ಮಲಬದ್ಧತೆ
ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಇದು ಸಹಕಾರಿಯಾಗಿದೆ. ಇದರಲ್ಲಿ ನೀರಿನಂಶ ಮತ್ತು ನಾರಿನಂಶ ಅಧಿಕವಿರುವುದರಿಂದ ಇದನ್ನು ತಿಂದರೆ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಬಹುದು.

ಮೂತ್ರ ಉರಿ ತಡೆಗಟ್ಟುತ್ತದೆ
ಮೂತ್ರ ಉರಿ ಸಮಸ್ಯೆಯನ್ನು ಹೋಗಲಾಡಿಸಲು ಸೋರೆಕಾಯಿಯನ್ನು ಬೇಯಿಸಿ ತಿಂದರೆ ಸಾಕು. ಇದರ ಜ್ಯೂಸ್ ಕೂಡ ತುಂಬಾ ಪರಿಣಾಮಕಾರಿ.



Click it and Unblock the Notifications
