Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಈ ಮದ್ಯದಲ್ಲಿದೆ ಟಾಪ್ 10 ಆರೋಗ್ಯಕರ ಗುಣಗಳು
ಮದ್ಯ ಎಂದಾಕ್ಷಣ ಎಲ್ಲರ ಗಮನಕ್ಕೆ ಬರುವುದು ಅದು ಆಲ್ಕೋಹಾಲ್, ಆರೋಗ್ಯಕ್ಕೆ ಅಪಾಯಕಾರಿ ಎಂಬ ನಕಾರಾತ್ಮಕ ಅರ್ಥಗಳು ಮಾತ್ರ. ಆದರೆ ಮದ್ಯದಲ್ಲಿಯೋ ಆರೋಗ್ಯಕರ ಗುಣಲಕ್ಷಣಗಳಿವೆ ಎಂದರೆ ನಂಬಲು ಸಾಧ್ಯವಾದೀತೇ?
ಮದ್ಯವನ್ನು ದಿನವೂ ಕುಡಿಯುವುದು ಅಥವಾ ಅತ್ಯಂತ ಸ್ಟ್ರಾಂಗ್ ಇರುವ ಮದ್ಯವನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂಬ ಅಂಶವನ್ನು ತೆಗೆದುಹಾಕುವಂತಿಲ್ಲ. ಆದರೆ ಕೆಲವು ಮದ್ಯಗಳು ಆಲ್ಕೋಹಾಲ್ ಅಂಶಗಳನ್ನು ಹೊಂದಿರದೆ ಆರೋಗ್ಯಕ್ಕೆ ಉಪಯೋಗವಾಗುವ ದೃಷ್ಟಿಯಿಂದಲೇ ತಯಾರಿಸಲಾಗುತ್ತದೆ. ಅಂತಹ ಅಪರೂಪದ, ಅದ್ಭುತವಾದ ರಸವೇ ಆಪಲ್ ಸೈಡರ್ ವಿನೆಗರ್ ! ಅದರಲ್ಲೂ ಇದನ್ನು ಮಹಿಳೆಯರೂ ಕೂಡ ಸೇವಿಸಬಹುದಾಗಿದೆ!
ಆಪಲ್ ಸೈಡರ್ ವಿನೆಗರ್ (ಆಪಲ್ ಸೈಡರ್ ವಿನೆಗರ್ ) ಸೇಬುಗಳನ್ನು ಹುಳಿಬರಿಸಿ ತಯಾರಿಸಲಾಗುವ ಒಂದು ಕಂದು ಬಣ್ಣದ ದ್ರವ. ಆಪಲ್ ಸೈಡರ್ ವಿನೆಗರ್ ಅನ್ನು ಹಲವಾರು ರೋಗಗಳನ್ನು ಗುಣಪಡಿಸಲು ಮತ್ತು ಸೋಂಕುಗಳಾದ ಸೈನುಟಿಸ್ (ಮೂಗಿನ ಸೈನಸ್ ನ ಉದ್ರೇಕ) ಜ್ವರ, ಮತ್ತು ಫ್ಲೂ ಮೊದಲಾದವುಗಳನ್ನು ಗುಣಪಡಿಸಲು ಸಾವಿರಾರು ವರ್ಷಗಳ ಹಿಂದಿನಿಂದ ಬಳಸಲಾಗುತ್ತಿದೆ. ಪ್ರತಿದಿನ ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸಲು ಮತ್ತು ಖಿನ್ನತೆ, ಆಯಾಸ, ಸಂಧಿವಾತದಂತಹ ಅನೇಕ ದೀರ್ಘಕಾಲದ ಖಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯಕ!
ಆಪಲ್ ಸೈಡರ್ ವಿನೆಗರ್ ಹಲವಾರು ವೈವಿಧ್ಯಮಯ ರೋಗಗಳಿಗೆ ಚಿಕಿತ್ಸೆಯನ್ನು ನೀಡುವುದಕ್ಕಾಗಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ನೋವು ಸೇರಿದಂತೆ ಹಲವಾರು ರೋಗಗಳಿಗೆ, ವಿವಿಧ ಚಿಕಿತ್ಸೆ ನೀಡಲು ಆಪಲ್ ಸೈಡರ್ ವಿನೆಗರ್ ಬಳಕೆ ಮುಂದುವರೆದಿದೆ.ಇಲ್ಲಿ ನಾವು ಇದರಿಂದ ಪಡೆಯಬಹುದಾದ ಪ್ರಮುಖ ಪ್ರಯೋಜನಗಳ ಬಗ್ಗೆ ಹೇಳಿದ್ದೇವೆ.
ಆಪಲ್ ಸೈಡರ್ ವಿನೆಗರ್ ನ ಆರೋಗ್ಯಕರ ಗುಣಗಳು:

1. ಗ್ಲೂಕೋಸ್ ಕಡಿಮೆ ಮಾಡುತ್ತದೆ
ಆಪಲ್ ಸೈಡರ್ ವಿನೆಗರ್ ಅಸಿಟಿಕ್ ಆಮ್ಲ, ಹೊಂದಿದ್ದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ, ಪರಿಣಾಮವಾಗಿ ರಕ್ತನಾಳಗಳಲ್ಲಿ ಗ್ಲೂಕೋಸ್ ಮಟ್ಟ ಕಡಿಮೆಮಾಡುವುದು. ಇದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ತಡೆಯುತ್ತದೆ.

2. ಕೊಲೆಸ್ಟ್ರಾಲ್ ಕಡಿಮೆ
ಆಪಲ್ ಸೈಡರ್ ವಿನೆಗರ್ ನಲ್ಲಿರುವ ಪೆಕ್ಟಿನ್ ಅಸ್ತಿತ್ವ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಕೆಲವು ವ್ಯಕ್ತಿಗಳು ಪೆಕ್ಟಿನ್ ನಿಂದ ಅಲರ್ಜಿ ಉಂಟಾಗುವವರು ಸೇಬು ಸೈಡರ್ ವಿನೆಗರ್ ಸೇವಿಸಬಾರದು.

3. ಖನಿಜಗಳನ್ನು ಒಳಗೊಂಡಿದೆ
ಪೊಟ್ಯಾಷಿಯಂ, ಮ್ಯಾಗ್ನೀಷಿಯಂ ಮತ್ತು ಇತರ ಖನಿಜಗಳನ್ನು ಆಪಲ್ ಸೈಡರ್ ವಿನೆಗರ್ ಒಳಗೊಂಡಿದೆ. ಪೊಟ್ಯಾಷಿಯಂ ದೇಹದಲ್ಲಿ ನೀರಿನ ಸಮತೋಲನವನ್ನು ನಿಯಂತ್ರಿಸುತ್ತದೆ ಮತ್ತು ಆರೋಗ್ಯಕರ ಹೃದಯ ಲಯಬದ್ಧತೆಯನ್ನು ನಿರ್ವಹಿಸುತ್ತದೆ. ಮ್ಯಾಗ್ನಿಷಿಯಂ ಜೀರ್ಣಕ್ರಿಯೆಗೆ ಸಹಾಯ ಮತ್ತು ಆರೋಗ್ಯಕರ ಮೂಳೆಗಳನ್ನು ರೂಪಿಸಲು ಕ್ಯಾಲ್ಸಿಯಂ ಗ್ರಹಿಸಲು ಸಹಾಯಕ. ಇದು ಕಿಣ್ವ ಚಟುವಟಿಕೆಯಲ್ಲಿ ಒಂದು ವೇಗವರ್ಧಕವಾಗಿದೆ.

4. ಅಸ್ಥಿಸಂಧಿವಾತಕ್ಕೆ ಸಹಾಯ
ದೇಹದಲ್ಲಿ ಆಮ್ಲ ಸ್ಫಟಿಕದ ನಿರ್ಮಾಣವಾದಾಗ ಅಸ್ಥಿಸಂಧಿವಾತ ಉಂಟಾಗುತ್ತದೆ. ಆದರೆ ಆಪಲ್ ಸೈಡರ್ ವಿನೆಗರ್ ದೇಹದಲ್ಲಿ ಪಿಎಚ್ ಸಮತೋಲನ ಮಾಡುವುದರ ಮೂಲಕ ಇದನ್ನು ತಡೆಯಬಲ್ಲದು. ಆದರೆ ಈ ಸಮರ್ಥನೆಗೆ ಯಾವುದೇ ಗಮನಾರ್ಹ ವೈಜ್ಞಾನಿಕ ಪುರಾವೆಯೂ ಇದುವರೆಗೆ ಇಲ್ಲದಿದ್ದರೂ, ಡಾ ಜಾರ್ವಿಸ್, ಆಪಲ್ ಸೈಡರ್ ವಿನೆಗರ್ ಆರೈಕೆಯಿಂದ ಸಂಧಿವಾತದಿಂದ ಚೇತರಿಸಿಕೊಂಡ ರೋಗಿಗಳ ಯಶಸ್ವಿ ಪ್ರಕರಣಗಳ ಪಟ್ಟಿಯನ್ನು ಮಾಡಿದ್ದಾರೆ.

5. ಆಂಟಿಆಕ್ಸಿಡೆಂಟ್ (ಉತ್ಕರ್ಷಣ ನಿರೋಧಕ) ಚಟುವಟಿಕೆ
ಆಪಲ್ ಸೈಡರ್ ವಿನೆಗರ್ ಬೀಟಾ-ಕ್ಯಾರೋಟಿನ್ ಹೊಂದಿದ್ದು, ಮೆಯೊ ಚಿಕಿತ್ಸಾಲಯದ ಅನುಸಾರ ಮುಕ್ತ ರಾಡಿಕಲ್ ಮತ್ತು ರೋಗ ನಿರೋಧಕ ವ್ಯವಸ್ಥೆಯನ್ನು ವರ್ಧಿಸುವ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ.

6. ಫಂಗಸ್ ವಿರೋಧಿ
ತಲೆಹೊಟ್ಟಿಗೆ ಕಾರಣವಾಗಿರುವ ಶಿಲೀಂಧ್ರ ಮಲಸಿಜಿಯಾ ಫರ್ಫರ್ನ್ನು ಆಪಲ್ ಸೈಡರ್ ವಿನೆಗರ್ ಫಂಗಸ್ ವಿರೋಧಿ ಗುಣಗಳನ್ನು ಹೊಂದಿದ್ದು ಅವುಗಳನ್ನು ನಿರ್ಮೂಲನೆ ಮಾಡುತ್ತದೆ. ಶೇ. 50 ರಷ್ಟು ನೀರು ಮತ್ತು ಶೇ. 50 ರಷ್ಟು ಆಪಲ್ ಸೈಡರ್ ವಿನೆಗರ್ ನ್ನು ಮಿಶ್ರಣಮಾಡಿ ನೆತ್ತಿಗೆ ಹಚ್ಚಿ ಒಣಗಲು ಬಿಟ್ಟು ನಂತರ ತೊಳೆದರೆ ತಲೆಹೊಟ್ಟು ನಿವಾರಣೆಯಾಗುವುದು.

7. ಉರಿಯೂತ
ಸೂರ್ಯನ ಕಿರಣದ ಪರಿಣಾಮದಿಂದಾಗಿ ಸುಟ್ಟ ಚರ್ಮವನ್ನು ಸರಿಪಡಿಸಲು ಸ್ನಾನದ ನೀರಿನಲ್ಲಿ ಆಪಲ್ ಸೈಡರ್ ವಿನೆಗರ್ ಸೇರಿಸಿ ಪರಿಹಾರ ಕಂಡುಕೊಳ್ಳಬಹುದು. ಆಪಲ್ ಸೈಡರ್ ವಿನೆಗರ್ ನ್ನು ಸಲಾಡ್ ನಲ್ಲಿ ಅಥವಾ ನೀರಿನೊಂದಿಗೆ ಸೇರಿಸಿ ಸೇವಿಸಿದಾಗ ಜೀರ್ಣಾಂಗವ್ಯೂಹದ ಆಂತರಿಕ ಉರಿಯೂತವನ್ನು ತಡೆಯಲೂ ಸಹಾಯ ಮಾಡುತ್ತದೆ.

8. ತೂಕ ಕಮ್ಮಿ ಮಾಡುವ ಚಿಕಿತ್ಸೆ
ಮತೋಲನ ಬ್ಲಡ್ ಶುಗರ್ (ರಕ್ತದಲ್ಲಿ ಸಕ್ಕರೆ ಪ್ರಮಾಣ) ಮಟ್ಟವನ್ನು ಸಮತೋಲನವಾಗಿಡುವ ಮೂಲಕ, ಆಪಲ್ ಸೈಡರ್ ವಿನೆಗರ್ ತೂಕ ಕಮ್ಮಿ ಮಾಡಲು ಕೂಡ ಸಹಾಯವಾಗಬಲ್ಲದು.

9. ಚರ್ಮದ ಟೋನರ್
ಆಪಲ್ ಸೈಡರ್ ವಿನೆಗರ್ ಒಗರು /ಕಟುವಾದ(astringent)ಗುಣವನ್ನು ಹೊಂದಿದೆ. ವಿಶೇಷವಾಗಿ ಮುಖ ಮತ್ತು ಕತ್ತಿನ ಭಾಗದಲ್ಲಿ ಚರ್ಮದ ಟೋನಿಂಗ್ ಮಾಡಲು ಸಹಾಯ ಮಾಡುತ್ತದೆ. ಇದು ಕಣ್ಣಿಗೆ ಸೋಕಿದರೆ ಕಿರಿಕಿರಿ ಉಂಟುಮಾಡಬಹುದಾದ್ದರಿಂದ ಕಣ್ಣಿನ ಭಾಗದಿಂದ ದೂರವಿಡಿ.

10. ಯೀಸ್ಟ್/ಕಿಣ್ವ ಸೋಂಕು ಚಿಕಿತ್ಸೆ
ಆಪಲ್ ಸೈಡರ್ ವಿನೆಗರ್ 2 ಟೀ ಸ್ಪೂನ್ ನಷ್ಟು (douche ನಲ್ಲಿ) ಬಳಸುವುದರಿಂದ ಮಹಿಳೆಯರಲ್ಲಿ ಯೀಸ್ಟ್ ಸೋಂಕುಗಳನ್ನು ಕಡಿಮೆಮಾಡುತ್ತದೆ.. ಎಲ್ಲಾ ಮಹಿಳೆಯರಿಗೂ ಈ ಪರಿಹಾರೋಪಾಯ ಧನಾತ್ಮಕ ಪ್ರತಿಕ್ರಿಯೆ ನೀಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮತ್ತು ಇದನ್ನು ಎಚ್ಚರಿಕೆಯಿಂದ ಬಳಸಬೇಕು.

ಆಪಲ್ ಸೈಡರ್ ವಿನೆಗರ್ ಡೋಸಸ್
ಆಪಲ್ ಸೈಡರ್ ವಿನೆಗರ್ ಪ್ರತಿದಿನ ಸೇವಿಸಬಹುದು. ಆಪಲ್ ಸೈಡರ್ ವಿನೆಗರ್ ನ್ನು ಪ್ರತಿದಿನ ಎರಡರಿಂದ ನಾಲ್ಕು ಟೀ ಸ್ಪೂನ್ ಬಳಸಿದರೆ ಹುರುಪು ಮತ್ತು ಆರೋಗ್ಯ ಸುಧಾರಿಸುತ್ತದೆ. ನೀವು ಪ್ರತಿದಿನ ಬೆಳಿಗ್ಗೆ ಆಪಲ್ ಸೈಡರ್ ವಿನೆಗರ್ ನ್ನು ಮೊದಲು ಸೇವಿಸಿದರೆ ಆಪಲ್ ಸೈಡರ್ ವಿನೆಗರ್ ದೇಹದ ಶುದ್ಧೀಕರಣದ ಮೇಲೆ ಪ್ರಬಲ ಪ್ರಭಾವ ಬೀರುವುದನ್ನು ನೀವೇ ಗಮನಿಸಬಹುದು.
ನೀವು ತೂಕ ನಷ್ಟಕ್ಕೆ ಸೇಬು ಆಪಲ್ ಸೈಡರ್ ವಿನೆಗರ್ ಬಳಸಲು ಬಯಸಿದರೆ, ಆಪಲ್ ಸೈಡರ್ ವಿನೆಗರ್ ನ್ನು ಮೂರು ಚಮಚ ತೆಗೆದುಕೊಂಡು ಒಂದು ಲೋಟ ನೀರಿಗೆ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯಿರಿ. ಆಪಲ್ ಸೈಡರ್ ವಿನೆಗರ್ ಅನ್ನು ಜೇನು ಮತ್ತು ನಿಂಬೆ ರಸ ಸೇರಿಕೊಂಡು ಒಂದು ಲೋಟ ನೀರಿಗೆ ಮಿಶ್ರಣಮಾಡಿ ಸೇವಿಸುವುದು ಜನಪ್ರಿಯ ವಿಧಾನ.



Click it and Unblock the Notifications











