Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಿಸ್ಲೇರಿ ನೀರಿಗಿಂತ ನಲ್ಲಿ ನೀರು ಸುರಕ್ಷಿತವೇ?
ನೈಸರ್ಗಿಕವಾಗಿ ಶುದ್ಧ ನೀರು ಸಿಗುವುದು ತುಂಬಾ ವಿರಳವಾಗಿದೆ. ಏಕೆಂದರೆ ನದಿ, ಕೊಳಗಳ ನೀರನ್ನು ಎಷ್ಟು ಸಾಧ್ಯವೊ ಅಷ್ಟು ಮಾಲಿನ್ಯ ಮಾಡುತ್ತಿದ್ದೇವೆ, ಇನ್ನು ಮಳೆ ನೀರು ಶುದ್ಧ ನೀರು ಆಗಿದ್ದರೂ ಅದು ಭೂಮಿ ತಲುಪುವಷ್ಟರಲ್ಲಿ ವಾಯು ಮಂಡಲದಲ್ಲಿರುವ ವಿಷಕಾರಕ ಅನಿಲಗಳ ಜೊತೆ ಬೆರೆತು ನೀರು ಮಾಲಿನ್ಯವಾಗಿ ಬಿಡುತ್ತವೆ. ಆದ್ದರಿಂದ ಶುದ್ಧವಾದ ಕುಡಿಯುವ ನೀರು ದೊರಕುವುದು ಕಷ್ಟವಾಗಿದ್ದು ಶುದ್ಧೀಕರಿಸಿದ ನೀರನ್ನೇ ಅವಲಂಬಿಸಿದ್ದೇವೆ.

ಅದರಲ್ಲೂ ಕುಡಿಯಲು ಹೆಚ್ಚಾಗಿ ಬಿಸ್ಲೇರಿ ವಾಟರ್ ಅಥವಾ ಅಕ್ವಗಾರ್ಡ್ ನೀರು ಬಳಸುತ್ತಿದ್ದೇವೆ. ಶುದ್ಧೀಕರಿಸಿದ ನೀರನ್ನು ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡಲಾಗುವುದು. ಈ ರೀತಿ ಬಾಟಲಿಗಳಲ್ಲಿ ತುಂಬಿದ ನೀರನ್ನು ತುಂಬಾ ಕಾಲ ಇಡಲಾಗುವುದು. ಈ ರೀತಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿದ ನೀರು ಕುಡಿಯುವುದು ಸುರಕ್ಷತವೇ? ಎಂದು ತಿಳಿಯಲು ಮುಂದೆ ಓದಿ.
ಪ್ಲಾಸ್ಟಿಕ್ ಬಳಕೆ : ಪ್ಲಾಸ್ಟಿಕ್ ಬಾಟಲಿಗಳು ಕೆಲವು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಅವುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಕೆಮಿಕಲ್ ನೀರಿನ ಮುಖಾಂತರ ಹೊಟ್ಟೆ ಸೇರುತ್ತದೆ. ಕ್ರಮೇಣ ಇದು ಜೀರ್ಣಕ್ರಿಯೆಗೆ ತೊಂದರೆಯನ್ನು ತರುತ್ತದೆ. ಕೆಲವರು ಬಿಸ್ಲೇರಿ ಬಾಟಲಿನ ನೀರನ್ನು ಕುಡಿದ ನಂತರ ನೀರನ್ನು ತುಂಬಿಡಲು ಆ ಬಾಟಲಿ ಬಳಕೆ ಮಾಡುತ್ತಾರೆ. ಹೀಗೆ ಬಳಸುವ ಬಾಟಲಿನಲ್ಲಿ ಬಿಸಿ ನೀರು ಹಾಕುವುದು ಒಳ್ಳೆಯದಲ್ಲ. ಬಿಸಿ ನೀರು ಹಾಕಿದಾಗ ರಾಸಾಯನಿಕಗಳು ಬಾಟಲಿನಿಂದ ಹೆಚ್ಚಾಗಿ ಬಿಡುಗಡೆಯಾಗುತ್ತದೆ.
ಆದರೆ ಪೈಪ್ ಗಳಲ್ಲಿ ಬರುವ ಈ ರೀತಿಯ ಕೆಮಿಕಲ್ ಇರುವುದಿಲ್ಲ. ಆದರೆ ಪೈಪ್ ಒಡೆದಿದ್ದರೆ ನೀರಿನಲ್ಲಿ ಸೋಂಕಾಣುಗಳು ಸೇರಬಹುದು. ಆದ್ದರಿಂದ ಈ ರೀತಿಯ ನಲ್ಲಿ ನೀರನ್ನು ಕುದಿಸಿ ಆರಿಸಿ ಕುಡಿಯುವುದು ಬಾಟಲಿ ನೀರಿಗಿಂತ ಸುರಕ್ಷಿತ.
ಎಲ್ಲಾ ಬಿಸ್ಲೇರಿ ಬಾಟಲಿನ ನೀರು ತುಂಬಾ ಸುರಕ್ಷಿತ ಎಂದು ಹೇಳಲು ಬರುವುದಿಲ್ಲ. ಅದರ ಬದಲು ನಾವೇ ನೀರನ್ನು ಶುದ್ಧೀಕರಿಸಿ ಕುಡಿಯುವುದು ಒಳ್ಳೆಯದು.
ಕಾರ್ಬನ್ ಅಂಶ: ತುಂಬಾ ಬಾಟಲಿ ನೀರಿನಲ್ಲಿ ಕಾರ್ಬನ್ ಅಂಶ ಕಂಡುಬರುತ್ತದೆ. ತುಂಬಾ ಕಾರ್ಬನ್ ಅಂಶ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ, ಇದರಿಂದಾಗಿ ಅನೇಕ ಕಾಯಿಲೆಗಳು ಉಂಟಾಗುತ್ತವೆ.
ಇಲ್ಲಿ ನಾವು ಬಿಸ್ಲೇರಿ ನೀರು ಕುಡಿಯುವುದು ತುಂಬಾ ಕೆಟ್ಟದು ಎಂದು ಹೇಳುತ್ತಿಲ್ಲ, ಟ್ಯಾಪ್ ನೀರು ತುಂಬಾ ಆರೋಗ್ಯಕರ ಅಂತನೂ ಹೇಳುತ್ತಿಲ್ಲ, ಕುದಿಸಿ ಆರಿಸಿದ ನಲ್ಲಿ ನೀರು ಆರೋಗ್ಯಕರ ಎಂದು ಹೇಳುತ್ತಿದ್ದೇವೆ ಅಷ್ಟೆ, ಯಾವ ನೀರು ಕುಡಿಯಬೇಕೆಂದು ತೀರ್ಮಾನಿಸುವುದು ನಿಮ್ಮ ಆಯ್ಕೆಗೆ ಬಿಟ್ಟದ್ದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
